Article 370 ರದ್ದು: ಏನಿದರ ಅರ್ಥ? ಜಮ್ಮು ಮತ್ತು ಕಾಶ್ಮೀರಕ್ಕೆ ಲಾಭವೇ, ನಷ್ಟವೇ?

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರವು 05 ಆಗಸ್ಟ್ 2019ರ ಸೋಮವಾರ ಇತಿಹಾಸ ರಚಿಸಿದೆ. ಪಾಕಿಸ್ತಾನಿ ಭಯೋತ್ಪಾದಕರ ಆಡುಂಬೊಲವಾಗಿದ್ದ ಜಮ್ಮು ಮತ್ತು ಕಾಶ್ಮೀರ ಎಂಬ ಹಿಂಸಾಪೀಡಿತ, ಉಗ್ರವಾದ ಪೀಡಿತ ರಾಜ್ಯವು ಕಳೆದ ಏಳು ದಶಕಗಳಿಂದ ಅನುಭವಿಸುತ್ತಿದ್ದ 'ವಿಶೇಷ ಸ್ಥಾನಮಾನ' ಕಳಚಿಕೊಂಡು, ಇನ್ನು ಕೇಂದ್ರಾಡಳಿತ ಪ್ರದೇಶವಾಗಲಿದೆ. ಈ ಪ್ರಸ್ತಾವನೆಗೆ ರಾಷ್ಟ್ರಪತಿಯ ಅಂಕಿತವೂ ಬಿದ್ದಿದ್ದು, ಜಮ್ಮು ಮತ್ತು ಕಾಶ್ಮೀರವು ಇಂದಿನಿಂದಲೇ ಕೇಂದ್ರಾಡಳಿತ ಪ್ರದೇಶವಾಗಲಿದೆ. ಕಾ
  • ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗುತ್ತಿದೆ. ಅಂದರೆ ಹಾಗೂ 35(ಎ) ಕೂಡ ರದ್ದು ಆಗುತ್ತದೆ.
  • ಕೇಂದ್ರದ ಎಲ್ಲ ಕಾನೂನುಗಳು, ಉದಾಹರಣೆಗೆ ಕರ್ನಾಟಕ ರಾಜ್ಯದಂತೆ, ಗೋವಾದಂತೆ, ದಿಲ್ಲಿಯಂತೆ, ಇನ್ನು ನೇರವಾಗಿ ಜಮ್ಮು ಮತ್ತು ಕಾಶ್ಮೀರಕ್ಕೂ ಲಾಗೂ ಆಗಲಿದೆ.
  • ಕಾಶ್ಮೀರದ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಇನ್ನು ಸಂಪೂರ್ಣವಾಗಿ ಕೇಂದ್ರದ ಹಿಡಿತದಲ್ಲಿರುತ್ತದೆ. ಇಲ್ಲಿ ರಾಜ್ಯಪಾಲರೇ ಪರಮಾಧಿಕಾರ ಹೊಂದಿರುತ್ತಾರೆ.
  • ಇದುವರೆಗೆ ಕೆಲವರಿಗೆ ಮಾತ್ರ ದೊರೆಯುತ್ತಿದ್ದ ತಾರತಮ್ಯದ ಸೌಲಭ್ಯಗಳು ಇರುವುದಿಲ್ಲ.
  • ಒಟ್ಟಾರೆ ಹೇಳುವುದಾದರೆ, ಜಮ್ಮು ಮತ್ತು ಕಾಶ್ಮೀರವು ಭಾರತ ಸರಕಾರದ ಸಂಪೂರ್ಣ ಹಿಡಿತಕ್ಕೆ ಬರುತ್ತದೆ.
  • ನಿರ್ಭೀತಿಯಿಂದ ಅಲ್ಲಿ ಭಾರತೀಯ ತ್ರಿವರ್ಣ ಧ್ವಜ ಹಾರಾಡಬಹುದು
  • ಜಮ್ಮು ಮತ್ತು ಕಾಶ್ಮೀರಕ್ಕೆ ದಿಲ್ಲಿಯಂತೆಯೇ ಪ್ರತ್ಯೇಕ ಶಾಸಕಾಂಗ, ವಿಧಾನಸಭೆ, ಸರಕಾರ ಇರುತ್ತದೆ.
