ಭಾರತ ವಿರುದ್ಧದ ಟಿ20 ಸರಣಿ ಸೋಲಿನ ಬಳಿಕ ನಾಯಕತ್ವ ಬಿಡಲು ಮುಂದಾದ ಮಾಲಿಂಗ

ಕೊಲಂಬೊ: ಭಾರತ ಪ್ರವಾಸದಲ್ಲಿ ನಡೆದ ಸರಣಿಯಲ್ಲಿ ತಂಡದ ಹೀನಾಯ ಸೋಲಿನ ಹೊಣೆ ಹೊತ್ತುಕೊಂಡಿರುವ ಅನುಭವಿ ವೇಗಿ ಲಂಕಾ ಪಡೆಯ ನಾಯತ್ವದಿಂದ ಕೆಳಗಿಳಿಯುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಹಣಾಹಣಿಯ ಮಳೆ ಕಾರಣ ರದ್ದಾದರೆ, ನಂತರದ ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸಿ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. ಆದರೆ, ಲಂಕಾ ಪಡೆ ಎಲ್ಲಿಯೂ ಭಾರತ ತಂಡಕ್ಕೆ ದಿಟ್ಟ ಸವಾಲೊಡ್ಡುವ ಸೂಚನೆಯನ್ನೂ ನೀಡಲಿಲ್ಲ. "ನಮ್ಮ ತಂಡದಲ್ಲಿ ದಿಟ್ಟ ಪ್ರದರ್ಶನ ನೀಡುವ ಸಾಮರ್ಥ್ಯ ಇರಲಿಲ್ಲ," ಎಂದು ಶ್ರೀಲಂಕಾ ತಂಡದ ನಾಯಕ ಮಾಲಿಂಗ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಂಡದ ವೈಫಲ್ಯವನ್ನು ಸಂಪೂರ್ಣವಾಗಿ ತಾವೇ ಹೊತ್ತಿಕೊಳ್ಳುವುದಾಗಿಯೂ ಹೇಳಿದ್ದಾರೆ. "ತಂಡದ ನಾಯಕತ್ವದಿಂದ ಕೆಳಗಿಳಿಯಲು ನಾನು ರೆಡಿ," ಎಂದು ಹೇಳಿದರು. ಲಸಿತ್‌ ಮಾಲಿಂಗ, ತಮ್ಮ ನಾಯಕತ್ವದಲ್ಲಿ 2014ರಲ್ಲಿ ಶ್ರೀಲಂಕಾ ತಂಡಕ್ಕೆ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಟ್ಟು 2016ರವರೆಗೆ ನಾಯಕನಾಗಿ ಮುಂದುವರಿದಿದ್ದರು. ಬಳಿಕ 2018ರ ಡಿಸೆಂಬರ್‌ನಲ್ಲಿ ಮರಳಿ ನಾಯಕನ ಜವಾಬ್ದಾರಿ ಪಡೆದರಾದರೂ, ಗಾಯದ ಸಮಸ್ಯೆ ಕಾರಣ ತಂಡದಿಂದ ಹೊರಬಿದ್ದಿದ್ದರು. ಗುವಾಹಟಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದರೂ, ಬಳಿಕ ಇಂದೋರ್‌ನಲ್ಲಿ ನಡೆದ 2ನೇ ಪಂದ್ಯದಲ್ಲಿ ಟೀಮ್‌ ಇಂಡಿಯಾ 7 ವಿಕೆಟ್‌ಗಳ ಜಯ ದಾಖಲಿಸಿತು. ನಂತರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 3ನೇ ಟಿ20-ಐನಲ್ಲಿ ಭಾರತ 78 ರನ್‌ಗಳ ಭರ್ಜರಿ ಜಯ ದಾಖಲಿಸಿ ಸರಣಿ ಗೆದ್ದುಕೊಂಡಿತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/30oti0h

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...