ಶಾಹಿದ್‌ ಅಫ್ರಿದಿಯನ್ನು ಗಡ ಗಡ ನಡುಗಿಸಿದ್ದ ಬ್ಯಾಟ್ಸ್‌ಮನ್ ಇವರೆ ನೋಡಿ!

ಹೊಸದಿಲ್ಲಿ: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಹಲವು ವರ್ಷಗಳ ಕಾಲ ಅತಿ ವೇಗದ ಶತಕ ಬಾರಿಸಿದ ವಿಶ್ವ ದಾಖಲೆ ಹೊಂದಿದ್ದ ಮಾಜಿ ಆಲ್‌ರೌಂಡರ್‌ , ತಮ್ಮ ಬ್ಯಾಟಿಂಗ್‌ಗಿಂತಲೂ ಬೌಲಿಂಗ್‌ ಮೂಲಕವೇ ಪಾಕ್‌ಗೆ ಹೆಚ್ಚು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಲೆಗ್‌ ಸ್ಪಿನ್ನರ್‌ ಆದರೂ ಚೆಂಡಿನಲ್ಲಿ ಹೆಚ್ಚು ತಿರುವು ತರದ ಅಫ್ರಿದಿ ಗತಿಯಲ್ಲಿ ಬದಲಾವಣೆ ತಂದು ಹೆಚ್ಚು ವೇಗವಾಗಿ ಬೌಲ್‌ ಮಾಡುವ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ತಲೆನೋವಾಗುತ್ತಿದ್ದರು. ಅಂದಹಾಗೆ ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ ಎದುರು ಆತ್ಮವಿಶ್ವಾಸದಿಂದಲೇ ಬೌಲಿಂಗ್‌ ಮಾಡುತ್ತಿದ್ದ ಅಫ್ರಿದಿ, ತಮ್ಮ ವೃತ್ತಿ ಬದುಕಿನಲ್ಲಿ ಒಬ್ಬ ಬ್ಯಾಟ್ಸ್‌ಮನ್‌ ಎದುರು ಮಾತ್ರ ಬೌಲಿಂಗ್‌ ಮಾಡಲು ಹೆದರುತ್ತಿದ್ದರಂತೆ. ವಿಶ್ವ ಕ್ರಿಕೆಟ್‌ ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ದಿಗ್ಗಜ ಎದುರು ಬೌಲಿಂಗ್‌ ಮಾಡಲು ಸದಾ ನಡುಗುತ್ತಿದ್ದುದ್ದಾಗಿ ವಿಸ್ಡನ್‌ ಕ್ರಿಕೆಟ್‌ಗೆ ನೀಡಿರುವ ಸಂದರ್ಶನದಲ್ಲಿ ಅಫ್ರಿದಿ ಹೇಳಿದ್ದಾರೆ. "ನಾನು ಬೌಲಿಂಗ್‌ ಮಾಡಲು ಹೆದರುತ್ತಿದ್ದ ಬ್ಯಾಟ್ಸ್‌ಮನ್‌ ಬ್ರಿಯಾನ್‌ ಲಾರಾ. ಅವರನ್ನು ಕೆಲ ಬಾರಿ ಔಟ್‌ ಮಾಡಿದ್ದೇನೆ ನಿಜ. ಆದರೆ ಅವರಿಗೆ ಬೌಲಿಂಗ್‌ ಮಾಡುವಾಗ ಸದಾ ಹೆದರುತ್ತಿದ್ದೆ. ನನ್ನ ಮುಂದಿನ ಎಸೆತದಲ್ಲಿ ಅವರು ಬೌಂಡರಿ ಬಾರಿಸುತ್ತಾರೆ ಎಂಬ ಭಯ ಸದಾ ಕಾಡುತ್ತಿತ್ತು. ನನ್ನ ಮೇಲೆ ಅವರು ಅಷ್ಟು ಪ್ರಭಾವ ಬೀರಿದ್ದರು. ಅವರೆದುರು ನಾನು ಎಂದೂ ಆತ್ಮವಿಶ್ವಾಸದಿಂದ ಬೌಲಿಂಗ್‌ ಮಾಡಿಲ್ಲ," ಎಂದಿದ್ದಾರೆ. "ಲಾರಾ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌. ಅದರಲ್ಲೂ ಸ್ಪಿನ್ನರ್‌ಗಳ ಎದುರು ಭರ್ಜರಿ ಬ್ಯಾಟಿಂಗ್‌ ಮಾಡಿದ್ದರು. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಎದುರು ಕೂಡ ಅವರು ಅಬ್ಬರಿಸಿದ್ದರು. ಅವರ ಫುಟ್ವರ್ಕ್‌ ಮನಮೋಹಕವಾಗಿತ್ತು. ಈ ಮೂಲಕ ವಿಶ್ವದ ಬೆಸ್ಟ್‌ ಸ್ಪಿನ್ನರ್‌ಗಳೆ ಎದುರು ಭರ್ಜರಿ ಬ್ಯಾಟಿಂಗ್‌ ನಡೆಸಿದ್ದರು. ಅವರೊಬ್ಬ ಕ್ಲಾಸ್‌ ಆಟಗಾರ," ಎಂದು ಲಾರಾ ಬ್ಯಾಟಿಂಗ್‌ ತಂತ್ರಗಾರಿಕೆಯನ್ನು ಗುಣಗಾನ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಭಾರತ vs ಪಾಕಿಸ್ತಾನ ನಡುವೆ ದುಬೈನಲ್ಲಿ 3 ಪಂದ್ಯಗಳ ಸರಣಿ ಆಯೋಜಿಸಿ ಕೊರೊನಾ ವೈರಸ್‌ ವಿರುದ್ಧದ ಹೋರಾಟಕ್ಕೆ ದತ್ತಿ ಹಣ ಒಗ್ಗಡಿಸಬಹುದು ಎಂದು ಪಾಕ್‌ನ ಮಾಜಿ ವೇಗದ ಬೌಲರ್‌ ಶೊಯೇಬ್ ಅಖ್ತರ್ ಪ್ರಸ್ತಾಪ ಮಾಡಿದ್ದರು. ಆದರೆ ಇದನ್ನು ಭಾರತದ ಮಾಜಿ ನಾಯಕರಾದ ಕಪಿಲ್‌ ದೇವ್‌ ಮತ್ತು ಸುನಿಲ್‌ ಗವಾಸ್ಲರ್‌ ಕಟುವಾಗಿ ಟೀಕಿಸಿ ನಿರಾಕರಿಸಿದ್ದರು. ಆದರೆ, ಅಖ್ತರ್‌ ಪರವಾಗಿ ಬ್ಯಾಟ್‌ ಬೀಸಿದ ಶಾಹಿದ್‌ ಅಫ್ರಿದಿ ಸರಣಿಗೆ ತಮ್ಮ ಬೆಂಬಲ ಸೂಚಿಸುವ ಮೂಲಕ ಕಪಿಲ್‌ ದೇವ್‌ ಅವರ ಹೇಳಿಕೆ ಬೇಸರ ತಂದಿದೆ ಎಂದು ಹೇಳಿದ್ದರು. "ಇಡೀ ವಿಶ್ವವೇ ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿದೆ. ಈ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಈ ರೀತಿಯ ಋಣಾತ್ಮಕ ಹೇಳಿಕೆಗಳು ಯಾರ ನೆರವಿಗೂ ಬರುವುದಿಲ್ಲ," ಎಂದು ಅಭಿಪ್ರಾಯ ಹೊರಹಾಕಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3bvkQRh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...