ಕಚ್ಚಾ ಪ್ರತಿಭೆ ಸೈನಿಗೆ ಉಜ್ವಲ ಭವಿಷ್ಯವಿದೆ: ಕೊಹ್ಲಿ

ಲೌಡರ್‌ಹಿಲ್: ವಿರುದ್ಧ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿದೆ. ಭಾರತ ಗೆಲುವಿನ ರೂವಾರಿ ಎನಿಸಿಕೊಂಡಿರುವ ಡೆಬ್ಯು ವೆಗಿ ಮೂರು ಪ್ರಮುಖ ವಿಕೆಟುಗಳನ್ನು ಕಬಳಿಸಿದ್ದರಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದರು. ಇದನ್ನೇ ಉಲ್ಲೇಖಿಸಿರುವ ನಾಯಕ ವಿರಾಟ್ ಕೊಹ್ಲಿ, ಕಚ್ಚಾ ಪ್ರತಿಭೆ ಸೈನಿಗೆ ಉಜ್ವಲ ಭವಿಷ್ಯವಿದೆ ಎಂದಿದ್ದಾರೆ. ದೀರ್ಘ ಪ್ರಯಾಣದ ಮೂಲಕ ಬಂದಿದ್ದಾರೆ. ಐಪಿಎಲ್‌ನಲ್ಲೂ ಅತ್ಯುತ್ತಮ ಯಶಸ್ಸನ್ನು ಕಂಡಿದ್ದರು. ಅವರೊಬ್ಬ ಕಚ್ಚಾ ಪ್ರತಿಭೆಯಾಗಿದ್ದು, ಕಚ್ಚಾ ವೇಗವನ್ನು ಪಡೆದಿದ್ದಾರೆ. ಪ್ರತಿ ಗಂಟೆಗೆ 150ರ ವೇಗದ ಅಸುಪಾಸಿನಲ್ಲಿ ದಾಳಿ ಮಾಡಬಲ್ಲರು. ಅಂತಹ ಬೌಲರ್‌ಗಳು ಕಡಿಮೆ. ಅಷ್ಟೇ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಉತ್ತಮ ಪ್ರದರ್ಶನ ನೀಡುವ ದಾಹವನ್ನು ಹೊಂದಿರುವ ಸೈನಿ ತಮ್ಮ ಹೆಸರನ್ನು ನಮೂದಿಸಬಲ್ಲರು. ಇಲ್ಲಿಂದ ಮುಂದಕ್ಕೆ ಆ ದಿಶೆಯತ್ತ ಸಾಗುವ ವಿಶ್ವಾಸವಿದೆ ಎಂದರು. ಅದೇ ಹೊತ್ತಿಗೆ ಸಣ್ಣ ಮೊತ್ತವನ್ನು ಇನ್ನು ಉತ್ತಮವಾಗಿ ಚೇಸಿಂಗ್ ಮಾಡಬಹುದಾಗಿತ್ತು ಎಂದರು. ಆದರೂ ಕಠಿಣ ಪಿಚ್ ಆಗಿದ್ದರಿಂದ ಕಷ್ಟವನ್ನು ಎದುರಿಸಬೇಕಾಯಿತು ಎಂದು ಸೇರಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2YJnM5I

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...