ಸರಕಾರದ ದತ್ತಾಂಶಗಳ ಅಕ್ರಮ ಮಾರಾಟ: ಖಾಸಗಿ ಕಂಪನಿಗಳ ವಿರುದ್ಧ ಎಫ್‌ಐಆರ್..!

ಬೆಂಗಳೂರು: ಪೊಲೀಸ್‌ ಇಲಾಖೆ, ನ್ಯಾಯಾಲಯಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಕಾನೂನು ಬಾಹಿರವಾಗಿ ಕಂಪನಿ ಲೆಟರ್‌ಹೆಡ್‌ ಹಾಕಿಕೊಂಡು ಮಾರಾಟ ಮಾಡುತ್ತಿದ್ದ ಖಾಸಗಿ ಕಂಪನಿಗಳ ವಿರುದ್ಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಸತೀಶ್‌ಕುಮಾರ್‌ ಎಂಬುವವರು ನಂದಿನಿ ಲೇಔಟ್‌ ಪ್ರದೇಶದಲ್ಲಿ ಖರೀದಿಸಲಿರುವ ಆಸ್ತಿ ಮೇಲೆ ಯಾವುದಾದರೂ ದೂರುಗಳಿವೆಯೇ ಎಂಬುದನ್ನು ಆನ್‌ಲೈನ್‌ನಲ್ಲಿ ಚೆಕ್‌ ಮಾಡುತ್ತಿದ್ದರು. ಈ ವೇಳೆ ನಾಲ್ಕಕ್ಕೂ ಹೆಚ್ಚು ಕಂಪನಿಗಳು ತಾವು ಪೊಲೀಸ್‌ ವೆರಿಫಿಕೇಷನ್‌, ಎಫ್‌ಐಆರ್‌, ಇ- ಕೋರ್ಟ್‌ ಸರ್ವೀಸ್‌ ಮುಂತಾದ ಸೇವೆಗಳನ್ನು ಕೊಡುವುದಾಗಿ ಹೇಳಿವೆ. ಅವರ ಸೇವೆ ಹೇಗೆ ಎಂದು ಪರಿಶೀಲಿಸಿದಾಗ, ಆನ್‌ಲೈನ್‌‌ನಲ್ಲಿ ಪೊಲೀಸ್‌ ಇಲಾಖೆ ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಸಂಗ್ರಧಿಹಿಸಿ ಅವುಗಳಿಗೆ ತಮ್ಮದೇ ಕಂಪನಿಯ ಹೆಸರಿನಲ್ಲಿ ಲೆಟರ್‌ಹೆಡ್‌ ಸೇರಿಸಿ ಹಣಕ್ಕೆ ಮಾರಿಕೊಳ್ಳುತ್ತಿರುವುದು ಗೊತ್ತಾಗಿದೆ. ಆನ್‌ಲೈನ್‌ ಮೂಲಕ ದತ್ತಾಂಶ ಮಾರಾಟ ಮಾಡುವ ಮೂಲಕ ಸರಕಾರಕ್ಕೆ ನಷ್ಟ ಮಾಡಲಾಗುತ್ತಿದೆ. ಅಲ್ಲದೆ, ಸಾರ್ವಜನಿಕರು ಹಾಗೂ ಇಂತಹ ದಾಖಲೆಗಳನ್ನು ಪಡೆಯಲು ಮುಂದಾಗುವ ಕಂಪನಿಗಳಿಗೆ ಮೋಸ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಸತೀಶ್‌ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಸೈಬರ್‌ ಕ್ರೈಂ ಪೊಲೀಸರು ತಿಳಿಸಿದ್ದಾರೆ.


from India & World News in Kannada | VK Polls https://ift.tt/3b1RrB4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...