ಕಿಮ್ ಇದ್ದರೂ ಕಷ್ಟ, ಇರದಿದ್ದರೂ ಕಷ್ಟ: ಉ.ಕೊರಿಯಾ ಸರ್ವಾಧಿಕಾರಿ ಸತ್ತರೆ ಅಣು ಯುದ್ಧ ಸಂಭವ?

ಪ್ಯೊಂಗ್ಯಾಂಗ್: ಕೆಲವರು ಹಾಗೆನೆ, ಬದುಕಿದ್ದಾಗಲೂ ಸಮಾಜಕ್ಕೆ ಕಂಟಕವಾಗಿರುತ್ತಾರೆ. ಸತ್ತ ಮೇಲೂ ಕಂಟಕವಾಗಿಯೇ ಕಾಡುತ್ತಾರೆ. ಅಂತಹವರ ಸಾಲಿಗೆ ಸರ್ವಾಧಿಕಾರಿ ಸೇರುತ್ತಾರೆ. ತಮ್ಮ ಆಡಳಿತಾವಧಿಯಲ್ಲಿ ದ.ಕೊರಿಯಾ ಹಾಗೂ ಅಮೆರಿಕದೊಂದಿಗೆ ಹಗೆತನ ಸಾಧಿಸುತ್ತಲೇ ಬಂದಿರುವ ಕಿಮ್ ಜಾಂಗ್ ಉನ್, ಕೊರಿಯನ್ ಪರ್ಯಾಯ ದ್ವೀಪದಲ್ಲಿ ಸದಾ ಯುದ್ಧದ ಕಾರ್ಮೋಡ ಕವಿದಿರುವಂತೆಯೇ ನೋಡಿಕೊಂಡಿದ್ದಾರೆ. ಇತ್ತೀಚಿಗೆ ಮಾತ್ರ ಈ ಎರಡೂ ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ಸ್ವಲ್ಪ ತಿಳಿಗೊಳಿಸಲು ಕಿಮ್ ಪ್ರಯತ್ನಿಸಿದ್ದಾರೆ. ಆದರೆ ಸದ್ಯ ಕಿಮ್ ಜಾಂಗ್ ಉನ್ ಆರೋಗ್ಯ ಗಂಭೀರವಾಗಿದೆ ಎಂಬ ವರದಿಗಳು ಬರುತ್ತಿದೆ. ಇದು ಸಹಜವಾಗಿ ಮಿಲಿಟರಿ ತಜ್ಞರ ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ಕಿಮ್ ಜಾಂಗ್ ಉನ್ ಮೃತಪಟ್ಟರೆ ಉ.ಕೊರಿಯಾ ಲಗಾಮಿಲ್ಲದ ಕುದುರೆಯಂತಾಗಲಿದೆ ಎಂಬುದು ತಜ್ಞರ ಅಂದಾಜಾಗಿದೆ. ಈ ಕುರಿತು ಮಾತನಾಡಿರುವ ದ.ಕೊರಿಯಾದ ನಿವೃತ್ತ ಮಿಲಿಟರಿ ಅಧಿಕಾರಿ ಲೆ.ಜ. ಚುನ್ ಇನ್-ಬೂಮ್, ಉ.ಕೊರಿಯಾ ಸರ್ವಾಧಿಕಾರಿಯ ಅಕಾಲಿಕ ನಿಧನ ಪ್ರಾದೇಶಿಕ ಶಾಂತಿಯನ್ನು ಕದಡಲಿದೆ ಎಂದು ಎಚ್ಚರಿಸಿದ್ದಾರೆ. ಒಂದು ವೇಳೆ ಕಿಮ್ ಜಾಂಗ್ ಉನ್ ಮೃತಪಟ್ಟರೆ ಭಾರೀ ಪ್ರಮಾಣದಲ್ಲಿ ಉತ್ತರ ಕೊರಿಯಾದಿಂದ ಜನ ಆಶ್ರಯ ಬಯಸಿ ದಕ್ಷಿಣ ಕೋರಿಯಾಗೆ ವಲಸೆ ಬರುವ ಸಾಧ್ಯತೆ ದಟ್ಟವಾಗಿದೆ ಎಂದು ಲೆ.ಜ. ಚುನ್ ಇನ್-ಬೂಮ್ ಅಭಿಪ್ರಾಯಪಟ್ಟಿದ್ದಾರೆ. ಇದು ಸಹಜವಾಗಿ ಕೊರಿಯನ್ ಪರ್ಯಾಯ ದ್ವೀಪದಲ್ಲಿ ಅರಜಾಜಕತೆ ಸೃಷ್ಟಿಸಲಿದ್ದು ನಾಯಕನಿಲ್ಲದ ಉ.