60 ದಿನಗಳವರೆಗೆ ಗ್ರೀನ್ ಕಾರ್ಡ್ ನೀಡುವ ಪ್ರಕ್ರಿಯೆ ನಿಲ್ಲಿಸಿದ ಟ್ರಂಪ್ ಸರ್ಕಾರ!

ವಾಷಿಂಗ್ಟನ್: ಕೊರೊನಾ ವೈರಸ್ ದಾಳಿಯ ಹಿನ್ನೆಲೆಯಲ್ಲಿ ತನ್ನ ವಲಸೆ ನೀತಿಯಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಿಕೊಂಡಿರುವ , ಮುಂದಿನ 60 ದಿನಗಳವರೆಗೆ ಹಸಿರು ಕಾರ್ಡ್ ಅಥವಾ ಕಾನೂನುಬದ್ಧ ಶಾಶ್ವತ ನಿವಾಸದ ಹಕ್ಕು ನೀಡುವ ಪ್ರಕ್ರಿಯೆಯನ್ನು ಸ್ಥಗಿತೊಗಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ಅಮೆರಿಕ ಅಧ್ಯಕ್ಷ , ಮುಂದಿನ 60 ದಿನಗಳವರೆಗೆ ವಲಸಿಗರಿಗೆ ಗ್ರೀನ್ ಕಾರ್ಡ್ ನೀಡುವ ಪ್ರಕ್ರಿಯೆನ್ನು ಸ್ಥಗಿತಗೊಳಿಸಿರುವುದಾಗಿ ಸ್ಪಷ್ಟಪಡಿಸಿದ್ಧಾರೆ. ಸದ್ಯದ ನಿಯಮದಂತೆ ಅಮೆರಿಕ ಪ್ರತಿ ದೇಶಕ್ಕೆ ಶೇ.7ರ ಪ್ರಮಣದಲ್ಲಿ ವಾರ್ಷಿಕವಾಗಿ ಗರಿಷ್ಠ 1,40,000 ಉದ್ಯೋಗ ಆಧಾರಿತ ಹಸಿರು ಕಾರ್ಡ್‌ಗಳನ್ನು ವಲಸಿಗರಿಗೆ ವಿತರಿಸುತ್ತದೆ. ಆದರೆ ಈ ಪ್ರಕ್ರಿಯೆಗೆ ಇದೀಗ 60 ದಿನಗಳವರೆಗೆ ಬ್ರೇಕ್ ಹಾಕಲಾಗಿದೆ. ಆದರೆ ಈ ನಿಯಮ ಅಮೆರಿಕಕ್ಕೆ ತಾತ್ಕಾಲಿಕವಗಿ ಬರವು ವಿದೇಶಿಯರಿಗೆ ಅನ್ವಯವಾಗುವುದಿಲ್ಲ ಎಂದೂ ಟ್ರಂಪ್ ಆಡಳಿತ ಸ್ಪಷ್ಟಪಡಿಸಿದೆ. ಅಂದರೆ ಭಾರತೀಯ ಐಟಿ ಕ್ಷೇತ್ರದ ಹೆಚ್-1ಬಿ ವಲಸೆರಹಿತ ವೀಸಾಗಳನ್ನು ಹೊಂದಿರುವವರಿಗೆ ಹೊಸ ಆದೇಶದಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಕುರಿತು ಮಾತನಾಡಿದ ಟ್ರಂಪ್, ನಾನು ಅಮೆರಿಕನ್ನರ ಹಿತವನ್ನು ಕಾಪಾಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ 60 ದಿನಗಳವರೆಗೆ ಗ್ರೀನ್ ಕಾರ್ಡ್ ನೀಡುವ ಪ್ರಕ್ರಿಯೆನ್ನು ಸ್ಥಗಿತೊಗೊಳಿಸಿರುವುದಾಗಿ ಸ್ಪಷ್ಟಪಡಿಸಿದರು. ಅಲ್ಲದೇ 60 ದಿನಗಳ ಬಳಿಕ ಈ ನಿಟ್ಟಿನಲ್ಲಿ ಏನು ನಿರ್ಣಯ ಕೈಗೊಳ್ಳಬೇಕು ಎಂಬುದನ್ನು ಮತ್ತೆ ನಿರ್ಧರಿಸಲಾಗುವುದು ಎಂದೂ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.


from India & World News in Kannada | VK Polls https://ift.tt/2KqXPDc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...