ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರಗಳ ನಿರಂತರ ಏರಿಕೆಯಿಂದ ಬಸವಳಿದಿದ್ದ ಗ್ರಾಹಕನಿಗೆ ಕೊಂಚ ತಾತ್ಕಾಲಿಕ ನಿಟ್ಟುಸಿರು ಎಂಬಂತೆ 12 ಪೈಸೆ ಇಳಿಕೆ ಕಂಡು ಬಂದಿದೆ. ಇನ್ನೇನು ಬೆಂಗಳೂರಲ್ಲಿ 79 ರೂ. ದಾಟುತ್ತದೆ ಎಂಬಂತಹ ಸಂದರ್ಭದಲ್ಲಿ 12 ಪೈಸೆ ಇಳಿಕೆಯೊಂದಿಗೆ 78.44 ರೂ.ಗೆ ತಲುಪಿದೆ. ರಾಷ್ಟ್ರದ ಇತರ ಮೆಟ್ರೊ ನಗರಗಳಲ್ಲು ಪೆಟ್ರೋಲ್ ದರದಲ್ಲಿ 11-12 ಪೈಸೆ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 75.90 ರೂ. ಇದೆ. ಚೆನ್ನೈನಲ್ಲಿ 78.86 ರೂ., ಕೋಲ್ಕತದಲ್ಲಿ 78.48 ರೂ. ಹಾಗೂ ವಾಣಿಜ್ಯ ನಗರಿ ಮುಂಬಯಿನಲ್ಲಿ 81.49 ರೂ. ಇದೆ. ರಾಷ್ಟ್ರದ ಎಲ್ಲ ಮೆಟ್ರೊ ನಗರಗಳಲ್ಲಿ 6-7 ಪೈಸೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಲೀಟರ್ ಒಂದರ ಡೀಸೆಲ್ ದರ 71.41 ರೂ., ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 69.11 ರೂ., ಚೆನ್ನೈನಲ್ಲಿ 73.04 ರೂ., ಕೋಲ್ಕತದಲ್ಲಿ 71.48 ರೂ. ಹಾಗೂ ವಾಣಿಜ್ಯ ನಗರಿ ಮುಂಬಯಿನಲ್ಲಿ 72.47 ರೂ. ಇದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಂಡು ಬಂದಿದ್ದು ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ 4203 ರೂ. ಇದೆ. ಸೂಚನೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪೆಟ್ರೋಲ್ ವಿತರಣಾ ಕಂಪೆನಿಗಳು ಮತ್ತು ಸ್ಥಳದಿಂದ ಸ್ಥಳಕ್ಕೆ ಸ್ವಲ್ಪ ವ್ಯತ್ಯಾಸ ಇರುತ್ತದೆ ಎಂಬುದನ್ನು ಗಮನಿಸತಕ್ಕದ್ದು.
from India & World News in Kannada | VK Polls https://ift.tt/30pL7vX