ಚಿತ್ರದುರ್ಗದಲ್ಲಿ ಅಂದರ್ ಬಾಹರ್ ಅಬ್ಬರ..! ಆಂಧ್ರ ಗಡಿಯಲ್ಲಿ ಜೂಜಾಟಕ್ಕಿಲ್ಲ ಕಡಿವಾಣ..!

ವಿಕ ವಿಶೇಷ : ಜಿಲ್ಲೆಯ ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ ತಾಲೂಕಿನ ಭಾಗಗಳಲ್ಲಿ ಜೂಜಾಟ ನಡೆಸುವ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರು ದೂರುತ್ತಿದ್ದಾರೆ. ಜಿಲ್ಲೆಯ ನಾನಾ ಕಡೆ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿ, ಕೇಸು ದಾಖಲಿಸುತ್ತಿದ್ದರೂ ಗಡಿ ಭಾಗಗಳಲ್ಲಿ ಅಂದರ್‌ ಬಾಹರ್‌ ದಂಧೆಯ ಸಂಘಟಿಸುವ ಕೆಲ ಮಧ್ಯವರ್ತಿಗಳು ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ ಎನ್ನಲಾಗಿದೆ. ಜೂಜಾಟ ವಿಶೇಷವಾಗಿ ಚಳ್ಳಕೆರೆ, ಹಿರಿಯೂರು ತಾಲೂಕಿನ ಗಡಿ ಭಾಗದ ತೋಟಗಳು, ಮಾವು, ಹುಣಸೆ ತೋಪುಗಳು, ಹಳ್ಳಗಳು, ಕುರುಚಲು ಗುಡ್ಡಗಳಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಜನ ಗುಂಪು ಗುಂಪಾಗಿ ಸೇರಿ ಜೂಜಾಟ ನಡೆಸುವ ವಿಡಿಯೋಗಳು ಸಹಾ ವೈರಲ್‌ ಆಗಿರುವುದು ಚರ್ಚೆಗೆ ಗ್ರಾಸವಾಗಿದೆ. ಬಡ್ಡಿ ದಂಧೆಯೂ ಇದೆ: ಇಸ್ಪೀಟ್‌ ದಂಧೆ ಮೂರ್ನಾಲ್ಕು ಹಂತದಲ್ಲಿ ಲಾಭದಾಯಕವಾಗಿದ್ದು, ವ್ಯವಸ್ಥಿತವಾಗಿ ರಕ್ಷಿತ ವಾತಾವರಣದಲ್ಲಿ ಜೂಜಾಟ ಆಯೋಜಿಸುವವರ ತಂಡಗಳೇ ಇವೆ ಎನ್ನಲಾಗಿದೆ. ಇಸ್ಪೀಟ್‌ ಆಟಗಾರರಿಗೆ ಸಿಗರೇಟ್‌, ಮದ್ಯ, ಊಟ, ಉಪಾಹಾರ ಪೂರೈಸುವವರೂ ಇದ್ದಾರೆ. ಹಣ ಕಳೆದುಕೊಂಡವರು ಹಣ ಗೆಲ್ಲುವ ಭರಾಟೆಯಲ್ಲಿ ಬಡ್ಡಿಗಾಗಿ ಒತ್ತೆ ಇಡುವ ಬಂಗಾರ ಚೈನು, ವಾಹನ, ಮೊಬೈಲ್‌ಗಳನ್ನು ಇಟ್ಟುಕೊಂಡು ಮೀಟರ್‌ ಬಡ್ಡಿ ದಂಧೆ ನಡೆಸುವವರು ಸಹಾ ಇಂತಹ ಜೂಜುಕೋರರ ಬೆಂಬಲಕ್ಕೆ ನಿಂತಿದ್ದಾರೆನ್ನಲಾಗಿದೆ. ಜೂಜಾಟದಲ್ಲಿ ತಪ್ಪಿಸಿಕೊಂಡು ಓಡುವವರಿಗೆ ಆಶ್ರಯ ನೀಡಿ ರಕ್ಷಿಸುವ ಗುಂಪುಗಳು ಸಹಾ ಇವೆ ಎನ್ನಲಾಗಿದೆ. ಆಂಧ್ರದಿಂದ ಜೂಜಾಟ ಆಡಲು ಬಂದವರು ತಮ್ಮ ಕುಟುಂಬಗಳನ್ನು ಬೀದಿ ಪಾಲು ಮಾಡಿಕೊಂಡ ನಿದರ್ಶನಗಳೂ ಇವೆ ಎನ್ನಲಾಗಿದೆ. ತಮ್ಮ ಗಂಡಂದಿರು, ಕುಟುಂಬದ ಸದಸ್ಯರು ಒತ್ತೆ ಇಟ್ಟಿರುವ ಬಂಗಾರ, ವಾಹನಗಳನ್ನು ಅವರ ಮನೆಯವರೇ ಬಂದು ಬಿಡಿಸಿಕೊಂಡು ಹೋಗಿರುವ ಉದಾಹರಣೆಗಳೂ ಇವೆ. ಪೊಲೀಸರ ಕುಮ್ಮಕ್ಕು?: ಇಸ್ಪೀಟ್‌ ಜೂಜಾಟ ನಡೆಸುವವರ ಮೇಲೆ ಇಲಾಖೆ ಅಲ್ಲಲ್ಲಿ ಕೇಸು ದಾಖಲಿಸುತ್ತಿದ್ದರೂ, ಗಡಿಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸುವ ಜೂಜಾಟದ ಅಡ್ಡೆಗಳತ್ತ ಕಣ್ಣು ಹಾಯಿಸಿಯೂ ನೋಡುವುದಿಲ್ಲ ಎನ್ನುವ ದೂರುಗಳಿವೆ. ಸಣ್ಣಪುಟ್ಟ ಅಪರಾಧ ಘಟನೆಗಳು ನಡೆದ ಸಂದರ್ಭದಲ್ಲಿ ಆರೋಪಿಗಳನ್ನು ಬೆನ್ನು ಹತ್ತಿ ವಿಚಾರಣೆಯ ನೆಪದಲ್ಲಿ ಠಾಣೆಗಳಿಗೆ ಕರೆಸಿ, ವಿಚಾರಣೆ ನಡೆಸುವ ಪೊಲೀಸರು ಹೀಗೆ ಗುಂಪು ಗುಂಪಾಗಿ ಜೂಜಾಟ ನಡೆಸುವವರ ವಿಷಯದಲ್ಲಿ ಹೇಗೆ ಮೈಮರೆಯಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ.


from India & World News in Kannada | VK Polls https://ift.tt/2WjYhgn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...