ನಾಲ್ಕು ತಿಂಗಳ ಮಗು ಸೇರಿ ಕಲಬುರಗಿಯ ಐವರಿಗೆ ಕೊರೊನಾ, ರಾಜ್ಯದಲ್ಲಿ ಮತ್ತೆ 7 ಸೋಂಕಿತರು

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 7 ಜನರಲ್ಲಿ ಕೊರೊನಾ ವೈರಸ್‌ ಸೋಂಕು ಇರುವುದು ಪತ್ತೆಯಾಗಿದೆ. ಇವರಲ್ಲಿ ಐವರು ಕಲಬುರಗಿ ಜಿಲ್ಲೆಗೆ ಸೇರಿದವರಾಗಿದ್ದು, ಸೋಂಕಿತರಲ್ಲಿ ನಾಲ್ಕು ತಿಂಗಳ ಮಗು ಕೂಡ ಸೇರಿದೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್‌-19 ಪೀಡಿತರ ಸಂಖ್ಯೆ 425ಕ್ಕೆ ಏರಿಕೆಯಾಗಿದೆ.ಕಲಬುರಗಿಯ ಐವರಲ್ಲಿ ನಾಲ್ವರು ಮಹಿಳೆಯರಾಗಿದ್ದರೆ, ಇನ್ನೋರ್ವರು 57 ವರ್ಷದ ಪುರುಷರಾಗಿದ್ದಾರೆ. ಇವರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎಲ್ಲರಿಗೂ ಕಲಬುರಗಿಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಏಳು ಜನ ಸೋಂಕಿತರಲ್ಲಿ ಇನ್ನಿಬ್ಬರು ಬೆಂಗಳೂರಿನವರಾಗಿದ್ದಾರೆ. ಇವರಲ್ಲಿ 54 ವರ್ಷ ಪ್ರಾಯದ ಪುರುಷರೊಬ್ಬರು ತೀವ್ರ ಉಸಿರಾಟದ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಬ್ಬರಿಗೂ ನಗರದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಯಾರಲ್ಲೂ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿರಲಿಲ್ಲ. ಇದೀಗ ಮೂರು ದಿನಗಳ ನಂತರ ಮತ್ತೆ ಇಬ್ಬರಲ್ಲಿ ಕೋವಿಡ್‌-19 ಕಾಣಿಸಿಕೊಂಡಿದೆ.ಇನ್ನು ರಾಜ್ಯದಲ್ಲಿ ಇಲ್ಲಿಯವರೆಗೆ 425ರಲ್ಲಿ 129 ಸೋಂಕಿತರ ಕೊರೊನಾದಿಂದ ಚೇತರಿಸಿಕೊಂಡಿದ್ದರೆ, 17 ಜನರು ಸೋಂಕಿನಿಂದ ಅಸುನೀಗಿದ್ದಾರೆ.

ಜಿಲ್ಲಾವಾರು ಕೊರೊನಾ ವೈರಸ್‌ ಸೋಂಕಿತರ ಪಟ್ಟಿ
ಕ್ರ.ಸಂ. ಜಿಲ್ಲೆ ದೃಢಪಟ್ಟ ಕೊರೊನಾ ಪ್ರಕರಣ ಗುಣಮುಖ ಸಕ್ರಿಯ ಪ್ರಕರಣ ಸಾವು
1 ಬೆಂಗಳೂರು 91 48 39 4
2 ಮೈಸೂರು 86 31 55 0
3 ಬೆಳಗಾವಿ 43 3 39 1
4 ವಿಜಯಪುರ 35 0 33 2
5 ಕಲಬುರಗಿ 35 3 28 4
6 ಬಾಗಲಕೋಟೆ 21 2 18 1
7 ಚಿಕ್ಕಬಳ್ಳಾಪುರ 16 9 5 2
8 ಬೀದರ್‌ 15 0 15 0
9 ದಕ್ಷಿಣ ಕನ್ನಡ 15 11 3 1
10 ಬಳ್ಳಾರಿ 13 0 13 0
11 ಮಂಡ್ಯ 12 0 12 0
12 ಬೆಂಗಳೂರು ಗ್ರಾ. 12 4 8 0
13 ಉತ್ತರ ಕನ್ನಡ 11 9 2 0
14 ಧಾರವಾಡ 7 1 6 0
15 ಗದಗ 4 0 3 1
16 ಉಡುಪಿ 3 3 0 0
17 ದಾವಣಗೆರೆ 2 2 0 0
18 ತುಮಕೂರು 2 1 0 1
19 ಚಿತ್ರದುರ್ಗ 1 1 0 0
20 ಕೊಡಗು 1 1 0 0
ಒಟ್ಟು 425 129 279 17


from India & World News in Kannada | VK Polls https://ift.tt/3cyDvM8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...