ಇಂದಿನಿಂದ ಸಿದ್ದಪ್ಪಾಜಿ ಜಾತ್ರೆ ಆರಂಭ: ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ

ಕೊಳ್ಳೇಗಾಲ: ಚಿಕ್ಕಲ್ಲೂರಿನಲ್ಲಿ ವಿಶಿಷ್ಟ ಆಚರಣೆಗಳ ಜ.10ರಿಂದ 15ರವರೆಗೆ ನಡೆಯಲಿದ್ದು, ರಾಜ್ಯದ ನಾನಾ ಕಡೆಯಿಂದ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ. ಪವಾಡ ಪುರುಷ ಸಿದ್ದಪ್ಪಾಜಿ ಎಂದೇ ಭಕ್ತರ ಮನದಲ್ಲಿ ನೆಲೆನಿಂತಿರುವ ಮಂಟೇಸ್ವಾಮಿ-ಸಿದ್ದಪ್ಪಾಜಿಯ ಲಕ್ಷಾಂತರ ಭಕ್ತರು, ನೀಲಗಾರರು ಒಂದೆಡೆ ಮೇಳೈಸುವ ಈ ಜಾತ್ರೆ, ಭಕ್ತಿ ಮತ್ತು ವಿಶಿಷ್ಟ ಆಚರಣೆಗಳ ಸಮಾಗಮವಾಗಿದೆ. ಈ ಜಾತ್ರೆ ಮಹೋತ್ಸವ ಹೊಸ ವರ್ಷದ ಮೊದಲ ಹುಣ್ಣಿಮೆ ಯಂದು ಪ್ರಾರಂಭಗೊಳ್ಳುವುದು ವಿಶೇಷ. ಕೃಷಿಕರು, ಕಾರ್ಮಿಕರು ಒಕ್ಕಣೆಯನ್ನು ಮುಗಿಸಿ ಚಿಕ್ಕಲ್ಲೂರಯ್ಯನ ಜಾತ್ರೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಕೊರೆಯುವ ಚಳಿಯನ್ನು ಲೆಕ್ಕಿಸದೆ ನಾಲ್ಕೈದು ರಾತ್ರಿ ದೇವಾಲಯದ ಸುತ್ತಮುತ್ತ ಇರುವ ಹೊಲ ಗದ್ದೆಗಳಲ್ಲಿ ಉಳಿದುಕೊಂಡು ಸಿದ್ದಪ್ಪಾಜಿಯನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಹಿನ್ನೆಲೆ: ಧರೆಗೆ ದೊಡ್ಡವರು ಎಂದೇ ಪ್ರಸಿದ್ಧರಾಗಿರುವ ಮಂಟೇಸ್ವಾಮಿಯವರ ಶಿಷ್ಯ ಸಿದ್ದಪ್ಪಾಜಿ 16ನೇ ಶತಮಾನದಲ್ಲಿ ಇದ್ದರು ಎಂಬುದು ಐತಿಹ್ಯ. ಗುರು ಶಿಷ್ಯರು ತಮ್ಮ ಕಾಲದ ಆರ್ಥಿಕ ಸಾಮಾಜಿಕ ಪರಿವರ್ತನೆ ಮಾಡುವ ಕಾರ್ಯದಲ್ಲಿ ತೊಡಗಸಿಕೊಂಡಿದ್ದರು. ಶರಣರು, ಸೂಫಿಗಳ ದಟ್ಟ ಪ್ರಭಾವು ಸಹ ಇತ್ತು. ಇವರ ಕಾಲ ಜೀವನದ ಬಗ್ಗೆ ಖಚಿತ ದಾಖಲೆಗಳಿಲ್ಲ. ಹಳೆ ಮೈಸೂರು ಪ್ರದೇಶದಲ್ಲಿ ಬಹಳಷ್ಟು ಕಡೆ ಕಾಣಿಸುವ ಮಂಟೇಸ್ವಾಮಿ-ಸಿದ್ದಪ್ಪಾಜಿ ಪವಾಡಗಳನ್ನು ಹಾಡು ಮತ್ತು ಮಾತಿನ ಮೂಲಕ ಹೇಳುವವರು ಹಾಗೂ ಕೆ.ಆರ್‌.ನಗರ ತಾಲೂಕಿನ ಕಪ್ಪಡಿ, ಮಳವಳ್ಳಿ ತಾಲೂಕಿನ ಮುಟ್ಟನಹಳ್ಳಿ ಹಾಗೂ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ನಡೆಯುವ ಜಾತ್ರೆಗಳು ಮಂಟೇಸ್ವಾಮಿ-ಸಿದ್ದಪ್ಪಾಜಿ ಅವರ ಜೀವನದ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಮೂಲಕ ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿ ಕಥೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಆಗುತ್ತಿದೆ.


from India & World News in Kannada | VK Polls https://ift.tt/36G8i7o

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...