ಕೊರಿಯಾ ಆಡಳಿತ ತನ್ನ ಬಳಿಯಿರುವ ಅಣು ಶಸ್ತ್ರಗಳ ಬಳಕೆಗೆ ಮುಂದಾಗಬಹುದು ಎಂದು ಚುನ್ ಇನ್-ಬೂಮ್ ಹೇಳಿದ್ದಾರೆ. ಅಲ್ಲದೇ ಕಿಮ್ ಸಾವಿನ ಅವಕಾಶವನ್ನು ಬಳಸಿಕೊಂಡು ದ.ಕೊರಿಯಾ ಹಾಗೂ ಜಂಟಿಯಾಗಿ ಉ.ಕೊರಿಯಾ ಮೇಲೆ ದಾಳಿ ಮಾಡಿದರೆ ಮೂರನೇ ವಿಶ್ವ ಯುದ್ಧಕ್ಕೆ ಆಹ್ವಾನ ನೀಡಿದಂತೆ ಎಂದು ಚುನ್ ಇನ್-ಬೂಮ್ ಗಂಭೀರ ಎಚ್ಚರಿಕೆ ಕೊಟ್ಟಿದ್ದಾರೆ. ಉ.ಕೊರಿಯಾ ಒಂದು ಸಾರ್ವಭೌಮ ರಾಷ್ಟ್ರವಾಗಿದ್ದು, ಚೀನಾ ಕೂಡ ಈ ವಿಷಯದಲ್ಲಿ ಮೂಗು ತೂರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಬೂಮ್ ಅವರ ಆತಂಕವಾಗಿದೆ. ಇಂತದ್ದೇ ಅಭಿಪ್ರಾಯವನ್ನೇ ವ್ಯಕ್ತಪಡಿಸಿರುವ ಅಮೆರಿಕನ್ ಮಿಲಿಟರಿ ತಜ್ಞರು, ಸೂಕ್ತ ಮಿಲಿಟರಿ ಮತ್ತು ರಾಜಕೀಯ ತಂತ್ರಗಾರಿಕೆ ಇಲ್ಲದೇ ಕೈಗೊಳ್ಳುವ ಯಾವುದೇ ನಿರ್ಣಯ ಭಾರೀ ಅನಾಹುತವನ್ನು ಸೃಷ್ಟಿಸಲಿದೆ ಎಂದು ಎಚ್ಚರಿಸಿದ್ದಾರೆ. ಕಿಮ್ ಜಾಂಗ್ ಉನ್‌ಗೆ ಏನಾಗಿದೆ?: ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೃದಯ ರಕ್ತನಾಳದಿಂದ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂಬ ವರದಿಗಳು ಬಂದಿವೆ. ಆದರೆ ಈ ಕುರಿತು ಉ.ಕೊರಿಯಾ ಯಾವುದೇ ಅಧಿಕೃತ ಹೇಳಿಕೆ ಹೊರಡಿಸಿಲ್ಲ. ಅಲ್ಲದೇ ದ.ಕೊರಿಯಾ ಕೂಡ ಈ ಕುರಿತಾದ ವರದಿಗಳನ್ನು ಇನ್ನೂ ಒಪ್ಪಿಕೊಂಡಿಲ್ಲ. ಅದಾಗ್ಯೂ ಕಿಮ್ ಜಾಂಗ್ ಉನ್ ಈಗಾಗಲೇ ತನ್ನ ಸಹೋದರಿ ಕಿಮ್ ಯೋ ಜಾಂಗ್‌ಳನ್ನು ತನ್ನ ಉತ್ತರಾಧಿಕಾರಿ ಎಂದು ಘೋಷಿಸಿದ್ದಾನೆ ಎಂಬಂತಹ ಮಾತುಗಳೂ ಕೇಳಿ ಬರುತ್ತಿದ್ದು, ಕಿಮ್ ಜಾಂಗ್ ಉನ್ ಅಕಾಲಿಕ ಸಾವಿನಿಂದ ಸಂಭವಿಸಬಹುದಾದ ಅಪಾಯಗಳ ಕುರಿತು ಮಿಲಿಟರಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/2KxkT3q

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...