ಆಸ್ಟ್ರೇಲಿಯಾ ವಿರುದ್ದದ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ, ರೂಟ್‌ಗೆ ಶಾಕ್!

ಹೊಸದಿಲ್ಲಿ: ಆತಿಥೇಯ ಇಂಗ್ಲೆಂಡ್‌ ತಂಡ ಸೆಪ್ಟೆಂಬರ್‌ನಲ್ಲಿ ಪ್ರವಾಸಿ ವಿರುದ್ಧ ತಲಾ ಮೂರು ಪಂದ್ಯಗಳ ಮತ್ತು ಏಕದಿನ ಕ್ರಿಕೆಟ್‌ ಸರಣಿಗಳನ್ನು ಆಡಲಿದ್ದು, ಈ ಸಲುವಾಗಿ ಸೋಮವಾರ ತನ್ನ ಬಲಿಷ್ಠ ತಂಡಗಳನ್ನು ಪ್ರಕಟ ಮಾಡಿದೆ. ಆದರೆ, ಟೆಸ್ಟ್‌ ತಂಡದ ನಾಯಕ ಅವರಿಗೆ ಟಿ20 ತಂಡದಲ್ಲಿ ಸ್ಥಾನ ನೀಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ತಂದೆಗೆ ಬ್ರೇನ್‌ ಕ್ಯಾನ್ಸರ್‌ ಆಗಿರುವ ಕಾರಣ ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಯ ಮಧ್ಯದಲ್ಲೇ ತಂಡದಿಂದ ಹೊರ ನಡೆದ ಸ್ಟಾರ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರನ್ನೂ ಕೂಡ ಆಸ್ಟ್ರೇಲಿಯಾ ವಿರುದ್ಧದ ಎರಡೂ ಸರಣಿಗಳಿಂದ ಹೊರಗಿಡಲಾಗಿದೆ. ಜೊತೆಗೆ ಗಾಯದ ಸಮಸ್ಯೆ ಎದುರಿಸಿರುವ ಕಾರಣ ಸ್ಟಾರ್ ಓಪನರ್‌ ಜೇಸನ್‌ ರಾಯ್ ಅವರನ್ನೂ ಆಯ್ಕೆ ಮಾಡಲಾಗಿಲ್ಲ. "ಆಸ್ಟ್ರೇಲಿಯಾ ವಿರುದ್ಧದ ಈ ಎರಡೂ ಸರಣಿಗಳು ಬಹಳ ಕಾತುರ ಕೆರಳಿಸಿವೆ. ಈ ಸಲುವಾಗಿ ಬಲಿಷ್ಠ ತಂಡಗಳನ್ನು ಆಯ್ಕೆ ಮಾಡಿದ್ದೇವೆ. ಮುಂಬರುವ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳನ್ನು ಗಮನದಲ್ಲಿ ಇರಿಸಿ ತಂಡಗಳನ್ನು ರಚಿಸಲಾಗಿದೆ," ಎಂದು ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿಯ ಚೀಫ್‌ ಸೆಲೆಕ್ಟರ್‌ ಎಡ್‌ ಸ್ಮಿತ್‌ ಹೇಳಿದ್ದಾರೆ. ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯನ್ನು ಸೌತಾಂಪ್ಟನ್‌ನ ಏಜೆಸ್‌ ಬೌಲ್‌ ಕ್ರೀಡಾಂಗಣದಲ್ಲಿ ಬಯೋ ಸೆಕ್ಯೂರ್‌ ವಾತಾವರಣದ ಅಡಿಯಲ್ಲಿ ಆಯೋಜಿಸಲಾಗುತ್ತಿದ್ದು, ಮೊದಲ ಪಂದ್ಯ ಶುಕ್ರವಾರ ನಡೆಯಲಿದೆ. ಬಳಿಕ ಅಷ್ಟೇ ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯು ಸೆಪ್ಟೆಂಬರ್‌ 11-16ರವರೆಗೆ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೊರೊನಾ ವೈರಸ್‌ ಭೀತಿ ನಡುವೆಯೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಮರಳಿ ಆರಂಭವಾಗಿದ್ದು ಇಂಗ್ಲೆಂಡ್‌ನಲ್ಲಿ. ಜುಲೈನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಸರಣಿಯಾಡಿದ್ದ ಇಂಗ್ಲೆಂಡ್‌ ಈಗ ಪಾಕಿಸ್ತಾನ ವಿರುದ್ಧ ಟಿ20 ಸರಣಿಯನ್ನಾಡುತ್ತಿದೆ. ಇದಾದ ಬಳಿಕ ಆಸ್ಟ್ರೇಲಿಯಾ ಸವಾಲು ಎದುರಿಸಲಿದೆ. ಇಂಗ್ಲೆಂಡ್‌ ಟಿ20 ತಂಡ ಹೀಗಿದೆ 1. ಐಯಾನ್‌ ಮಾರ್ಗನ್ (ಕ್ಯಾಪ್ಟನ್). 2. ಮೊಯೀನ್‌ ಅಲಿ (ಆಲ್‌ರೌಂಡರ್) 3. ಜೋಫ್ರ ಆರ್ಚರ್‌ (ಬಲಗೈ ವೇಗಿ) 4. ಜಾನಿ ಬೈರ್‌ಸ್ಟೋವ್ (ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್) 5. ಟಾಮ್‌ ಬ್ಯಾನ್ಟನ್ (ಬ್ಯಾಟ್ಸ್‌ಮನ್) 6. ಸ್ಯಾಮ್‌ ಬಿಲ್ಲಿಂಗ್ಸ್‌ (ಬ್ಯಾಟ್ಸ್‌ಮನ್) 7. ಜೋಸ್ ಬಟ್ಲರ್ (ವಿಕೆಟ್‌ಕೀಪರ್‌/ಬ್ಯಾಟ್ಸ್‌ಮನ್) 8. ಟಾಮ್‌ ಕರ್ರನ್ (ಆಲ್‌ರೌಂಡರ್‌) 9. ಜೋ ಡೆನ್ಲೀ (ಬ್ಯಾಟ್ಸ್‌ಮನ್) 10. ಕ್ರಿಸ್‌ ಜಾರ್ಡನ್‌ (ಆಲ್‌ರೌಂಡರ್) 11. ಡಾವಿಡ್‌ ಮಲಾನ್ (ಬ್ಯಾಟ್ಸ್‌ಮನ್) 12. ಆದಿಲ್‌ ರಶೀದ್‌ (ಲೆಗ್‌ ಸ್ಪಿನ್ನರ್) 13. ಮಾರ್ಕ್‌ ವುಡ್‌ (ಬಲಗೈ ವೇಗಿ) ಹೆಚ್ಚುವರಿ ಆಟಗಾರರು: ಲಿಯಾಮ್‌ ಲಿವಿಂಗ್‌ಸ್ಟೋನ್ ಮತ್ತು ಸಕಿಬ್ ಮಹ್ಮೂದ್ ಇಂಗ್ಲೆಂಡ್‌ ಏಕದಿನ ಕ್ರಿಕೆಟ್‌ ತಂಡ1. ಐಯಾನ್‌ ಮಾರ್ಗನ್ (ನಾಯಕ) 2. ಮೊಯೀನ್‌ ಅಲಿ (ಆಲ್‌ರೌಂಡರ್) 3. ಜೋಫ್ರಾ ಆರ್ಚರ್ (ಬಲಗೈ ವೇಗಿ) 4. ಜಾನಿ ಬೈರ್‌ಸ್ಟೋವ್ (ವಿಕೆಟ್‌ಕೀಪರ್‌/ಬ್ಯಾಟ್ಸ್‌ಮನ್) 5. ಟಾಮ್‌ ಬ್ಯಾನ್ಟನ್ (ಬ್ಯಾಟ್ಸ್‌ಮನ್) 6. ಸ್ಯಾಮ್‌ ಬಿಲ್ಲಿಂಗ್ಸ್‌ (ಬ್ಯಾಟ್ಸ್‌ಮನ್) 7. ಜೋಸ್‌ ಬಟ್ಲರ್ (ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್) 8. ಟಾಮ್‌ ಕರ್ರನ್ (ಆಲ್‌ರೌಂಡರ್) 9. ಆದಿಲ್‌ ರಶೀದ್ (ಲೆಗ್‌ ಸ್ಪಿನ್ನರ್) 10. ಜೋ ರೂಟ್ (ಬ್ಯಾಟ್ಸ್‌ಮನ್) 11. ಕ್ರಿಸ್‌ ವೋಕ್ಸ್‌ (ಬಲಗೈ ವೇಗಿ) 12. ಮಾರ್ಕ್‌ ವುಡ್‌ (ಬಲಗೈ ವೇಗಿ) ಹೆಚ್ಚುವರಿ ಆಟಗಾರರು: ಜೋ ಡೆನ್ಲಿ ಮತ್ತು ಸಕಿಬ್‌ ಮಹ್ಮೂದ್.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3bdAuBN

ಬಾಬರ್‌ ದಾರಿ ತಪ್ಪಿದ 'ದನ'ದಂತೆ ಆಗಿದ್ದಾರೆಂದು ಟೀಕಿಸಿದ ಅಖ್ತರ್!

ಹೊಸದಿಲ್ಲಿ: ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ 2ನೇ ಹಣಾಹಣಿಯಲ್ಲಿ ಪ್ರವಾಸಿ ತಂಡ 5 ವಿಕೆಟ್‌ಗಳ ಹೀನಾಯ ಸೋಲುಂಡಿತು. ಇದರ ಬೆನ್ನಲ್ಲೇ ಕ್ಯಾಪ್ಟನ್‌ ಬಾಬರ್‌ ಆಝಮ್‌ ವಿರುದ್ಧ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌ ಟೀಕಾಸ್ತ್ರ ಪ್ರಹಾರ ಮಾಡಿದ್ದಾರೆ. ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಾಕ್‌ ತಂಡದ ಪರ ಅನುಭವಿ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಹಫೀಝ್ ಮತ್ತು ಕ್ಯಾಪ್ಟನ್‌ ಬಾಬರ್‌ ಸ್ಫೋಟಕ ಅರ್ಧಶತಕಗಳನ್ನು ದಾಖಲಿಸುವ ಮೂಲಕ 20 ಓವರ್‌ಗಳಲ್ಲಿ 195 ರನ್‌ಗಳ ಬೃಹತ್‌ ಮೊತ್ತವನ್ನೇ ತಂದುಕೊಟ್ಟರು. ಆದರೆ, ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಪರಿಣಾಮ ಐಯಾನ್‌ ಮಾರ್ಗನ್‌ ಸಾರಥ್ಯದ ತಂಡ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿ ಇನ್ನು 5 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಕೇಕೆ ಹಾಕಿತ್ತು. ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿದ್ದ ಮಾರ್ಗನ್‌ 33 ಎಸೆತಗಳಲ್ಲಿ 5 ಸಿಕ್ಸರ್‌ ಒಳಗೊಂಡ 66 ರನ್‌ ಚಚ್ಚಿ ಜಯದ ರೂವಾರಿ ಎನಿಸಿದರು. ಈ ಬಗ್ಗೆ ಮಾತನಾಡಿರುವ ರಾವಲಪಿಂಡಿ ಎಕ್ಸ್‌ಪ್ರೆಸ್‌ ಖ್ಯಾತಿಯ ಮಾಜಿ ವೇಗಿ, ಬಾಬರ್‌ ಆಝಮ್‌ ಅವರ ನಾಯಕತ್ವವನ್ನು ಕಟುವಾಗಿ ಟೀಕಿಸಿದ್ದಾರೆ. ಪಂದ್ಯದ ನಿರ್ಣಾಯಕ ಘಟ್ಟಗಳಲ್ಲಿ ಬಾಬರ್‌ ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾದರು. ಏನು ಮಾಡಬೇಕೆಂಬುದೇ ಅವರಿಗೆ ಗೊತ್ತಿರಲಿಲ್ಲ ಎಂದು ಅಖ್ತರ್‌ ಟೀಕಾಸ್ತ್ರ ಪ್ರಯೋಗ ಮಾಡಿದ್ದಾರೆ. "ಬಾಬರ್‌ ಒಂದು ರೀತಿ ದಾರಿ ತಪ್ಪಿದ ದನದಂತೆ ಕಾಣುತ್ತಿದ್ದರು. ಅವರು ಫೀಲ್ಡ್‌ನಲ್ಲಿ ಇದ್ದಾರೆ. ಆದರೆ ಏನು ಮಾಡಬೇಕೆಂಬುದು ಅವರಿಗೆ ಗೊತ್ತಿಲ್ಲ. ತಮ್ಮ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವುದನ್ನು ಅವರು ಮೊದಲು ಕಲಿಯಬೇಕು. ಹೀಗಾದರೆ ಮಾತ್ರ ಅವರು ಮುಂದಿನ ದಿನಗಳಲ್ಲಿ ಉತ್ತಮ ನಾಯಕನಾಗಿ ಬೆಳೆಯಲು ಸಾಧ್ಯ," ಎಂದು ಅಖ್ತರ್‌ ತಮ್ಮ ಯೂಟ್ಯೂಬ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. "ಡ್ರೆಸಿಂಗ್‌ ರೂಮ್‌ನಿಂದ ಅವರಿಗೆ ಸಲಹೆಗಳು ಬರುತ್ತಿದ್ದವು. ಫೀಲ್ಡ್‌ನಲ್ಲಿ ಮೂರು ಮಂದಿ ಅವರಿಗೆ ನೆವಾಗುತ್ತಿದ್ದರು. ಯಶಸ್ವಿ ನಾಯಕನಾಗಲು ಮೊದಲು ತಮ್ಮದೇ ನಿರ್ಧಾರ ತೆಗೆದುಕೊಳ್ಳುವಂತೆ ಅವರು ಆಗಬೇಕು. ಅವರ ಬಳಿ ನಾಯಕತ್ವದ ಅವಕಾಶ ಹುಡುಕಿಕೊಂಡು ಬಂದಿದೆ ಎಂಬುದನ್ನು ಬಾಬರ್‌ ಮೊದಲು ತಿಳಿದುಕೊಳ್ಳಬೇಕು. ಅವರ ಜೀವನದುದ್ದಕ್ಕೂ ಇಂತಹ ಅವಕಾಶ ಸಿಗದು. ಹೀಗಾಗಿ ಸಿಕ್ಕಿರುವ ಅವಕಾಶದ ಸಂಪೂರ್ಣ ಲಾಭ ಪಡೆದು ತಮ್ಮದೇ ಛಾಪು ಮೂಡಿದಬೇಕಿದೆ," ಎಂದಿದ್ದಾರೆ. ಇದೇ ವೇಳೆ ಬಾಬರ್‌ ಕೊಂಚ ಮಂದಗತಿಯಲ್ಲಿ ಬ್ಯಾಟ್‌ ಮಾಡುತ್ತಿದ್ದಾರೆ ಎಂದು ಅಖ್ತರ್‌ ಗುಡುಗಿದ್ದಾರೆ. "ಸ್ಟ್ರೈಕ್‌ರೇಟ್‌ ಬಗ್ಗೆ ಮಾತನಾಡುವುದಾದರೆ 130-135ರ ಆಸುಪಾಸಿನಲ್ಲಿ ಬಾಬರ್ ಬ್ಯಾಟ್‌ ಬೀಸುತ್ತಿದ್ದಾರೆ. ಫಖರ್‌ ಝಮಾನ್‌ ಬಿರುಸಾಗಿ ಬ್ಯಾಟ್‌ ಮಾಡುತ್ತಿದ್ದಾಗ ಬಾಬರ್‌ ಆಕ್ರಮಣಕಾರಿ ಆಟವಾಡುವ ಅಗತ್ಯ ಇರಲಿಲ್ಲ. ಆದರೆ, ಫಖರ್‌ ನಿರ್ಗಮನದ ನಂತರ ತಂಡದ ರನ್‌ ಗಳಿಕೆಯ ವೇಗವನ್ನು ಹೆಚ್ಚಿಸುವ ಜವಾಬ್ದಾರಿ ಇದದ್ದು ಬಾಬರ್‌ ಮೇಲೆ. ಇಂಗ್ಲೆಂಡ್ ಪರ ಐಯಾನ್‌ ಮಾರ್ಗನ್, ಡಾವಿಡ್‌ ಮಾಲನ್ ಮತ್ತು ಜಾನಿ ಬೈರ್‌ಸ್ಟೋವ್ ಮಾಡುವುದು ಇದನ್ನೇ. ಅವರನ್ನು ನೋಡಿ ಬಾಬರ್ ಕಲಿಯಬೇಕು," ಎಂದು ಸಲಹೆ ನೀಡಿದ್ದಾರೆ. ಫಝರ್‌ ಝಮಾನ್‌ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಬಾಬರ್‌ ಮೊದಲ ವಿಕೆಟ್‌ಗೆ ಬಿರುಸಿನ ಬ್ಯಾಟಿಂಗ್‌ ಮಾಡಿ 8.2 ಓವರ್‌ಗಳಲ್ಲಿ 72 ರನ್‌ ಜೋಡಿಸಿದ್ದರು. ಆದರೆ ಫಖರ್‌ 22 ಎಸೆತಗಳಲ್ಲಿ 36 ರನ್‌ ಗಳಿಸಿ ಔಟಾದ ಬಳಿಕ, ಹಫೀಜ್‌ ಬ್ಯಾಟಿಂಗ್‌ಗೆ ಬಂದು 36 ಎಸೆತಗಳಲ್ಲಿ 69 ರನ್‌ ಚಚ್ಚಿದರು. ಆದರೆ, ಬಾಬರ್‌ 127.27ರ ಸ್ಟ್ರೈಕ್‌ರೇಟ್‌ನಲ್ಲಿ 44 ಎಸೆತಗಳಲ್ಲಿ 56 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ಹೀಗಾಗಿ ಬಾಬರ್‌ ಬಿರುಸಾಗಿ ಬ್ಯಾಟ್‌ ಮಾಡಬೇಕೆಂದು ಅಖ್ತರ್‌ ಹೇಳಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3beTAXT

ಸಿಎಸ್‌ಕೆ ತಂಡದಲ್ಲಿ ರೈನಾ ಸ್ಥಾನಕ್ಕೆ 3ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಹೆಸರಿಸಿದ ಗಂಭೀರ್!

ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಹೊರಗುಳಿದಿದ್ದು, ಈ ಸಂದರ್ಭದಲ್ಲಿ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಉತ್ತಮ ಅವಕಾಶ ಕ್ಯಾಪ್ಟನ್‌ ಎಂಎಸ್‌ ಧೋನಿಗೆ ಲಭ್ಯವಾಗಿದೆ ಎಂದು ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಹೇಳಿದ್ದಾರೆ. ಸಿಎಸ್‌ಕೆ ತಂಡಕ್ಕೆ ಮೂರು ಬಾರಿ ಪ್ರಶಸ್ತಿ ಗೆದ್ದುಕೊಟ್ಟು, ಎಲ್ಲಾ ಆವೃತ್ತಿಗಳಲ್ಲೂ ನಾಕ್‌ಔಟ್‌ ಹಂತಕ್ಕೆ ಮುನ್ನಡೆಸಿರುವ ಕ್ಯಾಪ್ಟನ್‌ ಸಾಮಾನ್ಯವಾಗಿ 5ನೇ ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಾರೆ. ಆದರೆ, ಧೋನಿ ಅಗ್ರ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದಾಗಲೆಲ್ಲಾ ಯಶಸ್ಸು ಕಂಡಿದ್ದು, ಈಗ ಮತ್ತೊಮ್ಮೆ ಅದೇ ಅವಕಾಶ ಅವರನ್ನು ಹುಡುಕಿಕೊಂಡು ಬಂದಿದೆ ಎಂದು ಕೆಕೆಆರ್‌ ತಂಡದ ಮಾಜಿ ನಾಯಕ ಗಂಭೀರ್‌ ಅಭಿಪ್ರಾಯ ಪಟ್ಟಿದ್ದಾರೆ. "ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಎಂಎಸ್‌ ಧೋನಿಗೆ ಉತ್ತಮ ಅವಕಾಶ ಲಭ್ಯವಾಗಿದೆ. ಅವರು ಕ್ರಿಕೆಟ್‌ನಿಂದ ದೂರ ಉಳಿದು ಒಂದು ವರ್ಷವೇ ಕಳೆದಿದೆ. ಹೀಗಾಗಿ ಅಗ್ರ ಕ್ರಮಾಂಕದಲ್ಲಿ ಆಡಿದರೆ ಅವರಿಗೆ ತಂಡಕ್ಕೆ ಆಸರೆಯಾಗುವಂತಹ ಇನಿಂಗ್ಸ್‌ ಆಡಲು ಹೆಚ್ಚು ಎಸೆತಗಳು ಲಭ್ಯವಾಗುತ್ತದೆ," ಎಂದು ಸ್ಟಾರ್‌ ಸ್ಪೋರ್ಟ್ಸ್‌ನ ಕ್ರಿಕೆಟ್‌ ಕನೆಕ್ಟೆಡ್‌ ಕಾರ್ಯಕ್ರಮದಲ್ಲಿ ಗಂಭೀರ್‌ ಹೇಳಿದ್ದಾರೆ. ಅಂದಹಾಗೆ ಧೋನಿ ಯಾವ ಯಾವ ಕ್ರಮಾಂಕದಲ್ಲಿ ಆಡಿ ಎಷ್ಟೆಲ್ಲಾ ರನ್‌ ಗಳಿಸಿದ್ದಾರೆ ಎಂಬುದರ ವಿವರ ಇಲ್ಲಿದೆ. ಟಿ20 ಕ್ರಿಕೆಟ್‌ನಲ್ಲಿ ಒಟ್ಟು 16 ಇನಿಂಗ್ಸ್‌ಗಳಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿರುವ ಧೋನಿ 82.75ರ ಸರಾಸರಿಯಲ್ಲಿ 993 ರನ್‌ಗಳನ್ನು ಬಾರಿಸಿದ್ದಾರೆ. 4ನೇ ಕ್ರಮಾಂಕದಲ್ಲಿ 30 ಇನಿಂಗ್ಸ್‌ಗಳನ್ನು ಆಡಿದ್ದು 56.58ರ ಸರಾಸರಿಯಲ್ಲಿ 1368 ರನ್‌, 5ನೇ ಕ್ರಮಾಂಕದಲ್ಲಿ 50.30ರ ಸರಾಸರಿಯಲ್ಲಿ 3169 ರನ್, 6ನೇ ಕ್ರಮಾಂಕದಲ್ಲಿ 129 ಇನಿಂಗ್ಸ್‌ಗಳಿಂದ 4164 ರನ್‌ಗಳನ್ನು ಬಾರಿಸಿದ್ದಾರೆ. ಸಿಎಸ್‌ಕೆ ತಂಡದ ಸಾರ್ವಕಾಲಿಕ ಗರಿಷ್ಠ ರನ್‌ ಸ್ಕೋರರ್‌ ಸುರೇಶ್‌ ರೈನಾ ಈ ವರ್ಷ ಆಡದೇ ಇರುವ ಕಾರಣ 3ನೇ ಕ್ರಮಾಂಕದ ಬ್ಯಾಟಿಂಗ್‌ ಅತ್ಯಂತ ಮಹತ್ವದ್ದಾಗಲಿದೆ. ಹೀಗಾಗಿ ಈ ಜವಾಬ್ದಾರಿಯನ್ನು ಧೋನಿಯಿಂದ ನಿಭಾಯಿಸಲು ಮಾತ್ರ ಸಾಧ್ಯ ಎಂದು ಗಂಭೀರ್‌ ವಿಶ್ವಾಸ ಹೊರಹಾಕಿದ್ದಾರೆ. "ಧೋನಿ ಮೂರನೇ ಕ್ರಮಾಂಕದಲ್ಲಿ ಆಡಿದರೂ ತಂಡದ ಬ್ಯಾಟಿಂಗ್‌ ಕೆಳ ಕ್ರಮಾಂಕದವರೆಗೂ ಬಲಿಷ್ಠವಾಗಿಯೇ ಇರಲಿದೆ. ಕೇದಾರ್‌ ಜಾಧವ್, ಡ್ವೇಯ್ನ್ ಬ್ರಾವೋ ಮತ್ತು ಸ್ಯಾಮ್ ಕರ್ರನ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಹೀಗಾಗಿ ಖಂಡಿತಾ ಧೋನಿಗೆ 3ನೇ ಕ್ರಮಾಂಕದ ಜವಾಬ್ದಾರಿ ನಿಭಾಯಿಸುವ ಸಾಮರ್ಥ್ಯವಿದೆ. ಆ ಕ್ರಮಾಂಕಕ್ಕೆ ರೈನಾ ಅವರಷ್ಟೇ ಅನುಭವಿ ಆಟಗಾರನ ಅಗತ್ಯವಿದ್ದು, ಎಂಎಸ್‌ ಉತ್ತಮ ಆಯ್ಕೆ," ಎಂದಿದ್ದಾರೆ. ಐಪಿಎಲ್‌ 2020 ಟೂರ್ನಿಯು ಈ ವರ್ಷ ಯುಎಇ ಆತಿಥ್ಯದಲ್ಲಿ ನಡೆಯಲಿದ್ದು, ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಬಯೋ ಸೆಕ್ಯೂರ್ ವಾತಾವರಣ ಇರುವ ದುಬೈ, ಶರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ಟೂರ್ನಿಯ ಸಂಪೂರ್ಣ 60 ಪಂದ್ಯಗಳನ್ನು ಬಿಸಿಸಿಐ ಆಯೋಜಿಸಲಿದೆ. ಇನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಇಬ್ಬರು ಆಟಗಾರರು ಮತ್ತು 11 ಮಂದಿ ಸಹಾಯಕ ಸಿಬ್ಬಂದಿ ವರ್ಗದಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆಚ್ಚುವರಿ ಕ್ವಾರಂಟೈನ್‌ಗೆ ಒಳಪಟ್ಟಿದೆ. 6 ದಿನಗಳ ಕ್ವಾರಂಟೈನ್ ನಂತರ ಅಭ್ಯಾಸಕ್ಕೆ ಮರಳಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gH0xSN

2021ರ ಟಿ20 ವಿಶ್ವಕಪ್‌ಗೆ ವಿಕೆಟ್‌ಕೀಪರ್‌ ಹೆಸರಿಸಿದ ಆಕಾಶ್ ಚೋಪ್ರಾ!

ಹೊಸದಿಲ್ಲಿ: ಎಂಎಸ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾಗಿದೆ. ಈಗ 2021ರಲ್ಲಿ ಭಾರತ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌ ಯಾರಾಗುತ್ತಾರೆಂಬ ಚರ್ಚೆ ಕೂಡ ಜೋರಾಗಿಯೇ ನಡೆಯುತ್ತಿದೆ. ಅಂದಹಾಗೆ ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸ್ಥಾನಕ್ಕೆ ಕೆಎಲ್‌ ರಾಹುಲ್‌, ರಿಷಭ್‌ ಪಂತ್ ಮತ್ತು ಸಂಜು ಸ್ಯಾಮ್ಸನ್ ಮೂಂಚೂಣಿಯಲ್ಲಿ ಇರುವ ಆಟಗಾರರಾಗಿದ್ದಾರೆ. ಆದರೆ, ಈ ರೇಸ್‌ನಲ್ಲಿ ಮತ್ತೊಬ್ಬ ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಒಬ್ಬರು ಇರುವುದಾಗಿ ಭಾರತ ಟೆಸ್ಟ್‌ ತಂಡದ ಮಾಜಿ ಓಪನರ್‌ ಆಕಾಶ್‌ ಚೋಪ್ರಾ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ನಾಯಕನಾಗಿರುವ ಅನುಭವಿ ಆಟಗಾರ , 2021ರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕಾದರೆ ಅವರು ಐಪಿಎಲ್‌ನಲ್ಲಿ ಅಗ್ರ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕೆಂದು ಚೋಪ್ರಾ ಅಭಿಪ್ರಾಯ ಪಟ್ಟಿದ್ದಾರೆ. "ಕಾರ್ತಿಕ್‌ ಮೊದಲು ಕೆಕೆಆರ್‌ ಪರ ಅಗ್ರ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವುದನ್ನು ಎದುರು ನೋಡಬೇಕು. ಅಂದಹಾಗೆ ಅವರು ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಾರೆ. ಆ ಸ್ಥಾನದಲ್ಲಿ ಬ್ಯಾಟ್‌ ಮಾಡಿದರೆ ಅವರಿಗೆ ಹೆಚ್ಚು ಬ್ಯಾಟ್‌ ಮಾಡುವ ಅವಕಾಶ ಪಡೆಯುವುದಿಲ್ಲಿ. ಒಂದು ವೇಳೆ 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿ, ತಂಡವನ್ನು ಮುನ್ನಡೆಸಿದರೂ ಕೂಡ ಅವರಿಗೆ ವಿಶ್ವಕಪ್‌ ತಂಡದಲ್ಲಿ ಸ್ಥಾನ ಕೇಳುವ ಅಧಿಕಾರ ಇರುವುದಿಲ್ಲ," ಎಂದು ಹೇಳಿದ್ದಾರೆ. "ಹೌದು ಅವರು ಅದ್ಭುತ ಕೀಪರ್‌. ಆದರೆ ಸದ್ಯ ಭಾರತದಲ್ಲಿ ಕೆಎಲ್‌ ರಾಹುಲ್‌ ಹೊರತಾಗಿ ರಿಷಭ್ ಪಂತ್‌ ಕೂಡಾ ಇದ್ದಾರೆ ಎಂಬುದನ್ನು ಮರೆಯಬಾರದು. ಹೀಗಿರುವಾಗ ವಿಶ್ವಕಪ್‌ ಟೂರ್ನಿಯಲ್ಲಿ ಕಾರ್ತಿಕ್‌ ಸ್ಥಾನ ಗಿಟ್ಟಿಸಲೇ ಬೇಕಾದರೆ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಬೇಕಿದೆ," ಎಂದು ಚೋಪ್ರಾ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಹೇಳಿದ್ದಾರೆ. "ನನ್ನ ಪ್ರಕಾರ ಅವರು 4ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕು. ಹೀಗಾದರೆ ಮಾತ್ರವೇ ಅವರಿಗೆ ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡುವ ಅವಕಾಶ ಲಭ್ಯವಾಗುತ್ತದೆ," ಎಂದಿದ್ದಾರೆ. ಐಪಿಎಲ್‌ 2020 ಟೂರ್ನಿಯು ಯುಎಇ ಅಂಗಣದಲ್ಲಿ ಆಯೋಜನೆ ಆಗಲಿದ್ದು, ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಬಯೋ ಸೆಕ್ಯೂರ್‌ ವಾತಾವರಣ ಇರುವ ದುಬೈ, ಅಬುದಾಭಿ ಮತ್ತು ಶರ್ಜಾ ಕ್ರೀಡಾಂಗಣಗಳಲ್ಲಿ ಸಂಪೂರ್ಣ 60 ಪಂದ್ಯಗಳನ್ನು ಬಿಸಿಸಿಐ ಆಯೋಜಿಸಲಿದೆ. 2 ಬಾರಿ ಚಾಂಪಿಯನ್ಸ್‌ ತಂಡವಾಗಿರುವ ಕೋಲ್ಕತಾ ನೈಟ್‌ ರೈಡರ್ಸ್‌ ಈಗಾಗಲೇ ದುಬೈನಲ್ಲಿದ್ದು, 3 ವಾರಗಳ ಅಭ್ಯಾಸ ಶಿಬಿರ ಆರಂಭಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3lALq12

ಐಪಿಎಲ್‌ 2020: ಮುಂಬೈ vs ಆರ್‌ಸಿಬಿ ನಡುವೆ ಉದ್ಘಾಟನಾ ಪಂದ್ಯ ಸಾಧ್ಯತೆ!

