
ಕೆಲವೊಂದು ಸಲ ಹೀಗೂ ಆಗುತ್ತೆ ಅನ್ನುವುದಕ್ಕೆ ಇದೊಂದು ಬೆಸ್ಟ್ ಉದಾಹರಣೆ. ಯಾಕೆಂದರೆ ವ್ಯಕ್ತಿಯೊಬ್ಬ ಸುಮ್ಮನೆ ಎರಡು ಗಂಟೆ ಕುಳಿತಿರುವ ವಿಡಿಯೊವೊಂದನ್ನ ಯುಟ್ಯೂಬ್‌ನಲ್ಲಿ ಹಾಕಿದ್ದು ಇದನ್ನ ಬರೋಬ್ಬರಿ 15 ಲಕ್ಷ ಜನರು ವೀಕ್ಷಿಸಿದ್ದಾರೆ. ಇಂಡೋನೇಶಿಯಾ ಮೂಲದ ಯುಟ್ಯೂಬರ್ ಮುಹಮ್ಮದ್ ದೀದೀಟ್ ಎನ್ನುವಾತ ಈ ರೀತಿ ವಿಡಿಯೋ ಮಾಡಿ ತನ್ನ ಯುಟ್ಯೂಬ್‌ನಲ್ಲಿ ಹಾಕಿಕೊಂಡ ಯುವಕ. ಆದರೆ ಅನೇಕರು ಆತನ ಸಂಪೂರ್ಣ ಎರಡು ಗಂಟೆಯ ವಿಡಿಯೋ ವೀಕ್ಷಿಸಿದ್ದು, ಆತ ಎಷ್ಟ ಬಾರಿ ಕಣ್ಣು ಮುಚ್ಚಿದ್ದಾನೆ ಎನ್ನುವುದನ್ನ ಲೆಕ್ಕ ಹಾಕಿದ್ದಾರೆ. ಇನ್ನು ಕ್ಯಾಮರಾವನ್ನೇ ನೋಡುತ್ತ ಕುಳಿತ ಮುಹಮ್ಮದ್ ದೀದೀಟ್‌ನ ಮುಖದ ಬದಲಾವಣೆಗಳು ನಿಜಕ್ಕೂ ನೋಡುಗರ ಗಮನ ಸೆಳೆದಿದೆ. ಇನ್ನು ಈ ಬಗ್ಗೆ ಸ್ವತಃ ಮುಹಮ್ಮದ್ ದೀದೀಟ್ ಮಾಹಿತಿ ಹಂಚಿಕೊಂಡಿದ್ದು, ಕೆಲವು ಅಭಿಮಾನಿಗಳು ಯುವ ಪೀಳಿಗೆಗೆ ಯುಟ್ಯೂಬ್ ಮೂಲಕ ಶಿಕ್ಷಣ ನೀಡಬೇಕು ಎಂದು ಕೇಳಿಕೊಂಡಿದ್ದರು. ಹೀಗಾಗಿ ಈ ರೀತಿ ಸುಮ್ಮನೆ ಕುಳಿತುಕೊಳ್ಳುವ ವಿಡಿಯೋ ಮಾಡಿದ್ದೇನೆ ಎಂದು ತಿಳಿಸಿದ್ದಾನೆ ದೀದೀಟ್. ನೀವೆಲ್ಲಾ ನಾನು ಸುಮ್ಮನೆ ಕುಳಿತುಕೊಳ್ಳುವ ವಿಡಿಯೋವನ್ನ ಎಂಜಾಯ್ ಮಾಡಿದ್ದೀರಾ ಎಂದು ತಿಳಿಸಿದ್ದಾನೆ. ಸದ್ಯ ಕೊರೊನಾ ಇರುವುದರಿಂದ ಯು ಪೀಳಿಗೆ ಹೀಗೆ ಸುಮ್ಮನೆ ಕುಳಿತುಕೊಳ್ಳಿ ಅನ್ನುವುದರ ಮರ್ಮವಾಗಿದೆ ಎಂದು ಯುಟ್ಯೂಬರ್ ತಿಳಿಸಿದ್ದಾರೆ. ಸದ್ಯ ಈತನ ಸೃಜನಶೀಲತೆಗೆ ಅನೇಕರು ಶಹಬ್ಬಾಸ್ ಎಂದರೆ. ಇನ್ನೊಬ್ಬ ಈತ ದೃಷ್ಟಿಗೊಂಬೆಯಂತೆ ಕೂತಿರುವುದನ್ನ ನೋಡಿ ಈತ ಬದುಕಿದ್ದಾನೆ. ದೇಹ ಅಲುಗಾಡುತ್ತಿದೆ ಎಂದು ಕಾಲೆಳೆದಿದ್ದಾರೆ.
from India & World News in Kannada | VK Polls https://ift.tt/2BMSgyg