ಅಫ್ಘನ್ ಜನರೊಂದಿಗಿನ ಐತಿಹಾಸಿಕ ಸಂಬಂಧ ಮುಂದುವರಿಯಲಿದೆ: ವಿದೇಶಾಂಗ ಸಚಿವ ಎಸ್ ಜೈಶಂಕರ್

ಹೊಸದಿಲ್ಲಿ: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಬಹಳ ಜಾಗರೂಕತೆಯಿಂದ ಗಮನಿಸುತ್ತಿದೆ. ಸಂಘರ್ಷ ಪೀಡಿತ ಅಫ್ಘಾನಿಸ್ತಾನದಲ್ಲಿ ಇನ್ನೂ ಸಿಲುಕಿರುವ ಭಾರತದ ಪ್ರಜೆಗಳ ಭದ್ರತೆ ಹಾಗೂ ಸುರಕ್ಷಿತ ವಾಪಸಾತಿಗೆ ಸರ್ಕಾರ ಗಮನ ಹರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಹೇಳಿದ್ದಾರೆ. ನಾಯಕತ್ವದ ಕುರಿತು ಭಾರತದ ದೃಷ್ಟಿಕೋನ ಏನು ಹಾಗೂ ಅದರೊಂದಿಗೆ ಭಾರತ ಹೇಗೆ ವ್ಯವಹರಿಸಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದಿನ್ನೂ ಆರಂಭದ ದಿನಗಳಷ್ಟೇ ಎಂದರು. ತಾಲಿಬಾನ್ ಜತೆ ಭಾರತ ನೇರ ಸಂಪರ್ಕ ಇರಿಸಿಕೊಳ್ಳಲಿದೆಯೇ ಎಂಬುದಕ್ಕೆ ಉತ್ತರಿಸಲು ನಿರಾಕರಿಸಿದರು. 'ಈ ಸಮಯದಲ್ಲಿ ನಾವು ಕಾಬೂಲ್‌ನಲ್ಲಿ ಉದ್ಭವಿಸುತ್ತಿರುವ ಸನ್ನಿವೇಶವನ್ನು ವೀಕ್ಷಿಸುತ್ತಿದ್ದೇವೆ. ತಾಲಿಬಾನ್ ಮತ್ತು ಅದರ ಪ್ರತಿನಿಧಿಗಳು ಕಾಬೂಲ್‌ಗೆ ಆಗಮಿಸಿದ ಬಳಿಕ ನಾವು ಮುಂದಿನ ತೀರ್ಮಾನ ತೆಗೆದುಕೊಳ್ಳಬಹುದು' ಎಂದು ಇತ್ತೀಚಿನ ದಿನಗಳಲ್ಲಿ ತಾಲಿಬಾನ್ ಜತೆ ಭಾರತ ಮಾತುಕತೆ ನಡೆಸಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಅಫ್ಘಾನಿಸ್ತಾನದಲ್ಲಿನ ಹೂಡಿಕೆ ಹಾಗೂ ಯೋಜನೆಗಳನ್ನು ಭಾರತ ಮುಂದುವರಿಸಲಿದೆಯೇ ಎಂದು ಕೇಳಿದಾಗ, ಅಫ್ಘನ್ ಜನರೊಂದಿಗಿನ ಐತಿಹಾಸಿಕ ಸಂಬಂಧ ಮುಂದುವರಿಯಲಿದೆ ಎಂದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ನನ್ನ ಚಟುವಟಿಕೆ ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿಯ ಮೇಲೆಯೇ ಹೆಚ್ಚು ಕೇಂದ್ರೀಕರಿಸಿದೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹಾಗೂ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಸೇರಿದಂತೆ ಇತರೆ ಸಹೋದ್ಯೋಗಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ ಎಂದು ತಿಳಿಸಿದರು. 'ಈ ಸಂದರ್ಭದಲ್ಲಿ ನಾವು ಮತ್ತು ಎಲ್ಲರೂ ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಮೇಲೆ ಎಚ್ಚರಿಕೆಯಿಂದ ಕಣ್ಣಿಟ್ಟಿದ್ದೇವೆ. ಅಫ್ಘಾನಿಸ್ತಾನದಲ್ಲಿ ಭದ್ರತೆ ಖಾತರಿಪಡಿಸಿಕೊಳ್ಳುವುದು ಹಾಗೂ ಅಲ್ಲಿರುವ ಭಾರತದ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರುವುದರತ್ತ ಗಮನ ಹರಿಸಿದ್ದೇವೆ' ಎಂದು ಹೇಳಿದರು.


from India & World News in Kannada | VK Polls https://ift.tt/3CX4uPD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...