
ಬೆಂಗಳೂರು: ಕೊರೊನಾ ವೈರಸ್‌ಗೆ ಇನ್ನೂ ಯಾವುದೇ ಔಷಧ ಕಂಡು ಹಿಡಿದಿಲ್ಲ. ಆದರೆ ಇದಕ್ಕೆ ಪರ್ಯಾಯವಾಗಿ ಚಿಕಿತ್ಸೆಯ ಭರವಸೆ ಸಿಕ್ಕಿದೆ. ಇದಕ್ಕೆ ಕೇಂದ್ರ ಸರಕಾರದ ಅನುಮತಿಯೂ ದೊರೆತಿದೆ. ಕರ್ನಾಟಕದಲ್ಲಿ ಈಗ ಪ್ರಾಯೋಗಿಕವಾಗಿ ಈ ಚಿಕಿತ್ಸೆ ಆರಂಭವಾಗಲಿದೆ. ಇದು ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡವರ ದೇಹದಿಂದ ರೋಗ ನಿರೋಧಕ ಕಣಗಳನ್ನು ತೆಗೆದು, ಅದನ್ನು ಮತ್ತೊಬ್ಬ ರೋಗಿಯ ದೇಹಕ್ಕೆ ಸೇರಿಸುವ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶನಿವಾರ ಚಾಲನೆ ನೀಡಲಾಯಿತು. ಪ್ರಾಯೋಗಿಕ ನೆಲೆಯಲ್ಲಿ ವಿಶ್ವದೆಲ್ಲೆಡೆ ಈ ಚಿಕಿತ್ಸೆ ನಡೆಸಲಾಗುತ್ತಿದೆ. ಇದನ್ನು ಆರಂಭಿಸಲು ಕೇಂದ್ರ ಸರಕಾರ ಅನುಮತಿ ನೀಡಿದ ಬೆನ್ನಲ್ಲೇ ಕರ್ನಾಟಕದಲ್ಲಿ ಇದನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಶನಿವಾರ ನಡೆದ ಸರಳ ಸಮಾರಂಭದಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಪ್ಲಾಸ್ಮಾ ಥೆರಪಿಗೆ ಚಾಲನೆ ನೀಡಲಾಯಿತು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಮತ್ತು ಡಾ. ಸಿ.ಆರ್. ಜಯಂತಿ ಈ ಸಂದರ್ಭದಲ್ಲಿ ಹಾಜರಿದ್ದರು. ಏನಿದು ಪ್ಲಾಸ್ಮಾ ಥೆರಪಿ? ರಿವರ್ಸ್ ಟ್ರಾನ್ಸ್‌ಕ್ರಿಪ್ಶನ್ ಪಾಲಿಮೆರೇಸ್ ಚೈನ್ ರಿಯಾಕ್ಷನ್ (ಆರ್‌ಟಿಪಿಸಿಆರ್) ಟೆಸ್ಟ್‌ನಿಂದ ಪಾಸಿಟಿವ್ ಎಂದು ದೃಢಪಟ್ಟ ಕೋವಿಡ್ 19 ಸೋಂಕಿತರು, ನಿಗದಿತ ಅವಧಿಯ ಚಿಕಿತ್ಸೆ ನಂತರ ಗುಣಮುಖರಾದಾಗ ಸಶಕ್ತ ರಕ್ತದಾನಿಗಳಾಗಿರುತ್ತಾರೆ. ಇಂತಹ ಸಶಕ್ತ ರಕ್ತದಾನಿಗಳ ಶುದ್ಧೀಕರಿಸಿದ ರಕ್ತವನ್ನು ಪ್ಲಾಸ್ಮಾ ಥೆರಪಿ ಪ್ರಯೋಗಕ್ಕೆ ಬಳಸಬಹುದಾಗಿದೆ. ಮತ್ತೊಂದೆಡೆ ಕ್ವಾರಂಟೈನ್‌ನಲ್ಲಿದ್ದು, ಆ್ಯಂಟಿಬಡಿ ಪರೀಕ್ಷೆ ನಂತರ ಗುಣಮುಖರೆಂದು ದೃಢಪಟ್ಟವರ ರಕ್ತವೂ ಈ ಥೆರಪಿಗೆ ಸೂಕ್ತವಾಗಿದೆ. ಕೊರೊನಾದಿಂದ ಚೇತರಿಸಿಕೊಂಡವರ ದೇಹದಲ್ಲಿ ವೈರಾಣು ವಿರುದ್ಧ ಹೋರಾಡಿದ್ದ ರೋಗ ನಿರೋಧಕ ಕಣಗಳು, ಇನ್ನೊಬ್ಬರ ದೇಹ ಸೇರಿದಾಗಲೂ ಇದೇ ಹೋರಾಟವನ್ನು ಮುಂದುವರಿಸುತ್ತವೆ. ಹೊಸ ರೋಗಿಯ ದೇಹದಲ್ಲಿ ಇವು ಕೆಲವೇ ಕಾಲ ಸಕ್ರಿಯವಾಗಿರುವುದಾದರೂ, ಅಷ್ಟರೊಳಗೆ ಆ ರೋಗಿಯ ದೇಹದಲ್ಲೂ ಪ್ರತಿರೋಧ ಕಣಗಳು ಸಕ್ರಿಯವಾಗುತ್ತವೆ. ಆಗ ಆ ರೋಗಿ ಕೂಡ ಸೋಂಕಿನಿಂದ ಚೇತರಿಸಿಕೊಳ್ಳುತ್ತಾರೆ.
from India & World News in Kannada | VK Polls https://ift.tt/3eOZkZQ