ಲಾಕ್‌ಡೌನ್‌ ವೇಳೆಯಲ್ಲಿ ಜನಿಸಿದ ಅವಳಿ ಮಕ್ಕಳು: ಅಚ್ಚರಿಯಂತೆ ಕೊರೊನಾ, ಕೋವಿಡ್‌ ಎಂದು ನಾಮಕರಣ

ರಾಯ್‌ಪುರ:‌ ಸದ್ಯ ಜಗತ್ತನ್ನೇ ನಡುಗಿಸುತ್ತಿದ್ದು, ಕೊರೊನಾ, ಪದ ಕೇಳಿದರೆ ಸಾಕು ಜನ ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಇಲ್ಲೊಂದು ದಂಪತಿ ಮಾತ್ರ ಮತ್ತು ಕೋವಿಡ್‌ನ್ನು ತಮಗೆ ಜನಿಸಿದ ಮಕ್ಕಳಿಗೆ ನಾಮಕರಣ ಮಾಡಿ, ಜೀವನ ಪೂರ್ತಿ ನೆನಪಿಟ್ಟುಕೊಳ್ಳುವ ಕೆಲಸ ಮಾಡಿದ್ದಾರೆ. ಹೌದು, ಛತ್ತೀಸ್‌ಘಡದ ರಾಯಪುರದ ದಂಪತಿ ತಮಗೆ ಜನಿಸಿರುವ ಅವಳಿ-ಜವಳಿ ಮಕ್ಕಳಿಗೆ ಕೊರೊನಾ - ಕೋವಿಡ್‌ ಎಂದು ನಾಮಕರಣ ಮಾಡಿದ್ದು, ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದಾರೆ. ಈ ಎರಡು ಪದಗಳು ಜನರ ಮನಸ್ಸಿನಲ್ಲಿ ಭಯ ಮತ್ತು ವಿನಾಶವನ್ನು ನೆನಪು ತರಿಸುತ್ತವೆ. ಆದರೆ, ಸಮಯದಲ್ಲಿ ನಮಗೆ ಎದುರಾದ ಎಲ್ಲ ಕಷ್ಟಗಳನ್ನು ಗೆದ್ದಿರುವುದನ್ನು ಈ ಮಕ್ಕಳು ನೆನಪಿಸುತ್ತಾರೆ ಎಂದು ದಂಪತಿ ಹೇಳುತ್ತಾರೆ. ಮಾರ್ಚ್‌ 26, 27ರ ರಾತ್ರಿ ರಾಯ್‌ಪುರದ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಯಲ್ಲಿ ಯಶಸ್ವಿ ಹೆರಿಗೆಯಾಗಿದ್ದು, ಒಂದು ಗಂಡು ಮಗು, ಒಂದು ಹೆಣ್ಣು ಮಗು ಜನಿಸಿವೆ. ಮಾರ್ಚ್ 27ರ ಮುಂಜಾನೆ ನಾನು ಅವಳಿ ಮಕ್ಕಳಿಗೆ ಜನ್ಮ ನೀಡಿದೆ. ಗಂಡು ಮಗುವಿಗೆ ಕೋವಿಡ್ ಮತ್ತು ಹೆಣ್ಣು ಮಗುವಿಗೆ ಕೊರೊನಾ ಎಂದು ನಾಮಕರಣ ಮಾಡಿದ್ದೇವೆ. ಹೆರಿಗೆಯ ಸಮಯದಲ್ಲಿ ಹಲವು ತೊಂದರೆಗಳನ್ನು ಅನುಭವಿಸಿದ್ದೇವೆ. ಆದ್ದರಿಂದ ಈ ದಿನವನ್ನು ಈ ಹೆಸರುಗಳ ಮೂಲಕ ಸ್ಮರಣೀಯವಾಗಿಸಲು ನಾನು ಮತ್ತು ನನ್ನ ಗಂಡ ತೀರ್ಮಾನಿಸಿದೇವು