ಕೊನೆಗೂ ಆರ್‌ಸಿಬಿ ಹೃದಯ ಗೆದ್ದ ಗೌತಮ್ ಗಂಭೀರ್

ಹೊಸದಿಲ್ಲಿ: ತಮ್ಮ ಆಡುವ ಕಾಲಘಟ್ಟದಲ್ಲಿ ಮಾಜಿ ಆಕ್ರಮಣಕಾರಿ ಆಟಗಾರ , ತಂಡದ ವಿರುದ್ಧ ಪ್ರಬಲ ಪೈಪೋಟಿಯ ಮನೋಭಾವವನ್ನು ಹೊಂದಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದ ಗೌತಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಜೊತೆಗೆ ಜಟಾಪಟಿಯಲ್ಲೂ ಭಾಗಿಯಾಗಿದ್ದರು. ಇವೆಲ್ಲವೂ ಐಪಿಎಲ್‌ ವಿವಾದದ ಪುಟಗಳಲ್ಲಿ ಕಾಣಿಸಿಕೊಂಡಿದೆ. ಈ ಮಧ್ಯೆ ಅಂತಾರಾಷ್ಟ್ರೀಯ ಸೇರಿದಂತೆ ಐಪಿಎಲ್ ನಿವೃತ್ತಿ ಜೀವನದ ಬಳಿಕ ಸಂಸದರಾಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್, ಜನರ ಸೇವೆಯಲ್ಲಿ ನಿರತವಾಗಿದ್ದಾರೆ. ಈ ಮಧ್ಯೆ ವಿರುದ್ಧ ಹೋರಾಟ ಸಾರಿರುವ ಗೌತಮ್ ಗಂಭೀರ್, ಎರಡು ವರ್ಷಗಳ ಸಂಬಳವನ್ನು ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ಈ ಮೊದಲು ಸಂಸದ ನಿಧಿಯಿಂದ ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು. ಗೌತಮ್ ಗಂಭೀರ್‌ಗೆ ಇದೀಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇದನ್ನೇ ಉಲ್ಲೇಖಿಸಿತ್ತು. ಅಲ್ಲದೆ ಟ್ವೀಟ್ ಮೂಲಕ ಗಂಭೀರ್‌ಗೆ ಭೇಷ್ ಎಂದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೌತಮ್ ಗಂಭೀರ್, ''ನಿಮ್ಮ ವಿರುದ್ಧ ಸೋಲುವುದನ್ನು ನಾನು ದ್ವೇಷಿಸುತ್ತಿದ್ದೆ. ಆದರೆ ಇಂದು ಈ ಮೆಚ್ಚುಗೆಯಿಂದ ನನ್ನನ್ನು ಗೆದ್ದಿದ್ದೀರಿ. ತುಂಬಾನೇ ಧನ್ಯವಾದಗಳು'' ಎಂದಿದ್ದಾರೆ. ಈ ಮೂಲಕ ಕೊನೆಗೂ ಆರ್‌ಸಿಬಿ ಹೃದಯವನ್ನು ಗೆದ್ದಿದ್ದಾರೆ. ಇದಕ್ಕೆ ಮಗದೊಮ್ಮೆ ಪ್ರತಿಕ್ರಿಯೆ ನೀಡಿರುವ ಆರ್‌ಸಿಬಿ, 'ಟೀಮ್ ಇಂಡಿಯಾ ಅಥವಾ ಕೋಲ್ಕತಾ ನೈಟ್ ರೈಡರ್ಸ್ ಆಗಿರಬಹುದು. ನೀವು ಬೋಲ್ಡ್ ಆಗಿ ಆಡದ ಸಮಯವಿಲ್ಲ' ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ. ಗೌತಮ್ ಗಂಭೀರ್ ಮುಂದಾಳತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು 2012 ಹಾಗೂ 2014ನೇ ಸಾಲಿನಲ್ಲಿ ಐಪಿಎಲ್ ಟ್ರೋಫಿಗಳನ್ನು ಜಯಿಸಿತ್ತು. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯವು ಹಲವಾರು ರೋಚಕ ಕ್ಷಣಗಳಿಗೆ ಕಾರಣವಾಗಿತ್ತು. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಕೆಆರ್ ನಾಯಕ ಗೌತಮ್ ಗಂಭೀರ್ ಮೈದಾನದಲ್ಲಿ ತಮ್ಮ ಹಾವ ಭಾವಗಳನ್ನು ಪ್ರಕಟಿಸುವುದರಿಂದ ಎಂದಿಗೂ ಹಿಂಜರಿಯುವುದಿಲ್ಲ. ಇದುವೇ ನಿಕಟ ಪೈಪೋಟಿಯನ್ನು ಸೃಷ್ಟಿಸಿತ್ತು. ಅಭಿಮಾನಿಗಳ ಪಾಲಿಗೂ ಆರ್‌ಸಿಬಿ-ಕೋಲ್ಕತಾ ನಡುವಣ ಪಂದ್ಯ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3dVtUjZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...