ಬೆಂಗಳೂರು: ಮೊದಲೆಲ್ಲ ಒಂದೊಂದು ರೂಪಾಯಿ ಲೆಕ್ಕದಲ್ಲಿ ಏರಿಕೆಯಾದಾಗ ಗ್ರಾಹಕರು ಆತಂಕಗೊಳ್ಳುತ್ತಿದ್ದರು. ಜನಸಾಮಾನ್ಯರು ಹೌಹಾರುತ್ತಿದ್ದರು. ಆದರೆ ಇದೀಗ ಪೈಸೆಯಂತೆ ಏರಿಕೆ ಕಂಡುಬರುತ್ತಿರುವುದರಿಂದ ಸದ್ದೇ ಇಲ್ಲದೆ ಹತ್ತತ್ತು ದಿನಕ್ಕೆ 1 ರೂ.ನಂತೆ ಏರಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ ಲೀಟರ್ ಒಂದಕ್ಕೆ ಪೆಟ್ರೋಲ್ ದರ 78.28 ರೂ.ಗೆ ತಲುಪಿದೆ. ಡಿಸೆಂಬರ್ 29ರಂದು ಪೆಟ್ರೋಲ್ ದರ ಬೆಂಗಳೂರಿನಲ್ಲಿ 77.44 ರೂ. ಇತ್ತು. ರಾಷ್ಟ್ರದ ಎಲ್ಲ ಮೆಟ್ರೊ ನಗರಗಳಲ್ಲಿ ನಿನ್ನೆ 5 ಪೈಸೆ ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 75.74 ರೂ., ಚೆನ್ನೈನಲ್ಲಿ 78.69 ರೂ., ಕೋಲ್ಕತದಲ್ಲಿ 78.33 ರೂ. ಹಾಗೂ ವಾಣಿಜ್ಯ ನಗರಿ ಮುಂಬಯಿನಲ್ಲಿ 81.33 ರೂ. ಇದೆ. ಏರಿಕೆಯ ಬಿಸಿ ಜೋರಾಗಿದ್ದು ಪ್ರತಿದಿನ 10 ಪೈಸೆ ಏರಿಕೆ ಕಂಡು ಬರುತ್ತಿದೆ. ಇದೀಗ ಬೆಂಗಳೂರಿನಲ್ಲಿ ನಿರೀಕ್ಷೆಯಂತೆ 71 ರೂ.ಗಳ ಗಡಿ ದಾಟಿದೆ. ಬೆಂಗಳೂರಿನಲ್ಲಿ ಡೀಸೆಲ್ ದರ 71.08 ರೂ. ಇದೆ. ರಾಷ್ಟ್ರದ ಇತರ ಮೆಟ್ರೊ ನಗರಗಳಲ್ಲೂ ಬೆಲೆ ಏರಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 68.79 ರೂ., ಚೆನ್ನೈನಲ್ಲಿ 72.69 ರೂ., ಕೋಲ್ಕತದಲ್ಲಿ 71.15 ರೂ. ಹಾಗೂ ವಾಣಿಜ್ಯ ನಗರಿ ಮುಂಬಯಿನಲ್ಲಿ 72.14 ರೂ. ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಬ್ಯಾರಲ್ ಒಂದಕ್ಕೆ 4,499 ರೂ. ಇದೆ. ಸೂಚನೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪೆಟ್ರೋಲ್ ವಿತರಣಾ ಕಂಪೆನಿಗಳು ಮತ್ತು ಸ್ಥಳದಿಂದ ಸ್ಥಳಕ್ಕೆ ಸ್ವಲ್ಪ ವ್ಯತ್ಯಾಸ ಇರುತ್ತದೆ ಎಂಬುದನ್ನು ಗಮನಿಸತಕ್ಕದ್ದು.
from India & World News in Kannada | VK Polls https://ift.tt/39KV9vE