
ಬೆಂಗಳೂರು: ಕೊರೊನ ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕಿರುವುದರಿಂದ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಮನೆಗೆಲಸದವರು, ಸಹಾಯಕರು ಹಾಗೂ ವಾಹನ ಚಾಲಕರಿಗೆ ಮಾಲೀಕರು ಮಾಡಬಾರದು. ಸಂಕಷ್ಟದ ಈ ಸಮಯದಲ್ಲಿ ಸಹಾನುಭೂತಿಯಿಂದ ನೆರವಾಗಲು ಕೋರುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉದ್ಯೋಗದಾತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕೊರೊನ ಸೋಂಕು ಹರಡುವಿಕೆ ಸಂಬಂಧ ವಿಧಿಸಲಾಗಿರುವ ಲಾಕ್ ಡೌನ್ ನಿಂದ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಖಾಸಗಿ ನೌಕರರು, ಗುತ್ತಿಗೆ ಕೆಲಸಗಾರರು & ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡದೇ, ಸಂಬಳ ಸಹಿತ ರಜೆ ನೀಡಬೇಕು ಎಂದು ಕೇಂದ್ರ ಕಾರ್ಮಿಕ ಇಲಾಖೆ ಎಲ್ಲ ಕಾರ್ಮಿಕ ಸಂಘಟನೆಗಳು ಮತ್ತು ಉದ್ಯಮಗಳ ಮಾಲೀಕರಿಗೆ ಮನವಿ ಮಾಡಿತ್ತು, ಈ ಹಿಂದೆಯೇ ಈ ಕುರಿತ ಮನವಿ ಪತ್ರವನ್ನು ರಾಜ್ಯ ಸರಕಾರ (ರಾಜ್ಯ ವಾರ್ತೆ) ಟ್ವೀಟ್ ಮಾಡಿತ್ತು. ವಿಶ್ವವೇ ಕೊರೊನಾ ವೈರಸ್ ಸೋಂಕಿನಿಂದ ನಲುಗುತ್ತಿದೆ. ಈ ಸಂದರ್ಭದಲ್ಲಿ ಕೊಒರನಾ ವೈರಸ್ ಕಾರಣದಿಂದ ಅಥವಾ ಲಾಕ್‌ಡೌನ್ ಕಾರಣದಿಂದ ಕಚೇರಿಗೆ ಅಥವಾ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ, ಅಂತಹ ನೌಕರರನ್ನು ಆನ್ ಡ್ಯೂಟಿ ಎಂದು ಪರಿಗಣಿಸಬೇಕು. ಅವರನ್ನು ಕೆಲಸದಿಂದ ವಜಾಗೊಳಿಸದೇ ಇರಲು ಮನವಿ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಜನಸಾಮಾನ್ಯರ ಜೀವನಕ್ಕೆ ತೊಂದರೆಯಾಗದಂತೆ, ಖಾಸಗಿ ಕಾರ್ಮಿಕರ ವೇತನ ನೀಡುವಂತೆ ಉದ್ಯೋಗದಾತರನ್ನು ಮನವಿ ಮಾಡಲಾಗಿದೆ.
from India & World News in Kannada | VK Polls https://ift.tt/3aJdOIv