ಜೆಎನ್‌ಯು ಹಿಂಸಾಚಾರ Live Upadates: ಕಾಂಗ್ರೆಸ್‌, ಆಪ್‌ ಮತ್ತು ಎಡ ಪಕ್ಷಗಳು ಕಾರಣ; ಜಾವಡೇಕರ್‌

ಹೊಸದಿಲ್ಲಿ: ಹಿಂಸಾಚಾರಕ್ಕೆ ಸಂಬಂಧಿಸಿ ಟ್ವೀಟ್‌ ಮಾಡಿರುವ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, ಕಾಂಗ್ರೆಸ್‌, ಆಮ್‌ ಆದ್ಮಿ ಪಾರ್ಟಿ ಮತ್ತು ಎಡ ಪಕ್ಷಗಳು ಜೆಎನ್‌ಯು ಆವರಣದಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ. "ಭಾನುವಾರ ಜೆಎನ್‌ಯುನಲ್ಲಿ ನಡೆದ ಘಟನೆಯನ್ನು ಖಂಡಿಸುತ್ತೇನೆ. ಕಾಂಗ್ರೆಸ್‌, ಎಎಪಿ ಮತ್ತು ಎಡ ಪಕ್ಷಗಳ ಪ್ರೇರಿತ ಗುಂಪುಗಳಿಗೆ ರಾಷ್ಟ್ರದಲ್ಲಿ ಹಿಂಸಾಚಾರ ಸೃಷ್ಟಿಸುವುದೇ ಗುರಿಯಾಗಿದೆ. ಅದರಲ್ಲೂ ಕೆಲವು ವಿಶ್ವವಿದ್ಯಾಲಯಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ. ಸೂಕ್ತ ತನಿಖೆ ನಡೆಯಬೇಕಿದೆ'' ಎಂದಿದ್ದಾರೆ. ಸೆಮಿಸ್ಟರ್‌ ಎಕ್ಸಾಂ ರೆಜಿಸ್ಟ್ರೇಷನ್‌ ವೇಳೆ ಸರ್ವರ್‌ ರೂಮ್‌ ಬ್ಲಾಕ್‌ ಮಾಡಿ ಸಮಸ್ಯೆಗಳನ್ನು ಸೃಷ್ಟಿಸಿದವರ ಮೇಲೆಯೂ ತನಿಖೆ ನಡೆಯಬೇಕು ಎಂದು ಪ್ರಕಾಶ್‌ ಜಾವಡೇಕರ್‌ ಒತ್ತಾಯಿಸಿದ್ದಾರೆ. ಇತ್ತೀಚೆಗೆ ಉಪಕುಲಪತಿ ಮಮಿದಲ ಜಗದೇಶ್‌ ಕುಮಾರ್‌ ಅವರನ್ನು ಕೊಠಡಿಯೊಳಗೆ ಕೂಡಿ ಹಾಕಿದ್ದರ ವಿಚಾರಕ್ಕೆ ಸಂಬಂಧಿಸಿ 10-15 ಮಂದಿಯ ಮೇಲೆ ಪೊಲೀಸ್‌ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು. ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟ ಉಪಕುಲಪತಿ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಗೂಂಡಾಗಳು ಕಾಲೇಜು ಆವರಣಕ್ಕೆ ದಾಳಿ ನಡೆಸಿದ್ದ ಗೂಂಡಾಗಳು ನಡೆಸಿದ ದಾಳಿಗೆ ಜೆಎನ್‌ಯುಎಸ್‌ಯು ಅಧ್ಯಕ್ಷೆ ಐಶೆ ಘೋಷ್‌ ಸೇರಿದಂತೆ 30 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ದಿಲ್ಲಿಯ ಜೆಎನ್‌ಯು ಕಾಲೇಜು ಆರಣಕ್ಕೆ ಮುಸುಕುಧಾರಿ ಗೂಂಡಾಗಳು ನುಗ್ಗಿ ಹಲ್ಲೆ ನಡೆಸಿದ್ದರಿಂದ ಉಂಟಾಗಿದ್ದ ಹಿಂಸಾಚಾರ ಸಹಸ ಸ್ಥಿತಿಗೆ ಮರಳಿದೆ ಎಂದು ದಿಲ್ಲಿ ಪೊಲೀಸ್‌ ಉಪ ಪೊಲೀಸ್‌ ಆಯುಕ್ತ ದೇವೇಂದ್ರ ಆರ್ಯ ತಿಳಿಸಿದರು. ಜೆಎನ್‌ಯು ಕಾಲೇಜಿನ ಆವರಣದಲ್ಲಿ ಪರಿಸ್ಥಿತಿ ಸಹಜತೆ ಮರಳಿದೆ. ಎಲ್ಲ ಹಾಸ್ಟೆಲ್‌ಗಳು ಸರಕ್ಷಿತವಾಗಿವೆ ಎಂದರು.

ಜವಾಹರಲಾಲ್‌ ನೆಹರೂ ಆವರಣದಲ್ಲಿ ಮುಸುಕುಧಾರಿ ಗೂಂಡಾಗಳು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಘಟನೆಯನ್ನು ಖಂಡಿಸಿ ಮುಂಬಯಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ) ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಜೆಎನ್‌ಯು ವಿದ್ಯಾರ್ಥಿಗಳ ಜೊತೆ ನಿಲ್ಲುವುದಾಗಿ ತಿಳಿಸಿದರು.



from India & World News in Kannada | VK Polls https://ift.tt/37KXJjH

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...