
ಗೌರಿಬಿದನೂರು: ಕೊರೊನಾ ವೈರಸ್ ಸೊಂಕು ತಡೆಗಟ್ಟಲು ಸಿಟ್ರೋಶೀಲ್ಡ್ ಸಾವಯವ ಹಾಗೂ ಪ್ರಾಕೃತಿಕ ಸೋಂಕು ನಿವಾರಕಗಳ 'ಕೊರೊನಾ ಸುರಂಗ'ವನ್ನು ನಿರ್ಮಾಣ ಮಾಡಲಾಗಿದೆ. ಈ ಮಾದರಿಯ ಮಾರ್ಗವನ್ನು ಚೀನಾದಲ್ಲೂ ನಿರ್ಮಿಸಲಾಗಿತ್ತು. ಇದೀಗ ತಮಿಳುನಾಡಿನ ತಿರುಪುರದಲ್ಲಿ ಪ್ರಾತ್ಯಕ್ಷೆತೆ ಮಾಡಿ ಅಳವಡಿಸಲಾಗಿದೆ. ಇದೀಗ ನಮ್ಮ ರಾಜ್ಯದಲ್ಲಿಮೊದಲ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಸೋಡಿಯಂ ಹೈಪೊಕ್ಲೋರೈಟ್ ಬದಲು ಸಿಟ್ರೋಶೀಲ್ಡ್ ಸಾವಯವ ಮತ್ತು ಪ್ರಾಕೃತಿಕ ನೀರು ಮಿಶ್ರಿತಧಿವನ್ನು ಕೊರೊನಾ ಸೋಂಕು ನಿವಾರಣೆಗೆ ಸಿಂಪಡಿಸಲಾಗುತ್ತಿದೆ. ಇದರಿಂದ ಅಡ್ಡಪರಿಣಾಮಗಳಿರುವುದಿಲ್ಲ ಎಂದು ಕೊರೊನಾ ವಿಶೇಷ ನೋಡಲ್ ಅಧಿಕಾರಿ ವರಪ್ರಸಾದ್ ರೆಡ್ಡಿ ತಿಳಿಸಿದ್ದಾರೆ. ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸುರಂಗದ ಮಾದರಿಯಲ್ಲಿ ನಿರ್ಮಿಸಿರುವ ಈ ಮಾರ್ಗದಲ್ಲಿ ಹನಿನೀರಾವರಿ ಮಾದರಿ ಪೈಪ್‌ಗಳ ಅಳವಡಿಕೆ ಮೂಲಕ ನೀರು ಮಿಶ್ರಿತ ಸೋಡಿಯಂ ಹೈಪೋಕ್ಲೋರೈಟ್ ಸಿಂಪಡಿಸಲಾಗುತ್ತದೆ. ಅತಿ ಹೆಚ್ಚು ಗ್ರಾಹಕರು ಆಗಮಿಸುವ ನಗರದ ಬಜಾರ್ ರಸ್ತೆಯಲ್ಲಿ ಈ ಸುರಂಗವನ್ನು ಶನಿವಾರದಿಂದ ಆರಂಭಿಸಲಾಗುವುದು. ಇದೇ ವೇಳೆ, ನಗರದ ಹಿರೇಬಿದನೂರು ಗ್ರಾಮದ ಪ್ರವೇಶ ಮಾರ್ಗದಲ್ಲಿಈ ಕೊರೊನಾ ಸುರಂಗವನ್ನು ಅಳವಡಿಸಲಾಯಿತು. ಸುಗರರ್ಧನ್ ಹೆಲ್ತ್ ಕೇರ್ ಸಂಸ್ಥೆ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.
from India & World News in Kannada | VK Polls https://ift.tt/3bNuKh0