ಟೀಮ್ ಇಂಡಿಯಾ ಕ್ಯಾಪ್ ಧರಿಸಿದಾಗ ನಂಬಲಾಗಲಿಲ್ಲ: ಸೈನಿ

ಲೌಡರ್‌ಹಿಲ್: ಅಂತಾರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ಗೆ ಡ್ರೀಮ್ ಡೆಬ್ಯು ಮಾಡಿರುವ ಭಾರತದ ಯುವ ವೇಗದ ಬೌಲರ್ , ವಿರುದ್ಧ ನಡೆದ ಮೊದಲ ಪಂದ್ಯದಲ್ಲೇ ಮೂರು ವಿಕೆಟುಗಳನ್ನು ಕಬಳಿಸುವ ಮೂಲಕ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿರುವ 26ರ ಹರೆಯದ ಸೈನಿ, ಮೊದಲ ಬಾರಿಗೆ ಕ್ಯಾಪ್ ಧರಿಸಿದಾಗ ನಂಬಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಶನಿವಾರ ಬೆಳಗ್ಗೆ ಕ್ಯಾಪ್ ಲಭಿಸಿದಾಗ ಇದೇ ದಿನಕ್ಕಾಗಿ ಇಷ್ಟು ಕಾಲ ಕಾಯುತ್ತಿದ್ದೆ ಎಂಬುದನ್ನು ನಂಬಲಾಗಲಿಲ್ಲ. ಭಾರತ ತಂಡಕ್ಕಾಗಿ ಡೆಬ್ಯು ಮಾಡಲು ತುಂಬಾನೇ ಸಂತೋಷವಾಗುತ್ತಿದೆ ಎಂದರು. ಪ್ರಥಮ ಓವರ್‌ನಲ್ಲೇ ಎರಡು ವಿಕೆಟುಗಳನ್ನು ಕಬಳಿಸಿದ ಸೈನಿ ಒಟ್ಟು ಮೂರು ವಿಕೆಟ್ ಪಡೆದಿದ್ದರು. ಇದರಲ್ಲಿ ಇನ್ನಂಗ್ಸ್‌ನ ಕೊನೆಯ ವಿಕೆಟ್ ಮೇಡನ್ ಓವರ್ ಸಹ ಸೇರಿತ್ತು. ಸಹಜವಾಗಿಯೇ ಡೆಬ್ಯು ಮಾಡುವ ಒತ್ತಡವಿದ್ದುದರಿಂದ ಆರಂಭದಲ್ಲಿ ಆತ್ಮವಿಶ್ವಾಸ ಕುಂದಿತ್ತು. ಮೊದಲ ವಿಕೆಟ್ ಪಡೆದಾಗ ನಿರಾಳತೆಯನ್ನು ಪಡೆದೆ. ಬಳಿಕ ಎರಡನೇ ವಿಕೆಟ್ ಪಡೆದಾಗ ಎಂದಿನಂತೆ ಸಹಜ ಪಂದ್ಯವನ್ನಾಡುವ ಅನುಭವವಾಯಿತು ಎಂದರು. ಸತತ ಎರಡು ವಿಕೆಟುಗಳನ್ನು ಪಡೆದ ಹರಿಯಾಣ ವೇಗಿಗೆ ಹ್ಯಾಟ್ರಿಕ್ ಮಿಸ್ ಆಗಿತ್ತು. ತಾವು ಕೂಡಾ ಇತರೆಲ್ಲರಂತೆ ಹ್ಯಾಟ್ರಿಕ್ ಪಡೆಯಲು ಪ್ರಯತ್ನಿಸಿದ್ದೆ ಎಂದಿದ್ದಾರೆ. ಎಡಗೈಯಲ್ಲಿ ತೋಳದ ಟ್ಯಾಟೂ ರಹಸ್ಯ ಬಗ್ಗೆ ಕೇಳಿದಾಗ, ಚಿಕ್ಕವನಾಗಿದ್ದಾಗ ನಾನು ಹಾಗೂ ನನ್ನ ಸೋದರ ಹೆಚ್ಚೆಚ್ಚು ತೋಳದ ಚಿತ್ರಗಳನ್ನು ನೋಡುತ್ತಿದ್ದೆವು. ಹಾಗಾಗಿ ತೋಳವೆಂದರೆ ನನಗೆ ತುಂಬಾನೇ ಇಷ್ಟ ಎಂದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2KtZAiy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...