ಈ ಆಟಗಾರನ ರೀತಿ ಕಠಿಣ ಪರಿಶ್ರಮದ ಕ್ರಿಕೆಟಿಗನನ್ನು ವೃತ್ತಿ ಜೀವನದಲ್ಲೇ ನೋಡಿಲ್ಲ ಎಂದ ಕಪಿಲ್‌ ದೇವ್‌!

ಹೊಸದಿಲ್ಲಿ: ಭಾರತ ತಂಡದ ಮಾಜಿ ನಾಯಕ ಕ್ರಿಕೆಟ್‌ನ ಸಾರ್ವಕಾಲಿಕ ಗೌರವಯುತ ಆಟಗಾರ. ಒಂದು ಕಾಲದಲ್ಲಿ ದುರ್ಬಲವಾಗಿದ್ದ ಭಾರತ ತಂಡವನ್ನು ವಿಶ್ವದ ಬಲಿಷ್ಠ ಎದುರಾಳಿಗಳನ್ನು ಸೋಲಿಸುವಂತಹ ಸಾಮರ್ಥ್ಯವನ್ನು ವೃದ್ದಿಮಾಡಿದ್ದರು. 1983ರಲ್ಲಿ ಕಪಿಲ್‌ ದೇವ್‌ ನಾಯಕತ್ವದಲ್ಲಿ ಭಾರತ ಚೊಚ್ಚಲ ವಿಶ್ವಕಪ್‌ ಮುಡಿಗೇರಿಸಿಕೊಂಡಿತ್ತು. ಭಾರತೀಯ ಕ್ರಿಕೆಟ್‌ ಕಂಡ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ ಎಂಬ ಖ್ಯಾತಿ ಕೂಡ ಇವರ ಹೆಸರಿನಲ್ಲಿದೆ. ಅಲ್ಲದೇ, ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳಾದ ಇಯಾನ್‌ ಬೋಥಮ್, ರಿಚರ್ಡ್ಸ್‌ ಹ್ಯಾಡ್ಲೆ ಹಾಗೂ ಅವರ ಬಗ್ಗೆ ಅವರ ನಡೆಸಿಕೊಡುತ್ತಿರುವ 'ಇನ್‌ಸೈಡ್‌ ಔಟ್‌' ಕಾರ್ಯಕ್ರಮದಲ್ಲಿ ಮಾಜಿ ನಾಯಕ ತಿಳಿಸಿದರು. 1992ರ ವಿಶ್ವಕಪ್‌ ವಿಜೇತ ಪಾಕಿಸ್ತಾನ ತಂಡದ ನಾಯಕರಾಗಿದ್ದ ಇಮ್ರಾನ್‌ ಖಾನ್‌ ಅವರನ್ನು ಶ್ಲಾಘಿಸಿದ ಕಪಿಲ್‌ ದೇವ್‌, ತಮ್ಮ ವೃತ್ತಿ ಜೀವನದಲ್ಲೇ ಅತ್ಯಂತ ಕಠಿಣ ಪರಿಶ್ರಮದ ಆಟಗಾರ ಎಂದು ಹೇಳಿದರು. ಆದರೆ, ಅವರನ್ನು ಅತ್ಯತ್ತಮ ಕ್ರೀಡಾಪಟು ಎಂದು ಹೇಳಲು ನಿರಾಕರಿಸಿದರು. "ಇಮ್ರಾನ್‌ ಖಾನ್‌ ಅತ್ಯುತ್ತಮ ಕ್ರೀಡಾಪಟುವಲ್ಲ ಅಥವಾ ಸ್ವಾಭಾವಿಕ ಆಟಗಾರನೂ ಅಲ್ಲ. ಆದರೆ, ವೃತ್ತಿ ಜೀವನದಲ್ಲೇ ನಾನು ಕಂಡ ಅತ್ಯಂತ ಕಠಿಣ ಪರಿಶ್ರಮದ ಆಟಗಾರ. ಇವರ ರೀತಿ ಪರಿಶ್ರಮ ಆಟಗಾರನನ್ನು ನಾನೆಂದೂ ನೋಡಿಲ್ಲ. ಅವರನ್ನು ನೋಡಲು ಸಾಮಾನ್ಯ ಆಟಗಾರ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಅವರು ಕಠಿಣ ಪರಿಶ್ರಮದ ಬೌಲರ್‌. ನಂತರ, ಬ್ಯಾಟಿಂಗ್‌ನಲ್ಲಿಯೂ ಅವರು ಅತ್ಯುತ್ತಮವಾಗಿದ್ದರು," ಎಂದು ಕಪಿಲ್‌ ದೇವ್‌ ತಿಳಿಸಿದರು. ಕಪಿಲ್‌ ದೇವ್‌ ಜಿಂಬಾಬ್ವೆ ವಿರುದ್ಧ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿದ್ದರು ಹಾಗೂ 1983ರ ವಿಶ್ವಕಪ್‌ ಫೈನಲ್‌ ಹಣಾಹಣಿಯಲ್ಲಿ ಕ್ರಿಕೆಟ್‌ ದಂತಕತೆ ವಿವಿಯನ್‌ ರಿಚರ್ಡ್‌ ಅವರ ಅದ್ಭುತ ಕ್ಯಾಚ್‌ ಹಿಡಿದ್ದರು ಹಾಗೂ ಆ ಟೂರ್ನಿಯಲ್ಲಿ ಅವರು 303 ರನ್‌ ಹಾಗೂ 12 ವಿಕೆಟ್‌ಗಳನ್ನು ಕಬಳಿಸಿದ್ದರು. ಮೂವರು ಶ್ರೇಷ್ಠ ಮಾಜಿ ಆಲ್‌ರೌಂಡರ್‌ಗಳೊಂದಿಗೆ ಹೋಲಿಕೆಗಳ ಬಗ್ಗೆ ಮಾತನಾಡಿದ ಅವರು, ತಾವು ಸಾಕಷ್ಟು ಶ್ರೇಷ್ಠರಲ್ಲದಿದ್ದರೂ ಸಹ, ಬೋಥಮ್, ರಿಚರ್ಡ್ಸ್‌ ಮತ್ತು ಇಮ್ರಾನ್ ಖಾನ್‌ ಸಂಯೋಜನೆಗಿಂತ ಉತ್ತಮ ಕ್ರೀಡಾಪಟು ಎಂದು ನಂಬಿದ್ದಾರೆ. "ನಾನು ಶ್ರೇಷ್ಠ ಆಟಗಾರ ಎಂದು ಹೇಳಲು ಬಯಸುವುದಿಲ್ಲ. ಆದರೆ, ಇಯಾನ್‌ ಬೋಥಮ್, ರಿಚರ್ಡ್ಸ್ ಹಾಗೂ ಇಮ್ರಾನ್‌ ಖಾನ್‌ ಅವರಿಗಿಂತ ಉತ್ತಮ ಕ್ರೀಡಾಪಟು ಎಂದು ಹೇಳುತ್ತೇನೆ. ರಿಚರ್ಡ್ಸ್‌ ಹ್ಯಾಡ್ಲಿ ಅತ್ಯುತ್ತಮ ಬೌಲರ್‌ ಎಂದ ಅವರು, ನಮ್ಮೆಲ್ಲರಿಗೂ ಆತ ಒಂದು ರೀತಿಯ ಕಂಪ್ಯೂಟರ್‌ ಇದ್ದಂತೆ," ಎಂದು ಕಪಿಲ್‌ ದೇವ್‌ ಬಣ್ಣಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/33eHvA8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...