ಯುಕೆಯಿಂದ ಕೇರಳಕ್ಕೆ ಬರಲು ಅಸ್ವಸ್ಥ ಐಟಿ ಉದ್ಯೋಗಿಗೆ ನೆರವಾದ ವಾಟ್ಸಾಪ್‌ ಗ್ರೂಪ್‌!

ತಿರುವನಂತಪುರಂ: ಲಾಕ್‌ಡೌನ್‌ ಆದಾಗಿನಿಂದಲೂ ಹಲವಾರು ಭಾರತೀಯರು ವಿದೇಶಗಳಲ್ಲಿ ಸಿಲುಕಿಕೊಂಡು ತವರಿಗೆ ಮರಳಲಾಗದೆ ಪರಿತಪಿಸುತ್ತಿದ್ದಾರೆ. ಇದರ ನಡುವೆ ಇಂಗ್ಲೆಂಡ್‌ನಲ್ಲಿದ್ದ ಐಟಿ ಉದ್ಯೋಗಿಯನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರುವಲ್ಲಿ ವಾಟ್ಸ್‌ಅಪ್‌ ಗ್ರೂಪ್‌ವೊಂದು ಪ್ರಧಾನ ಪಾತ್ರವಹಿಸಿತು. ಹೌದು... ಮಾಜಿ ನ್ಯಾಯಾಧೀಶರು ಮತ್ತು ಕೇಂದ್ರ ಮಾಜಿ ಸಚಿವರ ನೇತೃತ್ವದ ಕೇರಳೀಯರನ್ನು ಒಳಗೊಂಡ ದೆಹಲಿ ಮೂಲದ ವಾಟ್ಸ್‌ಅಪ್‌ ಗ್ರೂಪ್‌ ಸಹಾಯದಿಂದ ಕೇರಳದ ಐಟಿ ವೃತ್ತಿಪರನನ್ನು ಇಂಗ್ಲೆಂಡ್ ಆಸ್ಪತ್ರೆಯಿಂದ ಕೊಝಿಕೊಡ್‌ಗೆ ಏರ್ ಆಂಬುಲೆನ್ಸ್‌ ವಿಮಾನದ ಮೂಲಕ ಇಂದು ಕರೆತರಲಾಯಿತು. 'ಡಿಸ್ಟ್ರೆಸ್ ಮ್ಯಾನೇಜ್‌ಮೆಂಟ್ ಕಲೆಕ್ಟಿವ್' ಎಂಬ ಹೆಸರಿನಲ್ಲಿ ಕಳೆದ 50 ದಿನಗಳ ಹಿಂದೆ ಅನ್ನು ರಚಿಸಲಾಗಿತ್ತು. ಇದರ ನೇತೃತ್ವವನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಕುರಿಯನ್ ಜೋಸೆಫ್ ವಹಿಸಿದ್ದಾರೆ. ಪ್ರಸ್ತುತ ಮೇಲ್ಮನೆ ಸದಸ್ಯ ಕೆ.ಜೆ ಅಲ್ಪೋನ್ಸ್‌ ಐಎಎನ್‌ಎಸ್‌ನೊಂದಿಗೆ ಮಾತನಾಡುತ್ತಾ ಕೇವಲ ಎರಡು ದಿನಗಳಲ್ಲಿ ಇದೆಲ್ಲವನ್ನು ಸಾಧಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. "ಇಂಗ್ಲೆಂಡ್‌ನಲ್ಲಿ ಮೇಯರ್ ಟಾಮ್‌ ಆದಿತ್ಯ ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೆವು ಹಾಗೂ ಹೊಸದಿಲ್ಲಿಯ ಕೆಲ ಇಲಾಖೆಗಳೊಂದಿಗೆ ಒಪ್ಪಿಗೆ ಪಡೆಯಲಾಗಿತ್ತು. ಇಷ್ಟು ಬೇಗ ನಡೆದ ಈ ಪ್ರಕ್ರಿಯೆಗೆ ಕೇರಳ ಸರ್ಕಾರ ಕೂಡ ಅನುಮತಿ ನೀಡಿತ್ತು. ಈ ಬಗ್ಗೆ ಪ್ರಚಾರವಾಗುವುದು ಬೇಡವೆಂದು ನಾವು ಅವರಿಗೆ ಮೊದಲೇ ಹೇಳಿದ್ದೆವು. ಐಟಿ ಉದ್ಯೋಗಿಯು ನಾಳೆ ಇಲ್ಲಿಗೆ ಆಗಮಿಸಬೇಕಾಗಿತ್ತು. ಆದರೆ, ಇಂದೇ ಕೊಝಿಕೊಡ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ," ಎಂದು ಅಲ್ಪೋನ್ಸ್‌ ಮಾಹಿತಿ ನೀಡಿದ್ದಾರೆ. ಇಂಗ್ಲೆಂಡ್‌ನ ಯುಎಸ್‌ಟಿ ಗ್ಲೋಬಲ್ ಕಂಪನಿ ಉದ್ಯೋಗಿ 36 ವರ್ಷದ ಐಟಿ ವೃತ್ತಿಪರರೊಬ್ಬರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಆತನ ಕುಟುಂಬ ಕೇರಳಕ್ಕೆ ಬರುವುದನ್ನು ಬಯಸಿತ್ತು. ಲಾಕ್‌ಡೌನ್‌ ಕಠಿಣ ಸಮಯದಲ್ಲೂ ವಾಟ್ಸಾಪ್‌ ಗ್ರೂಪ್‌ ಮುನ್ನಡೆಸುತ್ತಿದ್ದ ಅಲ್ಪೋನ್ಸ್ ಸೇರಿದಂತೆ ಹಲವರು ಶ್ರಮದಿಂದ ಈ ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ಹಲವರು ಶ್ಲಾಘಿಸಿದ್ದಾರೆ. ಇಂಧನ ತುಂಬಲು ಒಂದೆರಡು ನಿಲ್ದಾಣಗಳಲ್ಲಿ ನಿಲ್ಲಿಸಿದ ಬಳಿಕ ರೋಗಿ, ಅವರ ಪತ್ನಿ ಮತ್ತು ಅವರ ಚಿಕ್ಕ ಮಗು ಕೊಝಿಕೊಡ್‌ಗೆ ಬಂದಿಳಿದರು. ಕಂಪನಿಯಲ್ಲಿ ಹಲವರಿಂದ ಸಂಗ್ರಹಿಸಲಾಗಿದ್ದ ಒಂದು ಕೋಟಿ ರೂ.ಗಳು ವಿಮಾನ ಹಾರಾಟಕ್ಕಾಗಿ ನೆರವಾಯಿತು. ಇದೀಗ ರೋಗಿಯನ್ನು ಕೊಝಿಕೊಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


from India & World News in Kannada | VK Polls https://ift.tt/2S3yEL7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...