ಮಂಡ್ಯ : ಗಂಡನೇ ಹೆಂಡತಿಯನ್ನು ಮಾಡಿ ಶವವನ್ನು ಬೇರೆಯವರ ಜಮೀನಿನಲ್ಲಿ ಹೂತು ಹಾಕಿ ಪರಾರಿಯಾಗಿರುವ ಘಟನೆ ತಾಲೂಕು ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಗ್ರಾಮದ ಶಿವರಾಜು ಎಂಬುವವರು ಪತ್ನಿ ರಾಣಿ(30)ಯನ್ನು ಮನೆಯಲ್ಲಿ ಶುಕ್ರವಾರ ಸಂಜೆ ಕೊಲೆ ಮಾಡಿ ಶವವನ್ನು ಮನೆಯ ರೂಮಿನಲ್ಲಿ ಇಟ್ಟು ನಂತರ ಮಧ್ಯೆ ರಾತ್ರಿ ವೇಳೆ ಸತೀಶ್ ಎಂಬುವವರ ಜಮೀನಿಗೆ ಶವವನ್ನು ಎಳೆದುಕೊಂಡು ತಂದು ಹೂತು ಹಾಕಿದ್ದಾನೆ ಎನ್ನಲಾಗಿದೆ. ಶನಿವಾರ ಬೆಳಿಗ್ಗೆ ಶಿವರಾಜು ಧರಿಸಿದ್ದ ಬಟ್ಟೆಗಳು ರಕ್ತಸಿಕ್ತವಾಗಿತ್ತು ಎಂದು ಪಕ್ಕದ ನಿವಾಸಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಡಿ.ಪಿ.ಧನರಾಜ್, ಪಿಎಸ್ಐ ಡಿ.ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೂತು ಹಾಕಿರುವ ಶವವನ್ನು ಹೊರ ತೆಗೆಯಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.
from India & World News in Kannada | VK Polls https://ift.tt/3D3gGhL