ರಾಮನಗರ ಜೈಲಿನಲ್ಲಿದ್ದ ಐವರಿಗೆ ಕೊರೊನಾ, ಪಾದರಾಯನಪುರ ಆರೋಪಿಗಳು ಬೆಂಗಳೂರಿಗೆ ಶಿಫ್ಟ್‌

ಬೆಂಗಳೂರು: ಜೈಲಿನಲ್ಲಿದ್ದ ಪಾದರಾಯನಪುರದ 117 ನಿವಾಸಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದೇವೆ. ಇವರಲ್ಲಿ ಮೊದಲು ಎರಡು, ಈಗ ಮೂರು ಜನರಿಗೆ ಪಾಸಿಟಿವ್ (ಒಟ್ಟು ಐದು) ಬಂದಿದೆ ಎಂಬುದಾಗಿ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಮಾಹಿತಿ ನೀಡಿದರು. ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಪಾಸಿಟಿವ್‌ ಬಂದವರನ್ನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದೇವೆ. ಉಳಿದವರನ್ನ‌ಹಜ್ ಭವನಕ್ಕೆ ವರ್ಗಾಯಿಸುತ್ತೇವೆ. ರಾಮನಗರ ಜೈಲು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡುತ್ತೇವೆ," ಎಂದು ತಿಳಿಸಿದರು. ಎಲ್ಲೆಲ್ಲಿ ಕಂಟೈನ್ಮೆಂಟ್ ಜೋನ್ ಇತ್ತು. ಅಲ್ಲೆಲ್ಲ ಹೆಚ್ಚಿನ ತಪಾಸಣೆಗೆ ನಮ್ಮ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ನಿರ್ಧರಿಸಿದ್ದೇವೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.

ರಾಮನಗರಕ್ಕೆ ಗಲಾಟೆ ಆರೋಪಿಗಳನ್ನು ಶಿಫ್ಟ್‌ ಮಾಡಿದ್ದನ್ನು ಗೃಹ ಇಲಾಖೆ ಯಡವಟ್ಟು ಅನ್ನುವುದನ್ನು ನಾನು ಒಪ್ಪಲ್ಲ. ಟೆಸ್ಟ್ ಮಾಡಿಸಿದ ನಂತರ ಈಗ ಪಾಸಿಟೀವ್ ಬಂದಿದೆ. ಹೀಗಾಗಿ ಅಲ್ಲಿಂದ ಶಿಫ್ಟ್ ಮಾಡಿದ್ದೇವೆ ಎಂದು ಗೃಹ ಸಚಿವರು ವಿವರಿಸಿದರು. ನೂರು ಮೀಟರ್ ವ್ಯಾಪ್ತಿ ಕಂಟೈನ್ಮೆಂಟ್ ಝೋನ್ ಸೋಂಕು ಪತ್ತೆಯಾಗಿರುವ ಜೈಲಿನ ಸುತ್ತಮುತ್ತಲಿನ 100 ಮೀಟರ್‌ ವ್ಯಾಪ್ತಿಯನ್ನು ಕಂಟೈನ್‌ಮೆಂಟ್‌ ಝೋನ್‌ ಎಂಬುದಾಗಿ ಜಿಲ್ಲಾಧಿಕಾರಿ ಎಂಎಸ್‌ ಅರ್ಚನಾ ಆದೇಶ ಹೊರಡಿಸಿದ್ದಾರೆ. ಜೈಲು ಸಿಬ್ಬಂದಿಗಳ ವಸತಿ ಗೃಹ ಕೂಡ ಈ ಝೋನ್‌ ವ್ಯಾಪ್ತಿಯಲ್ಲೇ ಬರುತ್ತದೆ. ಒಂದು ಕಿಲೋ ವ್ಯಾಪ್ತಿಯನ್ನು ಸೀವಿಯರ್ ಝೋನ್, ಐದು ಕಿಲೋ ಮೀಟರ್ ವ್ಯಾಪ್ತಿಯನ್ನು ಭಪರ್ ಝೋನ್ ಎಂದು ಗುರುತಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖೈದಿಗಳು ಬೆಂಗಳೂರಿಗೆ ಪಾದರಾಯನಪುರದ 116 ಆರೋಪಿಗಳು ಹಾಗೂ ರಾಮನಗರ ಜೈಲಿನಲ್ಲಿ ಈ ಹಿಂದೆಯೇ ಇದ್ದ 17 ವಿಚಾರಣಾಧೀನ ಖೈದಿಗಳಳು ಸೇರಿ 133 ಜನರನ್ನು ರಾಮನಗರ ಜೈಲಿನಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ. 7 ಬಸ್‌ಗಳಲ್ಲಿ ಆರೋಪಿಗಳನ್ನು ಜೈಲಿನಿಂದ ಹೊರಕ್ಕೆ ಕರೆದುಕೊಂಡು ಬರಲಾಗಿದ್ದು, ಪೊಲೀಸ್‌ ಭದ್ರತೆಯಲ್ಲಿ ಬೆಂಗಳೂರಿನತ್ತ ಕರೆ ತರಲಾಗುತ್ತಿದೆ.


from India & World News in Kannada | VK Polls https://ift.tt/3cKojvO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...