
ಬಲರಾಂಪುರ (ಛತ್ತೀಸ್‌ಗಢ): ಆರ್ಭಟದ ನಡುವಲ್ಲೂ ಮನುಷ್ಯತ್ವ ಮೆರೆಯುವ ಸಾವಿರಾರು ಮುಖಗಳ ಪರಿಚಯವಾಗುತ್ತಿದೆ. ಎಲೆಮರೆ ಕಾಯಿಗಳಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಿದ್ದ ದೇಶದ ಮೂಲೆ ಮೂಲೆಯ ಕೊರೊನಾ ವಾರಿಯರ್ಸ್‌ಗಳು ಈಗ ಬೆಳಕಿಗೆ ಬರುತ್ತಿದ್ದಾರೆ. ಛತ್ತೀಸ್‌ಗಢ ರಾಜ್ಯದ ಬಲರಾಂಪುರದಲ್ಲಿ 7 ತಿಂಗಳ ಗರ್ಭಿಣಿಯೊಬ್ಬರು ಕೊರೊನಾ ವೈರಸ್ ಆರ್ಭಟದಲ್ಲೂ ತಮ್ಮ ಕೆಲಸವನ್ನು ನಿರಾತಂಕವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತೆಯಾದ ಈಕೆ, ತಮ್ಮ ವ್ಯಾಪ್ತಿಯ ಮನೆ ಮನೆಗೆ ತೆರಳಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಗರ್ಭೀಣಿಯಾಗಿರುವ ಈಕೆ ತಮಗೇ ಕೊರೊನಾ ವೈರಸ್ ಸೋಂಕು ತಗುಲಬಹುದಾದ ಭೀತಿ ಇದ್ದರೂ ತಮ್ಮ ಕಾರ್ಯವನ್ನು ಎಂದಿನಂತೆ ನಡೆಸಿಕೊಂಡು ಬರುತ್ತಿದ್ದಾರೆ. ರಾಷ್ಟ್ರೀಯ ಆರೋಗ್ಯ ಕಾರ್ಯಕರ್ತೆಯಾಗಿ ದುಡಿಯುತ್ತಿರುವ ಈಕೆ, ಕರ್ನಾಟಕದ ಆಶಾ ಕಾರ್ಯಕರ್ತೆಯರ ರೀತಿಯಲ್ಲೇ ಮನೆ ಮನೆಗೆ ತೆರಳುತ್ತಿದ್ದಾರೆ. ಹಾಗೆ ನೋಡಿದ್ರೆ ರಾಜ್ಯದಲ್ಲಿ ಮಾತ್ರವಲ್ಲ ದೇಶದ ಹಲವೆಡೆ ಆಶಾ ಕಾರ್ಯಕರ್ತೆಯರ ಮೇಲೆ ದಾಳಿಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ಬೆಂಗಳೂರಿನ ಸಾರಾಯಿ ಪಾಳ್ಯದಲ್ಲಿ ಆಶಾ ಕಾರ್ಯಕರ್ತೆ ಮೇಲೆ ದಾಳಿ ನಡೆದಿತ್ತು. ಮೈಸೂರಿನಲ್ಲಿ ಆಶಾ ಕಾರ್ಯಕರ್ತೆಗೆ ಘೇರಾವ್ ಹಾಕಿದ್ದರು. ಮಂಡ್ಯದ ಆಶಾ ಕಾರ್ಯಕರ್ತೆ ಆತ್ಮಹತ್ಯೆಗೂ ಯತ್ನಿಸಿದ್ದರೂ. ಇಂಥಾ ವಿಷಯ ಸನ್ನಿವೇಶದಲ್ಲೂ ಛತ್ತೀಸ್‌ಗಢದ ಆರೋಗ್ಯ ಕಾರ್ಯಕರ್ತೆ ನಿರಾತಂಕವಾಗಿ ತಮ್ಮ ಕೆಲಸ ಮುಂದುವರೆಸಿದ್ದಾರೆ. ಛತ್ತೀಸ್‌ಗಢದ ಗ್ರಾಮೀಣ ಭಾಗದಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಸ್ಥರು ಕಾರ್ಯಕರ್ತೆಗೆ ಸೂಕ್ತ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ.
from India & World News in Kannada | VK Polls https://ift.tt/2VSuNBL