ಬೆಂಗಳೂರು: ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಆಯೋಜಿಸಲು ಬಿಸಿಸಿಐ ಸಕಲ ಸಿದ್ಧತೆ ಕೈಗೊಂಡಿದ್ದು, ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಜಗತ್ತಿನ ಐಶಾರಾಮಿ ಟಿ20 ಲೀಗ್ ನಡೆಯಲಿದೆ. ಇನ್ನು ಟೂರ್ನಿ ಸಲುವಾಗಿ ಎಲ್ಲ 8 ಫ್ರಾಂಚೈಸಿ ತಂಡಗಳು ಈಗಾಗಲೇ ದುಬೈನಲ್ಲಿ ಬೀಡುಬಿಟ್ಟು ಮೂರು ವಾರಗಳ ಅಭ್ಯಾಸ ಶಿಬಿರ ಆರಂಭಿಸಿವೆ. ಈ ನಡುವೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಅಭ್ಯಾಸಕ್ಕೆ ಕೋವಿಡ್‌-19 ಸೋಂಕು ತೊಡಕಾಗಿದ್ದು, ಇದೇ ಕಾರಣಕ್ಕೆ ಉದ್ಘಾಟನಾ ಪಂದ್ಯದಿಂದ ಸಿಎಸ್‌ಕೆ ಹೊರಗುಳಿಯುವ ಸಾಧ್ಯತೆ ಇದೆ. ಬಿಸಿಸಿಐ ಕೂಡ ತನ್ನ ವೇಳಾಪಟ್ಟಿಯಲ್ಲಿ ಬದಲಾವಣೆ ತರಲಿದೆ ಎಂದು ನಿರೀಕ್ಷಿಸಲಾಗಿದೆ. ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿರುವ ಪ್ರಕಾರ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಹಾಲಿ ಚಾಂಪಿಯನ್ಸ್‌ ಎದುರು ಸ್ಪರ್ಧಿಸುವಂತೆ ಬಿಸಿಸಿಐ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಆಯ್ಕೆ ಮಾಡಿಕೊಂಡಿದೆ. ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಸಾರಥ್ಯದ ತಂಡಗಳ ನಡುವಣ ಪಂದ್ಯ ಪ್ರಮುಖ ಆಕರ್ಷಣೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಒಟ್ಟು 13 ಸದಸ್ಯರಲ್ಲಿ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿರುವುದನ್ನು ಬಿಸಿಸಿಐ ದೃಢೀಕರಿಸಿದ್ದು, ಇದರಲ್ಲಿ ಇಬ್ಬರು ಆಟಗಾರರು ಮತ್ತು 11 ಮಂದಿ ಸಹಾಯಕ ಸಿಬ್ಬಂದಿ ಆಗಿದ್ದಾರೆ. ಸ್ಟಾರ್‌ ಬೌಲರ್‌ ದೀಪಕ್‌ ಚಹರ್ ಮತ್ತು ಋತುರಾಜ್ ಗಾಯಕ್ವಾಡ್‌ ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಎಲ್ಲಾ ಆಟಗಾರರು ಅಭ್ಯಾಸ ನಿಲ್ಲಿಸಿ 6 ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕಾಗಿದೆ. ಇನ್ನು ಗಾಯದ ಮೇಲೆ ಬರೆ ಎಂಬಂತೆ ತಂಡದ ಪರ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಆಗಿರುವ ಸುರೇಶ್‌ ರೈನಾ ವೈಯಕ್ತಿಕ ಕಾರಣಗಳಿಂದಾಗಿ ಟೂರ್ನಿಯಿಂದ ಹಠಾತ್‌ ಹಿಂದೆ ಸರಿದಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಬಿಸಿಸಿಐ ತನ್ನ ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆಯನ್ನೇ ತರುವಂತಾಗಿದೆ. ಜೊತೆಗೆ ಎಂಎಸ್‌ ಧೋನಿ ಸಾರಥ್ಯದ ಸಿಎಸ್‌ಕೆ ತಂಡದ ಪೂರ್ವ ಸಿದ್ಧತೆಗೆ ಬೇಕಿರುವ ಅಗತ್ಯದ ಸಮಯ ಒದಗಿಸುವ ಕೊಡುವ ಉದ್ಧೇಶದಿಂದ ಉದ್ಘಾಟನಾ ಪಂದ್ಯದಿಂದ 3 ಬಾರಿಯ ಚಾಂಪಿಯನ್ಸ್‌ ಹಾಗೂ ಕಳೆದ ಬಾರಿಯ ರನ್ನರ್ಸ್‌ಅಪ್ ತಂಡವನ್ನು ತೆಗೆಯಲು ಬಿಸಿಸಿಐ ಮುಂದಾಗಿದೆ. ಶೀಘ್ರದಲ್ಲೇ ಐಪಿಎಲ್‌ ವೇಳಾಪಟ್ಟಿ ಬಿಡುಗಡೆ ಎಲ್ಲಾ ಬೆಳವಣಿಗೆಯನ್ನು ಪರಿಗಣಿಸಿ ಬಿಸಿಸಿಐ ಶೀಘ್ರದಲ್ಲೇ ಐಪಿಎಲ್ 2020 ಟೂರ್ನಿಯ ನೂತನಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಅಂದಹಾಗೆ ಈ ಬಾರಿಯ ಐಪಿಎಲ್‌ ಟೂರ್ನಿಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ ಎನ್ನಲಾಗಿದೆ. ಲೀಗ್‌ ಹಂತದ 56 ಪಂದ್ಯಗಳನ್ನು 3 ವಿಭಾಗಗಳಾಗಿ ವಿಂಗಡಿ ಆಡಿಸಲು ಯೋಜನೆ ರೂಪಿಸಲಾಗಿದೆ. ಪ್ರಥಮ ಹಂತ: ಅಬುದಾಭಿ ಕ್ರೀಡಾಂಗಣ - ಒಟ್ಟು 21 ಪಂದ್ಯಗಳು ದ್ವಿತೀಯ ಹಂತ: ದುಬೈ ಕ್ರೀಡಾಂಗಣ - 21 ಪಂದ್ಯಗಳು ತೃತೀಯ ಹಂತ: ಶಾರ್ಜಾ ಕ್ರೀಡಾಂಗಣ - 14 ಪಂದ್ಯಗಳು ಲೀಗ್‌ ಹಂತದ ಪಂದ್ಯಗಳ ಮುಕ್ತಾಯದ ಬಳಿಕ ಎಲ್ಲಾ ಫ್ರಾಂಚೈಸಿ ತಂಡಗಳು ದುಬೈಗೆ ಹಿಂದಿರುಗಲಿದ್ದು, ಫ್ಲೇ-ಆಫ್ಸ್‌ ಪಂದ್ಯಗಳು ನಡೆಯಲಿವೆ. ಆದರೆ ಈ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2EF7UNy

ಐಪಿಎಲ್‌ 2020: ಆರ್‌ಸಿಬಿ ಪಾಳಯದಲ್ಲಿ ಅಭ್ಯಾಸ ಶುರು ಮಾಡಿದ ಮಿಸ್ಟರ್‌ 360 ಡಿಗ್ರಿ!

ಹೊಸದಿಲ್ಲಿ: ಆರು ದಿನಗಳ ಕ್ವಾರಂಟೈನ್‌ ಮುಗಿದ ಬಳಿಕ ತಂಡ ತರಬೇತಿ ಆರಂಭಿಸಿದೆ. ಶನಿವಾರ ನಾಯಕ ನೆಟ್ಸ್‌ಮನ್‌ ಅಭ್ಯಾಸ ನಡೆಸಿದ್ದರು. ನಂತರ ಸ್ಟಾರ್‌ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್ ಹಾಗೂ ಗುರುಕೀರತ್‌ ಮನ್‌ ಅವರು ನೆಟ್ಸ್‌ನಲ್ಲಿ ಬೌಲರ್‌ಗಳನ್ನು ಎದುರಿಸಿದರು. ವೇಗಿಗಳಾದ ಉಮೇಶ್‌ ಯಾದವ್ ಹಾಗೂ ಕ್ರಿಸ್‌ ಮೋರಿಸ್‌ ಅವರು ಬೌಲಿಂಗ್‌ ಅಭ್ಯಾಸ ನಡೆಸಿದರು ಮತ್ತು ವಿಕೆಟ್‌ ಕೀಪರ್‌ಗಳಾದ ಎಬಿ ಡಿವಿಲಿಯರ್ಸ್ ಹಾಗೂ ಪಾರ್ಥಿವ್‌ ಪಟೇಲ್ ಕೀಪಿಂಗ್ ಅಭ್ಯಾಸ ನಡೆಸಿದರು. ಲಾಕ್‌ಡೌನ್‌ನಿಂದ ರೋಸಿ ಹೋಗಿರುವ ಹಲವು ಆಟಗಾರರಿಗೆ ಕ್ರಿಕೆಟ್‌ ಆಡುವ ಹಸಿವು ಹೆಚ್ಚಾಗಿದೆ. ದುಬೈನಲ್ಲಿ ಎರಡನೇ ದಿನ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಆರ್‌ಸಿಬಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದೆ. ಐಸಿಸಿ ಅಕಾಡೆಮಿಯ ನೆಟ್ಸ್‌ನಲ್ಲಿ ತರಬೇತಿಯ ಬಳಿಕ ಮಾತನಾಡಿದ ," ಅಭ್ಯಾಸ ತುಂಬಾ ಚೆನ್ನಾಗಿತ್ತು, ಆಡಿದ ಆಟ ಖುಷಿ ನೀಡಿದೆ. ರಾತ್ರಿ ಆಗಿದ್ದರಿಂದ ಚೆಂಡು ತೀಕ್ಷ್ಣತೆ ಸ್ವಲ್ಪ ಕಡಿಮೆ ಇತ್ತು. ತುಂಬಾ ದಿನಗಳ ಬಳಿಕ ನನ್ನ ಹಾದಿಯಲ್ಲಿ ಅಭ್ಯಾಸ ಮಾಡಿದ್ದೇನೆ," ಎಂದು ಹೇಳಿದರು. ವೇಗಿಗಳಾದ ಉಮೇಶ್‌ ಯಾದವ್‌ ಹಗೂ ದಕ್ಷಿಣ ಆಫ್ರಿಕಾದ ಕ್ರಿಸ್‌ ಮೋರಿಸ್‌ ಅವರ ಬೌಲಿಂಗ್‌ ಎದುರಿಸಿದ ಎಬಿಡಿ, ನಂತರ ಬಾಲ್‌ ಥ್ರೋನಲ್ಲಿ ಹೆಚ್ಚು ಹೊತ್ತು ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಮತ್ತೊಬ್ಬ ಬ್ಯಾಟ್ಸ್‌ಮನ್‌ ಗುರುಕೀರತ್‌ ಮನ್‌ ಅವರು ಸ್ಪಿನ್ನರ್‌ ಪವನ್‌ ನೇಗಿ ಅವರನ್ನು ಎದುರಿಸಿದರು ಹಾಗೂ ಕೋಚ್‌ ಸಿಮೋನ್‌ ಕ್ಯಾಟಿಚ್‌ ಅವರ ಕೂಡ ಅಭ್ಯಾಸಕ್ಕೆ ನೆರವು ನೀಡಿದರು. ಇನ್ನೂ ಕೆಲ ಆರ್‌ಸಿಬಿ ಆಟಗಾರರು ಫೀಲ್ಡಿಂಗ್‌ ಹಾಗೂ ಕ್ಯಾಚ್‌ ಅಭ್ಯಾಸವನ್ನು ನಡೆಸುತ್ತಿದ್ದರು. ಈ ವೇಳೆ ವಿಕೆಟ್‌ ಕೀಪರ್‌ಗಳು ಅಭ್ಯಾಸ ನಡೆಸುತ್ತಿದ್ದರು. " ಒಂದೇ ಸಂಖ್ಯೆಯ ಬಾಲ್‌ಗಳಿಂದ ಬ್ಯಾಟಿಂಗ್‌ ಹಾಗೂ ವಿಕೆಟ್‌ ಕೀಪಿಂಗ್‌ ಅಭ್ಯಾಸ ಮಾಡಲಾಯಿತು," ಎಂದು ವಿಕೆಟ್‌ ಕೀಪರ್ ಹಾಗೂ ಬ್ಯಾಟ್ಸ್‌ಮನ್‌ ಪಾರ್ಥಿವ್ ಪಟೇಲ್‌ ತಿಳಿಸಿದರು. ಈ ನಡುವೆ ತರಬೇತಿ ಸಮಯದಲ್ಲಿ ಆಟಗಾರರು ಗಾಯಕ್ಕೆ ತುತ್ತಾಗಬಾರದೆಂದು ತರಬೇತುದಾರರು ಹೆಚ್ಚು ಕೆಲಸ ನೀಡಲಿಲ್ಲ. "ತರಬೇತಿ ಸಮಯದಲ್ಲಿ ಮೂರು ಅಂಶಗಳು ನಾವು ತಲೆಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಒಂದು ದೀರ್ಘಾವಧಿಯ ಬಳಿಕ ಆಟಗಾರರು ಅಂಗಳಕ್ಕೆ ಕಾಲಿಟ್ಟಿದ್ದಾರೆ. ಜಂಪ್ ಸೇರಿದಂತೆ ಇನ್ನಿತರ ಕೌಶಲ್ಯಗಳ ಬಗ್ಗೆ ಆಟಗಾರರ ಮೇಲೆ ಮುತುವರ್ಜಿ ವಹಿಸಬೇಕಾಗುತ್ತದೆ," ಎಂದು ಆರ್‌ಸಿಬಿ ಟ್ರೈನರ್‌ ಶಂಕರ್‌ ಬಸು ತಿಳಿಸಿದ್ದಾರೆ. "ಆರಂಭದಲ್ಲಿ ಅವರನ್ನು ಹಿಂದಕ್ಕೆ ಎಳೆಯುವುದು ನಮ್ಮ ಕೆಲಸ. ಎಡನೇದಾಗಿ, ಇಲ್ಲಿ ದಬ್ಬಾಳಿಕೆಯ ಪ್ರವೃತ್ತಿ ಎದುರಾಗುತ್ತದೆ. ಮೂರನೆಯದಾಗಿ, ಜಿಮ್‌ನಲ್ಲಿ ಆಟಗಾರರು ಸಾಕಷ್ಟು ಸಮಯ ಕಳೆದಿರುತ್ತಾರೆ. ಆದರೆ, ನಾವು ಜಿಮ್‌ನಲ್ಲಿ ಸರಿಯಾದ ಸಮತೋಲನವನ್ನು ಸಾಧಿಸಬೇಕು. ಇಂದಿನಿಂದ (ಜಿಮ್ ತಾಲೀಮುಗಳು) ಕೌಶಲ್ಯದ ಭಾಗಕ್ಕೆ ನೆರವಾಗಬೇಕೇ ಹೊರತು ಬೇರೆ ರೀತಿಯಲ್ಲಿ ಅಲ್ಲ," ಎಂದು ಬಸು ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2QD9GB8

​ಸುರೇಶ್‌ ರೈನಾ ಸ್ಥಾನಕ್ಕೆ ಬದಲಿ ಆಟಗಾರನನ್ನು ಗುರುತಿಸಿದ ಚೆನ್ನೈ ಫ್ರಾಂಚೈಸಿ ಮಾಲೀಕ.!

ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾಗಲು ಇನ್ನೂ 20ಕ್ಕೂ ಕಡಿಮೆ ದಿನಗಳು ಮಾತ್ರ ಬಾಕಿ ಇವೆ. ಇದರ ನಡುವೆ ಇತ್ತೀಚೆಗೆ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಅವರು ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹೊರ ನಡೆದಿದ್ದರು. ಈ ಕುರಿತು ಫ್ರಾಂಚೈಸಿಯು ಆಗಸ್ಟ್‌ 30 ರಂದು ಸ್ಪಷ್ಟಪಡಿಸಿತ್ತು. ಹಿರಿಯ ಎಡಗೈ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ, ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆ ಮೂಲಕ 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಡುವುದಾಗಿ ಹೇಳಿದ್ದರು. ಅದರಂತೆ ಎಂಎಸ್ ಧೋನಿ, ಅಂಬಾಟಿ ರಾಯುಡು, ಮುರಳಿ ವಿಜಯ್, ದೀಪಕ್‌ ಚಹರ್‌, ಶಾರ್ದೂಲ್‌ ಠಾಕೂರ್‌ ಹಾಗೂ ಬೌಲಿಂಗ್‌ ಸಲಹೆಗಾರ ಲಕ್ಷ್ಮಿಪತಿ ಬಾಲಾಜಿ ಅವರೊಂದಿಗೆ ಚೆನ್ನೈನಲ್ಲಿ ನಡೆದಿದ್ದ ಐದು ದಿನಗಳ ಶಿಬಿರದಲ್ಲೂ ಅವರು ಭಾಗವಹಿಸಿದ್ದರು. ಇದೀಗ ಸುರೇಶ್‌ ರೈನಾ ಅಲಭ್ಯತೆಯೊಂದಿಗೆ ಮೂರು ಬಾರಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. 164 ಐಪಿಎಲ್‌ ಪಂದ್ಯಗಳಲ್ಲಿ ರೈನಾ 4527ರನ್‌ಗಳನ್ನು ಗಳಿಸಿರುವ ರೈನಾ, ಐಪಿಎಲ್‌ ಇತಿಹಾಸದಲ್ಲಿ ವಿರಾಟ್‌ ಕೊಹ್ಲಿ(5412 ರನ್‌ಗಳು) ಬಳಿಕ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಸುರೇಶ್‌ ರೈನಾ ಸ್ಥಾನಕ್ಕೆ ಯಾರನ್ನೂ ಆಡಿಸುವುದು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ ತಂಡದ ಮಾಲೀಕ ಎನ್‌.ಶ್ರೀನಿವಾಸನ್‌ ಅವರು ರೈನಾ ಸ್ಥಾನಕ್ಕೆ ಯುವ ಆಟಗಾರನನ್ನು ಸೂಚಿಸಿದ್ದಾರೆ. ಔಟ್‌ಲೆಟ್‌ನೊಂದಿಗೆ ಮಾತನಾಡಿದ ಶ್ರೀನಿವಾಸನ್‌, ಸುರೇಶ್‌ ರೈನಾ ಅವರ ನಿರ್ಗಮನದಿಂದ ಋತುರಾಜ್ ಗಾಯಕ್ವಾಡ್‌ ಪಾಲಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ ಎಂದು ಹೇಳಿದ ಅವರು, ಈ ಆವೃತ್ತಿಯಲ್ಲಿ ಯುವ ಆಟಗಾರ ಸ್ಟಾರ್‌ ಬ್ಯಾಟ್ಸ್‌ಮನ್‌ ಆಗಿ ಹೊರ ಹೊಮ್ಮಲ್ಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. " ಅದ್ಭುತ ಬ್ಯಾಟ್ಸ್‌ಮನ್‌ ಆಗಿದ್ದು, ಅವರು ಅವಕಾಶ ಪಡೆದುಕೊಳ್ಳಲಿದ್ದಾರೆ. ಈ ಆವೃತ್ತಿಯಿಂದಲೇ ಅವರು ಸ್ಟಾರ್‌ ಆಗಬಹುದು ಯಾರು ಗೊತ್ತು?" ಎಂದು ಶ್ರೀನಿವಾಸನ್‌ ಹೇಳಿದರು. ಋತುರಾಜ್‌ ಗಾಯಕ್ವಾಡ್‌ ಸೇರಿದಂತೆ ಇಬ್ಬರು ಆಟಗಾರರಿಗೆ ಚೆನ್ನೈ ಸೂಪರ್‌ ಕಿಂಗ್ಸ್ ತಂಡದಲ್ಲಿ ಕೋವಿಡ್‌-19 ಪಾಸಿಟಿವ್ ಬಂದಿದೆ. ಕಳೆದ ಬಾರಿ ತಂಡಕ್ಕೆ ಆಯ್ಕೆಯಾಗಿದ್ದ ಗಾಯಕ್ವಾಡ್ ಅವಕಾಶ ಸಿಕ್ಕಿರಲಿಲ್ಲ, ಆದರೆ ಈ ಬಾರಿ ಐಪಿಎಲ್‌ ಚೊಚ್ಚಲ ಪಂದ್ಯವಾಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದ ಅವರು ಭಾರತ (ಎ) ತಂಡದಲ್ಲಿ ನಿಯಮಿತವಾಗಿ ಸ್ಥಾನ ಪಡೆಯುತ್ತಿದ್ದರು. 2018/19ರ ಆವೃತ್ತಿಯಲ್ಲಿ ಗಾಯಕ್ವಾಡ್‌ ಅವರು ವಿಜಯ್‌ ಹಜಾರೆ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡದ ಪರ ವೈಯಕ್ತಿಕ ಗರಿಷ್ಠ ರನ್‌(365)ಗಳನ್ನು ದಾಖಲಿಸಿದ್ದರು. ಅಲ್ಲದೆ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ 419 ರನ್‌ಗಳನ್ನು ದಾಖಲಿಸಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31GRHjB

ಐಪಿಎಲ್‌ 2020 ತೊರೆಯಲು ನೈಜ ಕಾರಣ ಬಹಿರಂಗ ಪಡಿಸಿದ ರೈನಾ!

ಹೊಸದಿಲ್ಲಿ: ಕಳೆದ ಎರಡು ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಸುರೇಶ್‌ ರೈನಾ ಹೊರನಡೆದಿದ್ದೇಕೆ ಎಂಬ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಆದರೆ, ಎಲ್ಲಾ ಊಹಾ ಪೋಹಗಳಿಗೆ ಉತ್ತರವನ್ನು ಸುರೇಶ್‌ ರೈನಾ ಅವರೇ ಬಹಿರಂಗ ಪಡಿಸಬೇಕಿದ್ದು, ಸದ್ಯಕ್ಕಂತೂ ಮೌನಕ್ಕೆ ಶರಣಾಗಿದ್ದಾರೆ.ಈ ನಡುವೆ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸ್ ತಂಡದ ಒಡೆತನ ಹೊಂದಿರುವ ಇಂಡಿಯಾ ಸಿಮೆಂಟ್ಸ್‌ನ ಮುಖ್ಯಸ್ಥ ಎನ್‌ ಶ್ರೀನಿವಾಸನ್‌ ಮಾತನಾಡಿದ್ದು, ಐಪಿಎಲ್‌ 2020 ಟೂರ್ನಿಯಿಂದ ಸುರೇಶ್‌ ರೈನಾ ಹಿಂದೆ ಸರಿಯುವ ನಿರ್ಧಾರ ಮಾಡಿರುವುದಕ್ಕೆ ಬಹಳ ಪಶ್ಚಾತಾಪ ಪಡಲಿದ್ದಾರೆ ಎಂದು ಹೇಳಿದ್ದಾರೆ.ಈ ಮಧ್ಯೆ 'ದೈನಿಕ್‌ ಜಾಗರಣ್' ಪತ್ರಿಕೆಯು ವರದಿಯೊಂದನ್ನು ಮಾಡಿದ್ದು, ಐಪಿಎಲ್‌ 2020 ಟೂರ್ನಿಯಿಂದ ಹೊರಬರಲು ಇದ್ದ ನೈಜ ಕಾರಣ ಏನೆಂಬುದನ್ನು ಖುದ್ದಾಗಿ ಸುರೇಶ್‌ ರೈನಾ ಹೇಳಿಕೊಂಡಿದ್ದಾರೆ ಎಂದಿದೆ. ಕೋವಿಡ್‌-19 ಸೋಂಕಿನ ಕಾರಣ ಸೃಷ್ಟಿಯಾಗಿದ್ದ ಗೊಂದಲದ ವಾತಾವರಣವೇ ಟೂರ್ನಿಯಿಂದ ಹೊರಬರಲು ಮುಖ್ಯ ಕಾರಣ ಎಂದು ರೈನಾ ಹೇಳಿರುವುದಾಗಿ ದೈನಿಕ್‌ ಜಾಗರಣ್‌ ವರದಿ ಮಾಡಿದೆ.ಐಪಿಎಲ್ 2020ಗೆ ಹೊಸ ಜರ್ಸಿ ಅನಾವರಣ ಪಡಿಸಿದ ಮುಂಬೈ ಇಂಡಿಯನ್ಸ್‌!ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಜೊತೆಗೆ ಕಳೆದ ವಾರ ದುಬೈಗೆ ತೆರಳಿದ್ದ ಸುರೇಶ್‌ ರೈನಾ, ತಮಗೆ ಮತ್ತು ತಮ್ಮ ಕುಟುಂಬವರ ಸುರಕ್ಷತೆಗೆ ಸುಸಜ್ಜಿತ ಕೊಠಡಿ ವ್ಯವಸ್ಥೆ ಕಲ್ಪಿಸುವಂತೆ ಕೇಳಿದ್ದರು. ಇದಕ್ಕೆ ಹೋಟೆಲ್‌ನಲ್ಲಿ ಅವಕಾಶ ಲಭ್ಯವಾಗದೇ ಹೋದ ಕಾರಣ ಟೀಮ್‌ ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನಗೊಂಡು ಐಪಿಎಲ್‌ ಟೂರ್ನಿಯಿಂದಲೇ ಹೊರ ನಡೆಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. "ನನಗೆ ನನ್ನ ಕುಟುಂಬ ಮತ್ತು ಮಕ್ಕಳೇ ಮುಖ್ಯ. ಅವರಿಗಾಗಿ ಏನನ್ನು ಬೇಕಾದರೂ ಬಿಡಲು ನಾನು ಸಿದ್ಧನಿದ್ದೇನೆ. ಐಪಿಎಲ್‌ ಮಾತ್ರವೇ ಅಲ್ಲ," ಎಂದು ರೈನಾ ಹೇಳಿರುವುದಾಗಿ ದೈನಿಕ್‌ ಜಾಗರಣ್ ವರದಿಯಾಗಿದೆ.

ಇನ್ನೇನು ಐಪಿಎಲ್‌ 2020 ಟೂರ್ನಿ ಶುರುವಾಯ್ತು ಎನ್ನುವಷ್ಟರಲ್ಲೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಒಂದರ ಮೇಲೆ ಒಂದು ಸಮಸ್ಯೆಗಳು ಎದುರಾಗುತ್ತಲೇ ಇದ್ದು, ಸ್ಟಾರ್‌ ಆಟಗಾರ ಸುರೇಶ್‌ ರೈನಾ ಅವರ ಸೇವೆಯನ್ನು ಕಳೆದುಕೊಂಡಿದೆ.


ಐಪಿಎಲ್‌ 2020 ತೊರೆಯಲು ನೈಜ ಕಾರಣ ಬಹಿರಂಗ ಪಡಿಸಿದ ರೈನಾ!

ಹೊಸದಿಲ್ಲಿ

: ಕಳೆದ ಎರಡು ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಸುರೇಶ್‌ ರೈನಾ ಹೊರನಡೆದಿದ್ದೇಕೆ ಎಂಬ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಆದರೆ, ಎಲ್ಲಾ ಊಹಾ ಪೋಹಗಳಿಗೆ ಉತ್ತರವನ್ನು ಸುರೇಶ್‌ ರೈನಾ ಅವರೇ ಬಹಿರಂಗ ಪಡಿಸಬೇಕಿದ್ದು, ಸದ್ಯಕ್ಕಂತೂ ಮೌನಕ್ಕೆ ಶರಣಾಗಿದ್ದಾರೆ.

ಈ ನಡುವೆ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸ್ ತಂಡದ ಒಡೆತನ ಹೊಂದಿರುವ ಇಂಡಿಯಾ ಸಿಮೆಂಟ್ಸ್‌ನ ಮುಖ್ಯಸ್ಥ ಎನ್‌ ಶ್ರೀನಿವಾಸನ್‌ ಮಾತನಾಡಿದ್ದು, ಐಪಿಎಲ್‌ 2020 ಟೂರ್ನಿಯಿಂದ ಸುರೇಶ್‌ ರೈನಾ ಹಿಂದೆ ಸರಿಯುವ ನಿರ್ಧಾರ ಮಾಡಿರುವುದಕ್ಕೆ ಬಹಳ ಪಶ್ಚಾತಾಪ ಪಡಲಿದ್ದಾರೆ ಎಂದು ಹೇಳಿದ್ದಾರೆ.

ಈ ಮಧ್ಯೆ 'ದೈನಿಕ್‌ ಜಾಗರಣ್' ಪತ್ರಿಕೆಯು ವರದಿಯೊಂದನ್ನು ಮಾಡಿದ್ದು, ಐಪಿಎಲ್‌ 2020 ಟೂರ್ನಿಯಿಂದ ಹೊರಬರಲು ಇದ್ದ ನೈಜ ಕಾರಣ ಏನೆಂಬುದನ್ನು ಖುದ್ದಾಗಿ ಸುರೇಶ್‌ ರೈನಾ ಹೇಳಿಕೊಂಡಿದ್ದಾರೆ ಎಂದಿದೆ. ಕೋವಿಡ್‌-19 ಸೋಂಕಿನ ಕಾರಣ ಸೃಷ್ಟಿಯಾಗಿದ್ದ ಗೊಂದಲದ ವಾತಾವರಣವೇ ಟೂರ್ನಿಯಿಂದ ಹೊರಬರಲು ಮುಖ್ಯ ಕಾರಣ ಎಂದು ರೈನಾ ಹೇಳಿರುವುದಾಗಿ ದೈನಿಕ್‌ ಜಾಗರಣ್‌ ವರದಿ ಮಾಡಿದೆ.

ಐಪಿಎಲ್ 2020ಗೆ ಹೊಸ ಜರ್ಸಿ ಅನಾವರಣ ಪಡಿಸಿದ ಮುಂಬೈ ಇಂಡಿಯನ್ಸ್‌!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಜೊತೆಗೆ ಕಳೆದ ವಾರ ದುಬೈಗೆ ತೆರಳಿದ್ದ ಸುರೇಶ್‌ ರೈನಾ, ತಮಗೆ ಮತ್ತು ತಮ್ಮ ಕುಟುಂಬವರ ಸುರಕ್ಷತೆಗೆ ಸುಸಜ್ಜಿತ ಕೊಠಡಿ ವ್ಯವಸ್ಥೆ ಕಲ್ಪಿಸುವಂತೆ ಕೇಳಿದ್ದರು. ಇದಕ್ಕೆ ಹೋಟೆಲ್‌ನಲ್ಲಿ ಅವಕಾಶ ಲಭ್ಯವಾಗದೇ ಹೋದ ಕಾರಣ ಟೀಮ್‌ ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನಗೊಂಡು ಐಪಿಎಲ್‌ ಟೂರ್ನಿಯಿಂದಲೇ ಹೊರ ನಡೆಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. "ನನಗೆ ನನ್ನ ಕುಟುಂಬ ಮತ್ತು ಮಕ್ಕಳೇ ಮುಖ್ಯ. ಅವರಿಗಾಗಿ ಏನನ್ನು ಬೇಕಾದರೂ ಬಿಡಲು ನಾನು ಸಿದ್ಧನಿದ್ದೇನೆ. ಐಪಿಎಲ್‌ ಮಾತ್ರವೇ ಅಲ್ಲ," ಎಂದು ರೈನಾ ಹೇಳಿರುವುದಾಗಿ ದೈನಿಕ್‌ ಜಾಗರಣ್ ವರದಿಯಾಗಿದೆ.



​ರೈನಾಗೆ ಯಶಸ್ಸು ತಲೆಗೆ ಹತ್ತಿದೆ!
​ರೈನಾಗೆ ಯಶಸ್ಸು ತಲೆಗೆ ಹತ್ತಿದೆ!

ರೈನಾ ನಿರ್ಗಮದ ಬಗ್ಗೆ ಮಾತನಾಡಿದ್ದ ಬಿಸಿಸಿಐನ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್, "ನಿಮಗೆ ವ್ಯವಸ್ಥೆಗಳ ಮೇಲೆ ಅಸಮಾಧಾನ ಇದ್ದರೆ ದಯವಿಟ್ಟು ವಾಪಸ್‌ ಹೋಗಿ. ಯಾರೊಬ್ಬರನ್ನೂ ಬಲವಂತವಾಗಿ ಇರಿಸಿಕೊಳ್ಳಲು ನಮಗೆ ಇಷ್ಟವಿಲ್ಲ ಎಂದೇ ಹೇಳಿದ್ದೆ. ಆದರೆ. ಕೆಲವೊಮ್ಮೆ ಯಶಸ್ಸು ಎಂಬುದು ತಲೆಗೆ ಹತ್ತಿರುತ್ತದೆ," ಎಂದು ಔಟ್‌ಲುಕ್‌ಗೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಶ್ರೀನಿವಾಸನ್‌ ಹೇಳಿಕೊಂಡಿದ್ದಾರೆ.

ಇನ್ನು ವರದಿಗಳು ಹೇಳಿರುವಂತೆ ಸುರೇಶ್‌ ರೈನಾ ದುಬೈನಲ್ಲಿ ಉಳಿದುಕೊಂಡಿದ್ದ ಕೊಠಡಿಯಲ್ಲಿ ಬಾಲ್ಕನಿ ವ್ಯವಸ್ಥೆ ಇರಲಿಲ್ಲ. ಕ್ಯಾಪ್ಟನ್‌ ಎಂಎಸ್‌ ಧೋನಿಗೆ ಒದಗಿಸಿರುವಂತೆ ಬಾಲ್ಕನಿ ಇರುವ ಕೊಠಡಿಯನ್ನು ತಮಗೂ ನೀಡುವಂತೆ ಕೇಳಿದ್ದರು ಎನ್ನಲಾಗಿದೆ. "ಕ್ರಿಕೆಟಿಗರು ಒಂದು ರೀತಿ ಹಳೇ ಕಾಲದ ಸಿಡುಕು ಸ್ವಭಾವದ ನಟ ನಟಿಯರಿದ್ದಹಾಗೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸದಾ ಒಂದು ಕುಟುಂಬದಂತೆ ಇದೆ. ತಂಡದ ಎಲ್ಲಾ ಹಿರಿಯ ಆಟಗಾರರು ಪರಸ್ಪರ ಹೊಂದಾಣಿಕೆಯಿಂದ ಮುನ್ನಡೆಯುತ್ತಿದ್ದಾರೆ," ಎಂದು ಶ್ರೀನಿವಾಸನ್ ತಿಳಿಸಿದ್ದಾರೆ.

'ಕ್ರಿಕೆಟಿಗನಾಗಿ ಬೆಳೆಯಲು ಇವರ ಸಹಾಯ ಸ್ಮರಣೀಯ' : ಆಸೀಸ್ ದಿಗ್ಗಜನನ್ನು ಶ್ಲಾಘಿಸಿದ ಅಯ್ಯರ್‌!



​ರೈನಾ ನಿರ್ಗಮನಕ್ಕೆ ಧೋನಿ ತಲೆ ಕೆಡಿಸಿಕೊಂಡಿಲ್ಲ
​ರೈನಾ ನಿರ್ಗಮನಕ್ಕೆ ಧೋನಿ ತಲೆ ಕೆಡಿಸಿಕೊಂಡಿಲ್ಲ

ಇನ್ನು ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಹಠಾತ್‌ ನಿರ್ಧಾರ ತೆಗೆದುಕೊಂಡು ಟೂರ್ನಿಯಿಂದ ಹಿಂದೆ ಸರಿದಿರುವುದಕ್ಕೆ ಕ್ಯಾಪ್ಟನ್ ಎಂಎಸ್‌ ಧೋನಿ ಯಾವುದೇ ರೀತಿಯಲ್ಲೂ ತಲೆ ಕೆಡಿಸಿಕೊಂಡಿಲ್ಲ ಎಂದು ಶ್ರೀನಿವಾಸನ್‌ ಹೇಳಿದ್ದಾರೆ.

