ಲಾಕ್‌ಡೌನ್‌: ಏ.14ರ ಬಳಿಕ ಮುಂದೇನು? ಕೆಲವು ವಾರಗಳ ಎಚ್ಚರ ಅಗತ್ಯ!

ಹೊಸದಿಲ್ಲಿ: ಸಮನ್ವಯದ ಕಾರ್ಯಯೋಜನೆಯಿಂದ ಮಾತ್ರವೇ ಕೊರೊನಾ ಸೋಂಕು ಹರಡುವುದನ್ನು ತಡೆಯಬಹುದು. ಕೇಂದ್ರ-ರಾಜ್ಯಗಳು, ರಾಜ್ಯ-ರಾಜ್ಯಗಳ ನಡುವೆ ಸಮನ್ವಯ ಅಗತ್ಯ. ಹಾಗೆಯೇ ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾ ಗುಂಪುಗಳನ್ನು ರಚಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮುಖ್ಯಮಂತ್ರಿಗಳಿಗೆ ನೀಡಿದ ಪ್ರಮುಖ 6 ಸಲಹೆಗಳು
  1. ಲಾಕ್‌ಡೌನ್‌ ಹಿಂತೆಗೆದುಕೊಂಡ ಬಳಿಕವೂ ಕೆಲವು ವಾರಗಳವರೆಗೆ ತಪಾಸಣೆ, ನಿಗಾ, ಐಸೋಲೇಷನ್‌ ಮತ್ತು ಕ್ವಾರಂಟೈನ್‌ ಮುಂದುವರಿಸಬೇಕು
  2. ಕೃಷಿ ಉತ್ಪನ್ನಗಳ ಖರೀದಿಗೆ ಎಪಿಎಂಸಿಗಳು ಮಾತ್ರವಲ್ಲದೇ ಪರ್ಯಾಯ ಮಾರ್ಗಗಳ ಬಗ್ಗೆಯೂ ಆಲೋಚನೆ ಮಾಡಬೇಕು
  3. ಕೊರೊನಾ ಸೋಂಕಿನಿಂದ ಹೆಚ್ಚು ಪ್ರಾಣಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿರಬೇಕು
  4. ಬ್ಯಾಂಕ್‌ಗಳಲ್ಲಿ ನಗದು ಹರಿವಿನ ಕೊರತೆ ಎದುರಾಗದಂತೆ ಹಾಗೂ ಜನದಟ್ಟಣೆ ಉಂಟಾಗದಂತೆ ನಿಗಾ ವಹಿಸಬೇಕು
  5. ಔಷಧ ಉತ್ಪಾದಕರು, ವೈದ್ಯಕೀಯ ಉಪಕರಣ ತಯಾರಕರಿಗೆ ಕಚ್ಚಾ ಪದಾರ್ಥಗಳ ಕೊರತೆ ಎದುರಾಗದಂತೆ ಎಚ್ಚರ ವಹಿಸಬೇಕು
  6. ವೈದ್ಯರ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಆಯುಷ್‌ ವೈದ್ಯರನ್ನೂ ಕೊರೊನಾ ಚಿಕಿತ್ಸೆಗೆ ಬಳಸಿಕೊಳ್ಳಬೇಕು
ಸಮುದಾಯಗಳ ಮುಖಂಡರು, ಧಾರ್ಮಿಕ ನಾಯಕರ ಮೂಲಕ ಜಾಗೃತಿ ದೇಶಾದ್ಯಂತ ಕೊರೊನಾ ತಳಮಳ ಹೆಚ್ಚಿಸಿರುವ ದಿಲ್ಲಿಯ ತಬ್ಲೀಘ್‌ ಇ ಧಾರ್ಮಿಕ ಸಮಾವೇಶದ ವಿಚಾರವೂ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಪ್ರಸ್ತಾಪವಾಯಿತು. ಪ್ರತಿ ರಾಜ್ಯವೂ ಸಮಾವೇಶದಲ್ಲಿ ಭಾಗವಹಿಸಿದ್ದವರನ್ನು ಪತ್ತೆ ಮಾಡಿ ನಿಗಾದಲ್ಲಿ ಇಡಬೇಕು ಎಂದು ಪ್ರಧಾನಿ ಸೂಚಿಸಿದರು. ಗ್ರಾಮಗಳಿಂದ ರಾಜ್ಯ ರಾಜಧಾನಿಯವರೆಗೆ ಸಮುದಾಯಗಳ ಮುಖಂಡರು, ಧಾರ್ಮಿಕ ನಾಯಕರು, ಸರಕಾರೇತರ ಸಂಸ್ಥೆಗಳ ನೆರವು ಪಡೆದು ಕೊರೊನಾ ಜಾಗೃತಿ ಮೂಡಿಸಲು ಮುಂದಾಗುವಂತೆಯೂ ಪ್ರಧಾನಿ ಸಲಹೆ ಮಾಡಿದರು.


from India & World News in Kannada | VK Polls https://ift.tt/2xIqTmD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...