ಹಾಟ್‌ಸ್ಪಾಟ್‌ ಹೊರತು ಪಡಿಸಿ ಬೇರೆಲ್ಲ ಕಡೆ ಅಂಗಡಿಗಳನ್ನು ತೆರೆಯಲು ಕೇಂದ್ರ ಅವಕಾಶ

ಹೊಸದಿಲ್ಲಿ: ತಡೆ ನಿಟ್ಟಿನಲ್ಲಿ ಜಾರಿ ಮಾಡಲಾಗಿದ್ದ ಲಾಕ್‌ಡೌನ್‌ಗೆ ಕೇಂದ್ರ ಸರಕಾರ ಕೊಂಚ ವಿನಾಯಿತಿ ನೀಡಿದ್ದು, ನಗರಸಭೆ ಹಾಗೂ ಪುರಸಭೆ ವ್ಯಪ್ತಿಗಳ ವಸತಿ ಸಮುಚ್ಚಯಗಳಲ್ಲಿರುವ ನೆರೆ ಹೊರೆಯ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದೆ. ಅಂಗಡಿಮುಗ್ಗಟುಗಳು ಚಟುವಟಿಕೆ ನಡೆಸುವ ಸಂದರ್ಭ ಸೋಂಕು ಹರಡದಂತೆ ಕೇಂದ್ರ ಸರಕಾರ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಶುಕ್ರವಾರ ರಾತ್ರಿ ಆದೇಶ ಹೊರಡಿಸಿದೆ. ಲಾಕ್‌ಡೌನ್‌ಗೆ ವಿನಾಯಿತಿ ನೀಡಿರುವ ಅಧಿಕೃತ ಆದೇಶ ಪ್ರತಿಗೆ ಗೃಹಸಚಿವಾಲಯದ ಕಾರ್ಯದರ್ಶಿ ಅಭಯಭಲ್ಲಾ ಅವರು ಸಹಿ ಹಾಕಲಾಗಿರುವ ಪತ್ರವನ್ನು ಗೃಹ ಸಚಿವಾಲಯದ ವಕ್ತಾರ ಟ್ವೀಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಈ ವಿನಾಯಿತಿ ಹಾಟ್‌ಸ್ಪಾಟ್‌ ಮತ್ತು ಕಂಟೋನ್ಮೆಂಟ್‌ ಜೋನ್‌ಗಳಿಗೆ ಅನ್ವಯಿಸುವುದಿಲ್ಲ. ಇನ್ನು ನಗರಸಭೆ ಹಾಗೂ ಪುರಸಭೆ ಪ್ರದೇಶಗಳಲ್ಲಿ ಮಾರುಕಟ್ಟೆ ಸ್ಥಳಗಳು, ಮಲ್ಟಿ ಬ್ರಾಂಡ್‌ ಮತ್ತು ಸಿಂಗಲ್‌ ಬ್ರಾಂಡ್‌ ಮಾಲ್‌ಗಳು ಮೇ 3ರ ವರೆಗೆ ಬಾಗಿಲು ತೆರೆಯುವಂತಿಲ್ಲ.


from India & World News in Kannada | VK Polls https://ift.tt/2S7coQK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...