"ಎಂಎಸ್‌ ಧೋನಿ ಜೊತೆಗೆ ನಾನು ಚರ್ಚಿಸಿದ್ದೇನೆ. ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಕೂಡ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ಝೂಮ್‌ ಕಾಲ್‌ ಮೂಲಕ ಆಟಗಾರರ ಜೊತೆಗೆ ಮಾತೂಕತೆ ನಡೆಸಿ ಸುರಕ್ಷಿತವಾಗಿ ಇರುವಂತೆ ಹೇಳಿದ್ದಾರೆ. ಏಕೆಂದರೆ ಯಾರಲ್ಲಿ ಕೊರೊನಾ ವೈರಸ್‌ ಇದೆ ಎಂಬುದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಈ ಬಾರಿಯ ಟೂರ್ನಿ ಇನ್ನೂ ಶುರುವಾಗಿಲ್ಲ. ರೈನಾಗೆ ಅವರು ಕಳೆದುಕೊಳ್ಳಲಿರುವ ಹಣದ ಮೌಲ್ಯ (11 ಕೋಟಿ ರೂ.) ಅರಿವಿಗೆ ಬಂದು ಮರಳಿ ಆಡಲು ಬರುವ ಸಾಧ್ಯತೆ ಇದೆ," ಎಂದು ಶ್ರೀನಿವಾಸನ್‌ ವಿವರಿಸಿದ್ದಾರೆ.

ಶುಕ್ರವಾರವಷ್ಟೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸ್ಟಾರ್‌ ವೇಗದ ಬೌಲರ್‌ ದೀಪಕ್‌ ಚಹರ್‌ ಸೇರಿದಂತೆ ಕೆಲ ಆಟಗಾರರಲ್ಲಿ ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿತ್ತು. ಇದೇ ಕಾರಣಕ್ಕೆ ತಂಡದ ಅಭ್ಯಾಸ ಶಿಬಿರವನ್ನು ನಿಲ್ಲಿಸಿ 6 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಧೋನಿಯಲ್ಲಿ ಪಂದ್ಯ ಗೆದ್ದುಕೊಡುವ ಸಾಮರ್ಥ್ಯ ಕ್ಷೀಣಿಸಿತ್ತು ಎಂದ ಮಾಜಿ ವೇಗಿ!



​ಚಿಕ್ಕಪ್ಪನ ಸಾವು ನೆಪಮಾತ್ರ!
​ಚಿಕ್ಕಪ್ಪನ ಸಾವು ನೆಪಮಾತ್ರ!

'ಮಿಸ್ಟರ್‌ ಐಪಿಎಲ್‌' ಎಂದೇ ಖ್ಯಾತಿ ಪಡೆದಿರುವ 33 ವರ್ಷ ಎಡಗೈ ಬ್ಯಾಟ್ಸ್‌ಮನ್ ಸುರೇಶ್‌ ರೈನಾ ಐಪಿಎಲ್‌ ಟೂರ್ನಿಯಿಂದ ಹಿಂದೆ ಸರಿಯಲು ಅವರ ಚಿಕ್ಕಪ್ಪನ ಕೊಲೆ ವಿಚಾರ ಮುಖ್ಯ ಕಾರಣ ಎನ್ನಲಾಗಿತ್ತು. ಆದರೆ ವಾಸ್ತವದಲ್ಲಿ ಇದೊಂದು ನೆಪ ಮಾತ್ರ ಎನ್ನಲಾಗುತ್ತಿದೆ. ಏಕೆಂದರೆ, ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಅವರ ಚಿಕ್ಕಪ್ಪನ ಮನೆಗೆ ದರೋಡೆ ಕೋರರು ನುಗ್ಗಿ ಹಲ್ಲೆ ನಡೆಸಿದ್ದ ಘಟನೆ ನಡೆದಿರುವುದು ಆಗಸ್ಟ್‌ 19ರಂದು ಆಗ ರೈನಾ ಇನ್ನೂ ಭಾರತದಲ್ಲೇ ಇದ್ದರು.

ಬಳಿಕ ಆಗಸ್ಟ್‌ 21ರಂದು ಸಿಎಸ್‌ಕೆ ತಂಡದೊಂದಿಗೆ ದುಬೈಗೆ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ತಮ್ಮ ಚಿಕ್ಕಪ್ಪನ ಸಾವಿನ ಕುರಿತಾಗಿ ತಮಗೆ ಬಂದಿದ್ದ ಎಸ್‌ಎಮ್‌ಎಸ್‌ ತಡವಾಗಿ ಗಮನಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ವಾಸ್ತವದಲ್ಲಿ ಅವರು ತಮ್ಮ ನಿರ್ಗಮನಕ್ಕೆ ಅಸಲಿ ಕಾರಣ ಏನೆಂಬುದನ್ನು ಯಾವುದೇ ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿಲ್ಲ. ಅಂದಹಾಗೆ ಐಪಿಎಲ್‌ ಇತಿಹಾಸದಲ್ಲಿ 2ನೇ ಅತ್ಯಧಿಕ ರನ್‌ ಸ್ಕೋರರ್‌ ಆಗಿರುವ ರೈನಾ ಟೂರ್ನಿಯಿಂದ ಹಿಂದೆ ಸರಿದಿರುವುದು ಸಿಎಸ್‌ಕೆಗೆ ಭಾರಿ ಹಿನ್ನಡೆಯನ್ನೇ ತಂದೊಡ್ಡಿದೆ.

'ಕಣ್ಣೀರಿನಲ್ಲಿದೆ ಸುರೇಶ್‌ ರೈನಾ ಕುಂಟುಂಬ' : ಎಡಗೈ ಬ್ಯಾಟ್ಸ್‌ಮನ್‌ ಐಪಿಎಲ್‌ ತೊರೆದ ಕಾರಣ ಶಾಕಿಂಗ್‌.!



​ಉದ್ಘಾಟನಾ ಪಂದ್ಯದಿಂದ ಸಿಎಸ್‌ಕೆ ಹಿಂದೆ ಸರಿಯುವ ಸಾಧ್ಯತೆ
​ಉದ್ಘಾಟನಾ ಪಂದ್ಯದಿಂದ ಸಿಎಸ್‌ಕೆ ಹಿಂದೆ ಸರಿಯುವ ಸಾಧ್ಯತೆ

ಐಪಿಎಲ್‌ 2020 ಟೂರ್ನಿ ಈ ಬಾರಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಅಂಗಣದಲ್ಲಿ ಆಯೋಜನೆಯಾಗಲಿದ್ದು, ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಬಯೋ ಸೆಕ್ಯೂರ್‌ ವಾತಾವರಣ ಇರುವ ದುಬೈ, ಶರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಟೂರ್ನಿ ಸಲುವಾಗಿ ಈಗಾಗಗಲೇ ಎಲ್ಲಾ 8 ತಂಡಗಳು ದುಬೈನಲ್ಲಿ ಬೀಡು ಬಿಟ್ಟಿದ್ದು, 3 ವಾರಗಳ ಅಭ್ಯಾಸ ಶಿಬಿರ ಆರಂಭಿಸಿವೆ.

ಆದರೆ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಟಗಾರರಲ್ಲಿ ಕೋವಿಡ್‌-19 ಸೋಂಕು ಕಾಣಿಸಿಕೊಂಡಿರುವುದು ಇದೀಗ ಕಳವಳಕ್ಕೆ ಕಾರಣವಾಗಿದೆ. ಆಟಗಾರರಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಸಿಎಸ್‌ಕೆ ಮರಳಿ 6 ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕಿದೆ. ಹೀಗಾಗಿ ಸೆಪ್ಟೆಂಬರ್‌ 19ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್‌ ವಿರುದ್ದದ ಐಪಿಎಲ್‌ 2020 ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಸೂಪರ್‌ ಕಿಂಗ್ಸ್‌ ಅಲಭ್ಯವಾಗುವ ಸಾಧ್ಯತೆ ಇದೆ.

"ಐಪಿಎಲ್‌ 2020 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಸ್ಪರ್ಧಿಸುವ ಸ್ಥಿತಿಯಲ್ಲಿಲ್ಲ. ಈ ಹಿನ್ನಡೆಯಿಂದ ಪುಟಿದೇಳಲು ಸಿಎಸ್‌ಕೆಗೆ ಹೆಚ್ಚು ಸಮಯ ಸಿಗುವಂತೆ ಅವಕಾಶ ಮಾಡಿಕೊಡಲಿದ್ದೇವೆ. ಟೂರ್ನಿಗೆ ಕಂಟಕವಾಗಿ ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದೇ ಕಾರಣಕ್ಕೆ ಟೂರ್ನಿಯ ವೇಳಾಪಟ್ಟಿ ಬಿಡುಗಡೆಯನ್ನು ತಡ ಮಾಡಲಾಗಿದೆ," ಎಂದು ಟೈಮ್ಸ್‌ ಆಫ್‌ ಇಂಡಿಯಾಗೆ ಬಿಸಿಸಿಐನ ಮೂಲಗಳು ಹೇಳಿವೆ.

5 ತಿಂಗಳ ಬಳಿಕ ಬ್ಯಾಟಿಂಗ್‌ ಮಾಡಿದ್ದಕ್ಕೆ ಸ್ವಲ್ಪ ಭಯವಾಯಿತೆಂದ ವಿರಾಟ್‌ ಕೊಹ್ಲಿ!





from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gJzVk3

'ಕ್ರಿಕೆಟಿಗನಾಗಿ ಬೆಳೆಯಲು ಇವರ ಸಹಾಯ ಸ್ಮರಣೀಯ' : ಆಸೀಸ್ ದಿಗ್ಗಜನನ್ನು ಶ್ಲಾಘಿಸಿದ ಅಯ್ಯರ್‌!

ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತದ ಸಾಕಷ್ಟು ಕ್ರಿಕೆಟಿಗರಿಗೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸಾಜಷ್ಟು ನೆರವಾಗಿದೆ. ಇದರಿಂದ ಕೂಡ ಹೊರತಾಗಿಲ್ಲ. ತಾವು ಕ್ರಿಕೆಟಿಗರಾಗಿ ಹೊರಹೊಮ್ಮುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್‌ ರಿಕ್ಕಿ ಪಾಯಿಂಟ್‌ ಸಹಾಯವೂ ಇದೆ ಎಂಬುದನ್ನು ಶ್ರೇಯಸ್‌ ಅಯ್ಯರ್‌ ತಿಳಿಸಿದರು. 2018ರ ಆವೃತ್ತಿಯ ಐಪಿಎಲ್‌ ಟೂರ್ನಿಯ ಮಧ್ಯೆದಲ್ಲಿ ಗೌತಮ್‌ ಗಂಭೀರ್‌ ನಾಯಕತ್ವದಿಂದ ಕೆಳಗೆ ಇಳಿದ ಬಳಿಕ ಶ್ರೇಯಸ್‌ ಅಯ್ಯರ್‌ಗೆ ನಾಯಕತ್ವ ಒಲಿದುಬಂತು. ಆ ಆವೃತ್ತಿಯಲ್ಲಿ ತಮ್ಮ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 2019ರ ಆವೃತ್ತಿಯಲ್ಲಿಯೂ ನಾಯಕತ್ವವನ್ನು ಉಳಿಸಿಕೊಂಡ ಶ್ರೇಯಸ್‌ ಅಯ್ಯರ್‌, ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದರು. ಆ ಮೂಲಕ ಪ್ಲೇಆಫ್‌ನಲ್ಲಿ ಫೈನಲ್‌ಗೇರುವ ಅವಕಾಶವನ್ನು ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡರೂ ಅಂತಿಮವಾಗಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಿತು. ಐಪಿಎಲ್‌ನ 13 ನೇ ಆವೃತ್ತಿಯ ಪ್ರಾರಂಭಕ್ಕೂ ಮುನ್ನ, ಅಯ್ಯರ್ ತನ್ನ ಆಟದ ಮೇಲೆ ಪ್ರಭಾವ ಬೀರಿದ ತರಬೇತುದಾರ ರಿಕ್ಕಿ ಪಾಂಟಿಂಗ್ ಬಗ್ಗೆ ತೆರೆದಿಟ್ಟರು ಮತ್ತು ಆಸೀಸ್ ದಂತಕಥೆಯು ಮೈದಾನದಲ್ಲಿ ತನಗೆ ನೀಡಿರುವ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರು. "ರಿಕ್ಕಿ ಪಾಂಟಿಂಗ್ ಅವರ ನಿಲುವಿನಂತಿರುವ ಯಾರೊಂದಿಗಾದರೂ ಕೆಲಸ ಮಾಡುವುದನ್ನು ನಾನು ಆಶೀರ್ವದಿಸುತ್ತೇನೆ. ಅವರು ಆ ರೀತಿಯ ದಂತಕಥೆಯಾಗಿದ್ದಾರೆ ಹಾಗೂ ಅತ್ಯಂತ ಹಿರಿಯರಿಂದ ಹಿಡಿದು ಹೊಸ ವ್ಯಕ್ತಿಯವರೆಗೆ ಪ್ರತಿಯೊಬ್ಬರನ್ನು ನಮ್ಮವರ ಒಂದು ಭಾಗವಾಗಿಯೇ ಭಾವಿಸುತ್ತಾರೆ," ಎಂದು ಅಯ್ಯರ್ ಇತ್ತೀಚೆಗೆ ಬಿಸಿಸಿಐ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ. "ನಾಯಕನಾಗಿ ನನಗೆ ಅವರು ತುಂಬಾ ಸ್ವಾತಂತ್ರ್ಯವನ್ನು ನೀಡುತ್ತಾರೆ ಹಾಗೂ ನಾನು ಕ್ರಿಕೆಟಿಗನಾಗಿ ಬೆಳೆಯಲು ಇದು ತುಂಬಾ ಸಹಕಾರಿಯಾಯಿತು," ಎಂಬುದನ್ನು ಬಲಗೈ ಬ್ಯಾಟ್ಸ್‌ಮನ್ ಒಪ್ಪಿಕೊಂಡರು. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಚೊಚ್ಚಲ ಐಪಿಎಲ್‌ ಪ್ರಶಸ್ತಿ ಗೆಲ್ಲಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಆಟಗಾರರು ತಂಡದ ಯಶಸ್ಸಿಗೆ ಕೊಡುಗೆ ನೀಡಿದರೆ, ಖಂಡಿತಾ ನಾವು ಈ ಬಾರಿ ಜಯ ಸಾಧಿಸುತ್ತೇವೆ ಎಂದು ಶ್ರೇಯಸ್‌ ಅಯ್ಯರ್‌ ತಿಳಿಸಿದರು. "ಅಂದುಕೊಂಡಂತೆ ಎಲ್ಲವೂ ಸಕಾರವಾದರೆ ಚಾಂಪಿಯನ್‌ ಆಗಲಿದೆ. ಐಪಿಎಲ್‌ ದೀರ್ಘಾವದಿ ನಡೆಯುವ ಟೂರ್ನಿಯಾಗಿದ್ದು, ಫಲಿತಾಂಶದಲ್ಲಿ ಏರಿಳಿತಗಳು ಸಂಭವಿಸುತ್ತವೆ," ಎಂದು ಹೇಳಿದರು. "ಕಳೆದ ಆವೃತ್ತಿಯಲ್ಲಿ ನಮಗೆ ಕೆಲಸ ಮಾಡಿದ ಒಂದು ವಿಷಯವೆಂದರೆ ಪ್ರತಿಯೊಬ್ಬ ಆಟಗಾರನು ವಿಭಿನ್ನ ಸಂದರ್ಭದಲ್ಲಿ ಹೇಗೆ ವಿಭಿನ್ನವಾಗಿ ಹೆಜ್ಜೆ ಹಾಕಿದ್ದರು ಮತ್ತು ಅದು ನಮ್ಮ ಯಶಸ್ಸಿಗೆ ನಿರ್ಣಾಯಕವಾಗಿದೆ. ಈ ವರ್ಷವೂ ಇದು ಸಂಭವಿಸಲಿದೆ ಎಂದು ಭಾವಿಸಿದ್ದೇನೆ. ಒಬ್ಬರೇ ಮಾತ್ರ ಸ್ಥಿರ ಪ್ರದರ್ಶನವನ್ನು ನೀಡಿಲ್ಲ, ಎಲ್ಲರೂ ನೀಡಿದ್ದರು," ಎಂದು ಶ್ರೇಯಸ್ ಅಯ್ಯರ್‌ ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gMpOuO

ಐಪಿಎಲ್‌ ಟೂರ್ನಿಯಲ್ಲಿ ಮುರಿಯಲಾಗದ 7 ದಾಖಲೆಗಳಿವು.: ಗೇಲ್‌ ಐಪಿಎಲ್‌ ದಾಖಲೆಗಳ ಬಾಸ್‌.!

ಹೊಸದಿಲ್ಲಿ: ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಆದ ಇಂಡಿಯನ್ ಪ್ರೀಮಿಯರ್‌ ಲೀಗ್‌(ಐಪಿಎಲ್‌) ವರ್ಷದಿಂದ ವರ್ಷಕ್ಕೆ ತನ್ನ ಪ್ರಾಮುಖ್ಯತೆ ಹಾಗೂ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ಅಲ್ಲದೆ, ಹಲವು ಮೈಲುಗಲ್ಲು ಹಾಗೂ ದಾಖಲೆಗಳು ಪ್ರತಿ ಆವೃತ್ತಿಯಲ್ಲಿ ದಾಖಲಾಗುತ್ತಿವೆ. 2008ರಲ್ಲಿ ಆರಂಭವಾಗಿದ್ದ ಐಪಿಎಲ್‌ ಟೂರ್ನಿ ಇಲ್ಲಿಯವರೆಗೂ ಹಲವು ವಿಶಿಷ್ಠ ದಾಖಲೆಗಳು ಸೃಷ್ಟಿಯಾಗಿವೆ ಮತ್ತು ಇನ್ನೂ ಕೆಲವು ದಾಖಲೆಗಳನ್ನು ಇದುವರೆಗೂ ಯಾರಿಂದಲೂ ಮುಟ್ಟಲಾಗಿಲ್ಲ. ಐಪಿಎಲ್‌ನಲ್ಲಿ ದಾಖಲಾಗಿರುವ ಕೆಲ ವಿಶಿಷ್ಠ ದಾಖಲೆಗಳನ್ನು ಇದುವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ ಹಾಗೂ ಯಾವ ಆಟಗಾರನಿಂದಲೂ ತಲುಪಲು ಸಾಧ್ಯವಾಗಿಲ್ಲ. ಇವುಗಳು ಐಪಿಎಲ್‌ನ ಸಾರ್ವಕಾಲಿಕ ಮೈಲುಗಲ್ಲು ಅಥವಾ ದಾಖಲೆಗಳಾಗಿ ಉಳಿದಿವೆ. ವಿಶ್ವದ ಕೆಲ ಸ್ಟಾರ್‌ ಆಟಗಾರರು ಇವುಗಳನ್ನು ಮುರಿಯಬಹುದು ಆದರೆ ಕಷ್ಟ ಸಾಧ್ಯ. ಹಲವಾರು ಪ್ರಯತ್ನಗಳ ಹೊರತಾಗಿಯೂ, ಅನೇಕ ಆಟಗಾರರು ಈ ದಾಖಲೆಗಳನ್ನು ಮುರಿಯುವಲ್ಲಿ ವಿಫಲರಾಗಬಹುದು.13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸೆ.19 ರಿಂದ ಯುಎಇಯಲ್ಲಿ ಆರಂಭವಾಗುತ್ತಿದ್ದು, ಎಲ್ಲಾ ಫ್ರಾಂಚೈಸಿಗಳು ದುಬೈನಲ್ಲಿ ಕಠಿಣ ತಾಲೀಮು ನಡೆಸುತ್ತಿವೆ. ಕಳೆದ ಮಾ.29 ರಿಂದಲೇ ಟೂರ್ನಿ ಆರಂಭವಾಗಬೇಕಿತ್ತು ಆದರೆ, ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದರಿಂದ ಫ್ರಾಂಚೈಸಿ ಲೀಗ್‌ ಅನ್ನು ಎರಡು ಬಾರಿ ಮುಂದೂಡಲಾಗಿತ್ತು. ಭಾರತದಲ್ಲಿ ಮಾರಣಾಂತಿಕ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಟೂರ್ನಿಯನ್ನು ಯುಎಇಗೆ ಸ್ಥಳಾಂತರ ಮಾಡಲಾಗಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿಯೇ ಇಲ್ಲಿಯವರೆಗೂ ಸಾಕಷ್ಟು ದಾಖಲೆಗಳು ಹಾಗೂ ಮೈಲುಗಲ್ಲುಗಳು ಸೃಷ್ಠಿಯಾಗಿವೆ. ಇದರಲ್ಲಿ ಮುರಿಯಲಾಗದ 7 ದಾಖಲೆಗಳು ಒಳಗೊಂಡಿವೆ. ಇದರಲ್ಲಿ ಹೆಚ್ಚು ದಾಖಲೆಗಳನ್ನು ಕ್ರಿಸ್‌ ಗೇಲ್‌ ಹೊಂದಿದ್ದಾರೆ.


ಐಪಿಎಲ್‌ ಟೂರ್ನಿಯಲ್ಲಿ ಮುರಿಯಲಾಗದ 7 ದಾಖಲೆಗಳಿವು.: ಗೇಲ್‌ ಐಪಿಎಲ್‌ ದಾಖಲೆಗಳ ಬಾಸ್‌.!

ಹೊಸದಿಲ್ಲಿ:

ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಆದ ಇಂಡಿಯನ್ ಪ್ರೀಮಿಯರ್‌ ಲೀಗ್‌(ಐಪಿಎಲ್‌) ವರ್ಷದಿಂದ ವರ್ಷಕ್ಕೆ ತನ್ನ ಪ್ರಾಮುಖ್ಯತೆ ಹಾಗೂ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ಅಲ್ಲದೆ, ಹಲವು ಮೈಲುಗಲ್ಲು ಹಾಗೂ ದಾಖಲೆಗಳು ಪ್ರತಿ ಆವೃತ್ತಿಯಲ್ಲಿ ದಾಖಲಾಗುತ್ತಿವೆ. 2008ರಲ್ಲಿ ಆರಂಭವಾಗಿದ್ದ ಐಪಿಎಲ್‌ ಟೂರ್ನಿ ಇಲ್ಲಿಯವರೆಗೂ ಹಲವು ವಿಶಿಷ್ಠ ದಾಖಲೆಗಳು ಸೃಷ್ಟಿಯಾಗಿವೆ ಮತ್ತು ಇನ್ನೂ ಕೆಲವು ದಾಖಲೆಗಳನ್ನು ಇದುವರೆಗೂ ಯಾರಿಂದಲೂ ಮುಟ್ಟಲಾಗಿಲ್ಲ.

ಐಪಿಎಲ್‌ನಲ್ಲಿ ದಾಖಲಾಗಿರುವ ಕೆಲ ವಿಶಿಷ್ಠ ದಾಖಲೆಗಳನ್ನು ಇದುವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ ಹಾಗೂ ಯಾವ ಆಟಗಾರನಿಂದಲೂ ತಲುಪಲು ಸಾಧ್ಯವಾಗಿಲ್ಲ. ಇವುಗಳು ಐಪಿಎಲ್‌ನ ಸಾರ್ವಕಾಲಿಕ ಮೈಲುಗಲ್ಲು ಅಥವಾ ದಾಖಲೆಗಳಾಗಿ ಉಳಿದಿವೆ. ವಿಶ್ವದ ಕೆಲ ಸ್ಟಾರ್‌ ಆಟಗಾರರು ಇವುಗಳನ್ನು ಮುರಿಯಬಹುದು ಆದರೆ ಕಷ್ಟ ಸಾಧ್ಯ. ಹಲವಾರು ಪ್ರಯತ್ನಗಳ ಹೊರತಾಗಿಯೂ, ಅನೇಕ ಆಟಗಾರರು ಈ ದಾಖಲೆಗಳನ್ನು ಮುರಿಯುವಲ್ಲಿ ವಿಫಲರಾಗಬಹುದು.

13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸೆ.19 ರಿಂದ ಯುಎಇಯಲ್ಲಿ ಆರಂಭವಾಗುತ್ತಿದ್ದು, ಎಲ್ಲಾ ಫ್ರಾಂಚೈಸಿಗಳು ದುಬೈನಲ್ಲಿ ಕಠಿಣ ತಾಲೀಮು ನಡೆಸುತ್ತಿವೆ. ಕಳೆದ ಮಾ.29 ರಿಂದಲೇ ಟೂರ್ನಿ ಆರಂಭವಾಗಬೇಕಿತ್ತು ಆದರೆ, ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದರಿಂದ ಫ್ರಾಂಚೈಸಿ ಲೀಗ್‌ ಅನ್ನು ಎರಡು ಬಾರಿ ಮುಂದೂಡಲಾಗಿತ್ತು. ಭಾರತದಲ್ಲಿ ಮಾರಣಾಂತಿಕ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಟೂರ್ನಿಯನ್ನು ಯುಎಇಗೆ ಸ್ಥಳಾಂತರ ಮಾಡಲಾಗಿದೆ.



ಕ್ರಿಸ್‌ ಗೇಲ್‌-175 ರನ್‌ಗಳು
ಕ್ರಿಸ್‌ ಗೇಲ್‌-175 ರನ್‌ಗಳು

ವೆಸ್ಟ್ ಇಂಡೀಸ್‌ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಒಮ್ಮೆ ಬ್ಯಾಟಿಂಗ್‌ನಲ್ಲಿ ಸಿಡಿದರೆ, ದಾಖಲೆಗಳನ್ನು ಬರೆಯುವುದು ಗ್ಯಾರೆಂಟಿ. ಅಂದಹಾಗೇ ಅವರು ಐಪಿಎಲ್‌ ಇತಿಹಾಸದಲ್ಲಿ ಹಲವಾರು ದಾಖಲೆಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಒಂದೇ ಇನಿಂಗ್ಸ್ ನಲ್ಲಿ 175 ರನ್‌ ಗಳಿಸಿದ್ದು, ಐಪಿಎಲ್‌ನಲ್ಲಿ ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

2013ರ ಏಪ್ರಿಲ್‌ 23ರಂದು ಪುಣೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವನ್ನು ಪ್ರತಿನಿಧಿಸಿದ್ದ ಕ್ರಿಸ್ ಗೇಲ್, ಪುಣೆ ವಾರಿಯರ್ಸ್ ವಿರುದ್ಧ ಅಜೇಯ 175 ರನ್ ಗಳಿಸುವ ಮೂಲಕ 2008 ರ ಬ್ರೆಂಡನ್ ಮೆಕಲಂ (158* ರನ್) ದಾಖಲೆಯನ್ನು ಮುರಿದಿದ್ದರು. ಇದು ಆಟಗಾರನೊಬ್ಬನ ಇದುವರೆಗಿನ ವೈಯಕ್ತಿಕ ಗರಿಷ್ಠ ಮೊತ್ತವಾಗಿದ್ದು, ಈ ಬಾರಿಯ ಐಪಿಎಲ್ ನಲ್ಲಿ ಗೇಲ್ ದಾಖಲೆಯನ್ನು ಯಾರಾದರೂ ಮುರಿಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರನನ್ನು ಹೆಸರಿಸಿದ ಕೆಎಲ್ ರಾಹುಲ್‌!



ಕ್ರಿಸ್‌ ಗೇಲ್‌-30 ಎಸೆತಗಳಿಗೆ ಶತಕ
ಕ್ರಿಸ್‌ ಗೇಲ್‌-30 ಎಸೆತಗಳಿಗೆ ಶತಕ

2013ರ ಆವೃತ್ತಿಯಲ್ಲಿ ಐಪಿಎಲ್‌ ಇತಿಹಾಸದಲ್ಲಿ ಗರಿಷ್ಠ ಮೊತ್ತ ದಾಖಲಿಸಿದ್ದ ಪಂದ್ಯದಲ್ಲಿಯೇ ಕ್ರಿಸ್ ಗೇಲ್ ಅವರು 30 ಎಸೆತ ಎದುರಿಸಿ ಶತಕ ಪೂರೈಸಿದ್ದರು. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿಯೇ ವೇಗದ ಶತಕ ಇದಾಯಿತು. ಈ ಪಂದ್ಯದಲ್ಲಿ ಗೇಲ್‌ 66 ಎಸೆತಗಳನ್ನು ಎದುರಿಸಿ ಅಜೇಯ 175 ರನ್ ಗಳಿಸಿದ್ದರು. ಎದುರಾಳಿ ಪುಣೆ ಬೌಲರ್‌ಗಳನ್ನು ಯೂನಿವರ್ಸಲ್‌ ಬಾಸ್‌ ನೂಚ್ಚು ನೂರು ಮಾಡಿದ್ದರು. ಭುವನೇಶ್ವರ್‌ ಕುಮಾರ್‌ ಮಾತ್ರ ನಾಲ್ಕು ಓವರ್‌ಗಳಿಗೆ 23 ರನ್‌ ನೀಡಿ ಉತ್ತಮ ಬೌಲರ್ ಎನಿಸಿಕೊಂಡಿದ್ದರು. ಇವರನ್ನು ಬಿಟ್ಟು ಇನ್ನುಳಿದ ವೇಗಿಗಳು ದುಬಾರಿಯಾಗಿದ್ದರು. ಇದೇ ಪಂದ್ಯದಲ್ಲಿ ಗೇಲ್ ಸಿಕ್ಸ್‌ ಸಿಡಿಸುವ ಮೂಲಕ ಯೂಸಫ್‌ ಪಠಾಣ್‌ ಅವರ ವೇಗದ ಶತಕವನ್ನು ಮುರಿದರು. ಯೂಸಫ್‌ ಪಠಾಣ್‌ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ಐಪಿಎಲ್‌ 2020: ಉದ್ಘಾಟನಾ ಪಂದ್ಯದಿಂದ ಸಿಎಸ್‌ಕೆ ಹಿಂದೆ ಸರಿಯುವ ಸಾಧ್ಯತೆ!



ಎಂಎಸ್ ಧೋನಿ-9 ಫೈನಲ್‌ಗಳು
ಎಂಎಸ್ ಧೋನಿ-9 ಫೈನಲ್‌ಗಳು

ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಯಶಸ್ವಿ ನಾಯಕನಾಗಿ ಮಾತ್ರ ಸೀಮಿತವಾಗಿಲ್ಲ, ಅವರು ಶ್ರೀಮಂತ ಫ್ರಾಂಚೈಸಿ ಲೀಗ್‌ ಐಪಿಎಲ್‌ನಲ್ಲೂ ಅತ್ಯಂತ ಸಕ್ಸಸ್‌ ಕ್ಯಾಪ್ಟನ್‌ ಆಗಿದ್ದಾರೆ. 2008ರಿಂದ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಎಂಎಸ್‌ ಧೋನಿ 9 ಬಾರಿ ತಮ್ಮ ತಂಡವನ್ನು ಫೈನಲ್‌ಗೆ ತಲುಪಿಸಿದ್ದಾರೆ. ಇದರಲ್ಲಿ ಮೂರು ಬಾರಿ ಸಿಎಸ್‌ಕೆ ಫ್ರಾಂಚೈಸಿಗೆ ಪ್ರಶಸ್ತಿ ತಂದುಕೊಟ್ಟಿದ್ದಾರೆ. 2009, 2014 ಹಾಗೂ 2016ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಚಾಂಪಿಯನ್‌ ಆಗಿದೆ. ರೋಹಿತ್‌ ಶರ್ಮಾ(ನಾಲ್ಕು ಬಾರಿ ಚಾಂಪಿಯನ್‌) ಬಳಿಕ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ನಾಯಕರಾಗಿ ಎಂಎಸ್‌ ಧೋನಿ ಹೊರಹೊಮ್ಮಿದ್ದಾರೆ.

ಐಪಿಎಲ್ 2020ಗೆ ಹೊಸ ಜರ್ಸಿ ಅನಾವರಣ ಪಡಿಸಿದ ಮುಂಬೈ ಇಂಡಿಯನ್ಸ್‌!



ಚೆನ್ನೈ ಸೂಪರ್‌ ಕಿಂಗ್ಸ್: ಆಡಿದ ಎಲ್ಲಾ ಆವೃತ್ತಿಗಳಲ್ಲೂ ಪ್ಲೇಆಫ್‌ಗೆ
ಚೆನ್ನೈ ಸೂಪರ್‌ ಕಿಂಗ್ಸ್: ಆಡಿದ ಎಲ್ಲಾ ಆವೃತ್ತಿಗಳಲ್ಲೂ ಪ್ಲೇಆಫ್‌ಗೆ

ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಎಲ್ಲಾ ಆವೃತ್ತಿಗಳಲ್ಲೂ ಪ್ಲೇಆಫ್‌ಗೆ ತಲುಪಿದೆ. ಈ ಸಾಧನೆ ಮಾಡಿದ ಮೊದಲ ಫ್ರಾಂಚೈಸಿ ಎಂಬ ದಾಖಲೆಗೆ ಸಿಎಸ್‌ಕೆ ಭಾಜನವಾಗಿದೆ. 2008ರಿಂದ ಇದುವರೆಗೂ12 ಆವೃತ್ತಿಗಳಲ್ಲಿ ಈ ದಾಖಲೆಯನ್ನು ಬೇರೆ ಯಾವ ತಂಡವು ಮಾಡಿಲ್ಲ. ಎಂಎಸ್‌ ಧೋನಿಯ ಚಾಣಾಕ್ಷತನದ ನಾಯಕತ್ವದಿಂದ ಎಂತಹ ಒತ್ತಡವಿದ್ದರೂ ಮೆಟ್ಟಿನಿಂತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. 2016 ಮತ್ತು 2017ರ ಆವೃತ್ತಿಗಳಲ್ಲಿ ಎಂಎಸ್‌ ಧೋನಿ ನಾಯಕತ್ವದ ಸಿಎಸ್‌ಕೆ ಸಕ್ರಿಯವಾಗಿದ್ದರೆ, ಒಟ್ಟು 12 ಆವೃತ್ತಿಗಳಲ್ಲೂ ಪ್ಲೇಆಫ್‌ಗೆ ತಲುಪಿದಂತಾಗುತ್ತಿತ್ತು. ಈ ಎರಡು ವರ್ಷಗಳು ಸಿಎಸ್‌ಕೆ ಅಮಾನತು ಶಿಕ್ಷಗೆ ಒಳಗಾಗಿತ್ತು.

