2021ರ ಜನಗಣತಿಗೆ ಯಾವೆಲ್ಲ ಮಾಹಿತಿ ನೀಡಬೇಕು? ಇಲ್ಲಿದೆ ಮಾಹಿತಿ

ಹೊಸದಿಲ್ಲಿ: 2021ರ ಜನಗಣತಿಗೆ ಸಾರ್ವಜನಿಕರ ಮನೆಗೆ ಬರುವ ಸೆನ್ಸಸ್‌ ಅಧಿಕಾರಿಗೆ ನೀಡಬೇಕಾಗಿರುವ ಮಾಹಿತಿಗಳ ಕುರಿತಾದ ಅಧಿಸೂಚನೆಯನ್ನು ಆಫ್‌ ಇಂಡಿಯಾ ವಿವೇಕ್‌ ಜೋಶಿ ಅವರು ಹೊರಡಿಸಿದ್ದಾರೆ. ಅದರಂತೆ, ಕಟ್ಟಡ ಸಂಖ್ಯೆ, ಸೆನ್ಸಸ್‌ ಹೌಸ್‌ ಸಂಖ್ಯೆ, ನಿವಾಸಿಗಳ ಸಂಖ್ಯೆ, ಕುಡಿಯುವ ನೀರಿನ ಮೂಲ, ಬೆಳಕಿನ ಮೂಲ, ಶೌಚಾಲಾಯ ವ್ಯವಸ್ಥೆ ಹಾಗೂ ಮಾದರಿ, ಟಿವಿ, ಲ್ಯಾಪ್‌ಟಾಪ್‌, ಇಂಟರ್‌ನೆಟ್‌, ಮೋಟಾರ್‌ ಸೈಕಲ್‌, ಕಾರು, ಮೊಬೈಲ್‌ ಸಂಖ್ಯೆ ಸೇರಿದಂತೆ ಒಟ್ಟು 31 ವಿಚಾರಗಳ ಬಗ್ಗೆ ಪ್ರತಿ ಮನೆಯಿಂದ ಮಾಹಿತಿ ಸಂಗ್ರಹಿಸಲಾಗುವುದು. ಈ ಪಟ್ಟಿಯನ್ನು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. ಸಿಎಎ-ಎನ್‌ಆರ್‌ಸಿ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ಹೆಚ್ಚುತ್ತಿರುವ ಬೆನ್ನಿಗೆ ಈ ಅಧಿಸೂಚನೆ ಹೊರಬಿದ್ದಿದೆ. 2020ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ ನಡುವೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್‌) ನಡೆಸಲಾಗುವುದು ಎಂದು ಕಳೆದ ತಿಂಗಳು ಕೇಂದ್ರ ಸರಕಾರ ಸ್ಪಷ್ಟಪಡಿಸಿತ್ತು.


from India & World News in Kannada | VK Polls https://ift.tt/2tGl8E1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...