
ಹೊಸದಿಲ್ಲಿ: ಟೆಸ್ಟ್ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತ್ಯುತ್ತಮ ವೇಗದ ಬೌಲಿಂಗ್ ಜೋಡಿ ಎನಿಸಿಕೊಂಡಿರುವ ಇಂಗ್ಲೆಂಡ್ ತಂಡದ ಬೌಲರ್‌ಗಳಾದ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್, ತಮ್ಮ ವೃತ್ತಿ ಬದುಕಿನಲ್ಲಿ ಎದುರಾದ ಅತ್ಯಂತ ಬಲಿಷ್ಟ ಬ್ಯಾಟ್ಸ್‌ಮನ್ ಯಾರೆಂದು ಹೇಳಿದ್ದಾರೆ. ಆಂಡರ್ಸನ್ ಇಂಗ್ಲೆಂಡ್ ಪರ ಒಟ್ಟು 151 ಟೆಸ್ಟ್ ಪಂದ್ಯಗಳಿಂದ ದಾಖಲೆಯ 584 ವಿಕೆಟ್‌ಗಳನ್ನು ಪಡೆದರೆ, ಸ್ಟುವರ್ಟ್ ಬ್ರಾಡ್ 131 ಪಂದ್ಯಗಳಿಂದ 485 ಟೆಸ್ಟ್ ವಿಕೆಟ್‌ಗಳನ್ನು ಪಡೆದು ಅಬ್ಬರಿಸಿದ್ದಾರೆ. ಇದೀಗ ಲಾಕ್‌ಡೌನ್ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಮಾತಿಗಿಳಿಸಿರುವ ಆಂಡರ್ಸನ್-ಬ್ರಾಡ್ ಜೋಡಿ, ಇಂಗ್ಲೆಂಡ್ ಪ್ರವಾಸ ಕೈಗೊಂಡ ತಂಡಗಳಲ್ಲಿ ತಾವು ಬೌಲಿಂಗ್ ಮಾಡಲು ಕಷ್ಟ ಪಟ್ಟಂತಹ ಅತ್ಯಂತ ಬಲಿಷ್ಠ ಬ್ಯಾಟ್ಸ್‌ಮನ್ ಕುರಿತಾಗಿ ವಿವರಿಸಿದ್ದಾರೆ. ತಂಡದ ಮಾಜಿ ನಾಯಕ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ತಾವು ಎದುರಿಸಿದ ಅತ್ಯಂತ ಬಲಿಷ್ಠ ಬ್ಯಾಟ್ಸ್‌ಮನ್ ಎಂದು ಇಂಗ್ಲೆಂಡ್ ಜೋಡಿ ಹೇಳಿದೆ. ಸ್ಮಿತ್, 2003ರಲ್ಲಿನ ಇಂಗ್ಲೆಂಡ್ ಪ್ರವಾಸದಲ್ಲಿ ನಡೆದ ಸರಣಿಯಲ್ಲಿ ಅಮೋಘ 700 ರನ್‌ಗಳನ್ನು ಬಾರಿಸಿದ್ದರು. ಆ ದಿನಗಲ್ಲಿ ಸ್ಮಿತ್ ಇಂಗ್ಲೆಂಡ್ ವಿರುದ್ಧ ಬರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದರು. "ಗ್ರೇಮ್ ಸ್ಮಿತ್ ಎದುರು ಬೌಲಿಂಗ್ ಮಾಡುವುದು ನಮಗೆಲ್ಲ ಸಿಂಹ ಸ್ವಪ್ನವೇ ಸರಿ," ಎಂದು ಸ್ಟುವರ್ಟ್ ಬ್ರಾಡ್ ಇನ್‌ಸ್ಟಾಗ್ರಾಮ್ ಲೈವ್ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. "ಅವರ ಎದುರು ಓವರ್ ದ ವಿಕೆಟ್ ಬೌಲಿಂಗ್ ಮಾಡುವುದರಿಂದ ಯಾವುದೇ ಪ್ರಯೋಜನ ಇರಲಿಲ್ಲ. ಅರೌಂಡ್ ದ ವಿಕೆಟ್ ಬೌಲಿಂಗ್ ಮಾಡಿ ಡ್ರೈವ್ ಮಾಡುವಂತೆ ಆಹ್ವಾನಿಸಿ ಒತ್ತಡ ಹೇರಬೇಕಿತ್ತು ಎಂದು ಈಗನಿಸುತ್ತದೆ," ಎಂದಿದ್ದಾರೆ. "ಹೌದು ನಾನು ಕೂಡ ಓವರ್ ದಿ ವಿಕೆಟ್ ಬೌಲಿಂಗ್ ಮಾಡಿ ಸ್ಮಿತ್ ಎದುರು ವೈಫಲ್ಯ ಅನುಭವಿಸಿದ್ದೇನೆ. 2003ರಲ್ಲಿ ನಾನು ಅವರ ಎದುರು ಮೊದಲ ಸರಣಿಯನ್ನು ಆಡಿದಾಗ ಎಡಗೈ ಬ್ಯಾಟ್ಸ್‌ಮನ್‌ಗೆ ಔಟ್ ಸ್ವಿಂಗ್ ಎಸೆತಗಳನ್ನು ಎಸೆಯುವ ಕಲೆ ನನ್ನಲ್ಲಿ ಇರಲಿಲ್ಲ. ಕೇವಲ ಇನ್‌ಸ್ವಿಂಗರ್‌ಗಳನ್ನು ಮಾತ್ರವೇ ಎಸೆಯುತ್ತಿದ್ದೆ. ಅದು ಹೇಗಿತ್ತೆಂದರೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ನಾವು ಬೌಲಿಂಗ್ ಮಾಡುತ್ತಿದ್ದಂತ್ತಿತ್ತು. ಪ್ರತಿಬಾರಿ ಇನ್‌ಸ್ವಿಂಗ್ ಎಸೆತಗಳನ್ನು ಲೆಗ್ ಸೈಡ್‌ನತ್ತ ಬಾರಿಸಿ ಸುಲಭವಾಗಿ ರನ್ ಗಳಿಸುತ್ತಿದ್ದರು. ಆ ಸರಣಿಯಲ್ಲಿ ಅವರು ಎರಡು ದ್ವಿಶತಕ ಬಾರಿಸಿದ್ದರು. ಹೀಗಾಗಿ ಅವರೆದುರು ಬೌಲಿಂಗ್ ಮಾಡುವುದು ಅಸಾಧ್ಯ ಎಂಬಂತಾಗಿತ್ತು," ಎಂದು ಆಂಡರ್ಸನ್ ಸ್ಮರಿಸಿದ್ದಾರೆ. ದಕ್ಷಿಣ ಆಫ್ರಿಕಾ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕನಾದ ಗ್ರೇಮ್ ಸ್ಮಿತ್, ಹರಿಣ ಪಡೆಯ ಪರ 117 ಟೆಸ್ಟ್ ಪಂದ್ಯಗಳನ್ನು ಆಡಿದ್ದು 47.76ರ ಸರಾಸರಿಯಲ್ಲಿ 27 ಶತಕಗಳನ್ನು ಒಳಗೊಂಡ 9,265 ರನ್‌ಗಳನ್ನು ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದವರ ಪೈಕಿ ಸ್ಮಿತ್ ಮೂರನೇ ಸ್ಥಾನದಲ್ಲಿದ್ದು, ಜಾಕ್ ಕಾಲಿಸ್ ಮತ್ತು ಹಶೀಮ್ ಆಮ್ಲಾ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3cDFUoW