5 ಟ್ರಿಲಿಯನ್‌ ಗುರಿಗೆ ಕೃಷಿ ವಲಯವೇ ಹೆದ್ದಾರಿ: ಪಿಎಂ ಮೋದಿ

- ಅಶೋಕ್‌ ಆರ್‌. ಪಿ ತುಮಕೂರು ಭಾರತವನ್ನು ಜಗತ್ತಿನ ನಾಲ್ಕನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಕಟ್ಟುವ ಪ್ರಯತ್ನದಲ್ಲಿ ರೈತರ ಕೊಡುಗೆಯೇ ದೊಡ್ಡದು. ದೇಶದ ಆರ್ಥಿಕತೆಯನ್ನು 2025ರ ವೇಳೆಗೆ ಐದು ಲಕ್ಷ ಕೋಟಿ ಡಾಲರ್‌ಗೇರಿಸುವ ಕೇಂದ್ರ ಸರಕಾರದ ದೃಢ ನಿರ್ಧಾರಕ್ಕೆ ಕೃಷಿ ವಲಯವೇ ಹೆದ್ದಾರಿ ಎಂದು ಪ್ರಧಾನಿ ಹೇಳಿದರು. ತುಮಕೂರಿನ ಜ್ಯೂನಿಯರ್‌ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ರೈತರ ಸಮಾವೇಶದಲ್ಲಿ ಭಾಗವಹಿಸಿದ್ದ ಮೋದಿ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ 4ನೇ ಹಂತದ ಹಣ ವಿತರಣೆ ಪ್ರಕ್ರಿಯೆಗೆ ಮೋದಿ ಚಾಲನೆ ನೀಡಿದರು. ಇದೇ ವೇಳೆ 2016-17 ಹಾಗೂ 2017-18ನೇ ಸಾಲಿನ ಕೃಷಿ ಕರ್ಮಣ್‌ ಪ್ರಶಸ್ತಿ ಹಾಗೂ ಮೀನು ಸಾಕಣೆದಾರರಿಗೆ ಸೌಲಭ್ಯ ವಿತರಿಸಲಾಯಿತು. ''ಇಂದು 6 ಕೋಟಿ ರೈತರ ಖಾತೆಗೆ ಕೃಷಿ ಸಮ್ಮಾನ್‌ ಯೋಜನೆಯಡಿ ಹಣ ಸಂದಾಯವಾಗಿದೆ. ಇಷ್ಟೊಂದು ಕಡಿಮೆ ಸಮಯದಲ್ಲಿ ಇಷ್ಟು ಬೃಹತ್‌ ಯೋಜನೆಯನ್ನು ಸಾಧಿಸುವುದು ದೊಡ್ಡ ಸಾಧನೆ. ಈ ಐತಿಹಾಸಿಕ ಕ್ಷಣಕ್ಕೆ ಕರ್ನಾಟಕ ಇಂದು ಸಾಕ್ಷಿಯಾಗಿದೆ,'' ಎಂದು ಹೇಳಿದರು. ದೇಶದ ಪ್ರಗತಿಯಲ್ಲಿ ದಕ್ಷಿಣ ರಾಜ್ಯಗಳ ಪಾತ್ರವನ್ನು ಕೊಂಡಾಡಿದ ಅವರು ರಾಜ್ಯದ ಕಾಫಿ, ತೆಂಗು, ಅರಿಶಿಣ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದಾಗಿ ಹೇಳಿದರು. ಮೀನುಗಾರರ ಕಲ್ಯಾಣದ ಅಭಯದಾನ ನೀಡಿದರು. ಕ್ಲಸ್ಟರ್‌, ಬೀಜ ಬ್ಯಾಂಕ್‌, ಕೃಷಿ ಹಬ್‌ ಬೆಳಗಾವಿ, ಮೈಸೂರಿನಿಂದ ಬಾದಾಮಿ, ಚಿಕ್ಕಬಳ್ಳಾಪುರದಿಂದ ಈರುಳ್ಳಿ, ಬೆಂಗಳೂರಿನಿಂದ ಗುಲಾಬಿ, ಕೊಡಗು-ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಬೆಳೆಯುತ್ತಿದ್ದು, ಈ ಪದಾರ್ಥಗಳಿಗೆ ಕ್ಲಸ್ಟರ್‌ ನಿರ್ಮಾಣ ಮಾಡಲು ಯೋಜಿಸಲಾಗಿದೆ. ತೆಲಂಗಾಣದಲ್ಲಿ ಹಳದಿ(ಅರಿಶಿಣ) ಉತ್ಪಾದನೆ ಹೆಚ್ಚಾಗಿದೆ. ಸರಕಾರ ಆ ಬಗ್ಗೆ ವಿಶೇಷ ಸಂಶೋಧನೆ ಮಾಡಲು ಯೋಚನೆ ಮಾಡಿದೆ. ಇಂಟಿಗ್ರೇಟೆಡ್‌ ಕಾಫಿಯ ಉತ್ಪಾದನೆ ಮೂಲಕ ಕಾಫಿಯ ಮೌಲ್ಯವರ್ಧನೆಗೆ ಅನೇಕ ಸಹಕಾರ ನೀಡಲಾಗಿದೆ. ತೈಲ ಬೀಜಗಳು ಸೇರಿದಂತೆ ದೊಡ್ಡ ಬೀಜ ಬ್ಯಾಂಕ್‌ ಮಾಡಲಾಗುತ್ತದೆ. ಮೂರಕ್ಕೂ ಅಧಿಕ ಕೇಂದ್ರಗಳು ಸಣ್ಣ ಗ್ರಾಮಗಳಲ್ಲಿ ತೆರೆಯಲಿದ್ದು, ಹೊಸ ಹಬ್‌ ನಿರ್ಮಾಣವಾಗಲಿದೆ ಎಂದರು. ನೆರೆ ನೆರವಿಗೆ ಸಿಎಂ ಮನವಿ; ಪ್ರತಿಕ್ರಿಯಿಸದ ಮೋದಿರಾಜ್ಯದಲ್ಲಿಸಂಭವಿಸಿರುವ ಪ್ರಕೃತಿ ವಿಕೋಪದಿಂದಾಗಿ 30 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದ್ದು, ಕೇಂದ್ರದಿಂದ 50 ಸಾವಿರ ಕೋಟಿ ರೂ. ನೆರೆ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವೇದಿಕೆಯಲ್ಲೇ ಮನವಿ ಮಾಡಿದರು. ಆದರೆ, ಪ್ರಧಾನಿ ತಮ್ಮ ಭಾಷಣದಲ್ಲಿಈ ವಿಚಾರವನ್ನು ಎಲ್ಲೂಪ್ರಸ್ತಾಪಿಸಲಿಲ್ಲ. 6 ಕೋಟಿ ಕುಟುಂಬಗಳಿಗೆ 12000 ಕೋಟಿ ಪ್ರಧಾನಿ ಮೋದಿ ಅವರು ನೇರ ನಗದು ವರ್ಗಾವಣೆಗೆ ಚಾಲನೆ ನೀಡುತ್ತಿದ್ದಂತೆಯೇ ದೇಶದ ಆರು ಕೋಟಿ ರೈತ ಕುಟುಂಬಗಳಿಗೆ 12,000 ಕೋಟಿ ರೂ. ವರ್ಗಾವಣೆಯಾಯಿತು. 2018ರ ಡಿಸೆಂಬರ್‌ 1ರಂದು ಕೃಷಿ ಸಮ್ಮಾನ್‌ ಯೋಜನೆಯ ಮೊದಲ ಕಂತು ಪಾವತಿಸಲಾಗಿತ್ತು. ವರ್ಷಕ್ಕೆ ಮೂರು ಕಂತುಗಳಲ್ಲಿಒಟ್ಟು 6,000 ರೂ. ನೀಡಲಾಗುತ್ತದೆ. ಹಿಂದೆ ದೆಹಲಿಯಿಂದ 1 ರೂ. ಬಿಡುಗಡೆಯಾದರೆ ಫಲಾನುಭವಿಗೆ 15 ಪೈಸೆ ತಲುಪುತ್ತಿತ್ತು. ಉಳಿದದ್ದು ಮಧ್ಯವರ್ತಿಗಳ ಜೇಬಿಗೆ ಸೇರುತ್ತಿತ್ತು. ಆದರೆ, ಇಂದು ದೆಹಲಿಯಿಂದ ಎಷ್ಟು ಹಣ ಬಿಡುಗಡೆಯಾಗುತ್ತದೆಯೋ ಅಷ್ಟು ಹಣವೂ ರೈತರ ಖಾತೆಗೆ ನೇರವಾಗಿ ಸಂದಾಯವಾಗುತ್ತಿದೆ. - ನರೇಂದ್ರ ಮೋದಿ ಚಿತ್ರದಲ್ಲಿ: ತುಮಕೂರಿನಲ್ಲಿ ನಡೆದ ರೈತರ ಸಮಾವೇಶದಲ್ಲಿಪ್ರಧಾನಿ ನರೇಂದ್ರ ಮೋದಿ ಅವರು ಮಧುಗಿರಿಯ ಪ್ರಗತಿಪರ ರೈತರಾದ ಜಿ. ರಂಗಪ್ಪ ಅವರನ್ನು ಗೌರವಿಸಿದರು. ಸಿಎಂ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌ ಜತೆಗಿದ್ದರು.


from India & World News in Kannada | VK Polls https://ift.tt/37A7G31

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...