ಟಿ20 ಕ್ರಿಕೆಟ್‌ಗೆ ಗಂಗೂಲಿ ಲಾಯಕ್ಕಲ್ಲ ಎಂದ ಕೆಕೆಆರ್‌ ತಂಡದ ಮಾಜಿ ಕೋಚ್!



ಕ್ರಿಸ್‌ ಗೇಲ್‌-37 ರನ್‌ಗಳು
ಕ್ರಿಸ್‌ ಗೇಲ್‌-37 ರನ್‌ಗಳು

ಕ್ರಿಸ್‌ ಗೇಲ್‌ 175 ರನ್‌ಗಳನ್ನು ಸಿಡಿಸಿದ ಎರಡು ವರ್ಷಗಳಿಗೂ ಮುನ್ನ ಕೊಚ್ಚಿ ಟಸ್ಕರ್ಸ್ ತಂಡದ ಯುವ ವೇಗಿ ಪ್ರಶಾಂತ್‌ ಪರಮೇಶ್ವರನ್‌ ಅವರ ಒಂದೇ ಓವರ್‌ಗೆ 37 ರನ್ ಸಿಡಿಸಿದ್ದರು. ಈ ಆವೃತ್ತಿಗೆ ಗೇಲ್‌ ಅನ್‌ಸೋಲ್ಡ್ ಆಗಿದ್ದರು. ಆದರೆ, ಡರ್ಕ್‌ ನ್ಯಾನಿಸ್‌ ಅವರ ಸ್ಥಾನಕ್ಕೆ ಬಂದು 2011ರ ಆವೃತ್ತಿಯಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್‌ಗಳನ್ನು ಗಳಿಸುವ ಮೂಲಕ ಆರೆಂಜ್‌ ಕ್ಯಾಪ್‌ ಪಡೆದರು. ಮುಂದಿನ ವರ್ಷವೂ ಕ್ರಿಸ್‌ ಗೇಲ್‌ ಆರ್‌ಸಿಬಿಯಲ್ಲಿಯೇ ಮುಂದುವರಿದರು.

37 ರನ್‌ಗಳಲ್ಲಿ ಕ್ರಿಸ್‌ ಗೇಲ್‌ ಪಂದ್ಯದ ಮೂರು ಸಿಕ್ಸರ್ ಹಾಗೂ ಮೂರು ಬೌಂಡರಿಗಳನ್ನು ಸಿಡಿಸಿದ್ದರು. ಇದರಲ್ಲಿ ಪರಮೇಶ್ವರನ್‌ ಎರಡು ಎಸೆತದಲ್ಲಿ ಗೆರೆ ದಾಟಿ ಚೆಂಡು ಎಸೆದಿದ್ದರು, ಆ ಎಸೆತವನ್ನು ಗೇಲ್ ಸಿಕ್ಸರ್‌ ಬಾರಿಸಿದ್ದರು. ಆ ಪಂದ್ಯದಲ್ಲಿ 127 ರನ್‌ ಗಳಿಸುವ ಮೂಲಕ ಆರ್‌ಸಿಬಿಯ 9 ವಿಕೆಟ್‌ಗಳ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

5 ತಿಂಗಳ ಬಳಿಕ ಬ್ಯಾಟಿಂಗ್‌ ಮಾಡಿದ್ದಕ್ಕೆ ಸ್ವಲ್ಪ ಭಯವಾಯಿತೆಂದ ವಿರಾಟ್‌ ಕೊಹ್ಲಿ!



ಅಮಿತ್‌ ಮಿಶ್ರಾ-3 ಐಪಿಎಲ್‌ ಹ್ಯಾಟ್ರಿಕ್ಸ್
ಅಮಿತ್‌ ಮಿಶ್ರಾ-3 ಐಪಿಎಲ್‌ ಹ್ಯಾಟ್ರಿಕ್ಸ್

ಐಪಿಎಲ್‌ ಇತಿಹಾಸದಲ್ಲಿಯೇ ಅಮಿತ್‌ ಮಿಶ್ರಾ ಮೂರು ಹ್ಯಾಟ್ರಿಕ್‌ ವಿಕೆಟ್‌ಗಳ ಸಾಧನೆಯನ್ನು ಮಾಡಿದ್ದಾರೆ. 2011ರಲ್ಲಿ ಡೆಕ್ಕಾನ್‌ ಚಾರ್ಜರ್ಸ್‌ ಪರ , 2013ರಲ್ಲಿ ಸನ್‌ ರೈಸರ್ಸ್ ಹೈದರಾಬಾದ್‌ ಪರ ಹಾಗೂ 2008ರಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ ಪರ ಒಟ್ಟು ಮೂರು ಹ್ಯಾಟ್ರಿಕ್‌ ವಿಕೆಟ್‌ಗಳನ್ನು ಅಮಿತ್‌ ಮಿಶ್ರಾ ಪಡೆದಿದ್ದಾರೆ. ಒಟ್ಟು 147 ಐಪಿಎಲ್‌ ಪಂದ್ಯಗಳಿಂದ 157 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಅಮಿತ್‌ ಮಿಶ್ರಾ ಬಳಿಕ ಯುವರಾಜ್‌ ಸಿಂಗ್‌ ಎರಡು ಹ್ಯಾಟ್ರಿಕ್‌ ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಆದರೆ, ಯುವಿ ಇದಾಗಿ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಸ್ಯಾಮ್‌ ಕರನ್‌ ಕಳೆದ ಆವೃತ್ತಿಯಲ್ಲಿ ಒಂದು ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡಿದ್ದಾರೆ.

ಧೋನಿಯಲ್ಲಿ ಪಂದ್ಯ ಗೆದ್ದುಕೊಡುವ ಸಾಮರ್ಥ್ಯ ಕ್ಷೀಣಿಸಿತ್ತು ಎಂದ ಮಾಜಿ ವೇಗಿ!



ವಿರಾಟ್‌ ಕೊಹ್ಲಿ: ಒಂದೇ ಆವೃತ್ತಿಯಲ್ಲಿ 973 ರನ್‌ಗಳು
ವಿರಾಟ್‌ ಕೊಹ್ಲಿ: ಒಂದೇ ಆವೃತ್ತಿಯಲ್ಲಿ 973 ರನ್‌ಗಳು

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ 2016ರ ಐಪಿಎಲ್‌ ಆವೃತ್ತಿಯಲ್ಲಿ 973 ರನ್‌ಗಳನ್ನು ದಾಖಲಿಸಿದ್ದರು. ಕೊಹ್ಲಿ ಪಾಲಿಗೆ ಅಂದಿನ ಆವೃತ್ತಿ ಅದ್ಬುತವಾಗಿತ್ತು. 2008ರ ಆವೃತ್ತಿಯಿಂದ ಆರ್‌ಸಿಬಿ ಪರ ಆಡುತ್ತಿದ್ದ ನಾಯಕ ಕೊಹ್ಲಿ 2016ರಲ್ಲಿ ತಾವೇನೆಂದೂ ಸಾಬೀತು ಪಡಿಸಿದರು. ಆರ್‌ಸಿಬಿ ತಂಡ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾದರೂ ಕೊಹ್ಲಿ ಆರೆಂಜ್‌ ಕ್ಯಾಪ್‌ ಪಡೆದಿದ್ದರು.

31ರ ಪ್ರಾಯದ ಆಟಗಾರ 16 ಪಂದ್ಯಗಳಿಂದ 81.08ರ ಆವೃತ್ತಿಯಲ್ಲಿ 973 ರನ್‌ ದಾಖಲಿಸಿದ್ದರು. ಅದೇ ಆವೃತ್ತಿಯಲ್ಲಿ ಡೇವಿಡ್‌ ವಾರ್ನರ್‌ ಅವರು 848 ರನ್‌ಗಳನ್ನು ಗಳಿಸುವ ಮೂಲಕ ಎರಡನೇ ಗರಿಷ್ಠ ವೈಯಕ್ತಿಕ ಮೊತ್ತದ ದಾಖಲೆಗೆ ಭಾಜನರಾಗಿದ್ದರು.

ಧೋನಿಯಲ್ಲಿ ಪಂದ್ಯ ಗೆದ್ದುಕೊಡುವ ಸಾಮರ್ಥ್ಯ ಕ್ಷೀಣಿಸಿತ್ತು ಎಂದ ಮಾಜಿ ವೇಗಿ!





from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gPZsZa

ಟಿ-20 ಕ್ರಿಕೆಟ್‌: ರನ್‌ ಮಷೀನ್‌ ವಿರಾಟ್‌ ಕೊಹ್ಲಿ ದಾಖಲೆ ಸರಿಗಟ್ಟಿದ ಬಾಬರ್‌ ಅಝಮ್‌.!

ಹೊಸದಿಲ್ಲಿ: ಭಾನುವಾರ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದಿದ್ದ ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನ ಸೋಲಿನ ಹೊರತಾಗಿಯೂ ಸೀಮಿತ ಓವರ್‌ಗಳ ನಾಯಕ ಟಿ20 ಕ್ರಿಕೆಟ್‌ನಲ್ಲಿ ವಿಶಿಷ್ಠ ದಾಖಲೆಯೊಂದನ್ನು ಮಾಡಿದರು. ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಅತಿ ವೇಗವಾಗಿ 1,500 ರನ್‌ಗಳನ್ನು ಗಳಿಸಿದ ದಾಖಲೆಯನ್ನು ಟೀಮ್‌ ಇಂಡಿಯಾ ನಾಯಕ ಹಾಗೂ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ನಾಕ ಆರೋನ್‌ ಫಿಂಚ್‌ ಅವರೊಂದಿಗೆ ಬಾಬರ್ ಅಝಮ್‌ ಹಂಚಿಕೊಂಡರು. ಎರಡನೇ ಪಂದ್ಯದ ಆರಂಭಕ್ಕೂ ಮುನ್ನ ಬಾಬರ್‌ ಅಝಮ್‌ಗೆ ಈ ದಾಖಲೆ ಮಾಡಲು ಇನ್ನೂ 29 ರನ್‌ಗಳು ಅಗತ್ಯವಿತ್ತು. ಆದರೆ, ಟಿ20 ಕ್ರಿಕೆಟ್‌ 39ನೇ ಇನಿಂಗ್ಸ್‌ನಲ್ಲಿ ಅವರು ದಾಖಲೆಯನ್ನು ಮುಟ್ಟಿದರು. ಕೊಹ್ಲಿ ಹಾಗೂ ಫಿಂಚ್‌ ಕೂಡ 1500 ರನ್‌ಗಳನ್ನು ಮುಟ್ಟಲು 39 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. ಅವರು 82 ಪಂದ್ಯಗಳಿಂದ 2,794 ರನ್‌ಗಳನ್ನು ಗಳಿಸಿದ್ದರೆ, ಭಾರತ ಸೀಮಿತ ಓವರ್‌ಗಳ ತಂಡದ ಉಪ ನಾಯಕ ರೋಹಿತ್‌ ಶರ್ಮಾ 108 ಪಂದ್ಯಗಳಿಂದ 2773 ರನ್‌ಗಳನ್ನು ದಾಖಲಿಸಿದ್ದಾರೆ. ನಂತರದ ಕ್ರಮಾಂಕದಲ್ಲಿ ನ್ಯೂಜಿಲೆಂಡ್‌ ತಂಡದ ಆರಂಭಿಕ ಮಾರ್ಟಿನ್‌ ಗಪ್ಟಿಲ್ , ಪಾಕಿಸ್ತಾನದ ಶೋಯೆಬ್ ಮಲ್ಲಿಕ್‌ ಹಾಗೂ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಇದ್ದಾರೆ. ಎರಡನೇ ಪಂದ್ಯದಲ್ಲಿ ಬಾಬರ್‌ ಅಝಮ್‌ ಅವರು ಟಿ20 ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ ಸರಾಸರಿಯಲ್ಲಿ ವಿರಾಟ್‌ ಕೊಹ್ಲಿ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದರು. ಇಂಗ್ಲೆಂಡ್‌ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಪಾಕ್‌ ನಾಯಕ 44 ಎಸೆತಗಳಲ್ಲಿ 56 ರನ್‌ಗಳನ್ನು ಗಳಿಸಿದರು. ಪ್ರಸ್ತುತ ಅವರ ಟಿ20 ಸರಾಸರಿ 50.90 ರಷ್ಟಿದೆ. ಆ ಮೂಲಕ ವಿಶ್ವದಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇದಕ್ಕೂ ಮುನ್ನ ವಿರಾಟ್‌ ಕೊಹ್ಲಿ 50.80ರ ಸರಾಸರಿಯೊಂದಿಗೆ ಅಗ್ರ ಸ್ಥಾನದಲ್ಲಿದ್ದರು. ಇದರಲ್ಲಿ ವಿರಾಟ್‌ ಕೊಹ್ಲಿ(82 ಪಂದ್ಯಗಳು), ಬಾಬರ್‌ ಅಝಮ್‌(40)ಗಿಂತ ಎರಡು ಪಟ್ಟು ಹೆಚ್ಚು ಪಂದ್ಯಗಳಾಡಿದ್ದಾರೆ. ನಾಯಕ ಇಯಾನ್‌ ಮಾರ್ಗನ್‌( 66 ರನ್‌) ಹಾಗೂ ಡೇವಿಡ್‌ ಮಲನ್‌ (ಅಜೇಯ 54 ರನ್‌) ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್‌ ತಂಡ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ದಾಖಲೆಯ ಗುರಿ ಮುಟ್ಟುವ ಮೂಲಕ ಐದು ವಿಕೆಟ್‌ಗಳ ಜಯ ಸಾಧಿಸಿತು. ಪ್ಲ್ಯಾಟ್‌ ವಿಕೆಟ್‌ನಲ್ಲಿ ಮೊದಲ ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 195 ರನ್‌ಗಳನ್ನು ಗಳಿಸಿತು. ಆದರೆ, ಗುರಿ ಹಿಂಬಾಲಿಸಿದ ಇಂಗ್ಲೆಂಡ್‌ ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಗೆಲುವು ಪಡೆಯಿತು. ಇದರೊಂದಿಗೆ ಮೂರು ಪಂದ್ಯಗಳ ಚುಟುಕು ಸರಣಿಯಲ್ಲಿ ಆತಿಥೇಯರು 1-0 ಮುನ್ನಡೆ ಪಡೆದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gJ6sXA

ಎರಡನೇ ಟಿ20: ಪಾಕ್‌ ವಿರುದ್ಧ ದಾಖಲೆಯ ಗುರಿ ಮುಟ್ಟಿ ಜಯ ಸಾಧಿಸಿದ ಇಂಗ್ಲೆಂಡ್.!

ಹೊಸದಿಲ್ಲಿ: ನಾಯಕ ಇಯಾನ್‌ ಮಾರ್ಗನ್‌( 66 ರನ್‌) ಹಾಗೂ ಡೇವಿಡ್‌ ಮಲನ್‌ (ಅಜೇಯ 54 ರನ್‌) ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್‌ ತಂಡ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ದಾಖಲೆಯ ಗುರಿ ಮುಟ್ಟುವ ಮೂಲಕ ಐದು ವಿಕೆಟ್‌ಗಳ ಜಯ ಸಾಧಿಸಿತು. ಪ್ಲ್ಯಾಟ್‌ ವಿಕೆಟ್‌ನಲ್ಲಿ ಮೊದಲ ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 195 ರನ್‌ಗಳನ್ನು ಗಳಿಸಿತು. ಆದರೆ, ಗುರಿ ಹಿಂಬಾಲಿಸಿದ ಇಂಗ್ಲೆಂಡ್‌ ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಗೆಲುವು ಪಡೆಯಿತು. ಇದರೊಂದಿಗೆ ಮೂರು ಪಂದ್ಯಗಳ ಚುಟುಕು ಸರಣಿಯಲ್ಲಿ ಆತಿಥೇಯರು 1-0 ಮುನ್ನಡೆ ಪಡೆದರು. ಟಿ20 ಕ್ರಿಕೆಟ್‌ ಇತಿಹಾಸದಲ್ಲಿಯೇ ಓಲ್ಡ್‌ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ದಾಖಲೆಯ ಗರಿ ಮುಟ್ಟುವಲ್ಲಿ ಇಂಗ್ಲೆಂಡ್‌ ತಂಡಕ್ಕೆ ನೆರವಾದ ನಾಯಕ ಕೇವಲ 33 ಎಸೆತಗಳಲ್ಲಿ 66 ರನ್‌ಗಳನ್ನು ಸ್ಫೋಟಿಸಿದರು. ನಾಯಕ ಇಯಾನ್‌ ಮಾರ್ಗನ್‌ಗೂ ಮುನ್ನ ಇನಿಂಗ್ಸ್ ಆರಂಭಿಸಿದ ಜಾನಿ ಬೈರ್‌ಸ್ಟೋವ್ 24 ಎಸೆತಗಳಲ್ಲಿ 44 ರನ್‌ ಗಳಿಸಿದರೆ, ಟಾಮ್‌ ಬ್ಯಾಂಟನ್‌ 16 ಎಸೆತಗಳಲ್ಲಿ 20 ರನ್‌ ಗಳಿಸಿದರು. ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 38 ಎಸೆತಗಳಲ್ಲಿ 66 ರನ್‌ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿತು. ನಂತರ, ಸ್ಪಿನ್ನರ್‌ ಶದಾಬ್‌ ಖಾನ್‌ಗೆ (34ಕ್ಕೆ 3) ಸತತ ಎರಡು ಎಸೆತಗಳಲ್ಲಿ ಇವರಿಬ್ಬರು ವಿಕೆಟ್‌ ಒಪ್ಪಿಸಿದರು. ನಂತರ ಜತೆಯಾದ ಇಯಾನ್‌ ಮಾರ್ಗನ್‌ ಹಾಗೂ (ಅಜೇಯ 54 ರನ್‌, 36 ಎಸೆತಗಳು) ಜೋಡಿ ಮೂರನೇ ವಿಕೆಟ್‌ ಜತೆಯಾಟದಲ್ಲಿ 62 ಎಸೆತಗಳಲ್ಲಿ 112 ರನ್‌ಗಳನ್ನು ಗಳಿಸಿ ಇಂಗ್ಲೆಂಡ್‌ ಗೆಲುವಿನ ಸಮೀಪ ತಲುಪಿಸಿತು. 18 ರನ್‌ಗಳ ಅಗತ್ಯವಿದ್ದಾಗ ನಾಯಕ ಮಾರ್ಗನ್‌ ದೊಡ್ಡ ಹೊಡೆತಕ್ಕೆ ಕೈ ಹಾಕಿ ಬೌಂಡರಿ ಲೈನ್‌ ಸಮೀಪ ಕ್ಯಾಚ್ ನೀಡಿದರು. ಮೊದಲು ಬ್ಯಾಟಿಂಗ್‌ ಮಾಡಿದ್ದ ಪಾಕಿಸ್ತಾನ ಕೂಡ ಅತ್ಯುತ್ತಮ ಬ್ಯಾಟಿಂಗ್‌ ಮಾಡಿತ್ತು. ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಬಾಬರ್‌ ಅಝಮ್ (56 ರನ್‌, 44 ಎಸೆತಗಳು) ಹಾಗೂ ಫಖಾರ್ ಝಮನ್‌ ( 36 ರನ್‌, 22 ಎಸೆತಗಳು) ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 72 ರನ್‌ ದಾಖಲಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿತ್ತು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ಮೊಹಮ್ಮದ್ ಹಫೀಜ್‌ ತವರು ಬೌಲರ್‌ಗಳನ್ನು ಬೆಂಡೆತ್ತಿದರು. ಕೇವಲ 36 ಎಸೆತಗಳಲ್ಲಿ 69 ರನ್‌ಗಳನ್ನು ಗಳಿಸಿ ತಂಡದ ಏರಿಕೆಗೆ ಕಾರಣರಾದರು. ಅತ್ಯುತ್ತಮವಾಗಿ ಬ್ಯಾಟಿಂಗ್‌ ಮಾಡುತ್ತಿದ್ದ ಹಫೀಜ್‌ ಕವರ್ಸ್‌ನಲ್ಲಿ ನಾಯಕ ಮಾರ್ಗನ್‌ಗೆ ಕ್ಯಾಚ್‌ ನೀಡಿ ಔಟ್‌ ಆದರು. ಇಂಗ್ಲೆಂಡ್ ಪರ ಆದಿಲ್‌ ರಶೀದ್‌ (32ಕ್ಕೆ 2) ಪಾಕಿಸ್ತಾನದ ಆರಂಭಿಕರನ್ನು ಪೆವಿಲಿನ್‌ಗೆ ಕಳುಹಿಸಿದರು. ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ಇದೇ ಅಂಗಣದಲ್ಲಿ ಮಂಗಳವಾರ ಜರುಗಲಿದೆ. ಮೊದಲನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31MEbLH

ಐಪಿಎಲ್‌ 2020: ಉದ್ಘಾಟನಾ ಪಂದ್ಯದಿಂದ ಸಿಎಸ್‌ಕೆ ಹಿಂದೆ ಸರಿಯುವ ಸಾಧ್ಯತೆ!

ಬೆಂಗಳೂರು: ಎಲ್ಲಾ ಅಡೆತಡೆಗಳ ನಡುವೆ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಅಂಗಣದಲ್ಲಿ ಆಯೋಜನೆಯಾಗಲು ಸಜ್ಜಾಗಿದ್ದು, ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಬಯೋ ಸೆಕ್ಯೂರ್‌ ವಾತಾವರಣ ಇರುವ ದುಬೈ, ಶರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಟೂರ್ನಿ ಸಲುವಾಗಿ ಈಗಾಗಗಲೇ ಎಲ್ಲಾ 8 ತಂಡಗಳು ದುಬೈನಲ್ಲಿ ಬೀಡು ಬಿಟ್ಟಿದ್ದು, 3 ವಾರಗಳ ಅಭ್ಯಾಸ ಶಿಭಿರ ಆರಂಭಿಸಿವೆ. ಆದರೆ, ತಂಡದ ಆಟಗಾರರಲ್ಲಿ ಕೋವಿಡ್‌-19 ಸೋಂಕು ಕಾಣಿಸಿಕೊಂಡಿರುವುದು ಇದೀಗ ಕಳವಳಕ್ಕೆ ಕಾರಣವಾಗಿದೆ. ಜೊತೆಗೆ 'ಮಿಸ್ಟರ್‌ ಐಪಿಎಲ್‌' ಎಂದೇ ಖ್ಯಾತಿ ಪಡೆದಿರುವ ಸುರೇಶ್‌ ರೈನಾ ಕೂಡ ಟೂರ್ನಿಯಿಂದ ಹಿಂದೆ ಸರಿದಿರುವುದು ಎಂಎಸ್‌ ಧೋನಿ ಸಾರಥ್ಯದ ಸಿಎಸ್‌ಕೆ ತಂಡಕ್ಕೆ ಭಾರಿ ಹಿನ್ನಡೆ ತಂದೊಡ್ಡಿದೆ. ಇದೀಗ ಕೋವಿಡ್‌-19 ಸೋಂಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಸಿಎಸ್‌ಕೆ ಆಟಗಾರರು ಅಭ್ಯಾಸ ಬಿಟ್ಟು ಮತ್ತೆ 6 ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕಿದೆ. ಹೀಗಾಗಿ ಸೆಪ್ಟೆಂಬರ್‌ 19ರಂದು ನಡೆಯಲಿರುವ ವಿರುದ್ದದ ಐಪಿಎಲ್‌ 2020 ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಸಿಎಸ್‌ಕೆ ಲಭ್ಯವಾಗುವ ಸಾಧ್ಯತೆ ಇದೆ. ನಿಗದಿಯಂತೆ ಮಾರ್ಚ್‌ 29ರಿಂದ ಮೇ 29ರವರೆಗೆ ಟೂರ್ನಿ ನಡೆದಿದ್ದರೆ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಮತ್ತು ಚೆನ್ನೈ ತಂಡಗಳು ಮುಖಾಮುಖಿಯಾಗಬೇಕಿತ್ತು. ಅಂತೆಯೇ ಹೊಸ ವೇಳಾಪಟ್ಟಿಯಲ್ಲೂ ಇದೇ ತಂಡಗಳು ಮೊದಲ ಪಂದ್ಯವನ್ನಾಡಲಿವೆ ಎಂಬುದು ಅಭಿಮಾನಿಗಳು ನಿರೀಕ್ಷೆಯಾಗಿತ್ತು. "ಐಪಿಎಲ್‌ 2020 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಸ್ಪರ್ಧಿಸುವ ಸ್ಥಿತಿಯಲ್ಲಿಲ್ಲ. ಈ ಹಿನ್ನಡೆಯಿಂದ ಪುಟಿದೇಳಲು ಸಿಎಸ್‌ಕೆಗೆ ಹೆಚ್ಚು ಸಮಯ ಸಿಗುವಂತೆ ಅವಕಾಶ ಮಾಡಿಕೊಡಲಿದ್ದೇವೆ," ಎಂದು ಬಿಸಿಸಿಐನ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ. ಇನ್ನು ಕೋವಿಡ್‌-19 ಸೋಂಕು ಯುಎಇನಲ್ಲಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಕೂಡ ಈವರೆಗೆ ತನ್ನ ಅಂತಿಮ ವೇಳಾಪಟ್ಟಿಯನ್ನು ಪ್ರಕಟ ಮಾಡಿಲ್ಲ. "ಟೂರ್ನಿಗೆ ಕಂಟಕವಾಗಿ ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದೇ ಕಾರಣಕ್ಕೆ ಟೂರ್ನಿಯ ವೇಳಾಪಟ್ಟಿಯನ್ನು ತಡ ಮಾಡಲಾಗಿದೆ," ಎಂದು ಟೈಮ್ಸ್‌ ಆಫ್‌ ಇಂಡಿಯಾಗೆ ಬಿಸಿಸಿಐ ಮೂಲಗಳು ಹೇಳಿವೆ. ಕಳೆದ ವರ್ಷ ಐಪಿಎಲ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಕೇವಲ 1 ರನ್‌ ಅಂತರದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೋಲುಣಿಸಿ ನಾಲ್ಕನೇ ಪ್ರಶಸ್ತಿ ಎತ್ತಿ ಹಿಡಿದಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gJZC45

ಐಪಿಎಲ್ 2020ಗೆ ಹೊಸ ಜರ್ಸಿ ಅನಾವರಣ ಪಡಿಸಿದ ಮುಂಬೈ ಇಂಡಿಯನ್ಸ್‌!

ಹೊಸದಿಲ್ಲಿ: ದಾಖಲೆಯ ನಾಲ್ಕು ಬಾರಿ ಚಾಂಪಿಯನ್ಸ್‌ ತಂಡ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 13ನೇ ಆವೃತ್ತಿಯಲ್ಲಿ ಐದನೇ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದು, ಈ ಸಲುವಾಗಿ ಹೊಸ ಹುರುಪು ಕಂಡುಕೊಳ್ಳಲು ನೂತನ ಸಮವಸ್ತ್ರ (ಜರ್ಸಿ) ಆಯ್ಕೆ ಮಾಡಿಕೊಂಡಿದೆ. ಐಪಿಎಲ್‌ 2020 ಟೂರ್ನಿ ಸಲುವಾಗಿ ಮುಂಬೈ ಇಂಡಿಯನ್ಸ್‌ ತಂಡದ ನೂತನ ಜರ್ಸಿಯನ್ನು ತನ್ನ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಫ್ರಾಂಚೈಸಿಯು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದೆ. ಈ ಸಲುವಾಗಿ ವಿಶೇಷ ವಿಡಿಯೋ ಒಂದನ್ನೂ ಸಿದ್ಧಪಡಿಸಿ ಅಭಿಮಾನಿಗಳ ಮುಂದಿಟ್ಟಿದೆ. ಭಾರತದ ಮೊತ್ತ ಮೊದಲ ಅಂಡರ್‌ ವಾಟರ್‌ ಡ್ಯಾನ್ಸರ್‌ 'ಹೈಡ್ರೋ ಮ್ಯಾನ್‌' ಎಂದೇ ಖ್ಯಾತಿ ಪಡೆದಿರುವ ಗುಜರಾತ್‌ ಮೂಲದವರಾದದ ಜಯದೀಪ್‌ ಗೋಹಿಲ್, ಮುಂಬೈ ಇಂಡಿಯನ್ಸ್‌ ತಂಡ ಅಧಿಕೃತ ಹಾಡು 'ಆಲಾ ರೆ'ಗೆ ನೀರಿನ ಒಳಗೆ ಸದ್ಭುತ ಸ್ಟೆಪ್‌ಗಳನ್ನು ಹಾಕಿದ್ದಾರೆ. ಈ ವಿಡಿಯೋ ಬಳಿಕ ತಂಡದ ನೂತನ ಸಮವಸ್ತ್ರವನ್ನು ಅನಾವರಣ ಪಡಿಸಲಾಗಿದೆ. ಇದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿರುವ ಮುಂಬೈ ತಂಡದ ಕ್ಯಾಪ್ಟನ್‌ ರೋಹಿತ್‌ ಶರ್ಮಾ, "ಈಗಷ್ಟೇ ಹೈಡ್ರೋ ಮ್ಯಾನ್ ಏನು ಮಾಡಬಲ್ಲರು ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ನಿಜಕ್ಕೂ ಅದ್ಭುತ. ಮುಂಬೈ ಇಂಡಿಯನ್ಸ್‌ ಐಡಿಯಾ ಅದ್ಭುತವಾಗಿದೆ," ಎಂದು ಹಿಟ್‌ಮ್ಯಾನ್‌ ಟ್ವೀಟ್‌ ಮಾಡಿದ್ದಾರೆ. ನೂತನ ಸಮವಸ್ತ್ರ ಎಂದಿನಂತೆ ನೀಲಿ ಬಣ್ಣದಿಂದಲೇ ಕೂಡಿದ್ದು ಎರಡೂ ಬದಿಗಳಲ್ಲಿ ತಂಡದ ಲೋಗೋದಲ್ಲಿ ಇರುವ ಚಕ್ರದ ವಿನ್ಯಾಸವನ್ನು ಚಿನ್ನದ ಬಣ್ಣದಲ್ಲಿ ಮುದ್ರಿಸಲಾಗಿದೆ. ಒಟ್ಟಾರೆ ಇಂಡಿಯನ್ಸ್‌ ತಂಡದ ನೂತನ ಸಮವಸ್ತ್ರ ಅದ್ಭುತವಾಗಿ ಕಾಣಿಸುತ್ತದೆ ಎಂದೇ ಹೇಳಬಹುದು. "ಬ್ಲೂ... ಗೋಲ್ಡ್‌... ಆಲಾ ರೇ!!! ಕಾತುರ ಕೊನೆಗೂ ಅಂತ್ಯಗೊಂಡಿದೆ. ಡ್ರೀಮ್‌11 ಐಪಿಎಲ್‌ಗೆ ಪಲ್ಟನ್ಸ್‌ ತಂಡದ ನೂತನ ಸಮವಸ್ತ್ರ," ಎಂದು ಟ್ವೀಟ್‌ ಮಾಡಿರುವ ಮುಂಬೈ ಇಂಡಿಯನ್ಸ್‌ ನೂತನ ಸಮವಸ್ತ್ರದ ಝಲಕ್‌ ನೀಡಿದೆ. ನಿಗದಿಯಂತೆ ಮಾರ್ಚ್‌ 29ರಿಂದ ಮೇ 24ರವರೆಗೆ ನಡೆಯಬೇಕಿದ್ದ ಟೂರ್ನಿಯನ್ನು ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ತನ್ನ ಮುಂದಿನ ಆದೇಶದವರೆಗೆ ಬಿಸಿಸಿಐ ರದ್ದು ಪಡಿಸಿತ್ತು. ಇದೀಗ ಅಕ್ಟೋಬರ-ನವೆಂಬರ್‌ ಅವಧಿಯಲ್ಲಿ ನಡೆಯಬೇಕಿದ್ದ ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡಿದ ಬೆನ್ನಲ್ಲೇ ಆ ಅವಧಿಯಲ್ಲಿ ಐಪಿಎಲ್‌ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಅಂತೆಯೇ ಈ ವರ್ಷ ಐಪಿಎಲ್‌ ಆಯೋಜನೆಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಅಂಗಣವನ್ನು ಆಯ್ಕೆ ಮಾಡಿಕೊಂಡಿದ್ದು, ಬಯೋ ಸೆಕ್ಯೂರ್‌ ವಾತಾವರಣ ಇರುವ ಶಾರ್ಜಾ, ದುಬೈ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ಸಂಪೂರ್ಣ 60 ಪಂದ್ಯಗಳನ್ನು ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ. ಈಗಾಗಲೇ ಟೂರ್ನಿ ಸಲುವಾಗಿ ಎಲ್ಲಾ ತಂಡಗಳು ದುಬೈನಲ್ಲಿ ಬೀಡುಬಿಟ್ಟಿದ್ದು, ಮೂರು ವಾರಗಳ ಕಠಿಣ ಅಭ್ಯಾಸ ಶಿಬಿರ ಕೈಗೊಂಡಿವೆ. ಟೂರ್ನಿಯ ಅಧಿಕೃತ ವೇಳಾಪಟ್ಟಿ ಬಿಡುಗಡೆ ಆಗಬೇಕಿದ್ದು ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ತಂಡಗಳು ಮುಖಾಮುಖಿ ಆಗುವ ಸಾಧ್ಯತೆ ಇದೆ. ಕಳೆದ ವರ್ಷ ಐಪಿಎಲ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಕೇವಲ 1 ರನ್‌ ಅಂತರದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೋಲುಣಿಸಿ ನಾಲ್ಕನೇ ಪ್ರಶಸ್ತಿ ಎತ್ತಿ ಹಿಡಿದಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31E9WGz

ಟಿ20 ಕ್ರಿಕೆಟ್‌ಗೆ ಗಂಗೂಲಿ ಲಾಯಕ್ಕಲ್ಲ ಎಂದ ಕೆಕೆಆರ್‌ ತಂಡದ ಮಾಜಿ ಕೋಚ್!

