ಲಾಕ್‌ಡೌನ್‌ ಪರಿಣಾಮ: ಏರಿದ್ದೆಲ್ಲಾ ಇಳಿಯಿತು, ಇಳಿದಿದ್ದೆಲ್ಲಾ ಏರಿತು!

ಬೆಂಗಳೂರು: ಸ್ಥಳೀಯ ಖರೀದಿದಾರರಿಂದ ಬೇಡಿಕೆ ಇಲ್ಲದ್ದರಿಂದ ಸಗಟು ವ್ಯಾಪಾರಸ್ಥರು ಅಮರಗೋಳ ಎಪಿಎಂಸಿಯಲ್ಲಿ ಆವಕವಾದ ಈರುಳ್ಳಿಯನ್ನು ನೆರೆ ರಾಜ್ಯ ಜಿಲ್ಲೆಗಳಿಗೆ ರವಾನಿಸುತ್ತಿದ್ದಾರೆ. ಕೊರೊನಾ ವೈರಸ್‌ ಸೋಂಕು ನಿಯಂಂತ್ರಿಸಲು ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಿದ್ದರಿಂದ ಗ್ರಾಹಕರು ಮುಂದಿನ ಎರಡ್ಮೂರು ತಿಂಗಳು ಈ ಉತ್ಪನ್ನಗಳು ಸಿಗುತ್ತವೆಯೋ ಇಲ್ಲವೋ, ಇನ್ನೂ ಬೆಲೆ ಹೆಚ್ಚಳವಾಗಬಹುದು ಎಂಬ ಆತಂಕದಿಂದ 2ಕೆಜಿ, 5ಕೆಜಿ ಖರೀದಿಸುವವರು 10, 20, 25ಕೆಜಿ ಖರೀದಿಸಿ ಸಂಗ್ರಹಿಸಿಕೊಂಡರು. ಹಾಗಾಗಿ ಖರೀದಿದಾರರಿಂದ ಬೇಡಿಕೆ ಇಲ್ಲದ್ದರಿಂದ ಈರುಳ್ಳಿ, ಆಲೂಗಡ್ಡೆ ಮಾರಾಟವಾಗುತ್ತಿಲ್ಲ ಎನು್ನತ್ತಾರೆ ವ್ಯಾಪಾರಿಗಳು. ಅತ್ಯಧಿಕ ಇಳುವರಿ ಒಂದೆಡೆಯಾದರೆ, ಕೊರೊನಾ ಅಟ್ಟಹಾಸಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕೂಡ ನಲುಗಿದ್ದು, ಕೆಲ ಉತ್ಪನ್ನಗಳ ಆಮದು, ರಫ್ತು ನಿಷೇಧ ಹೇರಲಾಗಿದೆ. ಇದೆಲ್ಲದರ ಪರಿಣಾಮ ಹೆಚ್ಚಿನ ಉತ್ಪನ್ನ ಸ್ಥಳೀಯ ಮಾರುಕಟ್ಟೆಯಲ್ಲಿ ಸರಬರಾಜಾಗುತ್ತಿದೆ. ಹೀಗಾಗಿ ಬೆಲೆ ಕಡಿಮೆಯಾಗಿದೆ. ತಿಂಗಳ ಹಿಂದಷ್ಟೇ ಗ್ರಾಹಕರ ಸಾಮೂಹಿಕ ತಿರಸ್ಕಾರಕ್ಕೆ ತುತ್ತಾಗಿ ಲೋಡುಗಟ್ಟಲೆ ಜೀವಂತ ಸಮಾಧಿಯಾಗಿದ್ದ ಕೋಳಿ ಮಾಂಸಕ್ಕೀಗ ಭರ್ಜರಿ ಬೇಡಿಕೆ ಉಂಟಾಗಿದೆ. ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆ ಕಾರಣ, ಕೆ.ಜಿ. ಚಿಕನ್‌ ಬೆಲೆ 200 ರೂ. ಗಡಿ ದಾಟಿದೆ! ಕೋಳಿ ಮಾಂಸದಿಂದ ಕೊರೊನಾ ಹರಡುತ್ತೆ ಎಂಬ ವದಂತಿಗಳು ಸಮಾಜಿಕ ಜಾಲತಾಣ ಗಳಲ್ಲಿ ಹರಿದಾಡಿದ ಪರಿಣಾಮ ಮಾಂಸ ಪ್ರಿಯರಿಗೆ ಕೋಳಿ ಅಪಥ್ಯವಾಗಿತ್ತು. ಇದರಿಂದ ಫಾರಂ ಮಾಲೀಕರು, ಮಾರಾಟಗಾರರು ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದರು. ಕೊರೊನಾಗೂ ಕೋಳಿಗೂ ಸಂಬಂಧವಿಲ್ಲ ಎಂಬ ಸಂಗತಿ ಖಚಿತವಾದಂತೆ ಈಗ ಎಲ್ಲರೂ ಚಿಕನ್‌ಗೆ ಮುಗಿಬಿದ್ದಿದ್ದಾರೆ. ಆದರೆ ಕೋಳಿ ಪೂರೈಕೆಯೇ ಕಡಿಮೆಯಾಗಿದೆ.


from India & World News in Kannada | VK Polls https://ift.tt/3eIznvd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...