ಎಂದು ಎಂದು 27 ವರ್ಷದ ಪ್ರೀತಿ ವರ್ಮಾ ಹೇಳಿದ್ದಾರೆ. ತಮ್ಮ ಅಚ್ಚರಿಯ ನಿರ್ಧಾರಕ್ಕೆ ಕಾರಣಗಳನ್ನು ತಿಳಿಸಿದ ಅವರು, ವಾಸ್ತವವಾಗಿ, ವೈರಸ್ ಅಪಾಯಕಾರಿ ಮತ್ತು ಮಾರಣಾಂತಿಕವಾಗಿದೆ. ಆದರೆ, ಜನರಿಗೆ ಏಕಾಏಕಿ ನೈರ್ಮಲ್ಯ, ಸ್ವಚ್ಛತೆ ಮತ್ತು ಇತರ ಉತ್ತಮ ಅಭ್ಯಾಸಗಳನ್ನು ಬೆಳೆಸುವಂತೆ ಮಾಡಿದೆ. ಆದ್ದರಿಂದ, ನಾವು ಮಕ್ಕಳಿಗೆ ಈ ಹೆಸರನ್ನು ಇಟ್ಟಿದ್ದೇವೆ. ಆಸ್ಪತ್ರೆಯ ಸಿಬ್ಬಂದಿ ಸಹ ಮಕ್ಕಳನ್ನು ಕೊರೊನಾ ಮತ್ತು ಕೋವಿಡ್ ಎಂದು ಕರೆಯಲು ಪ್ರಾರಂಭಿಸಿದಾಗ, ನಾವು ಅಂತಿಮವಾಗಿ ಅದೇ ಹೆಸರನ್ನು ಇಡಲು ನಿರ್ಧರಿಸಿದೇವು ಎಂದು ಹೇಳಿದರು. ಉತ್ತರ ಪ್ರದೇಶ ಮೂಲದ ಈ ದಂಪತಿ ಛತ್ತೀಸ್‌ಘಡದ ರಾಜಧಾನಿ ರಾಯ್‌ಪುರದ ಪುರಾಣಿ ಬಸ್ತಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಮಾರ್ಚ್ 26ರ ತಡರಾತ್ರಿ, ತೀವ್ರ ಹೆರಿಗೆ ನೋವು ಪ್ರಾರಂಭವಾಯಿತು. ನನ್ನ ಪತಿ 102 ಮಹತಾರಿ ಎಕ್ಸ್‌ಪ್ರೆಸ್ ಸೇವೆಯಡಿಯಲ್ಲಿ ಕಾರ್ಯನಿರ್ವಹಿಸುವ ಆಂಬುಲೆನ್ಸ್ ವ್ಯವಸ್ಥೆ ಮಾಡಿದರು. ಆದರೆ, ಹಲವು ಕಡೆ ನಮ್ಮನ್ನು ಪೊಲೀಸರು ತಪಾಸಣೆ ಮಾಡಿ ಬಿಟ್ಟರು. ಮಧ್ಯರಾತ್ರಿಯಾಗಿದ್ದರಿಂದ ಆಸ್ಪತ್ರೆಯಲ್ಲಿ ಏನಾಗಬಹುದು ಎಂದು ಆತಂಕಕ್ಕೆ ಒಳಗಾಗಿದ್ದೆ ಆದರೆ, ಅದೃಷ್ಟವಶಾತ್‌ ವೈದ್ಯರು ಮತ್ತು ಸಿಬ್ಬಂದಿ ನನ್ನ ಪ್ರಾಣ ಉಳಿಸಿ ಎರಡು ಮಕ್ಕಳಿಗೆ ಜನ್ಮ ನೀಡುವಂತೆ ಮಾಡಿದ್ದಾರೆ ಎಂದು ಪ್ರೀತಿ ವರ್ಮಾ ಹೇಳಿದ್ದಾರೆ.


from India & World News in Kannada | VK Polls https://ift.tt/3dQGJMM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...