ಹೊಸದಿಲ್ಲಿ: ಏಕದಿನ ಕ್ರಿಕೆಟ್‌ ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಮ್‌ ಇಂಡಿಯಾ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಮಾಜಿ ನಾಯಕ ಸೌರವ್‌ ಗಂಗೂಲಿ ಕೂಡ ಒಬ್ಬರು. 2008ರಲ್ಲಿ ಸೌರವ್‌ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ನಿವೃತ್ತಿ ನೀಡಿದ ಸಂದರ್ಭದಲ್ಲಿ ಟೀಮ್‌ ಇಂಡಿಯಾದ ಸಾರ್ವಕಾಲಿಕ ಅತ್ಯಂತ ಯಶಸ್ವಿ ನಾಯಕನಾಗಿದ್ದರು. ಇನ್ಜು 2008ರಲ್ಲಿ ಶುರುವಾರ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ದಾದಾ ಖ್ಯಾತಿಯ ಬಂಗಾಳದ ಸ್ಟಾರ್‌ ಕ್ರಿಕೆಟಿಗನನ್ನು ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆದರೆ, ದುರದೃಷ್ಟವಶಾತ್ ನೈಟ್‌ ರೈಡರ್ಸ್‌ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಸೌರವ್‌ ಸಾರಥ್ಯದಲ್ಲಿ ನೈಟ್‌ ರೈಡರ್ಸ್ ತಂಡ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ 6ನೇ ಸ್ಥಾನ ಪಡೆದಿತ್ತು. ಹೀಗಾಗಿ ತಂಡದ ಅಂದಿನ ಕೋಚ್‌ ಜಾನ್‌ ಬುಕಾನನ್ 2009ರ ಐಪಿಎಲ್‌ ಟೂರ್ನಿಗೆ ನಾಯಕತ್ವದ ಹಂಚಿಕೆ ಮಾಡಿ ಗಂಗೂಲಿ ಜೊತಗೆ ಬ್ರೆಂಡನ್‌ ಮೆಕಲಮ್‌ಗೆ ನಾಯಕತ್ವ ನೀಡಿದ್ದರು. ಆಟೂರ್ನಿಯಲ್ಲಿ ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವಂತ ಪ್ರದರ್ಶನವನ್ನೇನೂ ನೀಡದ ಗಂಗೂಲಿಗೆ ನಾಯಕತ್ವದ ಹಂಚಿಕೆ ನಿರ್ಧಾರದ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಕೆಕೆಆರ್‌ ತಂಡದ ಮಾಜಿ ಕೋಚ್‌ ಜಾನ್‌ ಬುಕಾನನ್, ಸೌರವ್‌ ಗಂಗೂಲಿ ಟಿ20 ಕ್ರಿಕೆಟ್‌ಗೆ ಲಾಯಕ್ಕಾದ ಆಟಗಾರನಲ್ಲ ಎಂದಿದ್ದಾರೆ. ಅಂದಹಾಗೆ 2010ರ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಬುಕಾನನ್‌ ಅವರನ್ನು ಕೆಕೆಆರ್‌ ತಂಡದ ಕೋಚ್‌ ಸ್ಥಾನದಿಂದ ಕಿತ್ತೊಗೆಯಲಾಗಿತ್ತು. "ಆಗ ನನ್ನ ಆಲೋಚನೆ ಇದ್ದಿದ್ದೇನೆಂದರೆ ಒಬ್ಬ ನಾಯಕನಾಗಗಿ ನೀವು ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದು. ಈ ಮೂಲಕ ಚುಟುಕು ಮಾದರಿಯ ಕ್ರಿಕೆಟ್‌ಗೆ ನಿಮ್ಮ ಆಟ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾನು ಸೌರವ್‌ ಜೊತೆಗೆ ಬಹಳ ಚರ್ಚಿಸಿದ್ದೆ," ಎಂದು ಸ್ಪೋರ್ಟ್ಸ್‌ ಸ್ಟಾರ್‌ಗೆ ನೀಡಿರುವ ಸಂದರ್ಶನದಲ್ಲಿ ಬುಕಾನನ್‌ ಹೇಳಿದ್ದಾರೆ. "ಸೌರವ್‌ ಟಿ20 ಕ್ರಿಕೆಟ್‌ ಮಾದರಿಗೆ ಸೂಕ್ತವಾಗಿದ್ದಾರೆ ಎಂಬುದನ್ನು ನನ್ನಿಂದ ನಂಬಲೂ ಸಾಧ್ಯವಾಗಿರಲಿಲ್ಲ. ಅದರಲ್ಲೂ ಈ ಮಾದರಿಯ ಕ್ರಿಕೆಟ್‌ನಲ್ಲಿ ಕ್ಯಾಪ್ಟನ್‌ ಆಗಲು ಅವರು ಲಾಯಕ್ಕಾದ ಆಟಗಾರ ಆಗಿರಲಿಲ್ಲ. ಸ್ವರಿತ ನಿರ್ಧಾರಗಳನ್ನು ಅವರು ತೆಗೆದುಕೊಳ್ಳುತ್ತಿರಲಿಲ್ಲ. ಅಂದಹಾಗೆ ಟಿ20 ಕ್ರಿಕೆಟ್‌ನಲ್ಲಿ ಒಬ್ಬರಿಂದ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಪ್ರತಿ ನಿರ್ಧಾರವನ್ನು ಶೀಘ್ರವೇ ತೆಗೆದುಕೊಳ್ಳಬೇಕು. ನಾಯಕನಾದವನು ಇದನ್ನು ಅರ್ಥ ಮಾಡಿಕೊಳ್ಳಬೇಕು. ಐಪಿಎಲ್‌ನಂತಹ ದೊಡ್ಡ ಟೂರ್ನಿಗೆ ಇಬ್ಬರು ನಾಯಕರ ಅಗತ್ಯವಿರುತ್ತದೆ," ಎಂದಿದ್ದಾರೆ. "ಸರಳವಾಗಿ ಹೇಳುವುದಾದರೆ ನಾಯಕತ್ವದ ಹಂಚಿಕೆ ಆಗಬೇಕು. ಆನ್‌ ಫೀಲ್ಡ್‌ನಲ್ಲಿ ಪ್ರತಿಯೊಬ್ಬರು ಕೂಡ ನಾಯಕನ ರೀತಿ ಇರಬೇಕು. ಉದಾಹರಣೆಗೆ ಈಗಿನ ಕಾಲದಲ್ಲಿ ಬೌಲರ್‌ಗಳು ಪ್ರತಿ ಎಸೆತಕ್ಕೂ ಮುನ್ನ ಫೀಲ್ಡಿಂಗ್‌ ಮೇಲಿನ ನಿಯಂತ್ರಣವನ್ನು ತಾವು ತೆಗೆದುಕೊಂಡಿರುತ್ತಾರೆ. ಅಂತೆಯೇ ಕ್ಯಾಪ್ಟನ್‌ ಮತ್ತು ಕೋಚ್‌ಗಳಿಗಿಂತಲೂ ಬ್ಯಾಟ್ಸ್‌ಮನ್‌ಗಳು ಆನ್‌ಫೀಲ್ಡ್‌ ನಿರ್ಧಾರ ತೆಗೆದುಕೊಂಡಿರುತ್ತಾರೆ. ಒಂದು ತಂಡದ ಸಾಮರ್ಥ್ಯ ಅಡಗಿರುವುದೇ ಇಲ್ಲಿ," ಎಂದಿದ್ದಾರೆ. ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಟೂರ್ನಿಯ ಸಂಪೂರ್ಣ 60 ಪಂದ್ಯಗಳನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಬಯೋ ಸೆಕ್ಯೂರ್‌ ವಾತಾವರಣ ಇರುವ ದುಬೈ, ಶರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದ್ದು, ಕೆಕೆಆರ್‌ ತಂಡ ಈಗಾಗಲೇ ದುಬೈನಲ್ಲಿ 3 ವಾರಗಳ ಅಭ್ಯಾಸ ಶಿಬಿರ ಆರಂಭಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3hIEgoS

ನೈಟ್‌ ರೈಡರ್ಸ್‌ ಪರ 28 ಎಸೆತಗಳಲ್ಲಿ 72 ರನ್‌ ಚಚ್ಚಿದ ಪೊಲಾರ್ಡ್: ವಿಡಿಯೋ

ಬೆಂಗಳೂರು: ದೈತ್ಯ ಆಲ್‌ರೌಂಡರ್‌ ಕೈರೊನ್‌ ಪೊಲಾರ್ಡ್‌ ಕೇವಲ 28 ಎಸೆತಗಳಲ್ಲಿ ಸ್ಫೋಟಕ 72 ರನ್‌ಗಳನ್ನು ಸಿಡಿಸುವ ಮೂಲಕ ಕೆರಿಬಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಟ್ರಿನ್‌ಬಾಗೊ ನೈಟ್‌ ರೈಡರ್ಸ್‌ ತಂಡಕ್ಕೆ ಸತತ ಆರನೇ ಗೆಲುವು ತಂದುಕೊಟ್ಟಿದ್ದಾರೆ. ಸಿಪಿಎಲ್‌ 2020 ಟೂರ್ನಿಯಲ್ಲಿ ಆಡಿದ ಆರೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನೈಟ್‌ ರೈಡರ್ಸ್‌ ತಂಡ ನಾಕ್‌ಔಟ್ ಹಂತಕ್ಕೆ ಬಹುತೇಕ ಅರ್ಹತೆ ಪಡೆದುಕೊಂಡಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವವಾಗಿ ಹೊರಹೊಮ್ಮಿದೆ. ಶುಕ್ರವಾರ ನಡೆದ ಬಾರ್ಬೆಡೋಸ್ ಟ್ರೈಡೆಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟ್ರೈಡೆಂಟ್ಸ್‌ ತಂಡದ ಪರ ಜಾನ್ಸನ್‌ ಚಾರ್ಲ್ಸ್‌ (47) ಮತ್ತು ಕೈಲ್‌ ಮೇಯರ್ಸ್‌ (42) ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ ತಂಡಕ್ಕೆ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 148 ರನ್‌ಗಳನ್ನು ತಂದುಕೊಟ್ಟರು. ಬಳಿಕ ಗುರಿ ಬೆನ್ನತ್ತಿದ ನೈಟ್‌ ರೈಡರ್ಸ್‌ 65 ರನ್‌ ಗಳಿಸುವ ಹೊತ್ತಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಸಿಡಿದೆದ್ದ ಕ್ಯಾಪ್ಟನ್ ಪೊಲಾರ್ಡ್, ಕೇವಲ 28 ಎಸೆತಗಳಲ್ಲಿ 72 ರನ್‌ಗಳನ್ನು ಚಚ್ಚಿ ತಂಡಕ್ಕೆ ಜಯದ ಮಾಲೆ ತೊಡಿಸಿದರು. ಪೊಲಾರ್ಡ್‌ ಬ್ಯಾಟಿಂಗೆ ಬಂದವೇಳೆ ಟಿಕೆಆರ್‌ ತಂಡದ ಗೆಲುವಿಗೆ 39 ಎಸೆತಗಳಲ್ಲಿ 87 ರನ್ ಗಳಿಸುವ ಅಗತ್ಯವಿತ್ತು. 17ನೇ ಓವರ್‌ ಒಂದರಲ್ಲೇ ರೀಫರ್‌ ಬೌಲಿಂಗ್‌ನಲ್ಲಿ ಸತತ ನಾಲ್ಕು ಸಿಕ್ಸರ್‌ ಬಾರಿಸಿ ಕೊನೆಯ 12 ಎಸೆತಗಳಲ್ಲಿ ಗೆಲುವಿಗೆ 31 ರನ್‌ಗಳು ಅಗತ್ಯವಿರುವಂತೆ ತಂದು ನಿಲ್ಲಿಸಿದರು. ಕೊನೆಯ 4 ಎಸೆತಗಳಲ್ಲಿ 8 ರನ್‌ಗಳ ಅಗತ್ಯವಿದ್ದಾಗ ಕ್ರೀಸ್‌ನಲ್ಲಿದ್ದ ಖಾರಿ ಪಿಯರ್ ಮತ್ತು ಜೇಡೆನ್ ಸೀಲೆಸ್‌ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಮುಂದಿನ ಪಂದ್ಯದಲ್ಲಿ ನೈಟ್‌ ರೈಡರಸ್‌ ಪಡೆ ಜಮೈಕನ್‌ ತಲಾವಾಸ್‌ ವಿರುದ್ಧ ಪೈಪೋಟಿ ನಡೆಸಲಿದೆ. ಕೈರೊನ್‌ ಪೊಲಾರ್ಡ್‌ ಅವರ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದ ಹೈಲೈಟ್ಸ್‌ ಈ ಟ್ವೀಟ್‌ನಲ್ಲಿ ವೀಕ್ಷಿಸಬಹುದಾಗಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಜಮೈಕಾ ತಲಾವಾಸ್‌ ತಂಡ ಆಲ್‌ರೌಂಡ್‌ ಪ್ರದರ್ಶನ ನೀಡುವ ಮೂಲಕ ಸೇಂಟ್‌ ಕಿಟ್ಸ್‌ ಅಂಡ್‌ ನೆವೀಸ್‌ ಪೇಟ್ರಿಯಟ್ಸ್‌ ತಂಡದ ವಿರುದ್ಧ 37 ರನ್‌ ಭರ್ಜರಿ ಜಯ ದಾಖಲಿಸಿದೆ. ಮೊದಲು ಬ್ಯಾಟ್‌ ಮಾಡಿದ ತಲಾವಾಸ್‌ ತಂಡ ಗ್ಲೆನ್‌ ಫಿಲಿಪ್ಸ್‌ 61 ಎಸೆತಗಳಲ್ಲಿ ಅಜೇಯ 79 ರನ್‌ ಗಳಿಸುವ ಮೂಲಕ ತಂಡಕ್ಕೆ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದಲ್ಲಿ 147 ರನ್‌ಗಳನ್ನು ತಂದುಕೊಟ್ಟರು. ನಂತರ ಗುರಿ ಬೆನ್ನತ್ತಿದ ಪೇಟ್ರಿಯಟ್ಸ್‌ ತಂಡ ಕಾರ್ಲೋಸ್‌ ಬ್ರಾತ್‌ವೇಟ್‌ (11ಕ್ಕೆ 3) ಬೌಲಿಂಗ್‌ ದಾಳಿಗೆ ನಲುಗಿ 19.4 ಓವರ್‌ಗಳಲ್ಲಿ 110 ರನ್‌ಗಳಿಗೆ ಆಲ್‌ಔಟ್‌ ಆಯಿತು. ಇದು ಪೇಟ್ರಿಯಟ್ಸ್‌ ತಂಡಕ್ಕೆ ಎದುರಾದ 5ನೇ ಸೋಲಾಗಿದ್ದು, ಅಂಕಪಟ್ಟಿಯ ಕೊನೆಯ ಸ್ಥಾನದಲ್ಲೇ ಉಳಿಯುವಂತಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32HuSff

ಧೋನಿಯಲ್ಲಿ ಪಂದ್ಯ ಗೆದ್ದುಕೊಡುವ ಸಾಮರ್ಥ್ಯ ಕ್ಷೀಣಿಸಿತ್ತು ಎಂದ ಮಾಜಿ ವೇಗಿ!

ಹೊಸದಿಲ್ಲಿ: ಕೊರೊನಾ ವೈರಸ್‌ ಕಾರಣ ಇದೇ ವರ್ಷ ನಡೆಯಬೇಕಿದ್ದ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯನ್ನು 2022ಕ್ಕೆ ಮುಂದೂಡಿದ್ದು ಮಾಜಿ ನಾಯಕ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿನ ಅಂತ್ಯಕ್ಕೆ ಬಹುಮುಖ್ಯ ಕಾರಣ ಎಂದು ಭಾರತ ತಂಡದ ಮಾಜಿ ವೇಗದ ಬೌಲರ್‌ ಆರ್‌ಪಿ ಸಿಂಗ್‌ ಹೇಳಿದ್ದಾರೆ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ನಡೆದ ಒಡಿಐ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ತಂಡ ಅಚ್ಚರಿಯ ಸೋಲುಂಡಿತ್ತು. ಅದೇ ಟೀಮ್ ಇಂಡಿಯಾ ಪರ ಧೋನಿ ಆಡಿದ ಕೊನೆ ಪಂದ್ಯವಾಗಿದೆ. ಬಳಿಕ ಒಂದು ವರ್ಷ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಕ್ಯಾಪ್ಟನ್‌ ಕೂಲ್ ಆಗಸ್ಟ್‌ 15ರಂದು ತಮ್ಮ ಹದಿನೈದು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ಗುಡ್‌-ಬೈ ಹೇಳಿದರು. ಭಾರತ ತಂಡದ ಪರ 350 ಒಡಿಐ ಪಂದ್ಯಗಳನ್ನು ಆಡಿರುವ 39 ವರ್ಷದ ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಧೋನಿ, ತಮ್ಮ ಕೊನೆಯ ಇನಿಂಗ್ಸ್‌ನಲ್ಲಿ 72 ಎಸೆತಗಳಲ್ಲಿ 50 ರನ್‌ ಗಳಿಸಿದ್ದರು. ಆದರೆ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಅವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಮೊದಲಿನಂತೆ ತಂಡಕ್ಕೆ ತಮ್ಮ ಭರ್ಜರಿ ಬ್ಯಾಟಿಂಗ್‌ ಮೂಲಕ ಪಂದ್ಯಗಳನ್ನು ಗೆದ್ದುಕೊಡುವ ಸಾಮರ್ಥ್ಯ ಕ್ಷೀಣಿಸಿದ್ದೂ ಕೂಡ ಅವರ ನಿವೃತ್ತಿ ನಿರ್ಧಾರದಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದು ಆರ್‌.ಪಿ ಸಿಂಗ್‌ ಅಭಿಪ್ರಾಯ ಪಟ್ಟಿದ್ದಾರೆ. "ಖಂಡಿತಾ ಹೌದು, ಟಿ20 ಕ್ರಿಕೆಟ್‌ನಲ್ಲಿ ಅವರು ಅಪ್ರತಿಮ ಆಟಗಾರ ಹೀಗಾಗಿ ಟಿ20 ವಿಶ್ವಕಪ್‌ ಆಡಲು ಕಾಯುತ್ತಿದ್ದರು. ಜೊತೆಗೆ ಅವರ ನಿರ್ಧಾರಕ್ಕೆ ವಯಸ್ಸು ಮತ್ತು ಫಿಟ್ನೆಸ್‌ ಕೂಡ ಗಣನೆಗೆ ಬಂದಿದೆ. ಕಳೆದ 10-15 ತಿಂಗಳಲ್ಲಿ ಐಪಿಎಲ್‌ ಹೊರತಾಗಿ ಕೆಲವೇ ಒಡಿಐ ಪಂದ್ಯಗಳಲ್ಲಿ ಮಾತ್ರವೇ ಧೋನಿಗೆ ತಮ್ಮ ಬ್ಯಾಟಿಂಗ್‌ ಅನಾವರಣ ಪಡಿಸುವ ಅವಕಾಶ ಸಿಕ್ಕಿದೆ," ಎಂದು ಕ್ರಿಕೆಟ್‌ ಡಾಟ್‌ಕಾಮ್‌ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾಜಿ ಎಡಗೈ ವೇಗಿ ಸಿಂಗ್‌ ಹೇಳಿದ್ದಾರೆ. "2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಅವರು 4ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಬಯಸಿದ್ದರು. ಆದರೆ ಟೀಮ್‌ ಮ್ಯಾನೇಜ್ಮೆಂಟ್ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಹೆಚ್ಚಿನ ಪಂದ್ಯಗಳಲ್ಲಿ ಅವರಿಗೆ ಬ್ಯಾಟ್‌ ಮಾಡುವ ಅವಕಾಶವೇ ಸಿಗಲಿಲ್ಲ. ಆದರೆ ಸೆಮಿಫೈನಲ್‌ನಲ್ಲಿ ಏಕಾಏಕಿ ಅವರ ಮೇಲೆ ತಂಡವನ್ನು ಗುರಿ ಮುಟ್ಟಿಸುವ ಒತ್ತಡ ಎದುರಾಗಿತ್ತು. ಅಂದಹಾಗೆ ಈ ಹಿಂದಿನಂತೆ ಅವರಲ್ಲಿ ಪಂದ್ಯಗಳನ್ನು ಗೆದ್ದುಕೊಡುವ ಸಾಮರ್ಥ್ಯ ಉಳಿದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಹೀಗಾಗಿ ನಿವೃತ್ತಿ ನಿರ್ಧಾರಕ್ಕೆ ಈ ಅಂಶ ಕೂಡ ಬಹುಮುಖ್ಯ ಕಾರಣ ಆಗಿರಬಹುದು," ಎಂದಿದ್ದಾರೆ. ಎಂಎಸ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರಾದರೂ, ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಟ ಮುಂದುವರಿಸಲಿದ್ದಾರೆ. ಕೊರೊನಾ ವೈರಸ್‌ ಕಾರಣ ಮಾರ್ಚ್ 29ರಿಂದ ಮೇ 24ರವರೆಗೆ ನಡೆಯಬೇಕಿದ್ದ ಟೂರ್ನಿಯನ್ನು ಬಿಸಿಸಿಐ ತನ್ನ ಮುಂದಿನ ಆದೇಶದವರೆಗೆ ರದ್ದುಗೊಳಿಸಿತ್ತು. ಇದೇ ವರ್ಷ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಟೂರ್ನಿಯನ್ನು ಐಸಿಸಿ ಮುಂದೂಡಿದ ನಂತರ ಆ ಅವಧಿಯಲ್ಲಿ ಐಪಿಎಲ್‌ ಆಯೋಜಿಸಲು ನಿರ್ಧರಿಸಿದ ಬಿಸಿಸಿಐ, ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಟೂರ್ನಿಯ ಸಂಪೂರ್ಣ 60 ಪಂದ್ಯಗಳನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಬಯೋ ಸೆಕ್ಯೂರ್‌ ವಾತಾವರಣ ಇರುವ ದುಬೈ, ಶರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಿದಂತೆ ಎಲ್ಲಾ ಫ್ರಾಂಚೈಸಿ ತಂಡಗಳು ಕಳೆದ ವಾರವೇ ದುಬೈ ತಲುಪಿ 6 ದಿನಗಳ ಕ್ವಾರಂಟೈನ್‌ ಬಳಿಕ 3 ವಾರಗಳ ಸಮರಾಭ್ಯಾಸ ಆರಂಭಿಸಿವೆ. ಇನ್ನು ಸೆಪ್ಟೆಂಬರ್ 19ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಸೂಪರ್‌ ಕಿಂಗ್ಸ್‌ ಮತ್ತು ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ಇದ್ದು, ಟೂರ್ನಿಯ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾಗಬೇಕಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32E94Rt

5 ತಿಂಗಳ ಬಳಿಕ ಬ್ಯಾಟಿಂಗ್‌ ಮಾಡಿದ್ದಕ್ಕೆ ಸ್ವಲ್ಪ ಭಯವಾಯಿತೆಂದ ವಿರಾಟ್‌ ಕೊಹ್ಲಿ!

ಹೊಸದಿಲ್ಲಿ: ಕಳೆದ ಮಾರ್ಚ್‌ ತಿಂಗಳಿನಿಂದ ಬರೋಬ್ಬರಿ ಆರು ತಿಂಗಳು ಕಾಲ ಕ್ರಿಕೆಟ್‌ ಆಡದೆ ಇದ್ದ ಕ್ರಿಕೆಟಿಗರ ಸಾಲಿನಲ್ಲಿ ತಂಡದ ನಾಯಕ ವಿರಾಟ್‌ ಕೊಹ್ಲಿಯೂ ಒಬ್ಬರು. 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸಲುವಾಗಿ ಬಲಗೈ ಬ್ಯಾಟ್ಸ್‌ಮನ್‌ ಶನಿವಾರ ಐಸಿಸಿ ಕ್ರಿಕೆಟ್‌ ಅಕಾಡೆಮಿಯ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಕೊರೊನಾ ವೈರಸ್‌ ಇಡೀ ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದರಿಂದ ಸೇರಿದಂತೆ ಕ್ರಿಕೆಟಿಗರು ಮನೆಯಲ್ಲಿಯೇ ಸಮಯ ಕಳೆದಿದ್ದರು. ಸತತ ಆರು ತಿಂಗಳ ಕಾಲ ಕ್ರಿಕೆಟ್‌ ಆಡದೆ, ದಿಢೀರನೇ ಬ್ಯಾಟಿಂಗ್‌ ಮಾಡುವುದು ಕೊಂಚ ಕಷ್ಟವಾಗಲಿದೆ. ಚೆಂಡಿನ ಜತೆ ಬ್ಯಾಟ್‌ನ ಸಮಯ, ಎಸೆತವನ್ನು ಗ್ರಹಿಸುವಿಕೆ ಸೇರಿದಂತೆ ಬ್ಯಾಟಿಂಗ್‌ ಕೌಶಲಗಳಿಗೆ ಕೊಂಚ ಹಿನ್ನಡೆಯಾಗಬಹುದು. "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಿರೀಕ್ಷೆ ಮಾಡಿದಕ್ಕಿಂತ ಉತ್ತಮವಾಗಿ ಬ್ಯಾಟಿಂಗ್‌ ಮಾಡಿದ್ದೇನೆ. ತುಂಬಾ ದಿನಗಳ ನಂತರ ಬ್ಯಾಟಿಂಗ್‌ ಮಾಡಿದ ನನಗೆ ನೆಟ್ಸ್‌ನಲ್ಲಿ ಸ್ವಲ್ಪ ಭಯವಾಗಿತ್ತು. ಕಳೆದ ಐದು ತಿಂಗಳಿನಿಂದ ನಾನು ಬ್ಯಾಟ್‌ ಮುಟ್ಟಿರಲಿಲ್ಲ, ಆದರೆ ಇದೀಗ ನಿರೀಕ್ಷೆ ಮಾಡಿದಕ್ಕಿಂತ ಉತ್ತಮ ಬ್ಯಾಟಿಂಗ್‌ ಮಾಡಿದ್ದೇನೆ. ಲಾಕ್‌ಡೌನ್‌ ಅವಧಿಯಲ್ಲಿ ಸ್ವಲ್ಪ ತರಬೇತಿಯನ್ನು ಪಡೆದಿದ್ದೆ ಹಾಗಾಗಿ, ಸ್ವಲ್ಪ ಫಿಟ್‌ ಇದ್ದೇನೆ. ಇದು ಬ್ಯಾಟಿಂಗ್‌ ಮಾಡಲು ನೆರವಾಗಿದೆ," ಎಂದು ವಿರಾಟ್‌ ಕೊಹ್ಲಿ ಹೇಳಿರುವುದನ್ನು ಫ್ರಾಂಚೈಸಿ ವೆಬ್‌ಸೈಟ್‌ ಪ್ರಕಟಿಸಿದೆ. "ಏಕೆಂದರೆ ದೇಹ ಲೈಟಾಗಿದ್ದರೆ, ನೀವು ಚೆಂಡಿಗೆ ಪ್ರತಿಕ್ರಿಯಿಸಲು ಹೆಚ್ಚು ಸಮಯ ಸಿಗುತ್ತದೆ. ಇದು ಬಿಗ್‌ ಪ್ಲಸ್‌ ಪಾಯಿಂಟ್‌. ಒಂದು ವೇಳೆ ಹೆಚ್ಚಿನ ತೂಕದೊಂದಿಗೆ ಬ್ಯಾಟಿಂಗ್‌ ಮಾಡಿದರೆ, ದೇಹ ಆಡಲು ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ನನ್ನ ಮನಸಿನೊಂದಿಗೆ ಆಡಿದ್ದು, ನಿರೀಕ್ಷೆ ಮಾಡಿದ್ದಕ್ಕಿಂತ ಉತ್ತಮವಾಗಿ ಬ್ಯಾಟಿಂಗ್‌ ಮಾಡಿದ್ದೇನೆ," ಎಂದು ಕೊಹ್ಲಿ ಹೇಳಿದರು. 2009 ಹಾಗೂ 2016ರಲ್ಲಿ ರನ್ನರ್‌ ಅಪ್‌ ಆಗಿದ್ದ ಆರ್‌ಸಿಬಿ ಇನ್ನುಳಿದ ಎಲ್ಲಾ ಆವೃತ್ತಿಗಳಲ್ಲಿ ಚೆನ್ನಾಗಿ ಆಡಿರಲಿಲ್ಲ. ಆದರೆ 2020ರ ಆವೃತ್ತಿಯ ಐಪಿಎಲ್‌ಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ ಹರಾಜಿನಲ್ಲಿ ತಂಡ ಉತ್ತಮ ಆಟಗಾರರನ್ನು ಖರೀದಿಸಿತ್ತು. ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ನಾಯಕ ಆರೋನ್‌ ಫಿಂಚ್‌ ಅವರನ್ನು 4.4 ಕೋಟಿ ರೂ.ಗಳಿಗೆ ಖರೀದಿಸಲಾಗಿತ್ತು. ಆ ಮೂಲಕ ಆರಂಭಿಕ ಒಂದು ಸ್ಥಾನ ಭರ್ತಿಯಾಯಿತು. ಡೇಲ್‌ ಸ್ಟೇನ್‌, ಕ್ರಿಸ್‌ ಮೋರಿಸ್‌, ಇಸುರು ಉದನಾ ಅವರನ್ನು ಪಡೆಯುವ ಮೂಲಕ ಡೆತ್ ಬೌಲಿಂಗ್‌ ವಿಭಾಗವನ್ನೂ ಬಲಿಷ್ಠಗೊಳಿಸಿಕೊಳ್ಳಲಾಗಿದೆ. ಆರ್‌ಸಿಬಿ ತಂಡದ ಸ್ಪಿನ್ನರ್‌ ಯಜ್ವೇಂದ್ರ ಚಹಲ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ಶಹಬಾಜ್‌ ನದೀಮ್ ನಾಯಕ ವಿರಾಟ್‌ ಕೊಹ್ಲಿಗೆ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡಿದ್ದರು. ಈ ಮೂವರು ಸ್ಪಿನ್ನರ್‌ಗಳು ಭಾರತ ಪ್ರತಿನಿಧಿಸಿದ್ದಾರೆ. "ಮೊದಲನೇ ದಿನ ಸ್ಪಿನ್ನರ್‌ಗಳು ಅತ್ಯುತ್ತಮವಾಗಿ ಬೌಲಿಂಗ್‌ ಮಾಡಿದ್ದಾರೆ ಹಾಗೂ ಸ್ಥಿರ ಪ್ರದೇಶಗಳಲ್ಲಿ ಚೆಂಡನ್ನು ಪಿಚ್‌ ಮಾಡಿದ್ದಾರೆ," ಎಂದ ವಿರಾಟ್‌ ಕೊಹ್ಲಿ, "ಶಹಬಾಜ್‌ ಬೌಲಿಂಗ್‌ ಉತ್ತಮ, ವಾಷಿ ಎಸೆತಗಳು ಕೂಡ ಅದ್ಭುತ ಹಾಗೂ ಚಹಲ್‌ ಬೌಲಿಂಗ್‌ ಸಹ ಚೆನ್ನಾಗಿಯೇ ಇತ್ತು. ಆದರೆ ವೇಗಿಗಳು ಸ್ವಲ್ಪ ಹೊಂದಾಣಿಕೆ ಸಾಧಿಸಬೇಕು, ಒಟ್ಟಾರೆ ಶಿಬಿರ ಉತ್ತಮ ಆರಂಭ ಕಂಡಿದೆ," ಎಂದು ಆರ್‌ಸಿಬಿ ನಾಯಕ ಶ್ಲಾಘಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3ly6C7A

'ಕಣ್ಣೀರಿನಲ್ಲಿದೆ ಸುರೇಶ್‌ ರೈನಾ ಕುಂಟುಂಬ' : ಎಡಗೈ ಬ್ಯಾಟ್ಸ್‌ಮನ್‌ ಐಪಿಎಲ್‌ ತೊರೆದ ಕಾರಣ ಶಾಕಿಂಗ್‌.!

ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ವಾರಗಳು ಇರುವಾಗಲೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬ್ಯಾಟಿಂಗ್‌ ಆಧಾರ ಸ್ಥಂಭ ಈ ಬಾರಿ ಐಪಿಎಲ್‌ನಿಂದ ಹೊರ ನಡೆದಿದ್ದಾರೆ. ಆ ಮೂಲಕ ಕ್ರಿಕೆಟ್‌ ಅಭಿಮಾನಿಗಳಿಗೆ ಆಘಾತ ನೀಡಿದ್ದರು. ಇದರ ಬೆನ್ನಲ್ಲೆ ಕೆಲವು ಮೂಲಗಳು ಚೆನ್ನೈ ಫ್ರಾಂಚೈಸಿಯಲ್ಲಿ ಕೆಲ ಸದಸ್ಯರಲ್ಲಿ ಕೋವಿಡ್‌-19 ದೃಢಪಟ್ಟಿರುವ ಕಾರಣದಿಂದ ಅವರು ಐಪಿಎಲ್‌ 13ನೇ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆಂದು ತಿಳಿಸಿದ್ದವು. ಆದರೆ, ಇದಕ್ಕೆ ನೈಜ ಕಾರಣವನ್ನು ದೈನಿಕ್‌ ಜಾಗ್ರನ್‌ ವರದಿ ಮಾಡಿದೆ. ಪಠಾಣ್‌ಕೋಟ್‌ನ ಥರಿಯಾಲ್‌ ಗ್ರಾಮದಲ್ಲಿ ಮಧ್ಯ ರಾತ್ರಿ ನಡೆದ ದಾಳಿಯಲ್ಲಿ ಸುರೇಶ್‌ ರೈನಾ ಅವರ ಮಾವ ಮೃತಪಟ್ಟಿದ್ದು, ಅವರ ಅತ್ತೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ. ಆಗಸ್ಟ್ 19ರಂದು ರಾತ್ರಿ ಕುಟುಂಬ ಮನೆಯ ಛಾವಣಿಯ ಮೇಲೆ ನಿದ್ರೆ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ಆದಾಗ್ಯೂ, ದುಷ್ಕರ್ಮಿಗಳು ಯಾರೆಂದೂ ಇನ್ನೂ ಪತ್ತೆ ಹಚ್ಚಲಾಗಿಲ್ಲ. ಇಂಗ್ಲಿಷ್.ಜಾಗ್ರಾನ್.ಕಾಂನ ವರದಿಯಲ್ಲಿ ಕುಟುಂಬದ ಸದಸ್ಯರು ನಿದ್ರೆಯಲ್ಲಿದ್ದಾಗ ದಾಳಿಕೋರರು ಮಾರಕಾಸ್ತ್ರಗಳಿಮದ ಕೊಚ್ಚಿ ಕೊಂದಿದ್ದಾರೆ ಎಂದು ಉಲ್ಲೇಖಿಸಿದೆ. "ಮಾರಕಾಸ್ತ್ರಗಳಿಂದ ಹಲ್ಲೆಗೆ ಒಳಗಾಗಿರುವ ರೈನಾ ಅವರ ತಂದೆ ಸಹೋದರಿ ಆಶಾ ದೇವಿ ಸ್ಥಿತಿ ಗಂಭೀರವಾಗಿದ್ದು ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ. 58ರ ಪ್ರಾಯದ ರೈನಾ ಅವರ ಮಾವ ಅಶೋಕ್‌ ಕುಮಾರ್‌ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಮೃತರ ಮಕ್ಕಳಾದ 32ರ ಪ್ರಾಯದ ಕೌಶಲ್‌ ಕುಮಾರ್‌ ಹಾಗೂ 24ರ ಪ್ರಾಯದ ಅಪಿನ್‌ ಕುಮಾರ್‌ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ. ಅಲ್ಲದೆ, ಮೃತ ಅಶೋಕ್‌ ಕುಮಾರ್ ತಾಯಿ 80ರ ಪ್ರಾಯದ ತಾಯಿ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ," ಎಂದು ವರದಿ ತಿಳಿಸಿದೆ. "ದಾಳಿಗೆ ಒಳಗಾಗಿರುವವರು ಸುರೇಶ್ ರೈನಾ ಅವರ ಆಪ್ತರು ಎಂದು ತಿಳಿದ ನಂತರ ಪೊಲೀಸರು, ತಮ್ಮ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪೊಲೀಸ್ ಮತ್ತು ವಿಧಿವಿಜ್ಞಾನ ತಜ್ಞರ ತಂಡ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ದಾಳಿಕೋರರನ್ನು ಗುರುತಿಸಲು ಪೊಲೀಸರು ಶ್ವಾನ ತಂಡದಿಂದ ಸಹಾಯ ಪಡೆದರು ಆದರೆ ಯಾವುದೇ ಸುಳಿವು ಪಡೆಯಲು ಸಾಧ್ಯವಾಗಿಲ್ಲ," ಎಂದು ವರದಿಯಲ್ಲಿ ಉಲ್ಲೇಖವಾಗಿದೆ. "ಸುರೇಶ್‌ ರೈನಾ ವೈಯಕ್ತಿಕ ಕಾರಣಗಳಿಂದ ಭಾರತಕ್ಕೆ ಹಿಂದಿರುಗಿದ್ದಾರೆ. ಈ ಬಾರಿಯ ಐಪಿಎಲ್‌ ಟೂರ್ನಿಗೆ ಸಂಪೂರ್ಣವಾಗಿ ಅವರು ಲಭ್ಯವಾಗುವುದಿಲ್ಲ. ಸುರೇಶ್‌ ರೈನಾ ಮತ್ತು ಕುಟುಂಬದವರಿಗೆ ಈ ಸಮಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನ ಸಂಪೂರ್ಣ ಬೆಂಬಲ ಸಿಗಲಿದೆ," ಎಂಬ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಸಿಇಓ ವಿಶ್ವನಾಥನ್‌ ಹೇಳಿಕೆಯನ್ನು ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪ್ರಕಟ ಮಾಡಿದೆ. ಕಳೆದ ವಾರವಷ್ಟೇ ಕ್ಯಾಪ್ಟನ್‌ ಕೂಲ್‌ ಎಂಎಸ್‌ ಧೋನಿ ನಿವೃತ್ತಿ ಬಳಿಕ ಸುರೇಶ್‌ ರೈನಾ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಟೀಮ್‌ ಇಂಡಿಯಾ ಸೇವೆಗೆ ಗುಡ್‌-ಬೈ ಹೇಳಿದರು. ಆದರೆ, ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಟ ಮುಂದುವರಿಸುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ವಿದೇಶಿ ಲೀಗ್‌ಗಳಲ್ಲಿ ಆಡುವ ಬಯಕೆಯನ್ನೂ ಹೊರಹಾಕಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3jrAYqy

'ಸಚಿನ್‌-ಲಾರಾ ಹೋಲಿಕೆ ಈತನಲ್ಲಿದೆ' : ಭಾರತದ ಯುವ ಪ್ರತಿಭೆಯನ್ನು ಶ್ಲಾಘಿಸಿದ ಬ್ರಾಡ್‌ ಹಾಗ್‌.!

ಹೊಸದಿಲ್ಲಿ: ಯುವ ಹಾಗೂ ಅನುಭವಿ ಆಟಗಾರರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಸಂಯೋಜನೆಯನ್ನು ಹೊಂದಿದೆ. ಕಳೆದ ಆವೃತ್ತಿಗಿಂತ ಈ ಬಾರಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಡೆಲ್ಲಿ, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಪ್ಲೇಆಫ್‌ಗೆ ಅರ್ಹತೆ ಪಡೆಯಲಿದೆ ಎಂದು ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಕೋಲ್ಕತ್ತಾ ನೈಟ್‌ ರೈಡರ್ಸ್ ಮಾಜಿ ಆಟಗಾರ, "ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಯುವಕರು ಹಾಗೂ ಅನುಭವಿಗಳಿಂದ ಕೂಡಿದ ಅಗ್ರ ಆರು ಕ್ರಮಾಂಕಗಳು ಅತ್ಯುತ್ತಮವಾಗಿವೆ. ಶಿಖರ್‌ ಧವನ್‌ ಹಾಗೂ ಅಗ್ರ ಸ್ಥಾನದಲ್ಲಿದ್ದರೆ, ರಿಷಭ್‌ ಪಂತ್‌ ಹಾಗೂ ಶ್ರೇಯಸ್‌ ಅಯ್ಯರ್‌ ನಂತರದ ಸ್ಥಾನಗಳಲ್ಲಿ ತಂಡಕ್ಕೆ ಬಲ ತುಂಬಲಿದ್ದಾರೆ ಹಾಗೂ ರನ್‌ಗಳನ್ನು ಗಳಿಸಲಿದ್ದಾರೆ," ಎಂದು ಹೇಳಿದರು. 2019ರಲ್ಲಿ 16 ಪಂದ್ಯಗಳಿಂದ ಎರಡು ಅರ್ಧಶತಕಗಳು ಸೇರಿದಂತೆ 353 ರನ್‌ಗಳನ್ನು ಗಳಿಸಿದ್ದ 19 ವಯೋಮಿತಿ ವಿಶ್ವಕಪ್‌ ವಿಜೇತ ನಾಯಕ ಪೃಥ್ವಿ ಶಾ ಅವರ ಮೇಲೆ ಬ್ರಾಡ್‌ ಹಾಗ್‌ ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಮುಂಬೈ ಯುವ ಬ್ಯಾಟ್ಸ್‌ಮನ್ ಬಗ್ಗೆ ಸಾಕಷ್ಟು ಮಾತನಾಡಿರುವ ಆಸಿಸ್‌ ಮಾಜಿ ವೇಗಿ, ಅವರನ್ನು ಮಾಸ್ಟರ್‌ ಬ್ಲಾಸ್ಟರ್‌ ಹೋಲಿಸಿದ್ದಾರೆ. ಪೃಥ್ವಿ ಶಾ ಅವರ ಬ್ಯಾಟಿಂಗ್‌ ಸಚಿನ್‌ ತೆಂಡೂಲ್ಕರ್‌ ಹಾಗೂ ವಿಂಡೀಸ್‌ ದಿಗ್ಗಜ ಅವರ ಸಂಯೋಜನೆಯಿಂದ ಕೂಡಿದೆ ಎಂದಿದ್ದಾರೆ. " ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಪ್ರಮುಖ ಆಕರ್ಷಣೆ ಎಂದರೆ ಅದು ಪೃಥ್ವಿ ಶಾ ಎನ್ನಬಹುದು. ಅವರು ಹೆಚ್ಚಿನ ರನ್‌ಗಳನ್ನು ಗಳಿಸಿ ಜಗತ್ತಿಗೆ ತಮ್ಮ ಪ್ರತಿಭೆ ಏನೆಂಬುದನ್ನೂ ತೋರಿಸುವ ಸಮಯ ಬಂದಾಗಿದೆ. ಯುವ ಬ್ಯಾಟ್ಸ್‌ಮನ್‌ ಸ್ವಲ್ಪ ಸಚಿನ್‌ ತೆಂಡೂಲ್ಕರ್‌ ಹಾಗೂ ಬ್ರಿಯನ್‌ ಲಾರಾ ಅವರನ್ನು ಹೋಲುತ್ತಾರೆ," ಎಂದು ಹಾಗ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌ ತಂಡಕ್ಕೆ ವಿಶೇಷ ಸಂಯೋಜನೆಯನ್ನು ಕಲ್ಪಿಸಲಿದ್ದಾರೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಚೆನ್ನೈ ಮೂಲದ ಸ್ಪಿನ್ನರ್‌, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ವರ್ಗಾವಣೆಯಾಗಿದ್ದರು. ಕ್ಯಾಪಿಟಲ್ಸ್‌ ಬೌಲಿಂಗ್‌ ವಿಭಾಗ ಸ್ವಲ್ಪ ದುರ್ಬಲವಾಗಿದ್ದರೂ ಅಶ್ವಿನ್‌ ಸೇರ್ಪಡೆಯಿಂದ ಇದೀಗ ಬಲಿಷ್ಟವಾಗಿದೆ ಎಂಬುದನ್ನು ಹಾಗ್‌ ಪ್ರತಿಪಾದಿಸಿದರು. "ಆರ್‌ ಅಶ್ವಿನ್‌ ಅವರನ್ನು ಸ್ವಾಧೀನಪಡಿಸಿಕೊಳ್ಳುವುದೆಂದರೆ ಅದ್ಭುತ, ಏಕೆಂದರೆ ಅವರು ಗುಣಮಟ್ಟದ ನಾಯಕತ್ವ, ಉತ್ತಮ ಸ್ಪಿನ್ನರ್‌ ಹಾಗೂ ಮಧ್ಯಮ ಓವರ್‌ಗಳಲ್ಲಿ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಆಸರೆಯಾಗ ಬಲ್ಲರು. ಈ ಕಾರಣದಿಂದಲೇ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ತಂಡಕ್ಕೆ ಬಲವನ್ನು ತಂದುಕೊಡಬಲ್ಲರು" ಎಂದು ಅವರು ಒತ್ತಿ ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32FiV9N

ಚೆನ್ನೈ ಫ್ರಾಂಚೈಸಿಯ ದೀಪಕ್‌ ಚಹರ್‌, ಗಾಯಕ್ವಾಡ್‌ಗೆ ಕೊರೊನಾ.! : ವೇಳಾಪಟ್ಟಿ ಪ್ರಕಟ ವಿಳಂಬ

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ 13ನೇ ಆವೃತ್ತಿಯು ಕೋವಿಡ್ -19 ಹರಡುವಿಕೆಗೆ ಸಂಬಂಧಿಸಿದಂತೆ ಯಾವುದೇ ತೊಂದರೆಗಳಿಲ್ಲದೆ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ [ಬಿಸಿಸಿಐ] ಕೆಲವು ಪ್ರಬಲ ಆರೋಗ್ಯ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ನೀಡಿದೆ. ಆದಾಗ್ಯೂ, ತಂಡದಲ್ಲಿ 13 ಮಂದಿಗೆ ಕೋವಿಡ್‌ 19 ಪಾಸಿಟಿವ್‌ ಬಂದಿದೆ. ಈ 13 ಮಂದಿಯಲ್ಲಿ ವೇಗಿ ದೀಪಕ್‌ ಚಹರ್‌ ಹಾಗೂ ಈ ಇಬ್ಬರು ಆಟಗಾರರಿಗೆ ಕೊರೊನಾ ವೈರಸ್‌ ತಗುಲಿದೆ ಎಂದು ವರದಿಗಳು ತಿಳಿಸಿವೆ. ಆದರೆ, ಸಿಎಸ್‌ಕೆ ತಂಡದ ಮುಖ್ಯ ಆಟಗಾರ ಸುರೇಶ್ ರೈನಾ ಅವರು ವೈಯಕ್ತಿಕ ಕಾರಣಗಳಿಂದ 13ನೇ ಆವೃತ್ತಿಯಿಂದ ಹೊರ ನಡೆದಿದ್ದಾರೆ. ಇದು ತಂಡಕ್ಕೆ ಭಾರಿ ನಷ್ಟವಾಗಲಿದೆ. ಐಪಿಎಲ್‌ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಕೊರೊನಾ ಟೆಸ್ಟ್‌ ಮಾಡಿಸಿಕೊಳ್ಳುವುದು ಹಾಗೂ ಕ್ವಾರಂಟೈನ್‌ಗೆ ಒಳಗಾಗುವುದು ಕಡ್ಡಾಯ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಶನಿವಾರ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಕೊರೊನಾ ವೈರಸ್‌ ತಗುಲಿರುವುದರಿಂದ ಐಪಿಎಲ್‌ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಣೆ ಮಾಡಲು ಇನ್ನಷ್ಟು ವಿಳಂಬ ಮಾಡಲಿದೆ ಎಂದು ಹೇಳಲಾಗುತ್ತಿದೆ. ಟೂರ್ನಿ ಆರಂಭವಾಗುವ ಎರಡು ವಾರಗಳ ಮುನ್ನ ಐಪಿಎಲ್‌ ವೇಳಾಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ವರದಿಗಳಿಂದ ತಿಳಿದುಬಂದಿದೆ. ಆಗಸ್ಟ್‌ 20 ರಿಂದ 28ರ ನಡುವೆ ಯುಎಇಗೆ ಬಂದಿರುವ ಎಲ್ಲಾ ಫ್ರಾಂಚೈಸಿಗಳಲ್ಲಿ ಒಟ್ಟು 1988 ಆರ್‌ಟಿಪಿಸಿಆರ್‌ ಕೋವಿಡ್‌ ಟೆಸ್ಟ್‌ಗಳನ್ನು ಮಾಡಲಾಗಿದೆ ಎಂದು ಬಿಸಿಸಿಐ ಪತ್ರಿಕಾ ಹೇಳಿಕೆ ತಿಳಿಸಿದೆ. ಆಟಗಾರರು, ಸಹಾಯಕ ಸಿಬ್ಬಂದಿ, ಟೀಮ್‌ ಮ್ಯಾನೇಜ್‌ಮೆಂಟ್‌, ಬಿಸಿಸಿಐ ಸಿಬ್ಬಂದಿ, ಹೋಟೆಲ್‌ ಹಾಗೂ ಸಾರಿಗೆ ಸಿಬ್ಬಂದಿ ಸೇರಿದಂತೆ ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ ಎಲ್ಲರನ್ನೂ ಟೆಸ್ಟ್‌ಗೆ ಒಳಪಡಿಸಲಾಗಿದೆ. ಕೋವಿಡ್‌-19 ಪಾಸಿಟಿವ್‌ ಬಂದಿರುವವರನ್ನು ಈಗಾಗಲೇ ಐಸೋಲೇಷನ್‌ಗೆ ಒಳಪಡಿಸಲಾಗಿದೆ ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದಿದ್ದವರನ್ನು ಕ್ವಾರಂಟೈನ್‌ ಮಾಡಲಾಗಿದ್ದು, ಎಲ್ಲಾ ಉಸ್ತುವಾರಿಯನ್ನು ಐಪಿಎಲ್‌ ವೈದ್ಯಕೀಯ ತಂಡ ನಿರ್ವಹಿಸುತ್ತಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32EJk7p

ಚೆನ್ನೈ ಫ್ರಾಂಚೈಸಿಯಲ್ಲಿ ಸುರೇಶ್‌ ರೈನಾ ಸ್ಥಾನ ತುಂಬಬಲ್ಲ ಮೂವರು ಆಟಗಾರರು.!

ಹೊಸದಿಲ್ಲಿ: ಬಹು ನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಸಾಕಷ್ಟು ಅಡೆ ತಡೆಗಳು ಎದುರಾಗುತ್ತಿವೆ. ಟೂರ್ನಿ ಆರಂಭಕ್ಕೆ 20 ದಿನಗಳಿಗೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಶನಿವಾರ ತಂಡದ 12 ಮಂದಿಗೆ ಕೋವಿಡ್‌-19 ಪಾಸಿಟಿವ್‌ ಬಂದಿದ್ದು, ಮತ್ತೆ ಆಟಗಾರರು ಕ್ವಾರಂಟೈನ್‌ಗೆ ತೆರಳಿದ್ದಾರೆ. ಇದಕ್ಕಿಂದ ಮುಖ್ಯವಾಗಿ ಚೆನ್ನೈ ಫ್ರಾಂಚೈಸಿ ನಾಯಕ ಎಂಎಸ್‌ ಧೋನಿಗೆ 2008ರಿಂದ ಬೆನ್ನೆಲುಬಾಗಿದ್ದ ನಿಂತಿದ್ದ ಎಡಗೈ ಹಿರಿಯ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಅವರು ವೈಯಕ್ತಿಕ ಕಾರಣಗಳಿಂದ 13ನೇ ಆವೃತ್ತಿಯ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರು ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಇದರಿಂದ ಸಿಎಸ್‌ಕೆ ಪಾಳಯದಲ್ಲಿ ಟೂರ್ನಿ ಆರಂಭಕ್ಕೂ ಮುನ್ನವೇ ಹಿನ್ನಡೆಯಾಗಿದೆ. ಈ ಕುರಿತು ಸಿಎಸ್‌ಕೆ ಸಿಇಓ ಕೆ.ಎಸ್‌ ವಿಶ್ವನಾಥನ್‌ ಸೋಶಿಯಲ್‌ ಮೀಡಿಯಾದಲ್ಲಿ ತಿಳಿಸಿದ್ದಾರೆ.ಇದೀಗ ಸುರೇಶ್‌ ರೈನಾ ಸ್ಥಾನಕ್ಕೆ ಯಾರನ್ನು ಆಡಿಸಲಾಗುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಕಳೆದ 11 ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಪ್ಲೇಆಫ್‌ ತಲುಪುವಲ್ಲಿ ಸುರೇಶ್‌ ರೈನಾ ಮಹತ್ವದ ಪಾತ್ರವಹಿಸಿದ್ದರು. ಹಾಗಾಗಿ, ರೈನಾ ಸ್ಥಾನಕ್ಕೆ ಚೆನ್ನೈ ಫ್ರಾಂಚೈಸಿಯು ಮೂರು ಆಟಗಾರರನ್ನು ಆಡಿಸುವ ಸಾಧ್ಯತೆ ಇದೆ.

ತಮ್ಮ ವೈಯಕ್ತಿಕ ಕಾರಣಗಳಿಂದ 13ನೇ ಆವೃತ್ತಿಯ ಐಪಿಎಲ್‌ನಿಂದ ಹಿಂದೆ ಸರಿದಿರುವ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಸುರೇಶ್‌ ರೈನಾ ಅವರ ಸ್ಥಾನಕ್ಕೆ ಮೂವರು ಆಟಗಾರರು ರೇಸ್‌ನಲ್ಲಿದ್ದಾರೆ. ಇದರಲ್ಲಿ ಒಬ್ಬ ಕನ್ನಡಿಗ ಆಟಗಾರ ಇದ್ದಾರೆ.


ಚೆನ್ನೈ ಫ್ರಾಂಚೈಸಿಯಲ್ಲಿ ಸುರೇಶ್‌ ರೈನಾ ಸ್ಥಾನ ತುಂಬಬಲ್ಲ ಮೂವರು ಆಟಗಾರರು.!

ಹೊಸದಿಲ್ಲಿ:

ಬಹು ನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಸಾಕಷ್ಟು ಅಡೆ ತಡೆಗಳು ಎದುರಾಗುತ್ತಿವೆ. ಟೂರ್ನಿ ಆರಂಭಕ್ಕೆ 20 ದಿನಗಳಿಗೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಶನಿವಾರ ತಂಡದ 12 ಮಂದಿಗೆ ಕೋವಿಡ್‌-19 ಪಾಸಿಟಿವ್‌ ಬಂದಿದ್ದು, ಮತ್ತೆ ಆಟಗಾರರು ಕ್ವಾರಂಟೈನ್‌ಗೆ ತೆರಳಿದ್ದಾರೆ.

ಇದಕ್ಕಿಂದ ಮುಖ್ಯವಾಗಿ ಚೆನ್ನೈ ಫ್ರಾಂಚೈಸಿ ನಾಯಕ ಎಂಎಸ್‌ ಧೋನಿಗೆ 2008ರಿಂದ ಬೆನ್ನೆಲುಬಾಗಿದ್ದ ನಿಂತಿದ್ದ ಎಡಗೈ ಹಿರಿಯ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಅವರು ವೈಯಕ್ತಿಕ ಕಾರಣಗಳಿಂದ 13ನೇ ಆವೃತ್ತಿಯ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರು ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಇದರಿಂದ ಸಿಎಸ್‌ಕೆ ಪಾಳಯದಲ್ಲಿ ಟೂರ್ನಿ ಆರಂಭಕ್ಕೂ ಮುನ್ನವೇ ಹಿನ್ನಡೆಯಾಗಿದೆ. ಈ ಕುರಿತು ಸಿಎಸ್‌ಕೆ ಸಿಇಓ ಕೆ.ಎಸ್‌ ವಿಶ್ವನಾಥನ್‌ ಸೋಶಿಯಲ್‌ ಮೀಡಿಯಾದಲ್ಲಿ ತಿಳಿಸಿದ್ದಾರೆ.

ಇದೀಗ ಸುರೇಶ್‌ ರೈನಾ ಸ್ಥಾನಕ್ಕೆ ಯಾರನ್ನು ಆಡಿಸಲಾಗುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಕಳೆದ 11 ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಪ್ಲೇಆಫ್‌ ತಲುಪುವಲ್ಲಿ ಸುರೇಶ್‌ ರೈನಾ ಮಹತ್ವದ ಪಾತ್ರವಹಿಸಿದ್ದರು. ಹಾಗಾಗಿ, ರೈನಾ ಸ್ಥಾನಕ್ಕೆ ಚೆನ್ನೈ ಫ್ರಾಂಚೈಸಿಯು ಮೂರು ಆಟಗಾರರನ್ನು ಆಡಿಸುವ ಸಾಧ್ಯತೆ ಇದೆ.



ಯೂಸಫ್‌ ಪಠಾಣ್‌
ಯೂಸಫ್‌ ಪಠಾಣ್‌

ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡದ ಮಾಜಿ ಆಲ್‌ರೌಂಡರ್‌ ಯೂಸಫ್‌ ಪಠಾಣ್‌ ಅವರನ್ನು 2020ರ ಐಪಿಎಲ್‌ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಒಟ್ಟು ಮೂರು ಫ್ರಾಂಚೈಸಿಗಳಲ್ಲಿ ಆಡಿರುವ ಪಠಾಣ್‌, ಅಂತೆಯೇ ಮೂರು ಬಾರಿ ಐಪಿಎಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. 2007 ಟಿ20 ವಿಶ್ವಕಪ್‌ ಹಾಗೂ 2011ರ ಏಕದಿನ ವಿಶ್ವಕಪ್‌ ವಿಜೇತ ಭಾರತ ತಂಡದಲ್ಲಿ ಆಡಿದ್ದರು.

ಯೂಸಫ್‌ ಪಠಾಣ್‌ ತಮ್ಮ ವೃತ್ತಿ ಜೀವನದಲ್ಲಿ 174 ಐಪಿಎಲ್‌ ಪಂದ್ಯಗಳಾಡಿದ್ದು, 3,204 ರನ್‌ಗಳನ್ನು ಗಳಿಸಿದ್ದಾರೆ ಹಾಗೂ ಸ್ಪಿನ್‌ ಬೌಲಿಂಗ್‌ನಲ್ಲಿಯೂ 42 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸುರೇಶ್‌ ರೈನಾ ರೀತಿಯ ಕೌಶಲ ಹೊಂದಿರುವ ಯೂಸಫ್‌ ಪಠಾಣ್‌ ಅವರನ್ನು ಎಡಗೈ ಬ್ಯಾಟ್ಸ್‌ಮನ್‌ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ.

ಕೆಕೆಆರ್‌ ತಂಡದ ಭವಿಷ್ಯದ ನಾಯಕನ ಬಗ್ಗೆ ಸುಳಿವು ಕೊಟ್ಟ ಕೋಚ್‌ ಮೆಕಲಮ್!



​ಹನುಮ ವಿಹಾರಿ
​ಹನುಮ ವಿಹಾರಿ

ಚೆನ್ನೈ ಸೂಪರ್‌ ಕಿಂಗ್ಸ್ ತಂಡದಲ್ಲಿ ವಿದೇಶಿ ಆಟಗಾರರಿಗೆ ಸ್ಥಾನಗಳನ್ನು ಸಂಪೂರ್ಣ ಭರ್ತಿಯಾಗಿವೆ. ಇದೀಗ ಸುರೇಶ್‌ ರೈನಾ ಸ್ಥಾನಕ್ಕೆ ಭಾರತೀಯ ಆಟಗಾರನನ್ನೇ ತುಂಬಲು ಟೀಮ್‌ ಮ್ಯಾನೇಜ್‌ ಎದುರು ನೋಡುತ್ತಿದೆ. ಈ ಸ್ಥಾನಕ್ಕೆ ಹನುಮ ವಿಹಾತಿ ಸೂಕ್ತ ಆಟಗಾರರಾಗಿದ್ದಾರೆ. 2019ರ ಆವೃತ್ತಿಯಲ್ಲಿ ಆಂಧ್ರ ಆಟಗಾರನನ್ನು ಡೆಲ್ಲಿ ಕ್ಯಾಪಿಟಲ್ಸ್‌ ಫಿನಿಷರ್‌ ಸ್ಥಾನದಲ್ಲಿ ಆಡಿಸಿತ್ತು. ಆದರೆ, ಹನುಮ ವಿಹಾರಿ ಅಗ್ರ ಕ್ರಮಾಂಕದಲ್ಲಿ ಆಡುವ ಆಟಗಾರನಾಗಿದ್ದಾರೆ.

ರೈನಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದರು. ಒಮ್ಮೆ ಸನ್‌ ರೈಸರ್ಸ್ ಹೈದರಾಬಾದ್ ಪರ ವಿಹಾರಿ ಮೂರನೇ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಅಲ್ಲದೆ, ಬಲಗೈ ಬ್ಯಾಟ್ಸ್‌ಮನ್‌ ಮಧ್ಯಮ ಕ್ರಮಾಂಕದಲ್ಲಿ ಬೌಲಿಂಗ್‌ ಕೂಡ ಮಾಡಬಲ್ಲರು. ಆದ್ದರಿಂದ ಚೆನ್ನೈ ವಿಹಾರಿ ಕಡೆಯೂ ಒಂದು ಕಣ್ಣನ್ನು ಇಟ್ಟಿದೆ.

'ಯಾರನ್ನು ಎಲ್ಲಿ ಆಡಿಸಬೇಕೆಂಬುದು ನಮಗೆ ಗೊತ್ತಿದೆ' : ಆರ್‌ಸಿಬಿ ಬಗೆಗಿನ ಗಾಳಿ ಸುದ್ದಿಗೆ ಹೇಸನ್ ಗರಂ!



​ರೋಹನ್‌ ಕದಮ್‌
​ರೋಹನ್‌ ಕದಮ್‌

ಕಳೆದ ವರ್ಷ ಡಿಸೆಂಬರ್‌ನಲ್ಲಿ ಜರುಗಿದ್ದ 2020ರ ಐಪಿಎಲ್‌ ಹರಾಜಿನಲ್ಲಿ ಕರ್ನಾಟಕದ ಬ್ಯಾಟ್ಸ್‌ಮನ್‌ ರೋಹನ್‌ ಕದಮ್‌ ಅವರ ಬಗ್ಗೆ ಹಲವು ಫ್ರಾಂಚೈಸಿಗಳು ಒಲವು ತೋರಿದ್ದವು. ಏಕೆಂದರೆ, ಸೈಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಮುಂಬೈ ವಿರುದ್ಧ 71 ರನ್‌ ಸಿಡಿಸಿದ್ದರು. ಆದರೆ ಅನಿರೀಕ್ಷಿತವಾಗಿ ಕದಮ್‌, 13ನೇ ಆವೃತ್ತಿಗೆ ಯಾವ ಫ್ರಾಂಚೈಸಿಗೂ ಆಯ್ಕೆಯಾಗಲಿಲ್ಲ.

ಈ ಬಾರಿ ಸುರೇಶ್‌ ರೈನಾ ಸ್ಥಾನಕ್ಕೆ ಚೆನ್ನೈ ಸೂಪರ್ ಕಿಂಗ್ಸ್‌ ಕರ್ನಾಟಕದ ಆಟಗಾರನನ್ನು ಆಯ್ಕೆ ಮಾಡಿಕೊಂಡರೆ, ರೋಹನ್‌ ಐಪಿಎಲ್‌ ಪದಾರ್ಪಣೆ ಮಾಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುವ ಕದಮ್‌, ಸೈಯದ್‌ ಮುಷ್ತಾಕ್‌ ಅಲಿ ಟೂರ್ನಿಯ ಎರಡು ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್‌ ಮಾಡಿದ್ದರು.

ಐಪಿಎಲ್ 2020: ಈ ಬಾರಿ ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಲಿರುವ ಕನ್ನಡಿಗ.!



ರೈನಾ ಹಿಂದೆ ಸರಿಯಲು ನೈಜ ಕಾರಣ ಗೊತ್ತಿಲ್ಲ
ರೈನಾ ಹಿಂದೆ ಸರಿಯಲು ನೈಜ ಕಾರಣ ಗೊತ್ತಿಲ್ಲ

ಆಗಸ್ಟ್‌ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ನಿವೃತ್ತಿ ಘೋಷಿಸಿದ್ದ 33 ವರ್ಷದ ಎಡಗೈ ಬ್ಯಾಟ್ಸ್‌ಮನ್‌ ಸುರೇಶ್ ರೈನಾ, ವೈಯಕ್ತಿಕ ಕಾರಣಗಳಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಎಂದು ಸಿಎಸ್‌ಕೆ ಸಿಇಒ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಅಂದಹಾಗೆ ರೈನಾ ಹಿಂದೆ ಸರಿಯಲುಇರುವ ನೈಜ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೇವಲ ವೈಯಕ್ತಿಕ ಕಾರಣ ಎಂದಷ್ಟೇ ಹೇಳಲಾಗಿದೆ. ಆದರೆ, ಶುಕ್ರವಾರವಷ್ಟೇ ಚೆನ್ನೈ ಸೂಪ್‌ ಕಿಂಗ್ಸ್‌ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿತ್ತು. ಆಗಸ್ಟ್‌ 21ಕ್ಕೆ ದುಬೈ ತಲುಪಿದ್ದ ಸಿಎಸ್‌ಕೆ ಆಟಗಾರರು 6 ದಿನಗಳ ಕ್ವಾರಂಟೈನ್‌ ಬಳಿಕ ಅಭ್ಯಾಸಕ್ಕೆ ಮುಂದಾಗಿದ್ದರು. ನಂತರ ಕೆಲ ಆಟಗಾರರಲ್ಲಿ ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಕೋವಿಡ್‌-19 ಸೋಂಕು ಪತ್ತೆಯಾಗಿದೆ.

ಸಿಎಸ್‌ಕೆಗೆ ಬಿಗ್‌ ಶಾಕ್, ಐಪಿಎಲ್‌ 2020ಯಿಂದ ಸುರೇಶ್ ರೈನಾ ಔಟ್‌!





from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2QCFAOu

ತಂದೆಗೆ ಬ್ರೈನ್‌ ಕ್ಯಾನ್ಸರ್‌ ಇರುವುದು ಗೊತ್ತಾಗಿ ಒಂದು ವಾರ ನಿದ್ರೆ ಬಿಟ್ಟಿದ್ದ ಸ್ಟೋಕ್ಸ್.!

