ಬಾಕ್ಸಿಂಗ್‌ ಡೇ ಟೆಸ್ಟ್‌: ಅಜಿಂಕ್ಯ ರಹಾನೆ ನಾಯಕತ್ವಕ್ಕೆ ಕ್ರಿಕೆಟ್‌ ದಿಗ್ಗಜರು ಫುಲ್‌ ಫಿದಾ!

ಮೆಲ್ಬೋರ್ನ್‌: ಇಲ್ಲಿನ ಮೆಲ್ಬೋರ್ನ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶನಿವಾರದಿಂದ ಆರಂಭವಾದ ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯದ ಮೊದಲನೇ ದಿನ ಅನುಪಸ್ಥಿತಿಯಲ್ಲಿ ನಾಯಕತ್ವವನ್ನು ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ವಿವಿಎಸ್‌ ಲಕ್ಷ್ಮಣ್ ಸೇರಿದಂತೆ ಹಲವರು ದಿಗ್ಗಜರು‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ ಮೇಲುಗೈ ಸಾಧಿಸಿದ ಟೀಮ್‌ ಇಂಡಿಯಾ ಬೌಲರ್‌ಗಳು ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ 195 ರನ್‌ಗಳಿಗೆ ಆಲೌಟ್‌ ಮಾಡಿದರು. ಅತ್ಯುತ್ತಮ ಬೌಲಿಂಗ್‌ ಮಾಡಿದ ಜಸ್‌ಪ್ರಿತ್‌ ಬುಮ್ರಾ 4 ವಿಕೆಟ್‌ ಪಡೆದರೆ, ಆರ್‌ ಅಶ್ವಿನ್‌ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದರು ಹಾಗೂ ಅಂತಾರಾಷ್ಟ್ರೀಯ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಮೊಹಮ್ಮದ್ ಸಿರಾಜ್‌ ಎರಡು ವಿಕೆಟ್‌ಗಳನ್ನು ತನ್ನ ಖಾತೆಗೆ ಹಾಕಿಕೊಂಡರು. ಟೀಮ್‌ ಇಂಡಿಯಾದ ಅದ್ಭುತ ಬೌಲಿಂಗ್‌ ಪ್ರದರ್ಶನವನ್ನು ಕೊಂಡಾಡಿದ ವಿವಿಎಸ್‌ , ಅಡಿಲೇಡ್‌ ಟೆಸ್ಟ್‌ ದ್ವಿತೀಯ ಇನಿಂಗ್ಸ್‌ನಲ್ಲಿನ ಕಳಪೆ ಪ್ರದರ್ಶನ ಹಾಗೂ ಎಂಟು ವಿಕೆಟ್‌ಗಳ ಹೀನಾಯ ಸೋಲಿನ ಬೇಸರ ಸ್ವಲ್ಪವೂ ಪ್ರವಾಸಿಗರಲ್ಲಿ ಕಾಣಲಿಲ್ಲ ಎಂದು ತಿಳಿಸಿದರು. "ಭಾರತಕ್ಕಾಗಿ ಆಡಲು ಅತ್ಯುತ್ತಮ ದಿನಗಳಿವು. ಬೌಲರ್‌ಗಳು ಮತ್ತೊಮ್ಮೆ ಸಂವೇದನಾಶೀಲರಾಗಿದ್ದರು, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಇಬ್ಬರೂ ಆತ್ಮವಿಶ್ವಾಸದಿಂದ ಕಾಣುತ್ತಿದ್ದರು, ರಹಾನೆ ತಂಡವನ್ನು ಅತ್ಯುತ್ತಮ ಮುನ್ನಡೆಸಿದ್ದಾರೆ, ಆದರೆ ಮುಖ್ಯವಾಗಿ ಅವರು ಅಡಿಲೇಡ್‌ನಲ್ಲಿ ಉಂಟಾದ ನಷ್ಟವನ್ನು ಇಲ್ಲಿಗೆ ತರಲಿಲ್ಲ," ಎಂದು ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ. ಮೊದಲನೇ ದಿನದ ಮುಕ್ತಾಯಕ್ಕೆ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 11 ಓವರ್‌ಗಳ ಮುಕ್ತಾಯಕ್ಕೆ ಒಂದು ವಿಕೆಟ್‌ ನಷ್ಟಕ್ಕೆ 36 ರನ್‌ ಗಳಿಸಿದೆ. ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದ ಮೊದಲನೇ ದಿನ ಸಕಾರಾತ್ಮಕ ಬ್ಯಾಟಿಂಗ್‌ ಮಾಡಿದ ಯುವ ಓಪನರ್‌ ಶುಭಮನ್ ಗಿಲ್‌ ಅಜೇಯ 28 ರನ್‌ ಗಳಿಸಿದ್ದರೆ, ಮತ್ತೊಂದು ತುದಿಯಲ್ಲಿ ಚೇತೇಶ್ವರ ಪೂಜಾರ 7 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ ಮಿಚೆಲ್‌ ಸ್ಟಾರ್ಕ್‌ ನಾಲ್ಕು ಓವರ್‌ಗಳು ಬೌಲಿಂಗ್‌ ಮಾಡಿ 14 ರನ್‌ ನೀಡಿ ಒಂದು ವಿಕೆಟ್‌ ಪಡೆದಿದ್ದಾರೆ. ಪ್ಯಾಟ್‌ ಕಮಿನ್ಸ್ ಕೂಡ ನಾಲ್ಕು ಓವರ್‌ ಬೌಲಿಂಗ್‌ ಮಾಡಿದ್ದರು, ಆದರೆ ಅವರಿಗೆ ಒಂದೂ ವಿಕೆಟ್‌ ಸಿಗಲಿಲ್ಲ. ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಆಸ್ಟ್ರೇಲಿಯಾ ತಂಡದ ಮೇಲೆ ಭಾರತದ ಬೌಲರ್‌ಗಳು ಮಾರಕ ದಾಳಿ ನಡೆಸಿದ್ದರು. ಜಸ್‌ಪ್ರಿತ್‌ ಬುಮ್ರಾ ಹಾಗೂ ಆರ್‌ ಅಶ್ವಿನ್‌ ಮಾರಕ ದಾಳಿಗೆ ನಲುಗಿದ ಆಸ್ಟ್ರೇಲಿಯಾ 72.3 ಓವರ್‌ಗಳಿಗೆ ಪ್ರಥಮ ಇನಿಂಗ್ಸ್‌ನಲ್ಲಿ 195 ರನ್‌ಗಳಿಗೆ ಆಲೌಟ್‌ ಆಯಿತು. ಮಾರ್ನಸ್‌ ಲಾಬುಶೇನ್‌ 48, ಟ್ರಾವಿಸ್‌ ಹೆಡ್‌ 38 ಹಾಗೂ ಮ್ಯಾಥ್ಯೂ ವೇಡ್‌ 30 ರನ್‌ ಗಳಿಸಿದ್ದು ಬಿಟ್ಟರೆ ಇನ್ನುಳಿದವರು ವಿಫಲರಾದರು. ಭಾರತದ ಪರ ಜಸ್‌ಪ್ರಿತ್‌ ಬುಮ್ರಾ 56 ರನ್‌ ನೀಡಿ 4 ವಿಕೆಟ್‌ ಪಡೆದರು. ಅಜಿಂಕ್ಯ ರಹಾನೆ ನಾಯಕತ್ವವನ್ನು ಟೀಮ್‌ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಿರೇಂದ್ರ ಸೆಹ್ವಾಗ್‌ ಹಾಗೂ ಹರಭಜನ್‌ ಸಿಂಗ್‌ ಕೂಡ ಗುಣಗಾನ ಮಾಡಿದ್ದಾರೆ. "ಅಜಿಂಕ್ಯ ರಹಾನೆ ಅವರಿಂದ ಔಟ್‌ಸ್ಟಾಂಡಿಂಗ್‌ ಬೌಲಿಂಗ್‌ ಬದಲಾವಣೆ ಹಾಗೂ ಫಿಲ್ಡಿಂಗ್‌ ನಿಲ್ಲಿಸುವುದು ಸ್ಮಾರ್ಟ್ ಆಗಿತ್ತು. ಅದಕ್ಕೆ ತಕ್ಕಂತೆ ಬೌಲರ್‌ಗಳು ಬೌಲಿಂಗ್‌ ಮಾಡಿದ್ದರು. ಅಶ್ವಿನ್, ಬುಮ್ರಾ ಹಾಗೂ ಸಿರಾಜ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಮೊದಲನೇ ದಿನ ಆಸ್ಟ್ರೇಲಿಯಾವನ್ನು 195ಕ್ಕೆ ಆಲೌಟ್‌ ಮಾಡಿದ್ದು ಅದ್ಭುತ ಪ್ರಯತ್ನ. ಇದೀಗ ಬ್ಯಾಟ್ಸ್‌ಮನ್‌ಗಳು ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆಗೆ ಹೋರಾಟ ಮಾಡಬೇಕು," ಎಂದು ಸೆಹ್ವಾಗ್‌ ಟ್ವೀಟ್‌ ಮಾಡಿದ್ದಾರೆ. "ಅಶ್ವಿನ್‌, ಬುಮ್ರಾ ಹಾಗೂ ಸಿರಾಜ್‌ ಅವರಿಂದ ಅದ್ಭುತ ಬೌಲಿಂಗ್ ಪ್ರದರ್ಶನ. ಇದೀಗ ಬ್ಯಾಟ್ಸ್‌ಮನ್‌ಗಳು 300 ರನ್‌ಗಳನ್ನು ಗಳಿಸುವ ಮೂಲಕ ನಮ್ಮ ಹುಡುಗರನ್ನು ಬೆಂಬಲಿಸಬೇಕು. ಟೀಮ್‌ ಇಂಡಿಯಾ ಉತ್ತಮ ಪ್ರದರ್ಶನ ತೋರಲಿ," ಎಂದು ಹರಭಜನ್‌ ಸಿಂಗ್‌ ಟ್ವೀಟ್ ಮಾಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/34Kmn4K

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...