ಸೋನ್‌ಭದ್ರಾ ಹತ್ಯಾಕಾಂಡ: ಜಿಲ್ಲಾಧಿಕಾರಿ, ಎಸ್‌ಪಿ ವಜಾಗೊಳಿಸಿದ ಯೋಗಿ ಸರಕಾರ

ಲಖನೌ: ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಗೊಂಡ ಬುಡಕಟ್ಟು ಜನರ ಹತ್ಯೆ ಕುರಿತ ತನಿಖೆ ಹಿನ್ನೆಲೆಯಲ್ಲಿ ಸೋನ್‌ಭದ್ರ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನು (ಎಸ್‌ಪಿ) ಸರಕಾರ ವಜಾಗೊಳಿಸಿದೆ. ಮುಖ್ಯಮಂತ್ರಿ ಭಾನುವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತ, ಸೋನಾಭದ್ರ ಜಿಲ್ಲೆಯ ಜಿಲ್ಲಾಧಿಕಾರಿ ಅಂಕಿತ್ ಕುಮಾರ್ ಅಗರ್ವಾಲ್ ಮತ್ತು ಎಸ್‌ಪಿ ಸಲ್ಮಾನ್‌ತಾಜ್ ಪಾಟೀಲ್ ವಿರುದ್ಧ ಇಲಾಖಾ ತನಿಖೆ ಆರಂಭವಾಗಿದೆ ಎಂದು ತಿಳಿಸಿದರು. ಸೋನ್‌ಭದ್ರ ಹತ್ಯಾಕಾಂಡಕ್ಕೆ ಸಂಬಂಧಿಸಿ ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವರದಿ ಸಲ್ಲಿಸಿದ ಮರುದಿನವೇ ರಾಜ್ಯ ಸರಕಾರ ಕ್ರಮ ಕೈಗೊಂಡಿದೆ ಎಂದು ಯೋಗಿ ತಿಳಿಸಿದರು. ಭೂ ವಿವಾದಕ್ಕೆ ಸಂಬಂಧಿಸಿದಂತೆ ಹುಟ್ಟಿಕೊಂಡ ಘರ್ಷಣೆ ವೇಳೆ ಗ್ರಾಮದ ಮುಖಂಡನೊಬ್ಬ ಗುಂಡು ಹಾರಿಸಿದಾಗ 10 ಮಂದಿ ಮೃತಪಟ್ಟು 28 ಮಂದಿ ಗಾಯಗೊಂಡಿದ್ದರು.


from India & World News in Kannada | VK Polls https://ift.tt/2YATORm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...