ಕಾಶ್ಮೀರ ಪ್ರಕ್ಷುಬ್ಧ; ಜಾಗ ಖಾಲಿ ಮಾಡುವಂತೆ ಪಠಾಣ್ ಸೇರಿದಂತೆ 100 ಕ್ರಿಕೆಟಿಗರಿಗೆ ಸೂಚನೆ!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವಂತೆಯೇ ಭಾರತದ ಕ್ರಿಕೆಟಿಗ ಸೇರಿದಂತೆ 100ರಷ್ಟು ಕ್ರಿಕೆಟಿಗರಲ್ಲಿ ಆದಷ್ಟು ಬೇಗನೇ ಕಣಿವೆ ರಾಜ್ಯ ಬಿಟ್ಟು ತೆರುಳುವಂತೆ ಸೂಚಿಸಲಾಗಿದೆ. ಕ್ರಿಕೆಟ್ ತಂಡದ ಮೆಂಟರ್ ಹಾಗೂ ಕೋಚ್ ಜವಾಬ್ದಾರಿಯನ್ನು ಪಠಾಣ್ ನಿರ್ವಹಿಸುತ್ತಿದ್ದಾರೆ. ಭಯೋತ್ಪಾದನಾ ದಾಳಿಯ ಆತಂಕದ ಬೆನ್ನಲ್ಲೇ ಕಾಶ್ಮೀರ ಬಿಟ್ಟು ತೆರಳುವಂತೆ ಸ್ಥಳೀಯಾಡಳಿತವು ಸೂಚನೆ ರವಾನಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಠಾಣ್, ನಮ್ಮ ತರಬೇತಿ ಕ್ಯಾಂಪ್ ರದ್ದುಗೊಳಿಸಲಾಗಿದ್ದು, ಕ್ರಿಕೆಟಿಗರಲ್ಲಿ ತವರಿಗೆ ಹಿಂತಿರುಗುವಂತೆ ಸೂಚನೆ ನೀಡಲಾಗಿದೆ. ಕಳೆದ ದಿನ 100ರಷ್ಟು ಕ್ರಿಕೆಟಿಗರು ಹಿಂತಿರುಗಿದ್ದಾರೆ ಎಂದರು. ಜೂನ್ 14ರಿಂದ ಜುಲೈ 14ರ ವರೆಗೆ ಕ್ಯಾಂಪ್ ನಡೆಸಲಾಗಿತ್ತು. ಬಳಿಕ 10 ದಿನಗಳ ವಿಶ್ರಾಂತಿಯ ಬಳಿಕ ಜುಲೈ 25ರಂದು ಕ್ಯಾಂಪ್ ಪುನರಾರಂಭಗೊಂಡಿತ್ತು. ಜಿಲ್ಲಾ ಕ್ರಿಕೆಟಿಗರ ಆಯ್ಕೆಯಾಗಿ ಜುಲೈ 31ರಂದ ಆಗಸ್ಟ್ 17ರ ವರೆಗೆ ಪಂದ್ಯಗಳನ್ನು ನಿಗದಿಗೊಳಿಸಲಾಗಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2KkW5uU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...