ಹೊಸ ವರ್ಷದ ಮೊದಲ ದಿನವೇ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯ ಬಿಸಿ

ಹೊಸದಿಲ್ಲಿ: ಹೊಸ ವರ್ಷದ ಮೊದಲ ದಿನವೇ ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ ಏರಿಕೆಯಾಗಿದೆ. ಈ ಮೂಲಕ ಸತತ ಐದನೇ ತಿಂಗಳು ದರ ಏರಿಕೆಯಾದಂತಾಗಿದೆ. ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಪ್ರಕಾರ ಸರಾಸರಿ 19 ರೂಪಾಯಿಯಷ್ಟು ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 14.2 ಕೆಜಿ ದರ ಈ ಹಿಂದೆ 697.50 ರೂಪಾಯಿ ಇತ್ತು. ಅದೀಗ 716.50ಗೆ ಏರಿಕೆಯಾಗಿದೆ. 19 ಕೆಜಿ ಗ್ಯಾಸ್‌ ಸಿಲಿಂಡರ್‌ ದರದಲ್ಲಿ 30 ರೂಪಾಯಿಯಷ್ಟು ಏರಿಕೆಯಾಗಿದ್ದು 1,269 ರೂಪಾಯಿಗೆ ಬದಲಾಗಿ ಈಗ 1,299 ರೂಪಾಯಿ ತಲುಪಿದೆ. ಸರ ಏರಿಕೆಯ ನಂತರ ದೆಹಲಿಯಲ್ಲಿ ಅಡುಗೆ ಅನಿಲ ಸಿಲಿಂಡರ್‌ ದರ 714ಕ್ಕೆ ಏರಿಕೆಯಾಗಿದ್ದರೆ, ಮುಂಬಯಿನಲ್ಲಿ 684.50, ಕೊಲ್ಕತ್ತಾದಲ್ಲಿ 747 ಮತ್ತು ಚೆನ್ನೈನಲ್ಲಿ 734 ರೂಪಾಯಿಗೆ ಏರಿಕೆ ಕಂಡಿದೆ. ಆಗಸ್ಟ್‌ನಿಂತ ಪ್ರತಿ ತಿಂಗಳು ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‌ ದರದಲ್ಲಿ ಏರಿಕೆಯಾಗುತ್ತಿದ್ದು ಇಲ್ಲಿಯವರೆಗೆ ಒಟ್ಟಾರೆ 140 ರೂಪಾಯಿಯಷ್ಟು ಏರಿಕೆಯಾಗಿದೆ. ಸದ್ಯ ಸರಕಾರ ಕುಟುಂಬವೊಂದಕ್ಕೆ ವಾರ್ಷಿಕ 14.2 ಕೆಜಿಗಳ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುತ್ತಿದೆ. ಪ್ರತಿ ತಿಂಗಳು ಈ ಸಬ್ಸಿಡಿ ದರವೂ ಬದಲಾವಣೆಯಾಗುತ್ತಿರುತ್ತದೆ.


from India & World News in Kannada | VK Polls https://ift.tt/2MJqW6c

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...