ಲಂಡನ್‌: ತಮ್ಮ ತಂದೆಗೆ ಬ್ರೈನ್‌ ಕ್ಯಾನ್ಸರ್‌ ಇರುವುದು ಗೊತ್ತಾಗಿ ಇತ್ತೀಚೆಗೆ ಮುಕ್ತಾಯದ ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿಯಲ್ಲಿ ತಮ್ಮ ಮನಸ್ಸು ಸರಿ ಇರಲಿಲ್ಲವೆಂದು ಇಂಗ್ಲೆಂಡ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಬಹಿರಂಗಪಡಿಸಿದ್ದಾರೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯದ ಬಳಿಕ ಸ್ಟೋಕ್ಸ್ ತಮ್ಮ ತಂದೆ-ತಾಯಿ ನೆಲೆಸಿರುವ ನ್ಯೂಜಿಲೆಂಡ್‌ಗೆ ತೆರಳಿದ್ದರು. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ವೇಳೆ ಬೆನ್ ಸ್ಟೋಕ್ಸ್ ನಿರ್ಗಮನಕ್ಕೆ ಕಾರಣ ಸಾರ್ವಜನಿಕವಾಗಿ ಬಹಿರಂಗವಾಗಿರಲಿಲ್ಲ. ಆದರೆ, ಮೊದಲನೇ ಪಂದ್ಯದ ಬಳಿಕ ಸ್ಟಾರ್‌ ಆಲ್‌ರೌಂಡರ್‌ ಕೌಟುಂಬಿಕ ಕಾರಣಗಳಿಂದ ಸರಣಿಯ ಇನ್ನುಳಿದ ಭಾಗದಿಂದ ಹೊರ ನಡೆಯುತ್ತಿದ್ದಾರೆಂದು ಇಂಗ್ಲೆಂಡ್‌ ಹಾಗೂ ವೇಲ್ಸ್ ಕ್ರಿಕೆಟ್‌ ಮಂಡಳಿ ತಿಳಿಸಿತ್ತು. ಇದೀಗ ಅವರು ತಮ್ಮ ತಂದೆಗೆ ಬ್ರೈನ್‌ ಕ್ಯಾನ್ಸರ್‌ ಇರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನ್ಯೂಜಿಲೆಂಡ್ ಹೆರಾಲ್ಡ್ ಜೊತೆ ಮಾತನಾಡಿದ ಬೆನ್‌ ಸ್ಟೋಕ್ಸ್‌ ತಂದೆ ಗೆಡ್‌, ಜನವರಿಯಲ್ಲಿ ತಮಗೆ ಮೆದುಳಿನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಕಳೆದ ವರ್ಷದ ಅಂತ್ಯದದಲ್ಲಿ ತನ್ನ ಮಗ ಸ್ಟೋಕ್ಸ್‌ ಅವರನ್ನು ಬೆಂಬಲಿಸಲು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿರುವ ಬಗ್ಗೆ ತಿಳಿಸಿದ್ದಾರೆ. "ಕಳೆದ ವರ್ಷ ನನ್ನ ಮಗನನ್ನು ಬೆಂಬಲಿಸಲು ದಕ್ಷಿಣ ಆಫ್ರಿಕಾಗೆ ತೆರಳಿದ್ದೆ ಹಾಗೂ ಆ ವೇಳೆ ನನ್ನ ಮೆದಳಿನಲ್ಲಿ ಹಲವು ಗಡ್ಡೆಗಳಿರುವುದು ಮನವರಿಕೆಯಾಯಿತು. ಇದು ಸಾಮಾನ್ಯವಾಗಿ ಬ್ರೈನ್‌ ಕ್ಯಾನ್ಸರ್‌ ಎಂದು ಕರೆಯುತ್ತಾರೆ. ಇದು ಹೇಗೆ ನನಗೆ ಬಂದಿದೆ ಎಂಬುವುದು ಯಾರಿಗೂ ಗೊತ್ತಿಲ್ಲ," ಎಂದು ಬೆನ್‌ ಸ್ಟೋಕ್ಸ್‌ ತಂದೆ ಗೆಡ್‌ ತಿಳಿಸಿದ್ದಾರೆ. ಬ್ರೈನ್‌ ಕ್ಯಾನ್ಸರ್‌ ಇರುವ ಬಗ್ಗೆ ನಮ್ಮ ತಂದೆ ಬಹಿರಂಗಪಡಿಸಿದ ಬಳಿಕ ತನ್ನಲ್ಲಿ ಉಂಟಾದ ಕಠಿಣ ಭಾವನೆಗಳನ್ನು ಬೆನ್‌ ಸ್ಟೋಕ್ಸ್ ವ್ಯಕ್ತಪಡಿಸಿದರು. ತಮ್ಮ ತಂದೆಯ ಅನಾರೋಗ್ಯದಿಂದ ತಂಬಾ ಬೇಸರವಾಗಿ ಒಂದು ವಾರ ಸರಿಯಾಗಿ ನಿದ್ರೆ ಮಾಡಲಿಲ್ಲ ಎಂಬ ವಿಷಯವನ್ನು ವಿಶ್ವಕಪ್ ಚಾಂಪಿಯನ್‌ ಬಹಿರಂಗಪಡಿಸಿದ್ದಾರೆ. "ತಮ್ಮ ತಂದೆಯ ಅನಾರೋಗ್ಯ ವಿಷಯ ತಿಳಿಯುತ್ತಿದ್ದಂತೆ, ನನ್ನ ಮನಸಿಗೆ ತುಂಬಾ ನೋವಾಯಿತು ಹಾಗೂ ಒಂದು ವಾರ ನಿದ್ರೆಯೇ ಮಾಡಲಿಲ್ಲ,"ಎಂದು ಇಂಗ್ಲೆಂಡ್ ಉಪ ನಾಯಕ ತಮ್ಮ ಕೊನೆಯ ಟೆಸ್ಟ್‌ ಪಂದ್ಯದ ವೇಳೆ ಉಂಟಾದ ಭಾವನೆಗಳನ್ನು ವ್ಯಕ್ತಪಡಿಸಿದರು. "ಮನಸ್ಸು ಸರಿಯಿಲ್ಲದ ಕಾರಣ ತಂಡವನ್ನು ತೊರೆಯುವುದು ಸರಿಯಾದ ನಿರ್ಧಾರ ಎಂದು ಭಾವಿಸಿದೆ," ಎಂದು ಬೆನ್‌ ಸ್ಟೋಕ್ಸ್ ತಿಳಿಸಿದರು. ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ 1-0 ಅಂತರದಲ್ಲಿ ಜಯ ಸಾಧಿಸಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3lpWzBP

'ದ್ರೋಣಾಚಾರ್ಯ ಪ್ರಶಸ್ತಿ' ಸ್ವೀಕರಿಸುವ ಒಂದು ದಿನ ಮುನ್ನ ಇಹಲೋಕ ತ್ಯಜಿಸಿದ ಪುರುಷೋತ್ತಮ್ ರೈ

ಬೆಂಗಳೂರು: ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಕರ್ನಾಟಕದ ಅಥ್ಲೆಟಿಕ್ಸ್ ಕೋಚ್‌ ಅವರು ಪ್ರಶಸ್ತಿ ಸ್ವೀಕರಿಸುವ ಒಂದು ದಿನ ಮುನ್ನ ಶುಕ್ರವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಅವರು ಶನಿವಾರ ಸ್ವೀಕರಿಸಬೇಕಾಗಿತ್ತು. ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುವ ಕಡೇ ಹಂತದಲ್ಲಿ ರೈ ಸಾವನ್ನಪ್ಪಿರುವುದು ಕುಟುಂಬ ಸದಸ್ಯರನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಮೃತರಿಗೆ 79 ವರ್ಷ ವಯಸ್ಸಾಗಿತ್ತು. ಮೂಲತಃ ಪುತ್ತೂರಿನವರಾದ ಪುರುಷೋತ್ತಮ್ ರೈ, ಬೆಂಗಳೂರಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್) ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ ಹಾಗೂ ಮಗ, ಸೊಸೆಯನ್ನು ಅಗಲಿದ್ದಾರೆ. ಕಳೆದ 35 ವರ್ಷಗಳ ಕಾಲ ರಾಜ್ಯದ ಅಥ್ಲೀಟ್‌ಗಳಿಗೆ ತರಬೇತಿ ನೀಡಿದ್ದ ಪುರುಷೋತ್ತಮ್ ರೈ, ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಶನಿವಾರ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ವರ್ಚುವಲ್ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ಅವರು ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಬೇಕಿತ್ತು. ದಿನಪೂರ್ತಿ ಎಂದಿನಂತೆ ಲವವಿಕೆಯಿಂದಲೇ ಇದ್ದ ಪುರುಷೋತ್ತಮ್ ರೈ ಅವರಿಗೆ ಸಂಜೆ ವೇಳೆಗೆ ದಿಢೀರನೇ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚೇತರಿಸಿಕೊಳ್ಳದೆ ಕೊನೆಯುಸಿರು ಎಳೆದಿದ್ದಾರೆ. ನನಗೆ 20 ವರ್ಷ ಮೊದಲೇ ಈ ಪ್ರಶಸ್ತಿ ಬರಬೇಕಿತ್ತು. ನನ್ನ ಪ್ರತಿಭೆಯನ್ನು ಗುರುತಿಸಲಿಲ್ಲ. ಕ್ರೀಡಾ ಸಚಿವಾಲಯದ ನೂತನ ನಿಯಮದಿಂದಾಗಿ ನಾನೇ ನನ್ನ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಿಕೊಂಡೆ. ಕಡೆಗೂ ನನಗೆ ಪ್ರತಿಫಲ ದೊರೆಯಿತು ಎಂದು ಪ್ರಶಸ್ತಿಗೆ ಭಾಜನರಾದ ಖುಷಿಯಲ್ಲಿ ಹಿರಿಯ ಅಥ್ಲೆಟಿಕ್ಸ್ ಕೋಚ್ ಪುರುಷೋತ್ತಮ್ ರೈ ‘ವಿಜಯವಾಣಿ’ಯೊಂದಿಗೆ ಈ ಹಿಂದೆ ಹೇಳಿಕೊಂಡಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32DcvrA

ಸಿಎಸ್‌ಕೆಗೆ ಬಿಗ್‌ ಶಾಕ್, ಐಪಿಎಲ್‌ 2020ಯಿಂದ ಸುರೇಶ್ ರೈನಾ ಔಟ್‌!

ಬೆಂಗಳೂರು: ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ವಾರಗಳು ಮಾತ್ರವೇ ಬಾಕಿಯಿದ್ದು, ಮೂರು ಬಾರಿಯ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಭಾರಿ ಆಘಾತ ಎದುರಾಗಿದ್ದು ಸ್ಟಾರ್‌ ಬ್ಯಾಟ್ಸ್‌ಮನ್‌ ಐಪಿಎಲ್ 2020 ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಆಗಸ್ಟ್‌ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ನಿವೃತ್ತಿ ಘೋಷಿಸಿದ್ದ 33 ವರ್ಷದ ಎಡಗೈ ಬ್ಯಾಟ್ಸ್‌ಮನ್‌ ಸುರೇಶ್ ರೈನಾ, ವೈಯಕ್ತಿಕ ಕಾರಣಗಳಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಎಂದು ಸಿಇಒ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಅಂದಹಾಗೆ ರೈನಾ ಹಿಂದೆ ಸರಿಯಲುಇರುವ ನೈಜ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೇವಲ ವೈಯಕ್ತಿಕ ಕಾರಣ ಎಂದಷ್ಟೇ ಹೇಳಲಾಗಿದೆ. ಆದರೆ, ಶುಕ್ರವಾರವಷ್ಟೇ ಚೆನ್ನೈ ಸೂಪ್‌ ಕಿಂಗ್ಸ್‌ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿತ್ತು. ಆಗಸ್ಟ್‌ 21ಕ್ಕೆ ದುಬೈ ತಲುಪಿದ್ದ ಸಿಎಸ್‌ಕೆ ಆಟಗಾರರು 6 ದಿನಗಳ ಕ್ವಾರಂಟೈನ್‌ ಬಳಿಕ ಅಭ್ಯಾಸಕ್ಕೆ ಮುಂದಾಗಿದ್ದರು. ನಂತರ ಕೆಲ ಆಟಗಾರರಲ್ಲಿ ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಕೋವಿಡ್‌-19 ಸೋಂಕು ಪತ್ತೆಯಾಗಿದೆ. ಇದೀಗ ಸುರೇಶ್ ರೈನಾ ಕೂಡ ಟೂರ್ನಿಯಿಂದ ಹೊರಗುಳಿದಿದ್ದು, ಅವರಿಗೆ ಮತ್ತು ಅವರ ಕುಟುಂಬದವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸಿಇಒ ಕೆಎಸ್‌ ವಿಶ್ವನಾಥನ್‌ ಹೇಳಿದ್ದಾರೆ. "ಸುರೇಶ್‌ ರೈನಾ ವೈಯಕ್ತಿಕ ಕಾರಣಗಳಿಂದ ಭಾರತಕ್ಕೆ ಹಿಂದಿರುಗಿದ್ದಾರೆ. ಈ ಬಾರಿಯ ಐಪಿಎಲ್‌ ಟೂರ್ನಿಗೆ ಸಂಪೂರ್ಣವಾಗಿ ಅವರು ಲಭ್ಯವಾಗುವುದಿಲ್ಲ. ಸುರೇಶ್‌ ರೈನಾ ಮತ್ತು ಕುಟುಂಬದವರಿಗೆ ಈ ಸಮಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನ ಸಂಪೂರ್ಣ ಬೆಂಬಲ ಸಿಗಲಿದೆ," ಎಂದು ವಿಶ್ವನಾಥನ್‌ ನೀಡಿರುವ ಹೇಳಿಕೆಯನ್ನು ಸಿಎಸ್‌ಕೆ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪ್ರಕಟ ಮಾಡಿದೆ. ಕಳೆದ ವಾರವಷ್ಟೇ ಕ್ಯಾಪ್ಟನ್‌ ಕೂಲ್‌ ಎಂಎಸ್‌ ಧೋನಿ ನಿವೃತ್ತಿ ಬಳಿಕ ಸುರೇಶ್‌ ರೈನಾ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಟೀಮ್‌ ಇಂಡಿಯಾ ಸೇವೆಗೆ ಗುಡ್‌-ಬೈ ಹೇಳಿದರು. ಆದರೆ, ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಟ ಮುಂದುವರಿಸುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ವಿದೇಶಿ ಲೀಗ್‌ಗಳಲ್ಲಿ ಆಡುವ ಬಯಕೆಯನ್ನೂ ಹೊರಹಾಕಿದ್ದರು. ಐಪಿಎಲ್‌ ಇತಿಹಾಸದ ಎರಡನೇ ಅತ್ಯಧಿಕ ರನ್‌ ಸ್ಕೋರರ್‌ ಆಗಿರುವ ರೈನಾ, ಆಡಿದ 193 ಪಂದ್ಯಗಳಿಂದ 33.34ರ ಸರಾಸರಿಯಲ್ಲಿ 5368 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 38 ಅರ್ಧಶತಕಗಳು ಸೇರಿವೆ. 137.14ರ ಅಮೋಘ ಸ್ಟ್ರೈಕ್‌ ರೇಟ್‌ ಹೊಂದಿರುವ ರೈನಾ ಒಟ್ಟು 493 ಫೋರ್‌ ಮತ್ತು 194 ಸಿಕ್ಸರ್‌ಗಳನ್ನೂ ಬಾರಿಸಿದ್ದಾರೆ. ಭಾರತದಲ್ಲಿ ಹೆಚ್ಚಾಗಿರುವ ಕೊರೊನಾ ವೈರಸ್‌ನ ಭೀತಿ ಹಿನ್ನೆಲೆಯಲ್ಲಿ ಟೂರ್ನಿಯನ್ನು ಈ ಬಾರಿ ಯುನೈಟೆಡ್‌ ಅರಬ್ ಎಮಿರೇಟ್ಸ್‌ನಲ್ಲಿ ಆಯೋಜಿಸಲಾಗುತ್ತಿದೆ. ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ದುಬೈ, ಶರ್ಜಾ ಮತ್ತು ಅಬುದಾಭಿಯಲ್ಲಿನ ಬಯೋ ಸೆಕ್ಯೂರ್‌ ವಾತಾವರಣದ ಕ್ರೀಡಾಂಗಣಗಳಲ್ಲಿ ಸಂಪೂರ್ಣ 60 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ. ಈ ಸಲುವಾಗಿ ಎಲ್ಲಾ ತಂಡಗಳು ಈಗಾಗಗಲೇ ದುಬೈನಲ್ಲಿ ಬೀಡುಬಿಟ್ಟಿದ್ದು, 3 ವಾರಗಳ ಕಠಿಣ ಅಭ್ಯಾಸದ ಬಳಿಕ ಟೂರ್ನಿಗೆ ಮುಂದಾಗಲಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gz4Qzy

ಚಾಂಪಿಯನ್ ಕುಸ್ತಿಪಟು ವಿನೇಶ್ ಫೋಗಾಟ್‌ಗೆ ಕೊರೊನಾ ವೈರಸ್‌ ಸೋಂಕು!

ಹೊಸದಿಲ್ಲಿ: ಏಷ್ಯನ್‌ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಸ್ವರ್ಣ ಪದಕಗಳನ್ನು ಗೆದ್ದುಕೊಟ್ಟಿರು ಚಾಂಪಿಯನ್‌ ಮಹಿಳಾ ಕುಸ್ತಿಪಟು ಅವರ ಕೋವಿಡ್‌-19 ಪರೀಕ್ಷೆಯಲ್ಲಿ ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದೆ. ಈ ವರ್ಷ ಪ್ರತಿಷ್ಠಿತ ರಾಜೀವ್‌ ಗಾಂಧಿ ಖೇಲ್‌ ರತ್ನ ಕ್ರೀಡಾ ಪ್ರಶಸ್ತಿಗೆ ಆಯ್ಕೆಯಾಗಿದ್ದ 26 ವರ್ಷದ ಯುವ ಕುಸ್ತಿಪಟು ವಿನೇಶ್‌, ಸೋನೆಪತ್‌ನಲ್ಲಿರುವ ತಮ್ಮ ಸ್ವಗ್ರಾಮದಲ್ಲಿ ಕೋಚ್‌ ಓಂ ಪ್ರಕಾಶ್‌ ಅವರ ಜೊತೆ ಅಭ್ಯಾಸದಲ್ಲಿ ನಿರತರಾಗಿದ್ದರು. 2016ರ ಜಕಾರ್ತ ಏಷ್ಯನ್‌ ಗೇಮ್ಸ್‌ನಲ್ಲಿ 50 ಕೆ.ಜಿ. ಮಹಿಳೆಯರ ಫ್ರೀಸ್ಟೈಲ್‌ ವಿಭಾಗದಲ್ಲಿ ಚಿನ್ನ ಗೆದ್ದಿರುವ ವಿನೇಶ್‌, 2014 ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 2 ಸ್ವರ್ಣ ಪದಕಗಳಿಗೆ ಕೊರಳೊಡ್ಡಿದ್ದರು. "ಹೌದು ನನ್ನ ಕೊರೊನಾ ವೈರಸ್‌ ಪತ್ತೆ ಪರೀಕ್ಷೆಯಲ್ಲಿ ಸೋಂಕು ಇರುವುದು ಖಾತ್ರಿಯಾಗಿದೆ. ಖೇಲ್‌ ರತ್ನ ಪ್ರಶಸ್ತಿ ಸಮಾರಂಭಕ್ಕೂ ಮೊದಲು ನನ್ನನ್ನು ಕೋವಿಡ್‌-19 ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ದೇವರ ದಯೆಯೊಂದಿಗೆ ಶೀಘ್ರವೇ ಗುಣಮುಖಳಾಗಲಿದ್ದೇನೆ. ನಮ್ಮ ಮನೆಯಲ್ಲೇ ಸೆಲ್ಫ್‌ ಐಸೊಲೇಷನ್‌ನಲ್ಲಿ ಇದ್ದೇನೆ," ಎಂದು ವಿನೇಶ್‌ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಶನಿವಾರ ನಡೆಯಲಿರುವ ಆನ್‌ಲೈನ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿನೇಶ್‌ ಪಾಲ್ಗೊಳ್ಳುವುದಿಲ್ಲ. ಈ ವರ್ಷ ರಾಜೀವ್ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಆಯ್ಕೆಯಾದ ಐದು ಮಂದಿ ಕ್ರೀಡಾಪಟುಗಳ ಪೈಕಿ ವಿನೇಶ್ ಫೋಗಾಟ್‌ ಕೂಡ ಒಬ್ಬರಾಗಿದ್ದರು. ಇದೀಗ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೈರು ಹಾಜರಿ ಆಗಲಿರುವ ಒಟ್ಟು 14 ಅಥ್ಲೀಟ್‌ಗಳ ಪಟ್ಟಿಗೆ ವಿನೇಶ್ ಕೂಡ ಸೇರ್ಪಡೆಯಾಗಿದ್ದಾರೆ. ಈ ವರ್ಷ ಒಟ್ಟು 74 ಕ್ರೀಡಾಪಟುಗಳು ಮತ್ತು ಕೋಚ್‌ಗಳನ್ನು ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳ ಸಲುವಾಗಿ ಆಯ್ಕೆ ಮಾಡಲಾಗಿದೆ. ವಿನೇಶ್ ಹೊರತಾಗಿ ಮುಂಬೈ ಇಂಡಿಯನ್ಸ್‌ ಪರ ಐಪಿಎಲ್‌ ಆಡುವ ಸಲುವಾಗಿ ಯುಎಇನಲ್ಲಿ ಇರುವ ರೋಹಿತ್‌ ಶರ್ಮಾ ಕೂಡ ಖೇಲ್‌ ರತ್ನ ಪ್ರಶಸ್ತಿ ಸ್ವೀಕರಿಸಲು ಗೈರು ಹಾಜರಿ ಆಗಲಿದ್ದಾರೆ. ಭಾರತದ ಹಾಕಿ ದಂತಕತೆ ಧ್ಯಾನ್‌ ಚಂದ್‌ ಅವರ ಜನ್ಮದಿನವಾದ ಆಗಸ್ಟ್‌ 29ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಈ ದಿನವೇ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳನ್ನು ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಅಥ್ಲೀಟ್‌ಗಳಿಗೆ ನೀಡಲಾಗುತ್ತದೆ. ಕೇಂದ್ರ ಕ್ರೀಡಾ ಸಚಿವಾಲಯ ಈ ವರ್ಷ ಖೇಲ್‌ ರತ್ನ ಪ್ರಶಸ್ತಿ ಸಲುವಾಗಿ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಕುಸ್ತಿಪಟು ವಿನೇಶ್‌ ಫೋಗಾಟ್, ಟೇಬಲ್ ಟೆನಿಸ್‌ ತಾರೆ ಮನಿಕಾ ಬಾತ್ರಾ, ಕ್ರಿಕೆಟರ್ ರೋಹಿತ್‌ ಶರ್ಮಾ ಮತ್ತು ಪ್ಯಾರಾ ಅಥ್ಲೀಟ್‌ ಮರಿಯಪ್ಪನ್ ತಂಗವೇಲು ಅವರನ್ನು ಆಯ್ಕೆ ಮಾಡಿದೆ. ಈ ಮಧ್ಯೆ ದಾಖಲೆ ಮಟ್ಟದಲ್ಲಿ ಒಟ್ಟು 27 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಗುತ್ತಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3hygVX3

ಸಿಪಿಎಲ್: ಟಿ20 ಕ್ರಿಕೆಟ್‌ನಲ್ಲೊಂದು ವಿಶೇಷ ದಾಖಲೆ ಬರೆದ ನಬಿ!

ಹೊಸದಿಲ್ಲಿ: ಅಫಘಾನಿಸ್ತಾನ ತಂಡದ ಮಾಜಿ ನಾಯಕ ಹಾಗೂ ಸ್ಟಾರ್‌ ಆಲ್‌ರೌಂಡರ್‌ ಪ್ರಸಕ್ತ ಕೆರಿಬಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಐದು ವಿಕೆಟ್‌ ಪಡೆದ ಸಾಧನೆ ಮಾಡಿದ ಮೊದಲ ಬೌಲರ್‌ ಎನಿಸಿಕೊಂಡಿದ್ದಾರೆ. ಸಿಪಿಎಲ್‌ 2020 ಟೂರ್ನಿಯಲ್ಲಿ ಸೇಂಟ್‌ ಲೂಸಿಯಾ ಝೂಕ್ಸ್‌ ತಂಡದ ಪರ ಆಡುತ್ತಿರುವ 35 ವರ್ಷದ ಅನುಭವಿ ಆಲ್‌ರೌಂಡರ್ ಗುರುವಾರ ನಡೆದ ಸೇಂಟ್‌ ಕಿಟ್ಸ್‌ ಅಂಡ್‌ ನೆವೀಸ್‌ ಪೇಟ್ರಿಯಟ್ಸ್‌ ತಂಡದ ವಿರುದ್ಧ ತಮ್ಮ ನಾಲ್ಕು ಓವರ್‌ಗಳಲ್ಲಿ 14 ರನ್‌ ನೀಡಿ 5 ವಿಕೆಟ್‌ಗಳನ್ನು ಸಂಪಾದಿಸಿದರು. ತಮ್ಮ ಆಫ್‌ ಸ್ಪಿನ್‌ ಬೌಲಿಂಗ್‌ ಮೂಲಕ ಪೇಟ್ರಿಯಟ್ಸ್‌ ತಂಡದ ಬ್ಯಾಟಿಂಗ್‌ ಬೆನ್ನೆಲುಬನ್ನು ಮುರಿದ ನಬಿ, ಸ್ಟಾರ್‌ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್‌ ಲಿನ್, ಎವಿನ್‌ ಲೂಯಿಸ್‌, ನಿಕ್‌ ಕೆಲ್ಲಿ ಮತ್ತು ದಿನೇಶ್‌ ರಾಮ್ದಿನ್‌ ಅವರನ್ನು ಔಟ್‌ ಮಾಡುವ ಮೂಲಕ ಝೂಕ್ಸ್‌ ತಂಡದ ಗೆಲುವಿನ ರೂವಾರಿ ಎನಿಸಿದರು. ಇದು ಟಿ20 ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ನಬಿ ಅವರ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ಕೂಡ. ನಬಿ ಈ ಅಮೋಘ ಬೌಲಿಂಗ್‌ ಪ್ರದರ್ಶನದ ಮೂಲಕ ಟಿ20 ಕ್ರಿಕೆಟ್‌ ಮಾದರಿಯಲ್ಲಿ ವಿಶೇಷ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಪಾಕಿಸ್ತಾನದ ಮಾಜಿ ವೇಗಿ ಸೊಹೇಲ್‌ ತನ್ವೀರ್‌ ಬಳಿಕ ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುವ ಐದು ಪ್ರಮುಖ ಟಿ20 ಲೀಗ್‌ ಟೂರ್ನಿಗಳಲ್ಲಿ (ಬಾಂಗ್ಲಾದೇಶ ಪ್ರೀಮಿಯರ್ ಲೀಗ್, ಅಫಘಾನಿಸ್ತಾನ ಪ್ರೀಮಿಯರ್ ಲೀಗ್, ಬಿಗ್‌ ಬ್ಯಾಷ್‌ ಲೀಗ್, ಮತ್ತು ಇಂಡಿಯನ್ ಪ್ರೀಮಿಯರ್‌ ಲೀಗ್) ಇನಿಂಗ್ಸ್‌ ಒಂದರಲ್ಲಿ 4ಕ್ಕೂ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದ ಮೊದಲ ಬೌಲರ್‌ ಎನಿಸಿಕೊಂಡಿದ್ದಾರೆ. ನಬಿ, ಕೆರಿಬಿಯನ್‌ ಅಂಗಣದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು ಬ್ಯಾಟ್‌ ಮತ್ತು ಬಾಲ್‌ ಎರಡರಲ್ಲೂ ತಂಡಕ್ಕೆ ಮ್ಯಾಚ್‌ ವಿನ್ನರ್‌ ಆಗಿ ಪರಿಣಮಿಸಿದ್ದಾರೆ. 40ರ ಸರಾಸರಿಯಲ್ಲಿ ಈಗಾಗಲೇ ಒಟ್ಟು 120 ರನ್‌ಗಳನ್ನು ಬಾರಿಸಿರುವ ನಬಿ, ಬೌಲಿಂಗ್‌ನಲ್ಲಿ ಒಟ್ಟು 9 ವಿಕೆಟ್‌ ಪಡೆದಿದ್ದಾರೆ. ಇನ್ನು ಪೇಟ್ರಿಯಟ್ಸ್‌ ವಿರುದ್ಧದ ಪಂದ್ಯದಲ್ಲಿ 110 ರನ್‌ಗಳ ಗುರಿ ಪಡೆದಿದ್ದ ಝೂಕ್ಸ್‌ ತಂಡ 5 ಓವರ್‌ಗಳು ಬಾಕಿ ಇರುವಾಗಲೇ ಜಯ ದಕ್ಕಿಸಿಕೊಂಡಿತು. ರಾಸ್ಟನ್‌ ಚೇಸ್‌ (27*) ಮತ್ತು ನಜಿಬುಲ್ಲಾ ಝದ್ರಾನ್‌ (33) ಬ್ಯಾಟಿಂಗ್‌ನಲ್ಲಿ ಉಪಯುಕ್ತ ಕಾಣಿಕೆ ನೀಡಿದರು. ಪೇಟ್ರಿಯಟ್ಸ್‌ ತಂಡ ಈವರೆಗೆ ಆಡಿದ 5 ಪಂದ್ಯಗಳಲ್ಲಿ ಒಟ್ಟು ನಾಲ್ಕರಲ್ಲಿ ಸೋಲನುಭವಿಸಿ ಕೇವಲ ಅಂಕಪಟ್ಟಿಯ ಪಾತಾಳದಲ್ಲಿದೆ. ಮತ್ತೊಂದೆಡೆ 2ನೇ ಸ್ಥಾನದಲ್ಲಿರುವ ಡರೆನ್‌ ಸಾಮಿ ಸಾರಥ್ಯದ ಝೂಕ್ಸ್‌ ತಂಡಕ್ಕೆ ಪ್ಲೇ-ಆಫ್ಸ್‌ ಸ್ಥಾನ ಬಹುತೇಕ ಖಾತ್ರಿಯಾಗಿದೆ. ಈ ಮಧ್ಯ ಸಿಪಿಎಲ್‌ ಟಿ20 ಕ್ರಿಕೆಟ್‌ ಟೂರ್ನಿ ಬಳಿಕ ನಬಿ ನೇರವಾಗಿ ಯುಎಇಗೆ ತೆರಳಲಿದ್ದು ಐಪಿಎಲ್‌ 2020 ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ. 5 ವಿಭಿನ್ನ ಲೀಗ್‌ಗಳಲ್ಲಿ ನಬಿ 4ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆಯ ವಿವರ
  1. ಬಾಂಗ್ಲಾ ಪ್ರೀಮಿಯರ್ ಲೀಗ್ (2016): 24ಕ್ಕೆ 4
  2. ಅಫಘಾನಿಸ್ತಾನ ಪ್ರೀಮಿಯರ್ ಲೀಗ್ (2018): 12ಕ್ಕೆ 4
  3. ಬಿಗ್‌ ಬ್ಯಾಷ್‌ ಲೀಗ್‌ (2018-19): 25ಕ್ಕೆ 4
  4. ಇಂಡಿಯನ್ ಪ್ರೀಮಿಯರ್‌ ಲೀಗ್ (2019): 11ಕ್ಕೆ 4
  5. ಕೆರಿಬಿಯನ್ ಪ್ರೀಮಿಯರ್‌ ಲೀಗ್ (2020): 14ಕ್ಕೆ 4
ನಬಿ ಐದು ವಿಕೆಟ್‌ ಪಡೆದ ಭರ್ಜರಿ ಬೌಲಿಂಗ್‌ ಪ್ರದರ್ಶನವನ್ನು ಈ ಟ್ವೀಟ್‌ನಲ್ಲಿ ವೀಕ್ಷಿಸಬಹುದಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3hI0DLi

'ಯಾರನ್ನು ಎಲ್ಲಿ ಆಡಿಸಬೇಕೆಂಬುದು ನಮಗೆ ಗೊತ್ತಿದೆ' : ಆರ್‌ಸಿಬಿ ಬಗೆಗಿನ ಗಾಳಿ ಸುದ್ದಿಗೆ ಹೇಸನ್ ಗರಂ!