  • ಲಡ್ಢಾಖ್ ಪ್ರದೇಶವೂ ಮತ್ತೊಂದು ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಇಲ್ಲಿ ಪ್ರತ್ಯೇಕ ಶಾಸಕಾಂಗ ಇರುವುದಿಲ್ಲ (ಚಂಡೀಗಢದಂತೆ).
  • ಇನ್ನು ದೇಶದ ಯಾವುದೇ ಪ್ರಜೆ ಅಲ್ಲಿ ಜಮೀನು ಖರೀದಿಸಬಹುದು.
  • ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಇರುವುದಿಲ್ಲ, ಭಾರತದ್ದೇ ಏಕ ಧ್ವಜ.
  • ಕಾಶ್ಮೀರದವರಿಗೆ ದ್ವಿಪೌರತ್ವ ಇನ್ನು ಇರುವುದಿಲ್ಲ. ಅವರು ಭಾರತದ ಪ್ರಜೆಯೇ.
  • ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಬೇರೆ ರಾಜ್ಯದವರು ಹೂಡಿಕೆ ಮಾಡಿ, ಕೈಗಾರಿಕೆ, ಉದ್ಯಮಗಳ ಅಭಿವೃದ್ಧಿಗೆ ಮುಂದಾಗಬಹುದು.
  • ಬೇರೆ ರಾಜ್ಯದಿಂದ ಬಂದು ನೆಲೆಸಿದವರಿಗೂ ಅಲ್ಲಿ ಮತದಾನದ ಹಕ್ಕು ಇರುತ್ತದೆ.
  • ಇತರ ರಾಜ್ಯಗಳಲ್ಲಿರುವಂತೆಯೇ ಅಲ್ಲಿ ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ನಿಯಮಗಳು ಅನ್ವಯವಾಗುತ್ತವೆ.
  • ಕಾಶ್ಮೀರದ ಹುಡುಗಿಯರು ದೇಶದ ಬೇರೆ ರಾಜ್ಯಗಳ/ಜಮ್ಮು ಮತ್ತು ಕಾಶ್ಮೀರದ ಕಾಯಂ ಅಲ್ಲದ ನಿವಾಸಿ ಹುಡುಗರನ್ನು ವರಿಸಿದರೆ, ಅವರ ಮಕ್ಕಳು ಈ ರಾಜ್ಯದಲ್ಲಿ ಉತ್ತರಾಧಿಕಾರದ ಹಕ್ಕುಗಳು ಇರಲಿಲ್ಲ. ಇನ್ನು ಈ ನಿಯಮವೂ ಹೋಗುತ್ತದೆ
ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಯುದ್ಧದ ಪರಿಸ್ಥಿತಿ ಇದೆ ಎಂದು ಪ್ರತಿಪಕ್ಷಗಳು ಜನರ ದಾರಿತಪ್ಪಿಸಿದ್ದೇಕೆ ಎಂಬುದಕ್ಕೂ ಈಗ ಉತ್ತರ ಸಿಕ್ಕಿದೆ. ಸಂವಿಧಾನದ 370ನೇ ವಿಧಿ ರದ್ದತಿಯಿಂದ ವಿರೋಧಿಗಳು, ಉಗ್ರಗಾಮಿಗಳಿಂದ ಉಂಟಾಗಬಹುದಾದ ಯಾವುದೇ ಸಂಭವನೀಯ ದಾಳಿ, ಹಿಂಸೆ ತಡೆಗಟ್ಟಲು ಸಾವಿರ ಸಾವಿರ ಸಂಖ್ಯೆಯಲ್ಲಿ ಸೇನಾಪಡೆಗಳನ್ನು ಮುನ್ನೆಚ್ಚರಿಕೆಗಾಗಿ ನಿಯಮಿಸಲಾಗಿತ್ತು.


from India & World News in Kannada | VK Polls https://ift.tt/2YE02Qp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...