ಕಣ್ಣೂರು: ಕೊರೊನಾ ಲಕ್ಷಣಗಳಿಲ್ಲದೇ 100 ಮಂದಿಗೆ ಸೋಂಕು!

ಕೆ.ಗಂಗಾಧರ್‌ ಯಾದವ್‌, ಕಾಸರಗೋಡು: ಕೇರಳದಲ್ಲಿಸುಮಾರು 100 ಮಂದಿಯಲ್ಲಿ ಸೋಂಕು ಲಕ್ಷಣಗಳಿಲ್ಲದಯೇ ರೋಗ ದೃಢಗೊಂಡಿರುವ ಅಘಾತಕಾರಿ ವರದಿಯು ಆರೋಗ್ಯವಲಯಕ್ಕೆ ಸವಾಲಾಗಿದೆ. ಪ್ರಧಾನವಾಗಿ ಜಿಲ್ಲೆಯಲ್ಲಿ ಸೋಂಕು ತಗಲಿರುವ 111 ಮಂದಿ ರೋಗಿಗಳ ಪೈಕಿ ಶೇ. 80ರಷ್ಟು ಮಂದಿಗೆ ಯಾವುದೇ ಕೋವಿಡ್‌-19 ಲಕ್ಷಣಗಳಿರಲಿಲ್ಲ. ಆದರೆ ಬಹುಪಾಲು ಮಂದಿ ದುಬೈಯಿಂದ ಬಂದವರಾಗಿದ್ದಾರೆ. ಇದೀಗ 59 ಮಂದಿ ಕೊರೊನಾ ಸೋಂಕು ದೃಢಗೊಂಡು ಚಿಕಿತ್ಸೆಯಲ್ಲಿದ್ದಾರೆ. ಕೇರಳದಲ್ಲಿಅತೀ ಹೆಚ್ಚು ಕೋವಿಡ್‌-19 ರೋಗ ದೃಢಗೊಂಡಿರುವ ಜಿಲ್ಲೆ ಕಣ್ಣೂರು ಆಗಿದೆ. ದುಬೈಯಿಂದ ಆಗಮಿಸಿದ 30 ದಿನಗಳ ಬಳಿಕವೂ ರೋಗ ಲಕ್ಷಣ ಕಂಡು ಬಂದಿರುವುದು ಆತಂಕ ಸೃಷ್ಟಿಸಿದೆ. ಗಲ್ಫ್‌ನಿಂದ ಮರಳಿದವರನ್ನು ನಿಗಾವಿರಿಸಿ ಅವರ ಸ್ರಾವ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದಾಗ ರೋಗ ದೃಢಗೊಂಡಿದೆ. ಕಾಸರಗೋಡು ಜಿಲ್ಲೆಯಲ್ಲಿಇದೇ ರೀತಿಯಲ್ಲಿ 12ಮಂದಿಯಲ್ಲಿ ಯಾವುದೇ ಲಕ್ಷಣವಿರಲಿಲ್ಲ. ಆದರೆ ಇವರು ದುಬೈಯ ನೈಫ್‌ ಎಂಬ ಪ್ರದೇಶದಿಂದ ಬಂದವರಾಗಿದ್ದರು, ಅವರನ್ನು ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿರಿಸಿದ ಬಳಿಕ ಮಾದರಿ ಪರೀಕ್ಷೆಗೊಳಪಡಿಸಿದಾಗ ರೋಗ ದೃಢಗೊಂಡಿದೆ. ಕಣ್ಣೂರು ಜಿಲ್ಲೆಯಲ್ಲಿ ಫೆ.15ರಿಂದ 22ರ ತನಕ ಸುಮಾರು 85 ಮಂದಿ ದುಬೈಯಿಂದ ಆಗಮಿಸಿದ್ದರು. ಹೆಚ್ಚಿನವರು ಬೆಂಗಳೂರು, ಕರಿಪ್ಪೂರ್‌ ಹಾಗೂ ನೆಡುಂಬಾಶ್ಯೇರಿ ವಿಮಾನ ನಿಲ್ದಾಣದಲ್ಲಿ ಬಂದಿಳಿದು ಊರಿಗೆ ಆಗಮಿಸಿದ್ದಾರೆ. ದುಬೈಯಿಂದ ಬಂದವರನ್ನೆಲ್ಲರನ್ನೂ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಕಳುಹಿಸಲಾಗಿತ್ತು. ದೆಹಲಿಯ ನಿಜಾಮುದ್ದೀನ್‌ನಿಂದ ಆಗಮಿಸಿದ ಓರ್ವನಲ್ಲಿ ಸೋಂಕು ದೃಢಗೊಂಡದಲ್ಲದೇ ಅವರೊಂದಿಗೆ ನಿಕಟ ಸಂಪರ್ಕವಿರಿಸಿದ ಇನ್ನೊಬ್ಬರಿಗೂ ತಗುಲಿತ್ತು. ಕಾಸರಗೋಡಿನಲ್ಲಿ ತಪಾಸಣೆಗೊಳಪಟ್ಟ 12 ಮಂದಿಯಲ್ಲಿ ಯಾವುದೇ ಜ್ವರ, ಕೆಮ್ಮು, ಗಂಟಲು ನೋವು ಮುಂತಾದ ಲಕ್ಷಣಗಳಿರಲ್ಲ. ಆದರೆ ದುಬೈಯಿಂದ ಬಂದ ಕಾರಣಕ್ಕಾಗಿ ಇವರ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದಾಗ ರೋಗ ದೃಢಗೊಂಡಿತ್ತು. ಇವರಲ್ಲಿ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಯಿರುವ ಕಾರಣ ರೋಗ ಲಕ್ಷಣಗಳು ಕಂಡು ಬಂದಿಲ್ಲಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕಾಸರಗೋಡು ಜಿಲ್ಲೆಯಲ್ಲಿ ಪ್ರಸ್ತುತ ಚಿಕಿತ್ಸೆಯಲ್ಲಿರುವ ಸಂಖ್ಯೆ 19ಕ್ಕೆ ಇಳಿದಿದೆ. ಈ ತನಕ 169 ಮಂದಿ ಸೋಂಕು ದೃಢಗೊಂಡು ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಉಳಿದವರೆಲ್ಲರೂ ರೋಗ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಎಲ್ಲರೂ ಕಡ್ಡಾಯ 14 ದಿನಗಳ ಮನೆ ಕ್ವಾರಂಟೈನ್‌ನಲ್ಲಿದ್ದಾರೆ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಾಮಾಜಿಕ ಪ್ರಸರಣ ಉಂಟಾಗಲಿಲ್ಲ. ಆದರೆ ಸಾಮಾಜಿಕ ಪ್ರಸರಣ ಇಲ್ಲಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲಎಂಬುದಾಗಿ ಸಿಎಂ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಕೋವಿಡ್‌-19 ಮೂರನೇ ಹಂತದ ರೋಗ ಹರಡುವಿಕೆ ಉಂಟಾಗಲಿಲ್ಲ. ಆದರೆ ಭೀತಿಯಿದೆ, ಅದಕ್ಕಾಗಿಯೇ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ.


from India & World News in Kannada | VK Polls https://ift.tt/3cLTq9Y

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...