
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರ ಸ್ವರೂಪದಲ್ಲಿ ಹರಡುತ್ತಿದ್ದು ಜನರು ಸಂಕಷ್ಟದಲ್ಲಿದ್ದಾರೆ. ಕೊರೊನಾ ಲಾಕ್‌ಡೌನ್ ಜಾರಿಯಿಂದ ಆರ್ಥಿಕ ಸಂಕಷ್ಟ ಕೂಡಾ ಎದುರಾಗಿದ್ದು ಸಹಕಾರ ನೀಡುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದರು. ಈ ಮನವಿಗೆ ಸಾಕಷ್ಟು ಜನರು ಸ್ಪಂದಿಸಿದ್ದು ಇದೀಗ ಕೊವಿಡ್ -19 ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿರುವ ಡಾನ್ಸ್ಕೆ ಐಟಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 55 ಲಕ್ಷ ರೂ. ದೇಣಿಗೆ ನೀಡಿದೆ. ಡೆನ್ಮಾರ್ಕ್‌ನ ಅತಿ ದೊಡ್ಡ ಬ್ಯಾಂಕ್ ಡಾನ್ಸ್ಕೆಯ ಮಾಹಿತಿ ತಂತ್ರಜ್ಞಾನ ವಿಭಾಗ 'ಡಾನ್ಸ್ಕೆ ಐಟಿ'ಯ ವ್ಯವಸ್ಥಾಪಕ ನಿರ್ದೇಶಕ ದೇವಲ್ ಶಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿದರು. ಡಾನ್ಸ್ಕೆ ಈ ಸಹಾಯವನ್ನು ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಶ್ಲಾಘಿಸಿದ್ದಾರೆ. ಡಾನ್ಸ್ಕೆ ಐಟಿಯಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದ್ದು, ಸಂಸ್ಥೆಯ ಉದ್ಯೋಗಿಗಳು ಸಹ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಕೊರೊನಾ ವಿರುದ್ಧ ಹೋರಾಟ ನಡೆಸಲು ಸಿಎಂ ಪರಿಹಾರ ನಿಧಿಗೆ ಉದ್ಯಮಿಗಳು, ರಾಜಕಾರಣಿಗಳು, ಸಿನಿಮಾ ನಟರು ಸೇರಿದಂತೆ ಜನಸಾಮಾನ್ಯರು ಕೂಡಾ ದೇಣಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಕಚೇರಿ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ಏಪ್ರಿಲ್ 10 ವರೆಗೆ ಸಿಎಂ ಪರಿಹಾರ ನಿಧಿಗೆ ಬಂದಿರುವ ಒಟ್ಟು ದೇಣಿಗೆ 127 ಕೋಟಿ.
from India & World News in Kannada | VK Polls https://ift.tt/3bAuvWZ