ಭಾರತವನ್ನು ಕೇವಲ 78 ರನ್‌ಗೆ ಆಲೌಟ್‌ ಮಾಡಿದ್ದೇಗೆಂದು ತಿಳಿಸಿದ ಆಂಡರ್ಸನ್‌!

ಲೀಡ್ಸ್‌: ಭಾರತ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯವಾಡಲು ನಾವು ಹಸಿವಿನಿಂದ ಇಲ್ಲಿಗೆ ಬಂದಿದ್ದೇವೆ ಹಾಗೂ ಎಂಥಾ ಕಠಿಣ ಹೋರಾಟ ನೀಡಲೂ ನಾವು ಸಿದ್ದರಿದ್ದೇವೆ ಎಂದು ತಂಡದ ಹಿರಿಯ ವೇಗಿ ಕೊಹ್ಲಿ ಪಡೆಗೆ ಎಚ್ಚರಿಕೆ ನೀಡಿದ್ದಾರೆ. ಬುಧವಾರ ಆರಂಭವಾದ ಮೂರನೇ ಟೆಸ್ಟ್‌ ಪಂದ್ಯದ ಮೊದಲನೇ ದಿನ ಇಂಗ್ಲೆಂಡ್‌ ತಂಡ ಮೇಲುಗೈ ಸಾಧಿಸುವಲ್ಲಿ ಜೇಮ್ಸ್ ಆಂಡರ್ಸನ್‌ ಪ್ರಮುಖ ಪಾತ್ರವಹಿಸಿದ್ದರು. ಹೊಸ ಚೆಂಡಿನಲ್ಲಿ ಮಾರಕ ದಾಳಿ ನಡೆಸಿದ ಅವರು, ಕೆ.ಎಲ್‌ ರಾಹುಲ್, ಚೇತೇಶ್ವರ್‌ ಪೂಜಾರ ಹಾಗೂ ನಾಯಕ ವಿರಾಟ್‌ ಕೊಹ್ಲಿಗೆ ಬಹುಬೇಗ ಪೆವಿಲಿಯನ್‌ಗೆ ದಾರಿ ತೋರಿಸಿಕೊಟ್ಟರು. ಜೇಮ್ಸ್ ಆಂಡರ್ಸನ್‌ಗೆ ಸಹ ವೇಗಿಗಳಾದ ಒಲ್ಲೀ ರಾಬಿನ್ಸನ್, ಕ್ರೈಗ್‌ ಓವರ್ಟನ್‌ ಹಾಗೂ ಸ್ಯಾಮ್ ಕರ್ರನ್‌ ಅತ್ಯುತ್ತಮ ಸಾಥ್‌ ನೀಡಿದರು. ಇದರ ಫಲವಾಗಿ ಭಾರತ ತಂಡವನ್ನು ಕೇವಲ 78 ರನ್‌ಗೆ ಆಲೌಟ್‌ ಮಾಡಲು ಸಾಧ್ಯವಾಯಿತು. ಮೊದಲನೇ ದಿನದಾಟದ ಬಳಿಕ ಬಿಸಿಸಿ ಜೊತೆ ಮಾತನಾಡಿದ ಜೇಮ್ಸ್ ಆಂಡರ್ಸನ್‌, ಲಾರ್ಡ್ಸ್ ಟೆಸ್ಟ್‌ನ ನಾಲ್ಕು ದಿನಗಳು ನಾವು ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ಸೋಲು ಅನುಭವಿಸಿದ್ದೆವು. ಆದರೆ, ಹೆಡಿಂಗ್ಲೆ ಟೆಸ್ಟ್‌ಗೆ ನಾವು ಹಸಿನಿಂದ ಬಂದಿದ್ದೇವೆ, ಭಾರತಕ್ಕೆ ಎಂಥಾ ಫೈಟ್‌ ನೀಡಲೂ ನಾವು ಸಿದ್ದರಿದ್ದೇವೆ ಎಂದಿದ್ದಾರೆ. "ಲಾರ್ಡ್ಸ್‌ ಟೆಸ್ಟ್‌ನ ಕೊನೆಯ ದಿನ ನಮ್ಮ ಪಾಲಿಗೆ ಅತ್ಯಂತ ಕೆಟ್ಟದಾಗಿತ್ತು. ಆದರೆ, ಆರಂಭಿಕ ನಾಲ್ಕು ದಿನಗಳು ನಾವು ಅತ್ಯುತ್ತಮ ಕ್ರಿಕೆಟ್‌ ಆಡಿದ್ದೆವು. ಆದರೂ ಸೋಲು ಅನುಭವಿಸಿದ್ದಕ್ಕೆ ಬೇಸರವಾಗಿತ್ತು. ಅಂದಹಾಗೆ, ಮೂರನೇ ಟೆಸ್ಟ್‌ಗೆ ನಾವು ಹಸಿವಿನಿಂದ ಬಂದಿದ್ದೇವೆ ಹಾಗೂ ಭಾರತಕ್ಕೆ ಎಂಥಾ ಕಠಿಣ ಹೋರಾಟ ನೀಡಲು ಸಿದ್ದರಿದ್ದೇವೆ," ಎಂದು ಹೇಳಿದ್ದಾರೆ. "ಪಂದ್ಯದ ಮೊದಲನೇ ದಿನ ನಾವು ಚೆಂಡಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದೇವೆ ಹಾಗೂ ಬ್ಯಾಟಿಂಗ್‌ನಲ್ಲಿಯೂ ನಮ್ಮ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಕೌಶಲದೊಂದಿಗೆ ಕಠಿಣ ಹೋರಾಟ ನಡೆಸಿದ್ದಾರೆ. ಈ ಪಂದ್ಯ ನಮಗೆ ತುಂಬಾ ಮುಖ್ಯ ಎಂಬುದು ಗೊತ್ತಿದೆ, ಹಾಗಾಗಿ ಅತ್ಯುತ್ತಮ ಆರಂಭ ಕಂಡಿದ್ದೇವೆ," ಎಂದು ಜಿಮ್ಮಿ ತಿಳಿಸಿದ್ದಾರೆ. ಹೆಡಿಂಗ್ಲೆ ಪಿಚ್‌ ಬಗ್ಗೆ ಮಾತನಾಡಿದ ಅವರು, "ಪಿಚ್ ಹೇಗೆ ವರ್ತಿಸಲಿದೆ ಎಂಬುದು ನಮಗೂ ಗೊತ್ತಿರಲಿಲ್ಲ. ಆದರೆ, ನಾವು ಇಲ್ಲಿನ ಪರಿಸ್ಥಿತಿಗಳಿಗೆ ಅದ್ಭುತವಾಗಿ ಹೊಂದಿಕೊಂಡಿದ್ದೇವೆ ಎಂದು ಭಾವಿಸುತ್ತೇನೆ. ಸೀಮ್‌ ಹಾಗೂ ಸ್ವಿಂಗ್‌ ಚಲನೆಯನ್ನು ನಾವು ಚೆನ್ನಾಗಿ ಉಪಯೋಗಿಸಿಕೊಂಡಿದ್ದೇವೆ. ಇನ್ನೂ ನಾನು ಫ್ರೆಶ್‌ ಆಗಿಯೇ ಇದ್ದೇನೆ. ಆರಂಭಿಕ ಎರಡು ಪಂದ್ಯಗಳಲ್ಲಿ ತುಂಬಾ ಬೌಲ್‌ ಮಾಡಿದ್ದೆ. ಆದರೆ, ಈ ಟೆಸ್ಟ್‌ನಲ್ಲಿ ಕೆಲವೇ ಓವರ್ ಬೌಲ್‌ ಮಾಡಿದ ಬಳಿಕ ವಿಶ್ರಾಂತಿ ಸಿಕ್ಕಿದೆ," ಎಂದು ಹೇಳಿದರು. ಮೊದಲನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 42 ಓವರ್‌ಗಳಿಗೆ ವಿಕೆಟ್‌ ನಷ್ಟವಿಲ್ಲದೆ 120 ರನ್‌ ಗಳಿಸಿದ್ದು, 42 ರನ್‌ ಮುನ್ನಡೆ ಗಳಿಸಿದೆ. ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ, ಪ್ರಥಮ ಇನಿಂಗ್ಸ್‌ನಲ್ಲಿ 40.4 ಓವರ್‌ಗಳಿಗೆ ಕೇವಲ 78 ರನ್‌ಗಳಿಗೆ ಆಲೌಟ್‌ ಆಗಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3zj0IO9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...