
ಬೆಂಗಳೂರು: ಆರೋಪಿಗಳನ್ನು ಯಾವ ಜೈಲಿಗೆ ಕಳುಹಿಸ ಬೇಕು ಎನ್ನುವ ಪ್ರಶ್ನೆ ಬಂದಾಗ ಎಡಿಜಿಪಿ ಅಲೋಕ್ ಇರುವ ಜೈಲುಗಳಲ್ಲೇ ಸುರಕ್ಷಿತವಾದದ್ದನ್ನು ಆರಿಸಬೇಕಿತ್ತು. ಸಾರ್ವಜನಿಕ ಸ್ಥಳವೊಂದನ್ನು ತಾತ್ಕಾಲಿಕವಾಗಿ ಜೈಲಾಗಿ ಪರಿವರ್ತಿಸಿ ಅಲ್ಲಿ ಆರೋಪಿಗಳನ್ನಿರಿಸುವ ಅಧಿಕಾರ ವ್ಯಾಪ್ತಿ ಎಡಿಜಿಪಿಗೆ ಇಲ್ಲ. ಅದೇನಿದ್ದರೂ ಸರಕಾರದ ಅಧಿಕಾರ ವ್ಯಾಪ್ತಿ. ತಮ್ಮದಲ್ಲದ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸಲಾಗದ ಇಕ್ಕಟ್ಟಿನಲ್ಲಿದ್ದಾರೆ. ಎಡಿಜಿಪಿ ಅಲೋಕ್ ವ್ಯಾಪ್ತಿ: ಅಲೋಕ್ ಮೋಹನ್ ಅವರು ಜಿಲ್ಲಾಕಾರಾಗೃಹ, ತಾಲೂಕು ಜೈಲುಗಳಿಗೆ ಭೇಟಿ ನೀಡಿ ಪರಿಶೀಲಿಸಿಲ್ಲ. ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಬಳಿಕ ನ್ಯಾಯಾಧಿಲಯ ಆರೋಪಿಗಳನ್ನು ಬಂದೀಖಾನೆ ಅಧಿಕಾರಿಗಳಿಗೆ ಒಪ್ಪಿಸಿತು. ಹೀಗಾಗಿ, ಎಡಿಜಿಪಿ ಅಲೋಕ್ ಮೋಹನ್ ಅವರ ಅಧಿಕಾರ ವ್ಯಾಪ್ತಿ ಇದ್ದದ್ದು ಇರುವ ಜೈಲುಗಳಲ್ಲೇ ಸುರಕ್ಷಿತ ಅನ್ನಿಸಿದ ಜೈಲಿಗೆ ಆರೋಪಿಗಳನ್ನು ಕಳುಹಿಸುವುದಾಗಿತ್ತು. ಅದನ್ನೇ ಮಾಡಿದರು. ಒತ್ತಡಕ್ಕೆ ಸಿಲುಕಿತ್ತು ಗೃಹ ಇಲಾಖೆ: ಹಜ್ ಭವನ, ಸಮುದಾಯ ಭವನ ಅಥವಾ ಮದುವೆ ಮಂದಿರವೊಂದನ್ನು ತಾತ್ಕಾಲಿಕ ಜೈಲನ್ನಾಗಿ ಪರಿವರ್ತಿಸುವ ಅಧಿಕಾರ ಸರಕಾರಕ್ಕಿತ್ತು. ಆದರೆ, ಮಾಧ್ಯಮಗಳಿಂದ ಬರಬಹುದಾದ ಟೀಕೆಗಳಿಗೆ ಹೆದರಿ ಸರಕಾರಿ ಈ ಸಾಹಸಕ್ಕೆ ಕೈಹಾಕಲಿಲ್ಲ. ಹೀಗಾಗಿ, ಆರೋಪಿಗಳನ್ನು ಸ್ಥಳೀಯರ ಸಂಪರ್ಕದಿಂದ ದೂರ ಇರಿಸುವುದು, ಗಲಾಟೆಗೆ ಅವಕಾಶ ಇಲ್ಲದ ಜೈಲಿನ ಆಯ್ಕೆ ವಿಚಾರ ಬಂದಾಗ ಸರಕಾರ ಜೈಲನ್ನು ಆಯ್ಕೆ ಮಾಡಿಕೊಂಡಿತು ಎನ್ನುತ್ತಾರೆ ಅಧಿಕಾರಿಗಳು.
from India & World News in Kannada | VK Polls https://ift.tt/2xYqAo7