ಹೊಸದಿಲ್ಲಿ: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಅಂತಿಮ 11 ಆಟಗಾರರ ಬಗ್ಗೆ ಸಂಯೋಜನೆ ಕುರಿತು ಇನ್ನೂ ಅಂತಿಮವಾಗಿಲ್ಲ ಎಂದು ಹೇಳಿದ ನಿರ್ದೇಶಕ , ತಂಡದ ಆರಂಭಿಕ ಸಂಯೋಜನೆ ಬಗ್ಗೆ ಇತ್ತೀಚೆಗೆ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಹೆಚ್ಚು ಬೇಡಿಕೆಯಿರುವ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಹಾಗೂ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆಂದು ಎಂಬ ವಿಷಯ ಸೇರಿದಂತೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತಮ್ಮ ಸಹಾಯಕ ಸಿಬ್ಬಂದಿ ಮತ್ತು ತಂಡದ ಆಟಗಾರರ ಬದಲಾವಣೆ ಮುಂತಾದ ಸಂಗತಿಗಳಿಗೆ ಕೈಹಾಕಿದೆ ಎಂಬ ಊಹಾಪೋಹಗಳು ಇತ್ತೀಚೆಗೆ ಎದ್ದಿದ್ದವು. ಸೋಶಿಯಲ್‌ ಮೀಡಿಯಾದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಅಪ್‌ಲೋಡ್‌ ಮಾಡಿದ್ದ ವಿಡಿಯೋದಲ್ಲಿ ಮಾತನಾಡಿದ ಆರ್‌ಸಿಬಿ ಟೀಮ್‌ ಡೈರೆಕ್ಟರ್‌ ಮೈಕ್‌ ಹೇಸನ್‌, ಇತ್ತೀಚೆಗೆ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ ಹಾಗೂ ಈ ಎಲ್ಲಾ ಸಂಗತಿಗಳಿಗೂ ಸೂಕ್ತ ಸ್ಪಷ್ಟನೆ ನೀಡಿದ್ದಾರೆ. "ಇದು ತುಂಬಾ ಆಸಕ್ತದಾಯಕವಾಗಿದೆ ಏಕೆಂದರೆ ಗುರುವಾರ ಹಲವು ಗಂಟೆಗಳ ಕಾಲ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದೇನೆ. ನಾನು ವಿರಾಟ್‌ ಕೊಹ್ಲಿ ಎಲ್ಲಿ ಬ್ಯಾಟಿಂಗ್‌ ಮಾಡಲಿದ್ದಾರೆ ಅಥವಾ ಆರೋನ್‌ ಫಿಂಚ್‌ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲಿದ್ದಾರೆಂದು ನಾನೆಲ್ಲಿಯೂ ಹೇಳಿಲ್ಲ. ಅಲ್ಲದೆ, ಈ ಇಬ್ಬರೂ ಆರಂಭಿಕರಾಗಿ ಇನಿಂಗ್ಸ್‌ ಆರಂಭಿಸಲಿದ್ದಾರೆಂದು ಎಲ್ಲಿಯೂ ಹೇಳಿಲ್ಲ," ಎಂದು ಮೈಕ್‌ ಹೇಸನ್‌ ಸ್ಪಷ್ಟನೆ ನೀಡಿದ್ದಾರೆ. "ಕೋಚಿಂಗ್ ಸಿಬ್ಬಂದಿಯ ದೃಷ್ಟಿಕೋನದಿಂದ ವಾಸ್ತವಿಕತೆ ಏನೆಂದರೆ, ನಾವು ಮೊದಲ ತಂಡ ಪ್ರಕಟಿಸುವವರೆಗೂ ಎಲ್ಲಿಯೂ ಯಾರಿಗೂ ಯಾವ ವಿಷಯವನ್ನು ಹೇಳುವುದಿಲ್ಲ. ಏಕೆಂದರೆ ಅದು ನನ್ನ ತಂತ್ರವಾಗಿದೆ. ನಮ್ಮ ಆಟಗಾರರನ್ನು ಎಲ್ಲಿ ಆಡಿಸಬೇಕು ಸೇರಿದಂತೆ ತಂಡದ ಎಲ್ಲಾ ಗುಟ್ಟು ನಮ್ಮಲ್ಲಿಯೇ ಉಳಿಯಲಿದೆ," ಎಂದು ಹೇಳಿದರು. "ಯಾರು ಎಲ್ಲಿ ಬ್ಯಾಟ್ ಮಾಡಲು ಹೋಗುತ್ತಾರೆ ಎಂಬ ಬಗ್ಗೆ ನಮಗೆ ಅನೇಕ ಪ್ರಶ್ನೆಗಳನ್ನು ಕೇಳಲಾಗಿದೆ, ಆದರೆ ನೀವು ಇದಕ್ಕೆ ಉತ್ತರ ಪಡೆಯಬೇಕಾದರೆ ಕಾಯಬೇಕಾಗಿದೆ. ಇದರಲ್ಲಿ ಯಾವುದೇ ಅನುಮಾನಗಳಿಲ್ಲ. ನಮಗೆ ಏನೂ ಬೇಕಿದೆ ಎಂಬುದು ನಮಗೆ ಗೊತ್ತು. ಆದರೆ ನಮ್ಮ ಎದುರಾಳಿ ತಂಡಗಳಿಗೆ ನಮ್ಮ ಗುಟ್ಟು ಬಿಡುವುದನ್ನು ನಾವು ಇಷ್ಟ ಪಡುವುದಿಲ್ಲ," ಮೈಕ್‌ ಹೇಸನ್‌ ಖಡಕ್‌ ಆಗಿ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರದಿಂದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತರಬೇತಿ ಆರಂಭಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2YIWMX4

ಕೆರಿಬಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ವಿಕೆಟ್‌ಗಳ ಖಾತೆ ತೆರೆದ ತಾಂಬೆ!: ವಿಡಿಯೋ

ಬೆಂಗಳೂರು: ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಹೊಸ ಅಲೆಯೊಂದು ಶುರುವಾಗುತ್ತಿದ್ದು, ಭಾರತೀಯ ಆಟಗಾರರು ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಪ್ರಾರಂಭಿಸುತ್ತಿದ್ದಾರೆ. ಕಳೆದ ವರ್ಷ ಮೊದಲ ಬಾರಿ ಎಂಬಂತೆ ಅನುಮತಿಯೊಂದಿಗೆ ಯುವರಾಜ್‌ ಸಿಂಗ್ ಮತ್ತು ಮನ್‌ಪ್ರೀತ್‌ ಗೂನಿ ಕೆನಡಾ ಗ್ಲೋಬಲ್‌ ಟಿ20 ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ಇದರೊಂದಿಗೆ ಭಾರತೀಯ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳ ಬಾಗಿಲು ತೆರದಂತಾಗಿದೆ. ಅಂದಹಾಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಕೇಂದ್ರ ಒಪ್ಪಂದ ಪಡೆದಿರುವ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡುವುದಕ್ಕೆ ನಿಷೇಧವಿದೆ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿರುವ ಆಟಗಾರರು ಇದೀಗ ಈ ವಿದೇಶಿ ಲೀಗ್‌ಗಳಲ್ಲಿ ಆಡಲು ಮುಂದಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ನಿವೃತ್ತಿ ಘೋಷಿಸಿದ 33 ವರ್ಷದ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಮತ್ತು ಮಾಜಿ ಆಲ್‌ ರೌಂಡರ್‌ ಇರ್ಫಾನ್‌ ಪಠಾಣ್‌, ಭಾರತೀಯ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಆಡುವ ಅವಕಾಶವನ್ನು ಬಿಸಿಸಿಐ ಮಾಡಿಕೊಡಬೇಕು ಎಂದು ಹೇಳಿಕೊಂಡಿದ್ದರು. ಅದರಲ್ಲೂ ರೈನಾ ಬಿಗ್‌ ಬ್ಯಾಷ್‌ ಲೀ ಮತ್ತು ಕೆರಿಬಿಯನ್ ಪ್ರೀಮಿಯರ್‌ ಲೀಗ್‌ (ಸಿಪಿಎಲ್) ಟೂರ್ನಿಗಳಲ್ಲಿ ಆಡುವ ಬಯಕೆ ಹೊರಹಾಕಿದ್ದರು. ಇತ್ತೀಚಿನ ಬೆಳವಣಿಗೆ ಎಂಬಂತೆ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಮತ್ತು ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಗಳ ಪರ ಆಡಿದ್ದ ಅನುಭವಿ ಲೆಗ್‌ ಸ್ಪಿನ್ನರ್‌ ಕೆರಿಬಿಯನ್ ಪ್ರೀಮಿಯರ್‌ ಲೀಗ್‌ಗೆ ಪದಾರ್ಪಣೆ ಮಾಡಿದ್ದರು. ಸಿಪಿಎಲ್‌ 2020 ಟೂರ್ನಿಯಲ್ಲಿ ಆಡುವ ಮೂಲಕ ಕೆರಿಬಿಯನ್‌ ನಾಡಿನ ಟಿ20 ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಕ್ರಿಕೆಟರ್ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದರು. ವಯಸ್ಸು 48 ಆದರೂ ತಾಂಬೆ ಅವರ ಲೆಗ್‌ ಸ್ಪಿನ್ ಬೌಲಿಂಗ್‌ನ ಖದರ್‌ ಕಿಂಚಿತ್ತೂ ಕಡಿಮೆಯಾಗಿಲ್ಲ. ಕಳೆದ ವರ್ಷ ಟಿ10 ಲೀಗ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಸಾಧನೆ ಮಾಡಿದ್ದರು. ಅವರ ಈ ಪ್ರತಿಭೆಯನ್ನು ಗುರುತಿಸಿದ್ದ ಟ್ರಿನ್‌ಬಾಗೊ ನೈಟ್‌ ರೈಡರ್ಸ್‌ ತಂಡ (ಶಾರುಖ್‌ ಖಾನ್‌ ಮಾಲೀಕತ್ವದ) ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಸಿಪಿಎಲ್‌ ಆಟಗಾರರ ಹರಾಜಿನಲ್ಲಿ ಖರೀದಿ ಮಾಡಿತ್ತು. ಇದೀಗ ಸೇಂಟ್‌ ಲೂಸಿಯಾ ಝೂಕ್ಸ್‌ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಅಫಘಾನಿಸ್ತಾನದ ಆಟಗಾರ ನಜೀಬುಲ್ಲಾ ಝದ್ರಾನ್‌ (21) ಅವರನ್ನು ಔಟ್‌ ಮಾಡುವ ಮೂಲಕ ತಾಂಬೆ ಟೂರ್ನಿಯಲ್ಲಿ ತಮ್ಮ ವಿಕೆಟ್‌ಗಳ ಖಾತೆ ತೆರೆದಿದ್ದಾರೆ. 21 ಎಸೆತಗಳಲ್ಲಿ ಅಷ್ಟೇ ರನ್‌ ಗಳಿಸಿ ಆಡುತ್ತಿದ್ದ ಝದ್ರಾನ್ ಕೊನೆಯ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ ಮಾಡುವ ಲೆಕ್ಕಾಚಾರದಲ್ಲಿದ್ದರು. ಆದರೆ, ಗೂಗ್ಲಿ ಎಸೆತದ ಮೂಲಕ ಚಳ್ಳೆ ಹಣ್ಣು ತಿನ್ನಿಸಿದ ತಾಂಬೆ ಸುಲಭ ರೀತಿಯಲ್ಲಿ ವಿಕೆಟ್‌ ತಮ್ಮದಾಗಿಸಿಕೊಂಡರು. ತಾಂಬೆ ಎಸೆದ ಗೂಗ್ಲಿ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಮಿಡ್‌ ವಿಕೆಟ್‌ ಕಡೆಗೆ ಫ್ಲಿಕ್‌ ಮಾಡಲು ಯತ್ನಿಸಿದ ಝದ್ರಾನ್‌ ಎಡ್ಜ್ ಮಾಡುವ ಮೂಲಕ ಚೆಂಡನ್ನು ಕವರ್ಸ್‌ನಲ್ಲಿದ್ದ ಫೀಲ್ಡರ್‌ ಕೈಗೆ ಸೇರಿಸಿದ್ದರು. ಅಂದಹಾಗೆ ತಾಂಬೆ ವಿದೇಶಿ ಲೀಗ್‌ನಲ್ಲಿ ಬಿಸಿಸಿಐ ಅನುಮತಿ ಇಲ್ಲದೇ ಆಡಿದ್ದ ಕಾರಣ ಅವರು ಐಪಿಎಲ್‌ ಒಳಗೊಂಡಂತೆ ಬಿಸಿಸಿಐನ ಯಾವುದೇ ಟೂರ್ನಿಗಳಲ್ಲಿ ಆಡಲು ಅನರ್ಹರು ಎಂದು ಬಿಸಿಸಿಐ ಘೋಷಿಸಿದೆ. ಕೆರಿಬಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ತಾಂಬೆ ತೆಗೆದ ಮೊದಲ ವಿಕೆಟ್‌ನ ವಿಡಿಯೋವನ್ನು ಈ ಟ್ವೀಟ್‌ನಲ್ಲಿ ವೀಕ್ಷಿಸಬಹುದಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31Gzovf

ಐಪಿಎಲ್ 2020: ಈ ಬಾರಿ ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಲಿರುವ ಕನ್ನಡಿಗ.!

ಹೊಸದಿಲ್ಲಿ: ತವರು ತಂಡ (ಆರ್‌ಸಿಬಿ) ಪರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿರುವ ಕರ್ನಾಟಕದ ಸ್ಟಾರ್‌ ಬ್ಯಾಟ್ಸ್‌ಮನ್‌ ಅವರನ್ನು ಆರ್‌ಸಿಬಿ ಮುಖ್ಯ ಕೋಚ್‌ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಕಳೆದ ದೇಶಿಯ ಟೂರ್ನಿಗಳಲ್ಲಿ ಕರ್ನಾಟಕದ ಎಡಗೈ ಬ್ಯಾಟ್ಸ್‌ಮನ್‌ ಆಕರ್ಷಕ ಪ್ರದರ್ಶನ ತೋರಿದ್ದಾರೆ. ಸೈಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಅವರು 12 ಪಂದ್ಯಗಳಿಂದ 64.44ರ ಸರಾಸರಿ ಹಾಗೂ 175.75 ಸ್ಟ್ರೈಕ್‌ ರೇಟ್‌ನೊಂದಿಗೆ 580 ರನ್‌ಗಳನ್ನು ಗಳಿಸಿದ್ದಾರೆ. ಅಲ್ಲದೆ, ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲೂ ಅವರು 11 ಪಂದ್ಯಗಳಿಂದ 609 ರನ್‌ಗಳನ್ನು ಗಳಿಸಿದ್ದರು. ಇದರಲ್ಲಿ ಮೂರು ಶತಕಗಳು ಸೇರಿದಂತೆ ಐದು ಅರ್ಧಶತಕಗಳು ಒಳಗೊಂಡಿವೆ. ಈ ಕಾರಣದಿಂದಾಗಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಪ್ರತಿಭಾವಂತ ಎಡಗೈ ಬ್ಯಾಟ್ಸ್‌ಮನ್‌ ಅನ್ನು 13ನೇ ಆವೃತ್ತಿಗೆ ಉಳಿಸಿಕೊಂಡಿದೆ. ದೇಶಿ ಕ್ರಿಕೆಟ್‌ನಲ್ಲಿನ ಅದ್ಭುತ ಪ್ರದರ್ಶನದಿಂದ ಪಡಿಕ್ಕಲ್‌ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಯಿತು ಎಂಬುದನ್ನು ಸೈಮನ್‌ ಕ್ಯಾಟಿಚ್‌ ಬಹಿರಂಗಪಡಿಸಿದರು. " ದೇಶಿ ಆವೃತ್ತಿಯಲ್ಲಿನ ಪ್ರದರ್ಶನದಿಂದ ದೇವದತ್‌ ಪಡಿಕ್ಕಲ್‌ ಅವರನ್ನು ಉಳಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಯಿತು. 20ರ ಪ್ರಾಯದ ಆಟಗಾರ, ವಿಶೇಷವಾಗಿ ಎಡಗೈ ಬ್ಯಾಟ್ಸ್‌ಮನ್‌ ಆಗಿರುವುದರಿಂದ ಅವರ ಮೇಲೆ ಹೆಚ್ಚಿನ ಒಲವು ಫ್ರಾಂಚೈಸಿಗೆ ಇದೆ," ಎಂದು ಸೈಮನ್‌ ಕ್ಯಾಟಿಚ್‌ ಸ್ಪೋರ್ಟ್ಸ್‌ಕೀಡಾಗೆ ತಿಳಿಸಿದರು. "ತಂಡದಲ್ಲಿ ಬ್ಯಾಟಿಂಗ್‌ ಸಮತೋಲನ ಬಂದಾಗ ನೀವು ಎಡಗೈ ಬ್ಯಾಟ್ಸ್‌ಮನ್‌ ಹಾಗೂ ಬಲಗೈ ಬ್ಯಾಟ್ಸ್‌ಮನ್‌ಗಳನ್ನು ಸಂಯೋಜನೆ ಮಾಡಬಹುದು. ಈ ಕಾರಣದಿಂದಲೇ ದೇವದತ್‌ ಪಡಿಕ್ಕಲ್‌ ಅವರನ್ನು ಈ ಬಾರಿ ಐಪಿಎಲ್‌ ಪದಾರ್ಪಣೆ ಮಾಡಿಸುವ ಅವಕಾಶಗಳು ದಟ್ಟವಾಗಿವೆ," ಎಂದು ಹೇಳಿದರು. ಆರೋನ್‌ ಫಿಂಚ್‌ ಹಾಗೂ ಪಾರ್ಥಿವ್‌ ಪಟೇಲ್‌ ಆರಂಭಿಕರ ಸ್ಥಾನದಲ್ಲಿದ್ದರೂ, ಈ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ದೇವದತ್‌ ಪಡಿಕ್ಕಲ್‌ ಇನಿಂಗ್ಸ್‌ ಆರಂಭಿಸುವ ಸಾಧ್ಯತೆಗಳು ದಟ್ಟವಾಗಿವೆ. "ಟೂರ್ನಿ ಆರಂಭಕ್ಕೂ ಮುನ್ನ ನಾವು ಕೆಲ ಅಭ್ಯಾಸ ಪಂದ್ಯಗಳನ್ನು ಏರ್ಪಡಿಸುತ್ತೇವೆ, ಇಲ್ಲಿ ಅವರು ಅತ್ಯುತ್ತಮ ಪ್ರದರ್ಶನ ತೋರಿದ್ದೆ ಆದಲ್ಲಿ ಖಂಡಿತಾ ಪಡಿಕ್ಕಲ್‌ಗೆ ಐಪಿಎಲ್‌ ಬಾಗಿಲು ತೆರೆಯುತ್ತೇವೆ. ಅವರು ಅತ್ಯಾಕರ್ಷಕ ಯುವ ಪ್ರತಿಭೆ. ಈ ಲಾಕ್‌ಡೌನ್ ಅವಧಿಯಲ್ಲಿ ನಮ್ಮ ಕ್ರೀಡಾ ಮನಶ್ಶಾಸ್ತ್ರಜ್ಞರೊಂದಿಗೆ ಅವರು ಸ್ವಲ್ಪ ಕಾರ್ಯನಿರ್ವಹಿಸಿದ್ದಾರೆ ಮತ್ತು ಖಂಡಿತವಾಗಿಯೂ ಅವರು ಮುಂದೆ ಉಜ್ವಲ ಭವಿಷ್ಯವನ್ನು ಹೊಂದಿದ್ದಾರೆ." "ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ ದೇವದತ್‌ ಪಡಿಕ್ಕಲ್‌ ಇಲ್ಲಿಯವರೆಗೆ ಆಟದ ಬಗ್ಗೆ ಮಾನಸಿಕ ಕೌಶಲ್ಯದ ಹಂತದಿಂದ ಹೇಗೆ ಯೋಚಿಸುತ್ತಾರೆ ಎಂಬುದು ಮುಖ್ಯ. ಅವರನ್ನು ನಮ್ಮ ತಂಡದಲ್ಲಿ ಸೇರಿಸಿಕೊಳ್ಳುವುದು ಅದ್ಭುತವಾಗಿದೆ ಮತ್ತು ಅವರು ಏನು ಮಾಡಬಹುದೆಂಬುದರ ಬಗ್ಗೆಯೂ ನಾವು ಖಂಡಿತವಾಗಿ ಉತ್ಸುಕರಾಗಿದ್ದೇವೆ," ಎಂದು ಕ್ಯಾಟಿಚ್ ಕನ್ನಡಿಗನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gBPmei

4.4 ಕೋಟಿ ರೂ.ಗೆ ಫಿಂಚ್‌ ಖರೀದಿಸಲು ಇದ್ದ ಕಾರಣ ತಿಳಿಸಿದ ಆರ್‌ಸಿಬಿ ಕೋಚ್!

ಬೆಂಗಳೂರು: ಕಳೆದ ಡಿಸೆಂಬರ್‌ನಲ್ಲಿ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಸಲುವಾಗಿ ನಡೆದ ಆಟಗಾರರ ಹಾರಜಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೆಲ ಆಕರ್ಷಕ ಬಿಟ್ಟಿಂಗ್‌ಗಳನ್ನು ನಡೆಸಿ ಸುದ್ದಿಯಾಗಿತ್ತು. ಹರಾಜಿನಲ್ಲಿ ಹಣದ ಹೊಳೆಯನ್ನೇ ಹರಿಸಿದ್ದ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕನಾಗಿರುವ ಆರೊನ್‌ ಫಿಂಚ್‌ ಅವರನ್ನು ಬರೋಬ್ಬರಿ 4.4 ಕೋಟಿ ರೂ. ಹಣ ನೀಡಿ ಖರೀದಿ ಮಾಡಿತ್ತು. ಜೊತೆಗೆ ತಂಡದ ಬೌಲಿಂಗ್‌ ವಿಭಾಗವನ್ನೂ ಗಮನದಲ್ಲಿಟ್ಟು ಕ್ರಿಸ್‌ ಮಾರಿಸ್‌, ಕೇನ್‌ ರಿಚರ್ಡ್ಸನ್ ಮತ್ತು ಶ್ರೀಲಂಕಾದ ಎಡಗೈ ವೇಗಿ ಇಸುರು ಉದನಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಈ ಬಗ್ಗೆ ಮಾತನಾಡಿರುವ ಚಾಲೆಂಜರ್ಸ್‌ ತಂಡದ ಮುಖ್ಯ ಕೋಚ್‌ ಸೈಮನ್‌ ಕ್ಯಾಟಿಚ್‌, ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಫಿಂಚ್‌ ಅವರನ್ನು ಖರೀದಿಸುವ ಸಲುವಾಗಿ ಫ್ರಾಂಚೈಸಿ 4.4 ಕೋಟಿ ರೂ. ಖರೀದಿ ಮಾಡಿದ್ದೇಕೆ ಎಂಬುದನ್ನು ವಿವರಿಸಿದ್ದಾರೆ. "ನಮ್ಮ ತಂಡಕ್ಕೆ ಆಟಗಾರರನ್ನು ಕರೆತರಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ ಅನುಭವಿಗಳತ್ತ ಕಣ್ಣಿಟ್ಟಿದ್ದೆವು. ಸಣ್ಣ ಪ್ರಮಾಣದ ಹರಾಜು ಪ್ರಕ್ರಿಯೆ ಆದ್ದರಿಂದ ಕೆಲ ನಿರ್ದಿಷ್ಟ ಆಟಗಾರರ ಕಡೆಗಷ್ಟೇ ನಾವು ಗಮನ ನೀಡಿದ್ದೆವು. ಅಂತೆಯೇ ಕೆಲ ಅದ್ಭುತ ಆಯ್ಕೆಗಳು ಕೂಡ ನಮ್ಮೆದುರಿತ್ತು," ಎಂದು ಕ್ಯಾಟಿಚ್‌ ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. "ಆರೋನ್‌ ಫೀಂಚ್ ನಮ್ಮ ಖರೀದಿ ಪಟ್ಟಿಯಲ್ಲಿ ಅಗ್ರಗಣ್ಯರಾಗಿದ್ದರು. ಏಕೆಂದರೆ ಹಲವು ವರ್ಷಗಳಿಂದ ಆಸ್ಟ್ರೇಲಿಯಾ ತಂಡದ ಪರ ಆಟಗಾರನಾಗಿ ಬಳಿಕ ಕ್ಯಾಪ್ಟನ್‌ ಆಗಿ ಅಮೋಘ ಪ್ರದರ್ಶನವನ್ನೇ ನೀಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ಟಾಪ್‌ ಕ್ಲಾಸ್‌ ಬ್ಯಾಟ್ಸ್‌ಮನ್‌ಗಳಲ್ಲಿ ಅವರೂ ಒಬ್ಬರು. ಜೊತೆಗೆ ಸ್ಪಿನ್‌ ಬೌಲಿಂಗ್‌ ಎದುರು ಅದ್ಭುತವಾಗಿ ಆಡುತ್ತಾರೆ. ಮುಖ್ಯವಾಗಿ ತಂಡದ ನಾಯಕತ್ವದ ಗುಂಪಿಗೆ ನೆರವಾಗಲೆಂದೇ ಅವರನ್ನು ಅಷ್ಟು ಹಣ ನೀಡಿ ಖರೀದಿ ಮಾಡಿದೆವು," ಎಂದಿದ್ದಾರೆ. ವಿರಾಟ್‌ ಕೊಹ್ಲಿ ಸಾರಥ್ಯದ ಆರ್‌ಸಿಬಿ ಸದಾ ಬ್ಯಾಟಿಂಗ್‌ ಬಲಿಷ್ಠ ತಂಡವಾಗಿ ಕಾಣಿಸಿಕೊಂಡ ಪರಿಣಾಮ ಈವರೆಗೆ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಕೊಹ್ಲಿ ಮುಂದಾಳತ್ವದಲ್ಲಿ ಚಾಲೆಂಜರ್ಸ್‌ 2016ರ ಆವೃತ್ತಿಯಲ್ಲಿ ಫೈನಲ್‌ ತಲುಪಿತ್ತಾದರೂ ಸನ್‌ರೈಸರ್ಸ್‌ ಎದುರು ಸೋತು ಚೊಚ್ಚಲ ಪ್ರಶಸ್ತಿ ಗೆಲುವಿನ ಅವಕಾಶವನ್ನು ಕೈಚೆಲ್ಲಿತ್ತು. ಇದೀಗ ಆರ್‌ಸಿಬಿಗೆ ನಾಯಕತ್ವದ ವಿಚಾರದಲ್ಲಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿ'ವಿಲಿಯರ್ಸ್‌ ಮತ್ತು ಫಿಂಚ್‌ ನೆರವಾಗಲಿದ್ದಾರೆ ಎಂದು ಮುಖ್ಯ ಕೋಚ್‌ ಹೇಳಿದ್ದಾರೆ. "ಕೇವಲ ಆರೊನ್‌ ಫಿಂಚ್‌ ಮಾತ್ರವಲ್ಲ. ನಮ್ಮ ತಂಡದಲ್ಲಿ ಹಿರಿಯ ಆಟಗಾರರಿದ್ದಾರೆ. ಖಂಡಿತಾ ಎಬಿ ಡಿ'ವಿಲಿಯರ್ಸ್‌ ಹಲವು ವರ್ಷಗಳಿಂದ ಆರ್‌ಸಿಬಿ ತಂಡದ ಯಶಸ್ಸಿಗೆ ಕೊಡುಗೆ ಸಲ್ಲಿಸಿದ್ದಾರೆ. ಹೀಗಾಗಿ ವಿರಾಟ್‌ ಕೊಹ್ಲಿಗೆ ನಾಯಕತ್ವದ ವಿಚಾರದಲ್ಲಿ ಅವರೂ ಕೂಡ ನೆರವಾಗಲಿದ್ದಾರೆ," ಎಂದಿದ್ದಾರೆ. "ಅಂದಹಾಗೆ ಕೊಹ್ಲಿ ಕೂಡ ನಾಯಕತ್ವದ ವಿಚಾರದಲ್ಲಿ ಅಪಾರ ಅನುಭವ ಪಡೆದಿದ್ದಾರೆ. ಟೀಮ್‌ ಇಂಡಿಯಾ ಮತ್ತು ಆರ್‌ಸಿಬಿ ತಂಡಗಳನ್ನು ಹಲವು ವರ್ಷಗಳಿಂದ ಮುನ್ನಡೆಸುತ್ತಿದ್ದಾರೆ. ಇದೀಗ ತಂಡದ ತಂಡದ ಸ್ಟಾರ್‌ ಆಟಗಾರರು ಅವರಿಗೆ ನೆರವಾದರೆ ಪ್ರಶಸ್ತಿ ಗೆಲುವು ಕಂಡಿತಾ ಸಾಧ್ಯವಾಗಲಿದೆ," ಎಂದು ಕ್ಯಾಟಿಚ್‌ ಭವಿಷ್ಯ ನುಡಿದಿದ್ದಾರೆ. ಟೂರ್ನಿಯು ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಯುಎಇನಲ್ಲಿ ನಡೆಯಲಿದ್ದು, ಬಯೋ ಸೆಕ್ಯೂರ್‌ ವಾತಾವರಣ ಇರುವ ದುಬೈ , ಶರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ಸಂಪೂರ್ಣ 60 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3hDF4eX

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಕೆಲ ಸದಸ್ಯರಿಗೆ ಕೋವಿಡ್‌-19 ಪಾಸಿಟವ್‌.!

ದುಬೈ: ಬಹು ನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಡಲು ದುಬೈಗೆ ತೆರಳಿದ ಕೆಲ ದಿನಗಳ ಬೆನ್ನಲ್ಲೆ ತಂಡದ ಕೆಲ ಸದಸ್ಯರ ಟೆಸ್ಟ್‌ನಲ್ಲಿ ಪಾಸಿಟಿವ್‌ ವರದಿ ಬಂದಿದೆ ಎಂದು ಟೈಮ್ಸ್ ಆಫ್‌ ಇಂಡಿಯಾ ವರದಿ ಮಾಡಿದೆ. ಕಳೆದ ಮಾರ್ಚ್‌ 29 ರಿಂದ ಭಾರತದಲ್ಲಿ ಐಪಿಎಲ್‌ ಆರಂಭವಾಗಬೇಕಾಗಿತ್ತು. ಆದರೆ ಇಡೀ ವಿಶ್ವದಾದ್ಯಂತ ಕೊರೊನಾ ವೈರಸ್‌ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರಿಂದ ಶ್ರೀಮಂತ ಫ್ರಾಂಚೈಸಿ ಲೀಗ್‌ ಅನ್ನು ಎರಡು ಬಾರಿ ಮುಂದೂಡಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌-ನವೆಂಬರ್‌ನಲ್ಲಿ ಜರುಗಬೇಕಿದ್ದ ಐಸಿಸಿ ಟಿ20 ವಿಶ್ವಕಪ್‌ ಮುಂದೂಡಿದ ಕಾರಣ ಐಪಿಎಲ್‌ ಟೂರ್ನಿಯ ಹಾದಿ ಸುಗಮವಾಗಿತ್ತು. ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 13ನೇ ಆವೃತ್ತಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ. ಚೆನ್ನೈ ಫ್ರಾಂಚೈಸಿಯ ಕೆಲ ಸದಸ್ಯರಲ್ಲಿ ಕೋವಿಡ್‌-19 ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ 2020ರ ಟೂರ್ನಿಗೆ ಕೊಂಚ ಹಿನ್ನಡೆಯಾದಂತಾಗಿದೆ. ಆದರೆ, ಐಪಿಎಲ್‌ ಆರಂಭವಾಗಲು ಇನ್ನೂ 20 ದಿನಗಳಿಗೂ ಹೆಚ್ಚಿನ ಸಮಯವಿದೆ. ಆದ್ದರಿಂದ ಅಲ್ಲಿಯವರೆಗೂ ಪಾಸಿಟಿವ್‌ ಆಗಿರುವ ಆಟಗಾರರು ಗುಣಮುಖರಾಗಲು ಅವಕಾಶವಿದೆ ಎನ್ನಲಾಗಿದೆ. ಭಾರತದಂತೆ ಯುಎಇಯಲ್ಲಿಯೂ ದಿನದಿಂದ ದಿನಕ್ಕೆ ಕೋವಿಡ್‌-19 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಆ ದೇಶದ ಕೊರೊನಾ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಶೇ. 10 ರಷ್ಟು ಪ್ರಕರಣಗಳು ಇತ್ತೀಚೆಗೆ ದಾಖಲಾಗಿತ್ತು. ಆದಾಗ್ಯೂ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಕೋವಿಡ್‌-19 ಪಾಸಿಟಿವ್‌ ವರದಿ ಬಂದಿರುವ ಆಟಗಾರರ ಹೆಸರನ್ನು ಇನ್ನೂ ಮೂಲಗಳು ಬಹಿರಂಗಪಡಿಸಿಲ್ಲ. ಸಿಎಸ್‌ಕೆ ತಂಡ ಶುಕ್ರವಾರದಿಂದಲೇ ತರಬೇತಿ ಆರಂಭಿಸಬೇಕಾಗಿತ್ತು, ಆದರೆ ಕೆಲ ಸದಸ್ಯರಲ್ಲಿ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಆಟಗಾರರು ಕ್ವಾರಂಟೈನ್‌ಗೆ ಮರಳಲಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಕೆಲ ಆಟಗಾರರ ಹಾಗೂ ಸಿಬ್ಬಂದಿಗೆ ಮಾರಣಾಂತಿಕ ಸೋಂಕು ತಗುಲಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಪ್ರಕಟಿಸಿದೆ. ಇದರ ನಡುವೆ ಐಪಿಎಲ್ ಪ್ರಾಯೋಜಕ ಸ್ಥಾನದಿಂದ 'ವಿವೋ ಇಂಡಿಯಾ' ಬಿಸಿಸಿಐ ಕೈಬಿಟ್ಟ ನಂತರ, 'ಡ್ರೀಮ್11' ಅನ್ನು ನಾಲ್ಕು ತಿಂಗಳವರೆಗೆ 220 ಕೋಟಿ ರೂ.ಗಳಿಗೆ ಒಪ್ಪಂದವನ್ನು ಪಡೆದುಕೊಳ್ಳಲಾಗಿದೆ. ಸೆಪ್ಟೆಂಬರ್‌ 19ರಿಂದ 13ನೇ ಆವೃತ್ತಿಯ ಐಪಿಎಲ್‌ ಆರಂಭಗೊಂಡು ನವೆಂಬರ್ 10 ರಂದು ಫೈನಲ್ ಪಂದ್ಯದೊಂದಿಗೆ ಅಂತ್ಯವಾಗಲಿದೆ. ಆದರೆ, ಶ್ರೀಮಂತ ಫ್ರಾಂಚೈಸಿ ಲೀಗ್‌ನ ವೇಳಾಪಟ್ಟಿ ಇನ್ನೂ ಅಧಿಕೃತವಾಗಿ ಪ್ರಕಟಣೆಯಾಗಿಲ್ಲ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gEti2x

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...