ಹೊಸದಿಲ್ಲಿ: ಮಣಿಪುರದ ಸುಮಾರು 1700 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿದ ಇದು ಮಣಿಪುರದ ಮಹಿಳೆಯರಿಗೆ ರಕ್ಷಾ ಬಂಧನದ ಉಡುಗೊರೆ ಎಂದು ಬಣ್ಣಿಸಿದ್ದಾರೆ. ದಿಲ್ಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಲ ಪೂರೈಕೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿದಿನ ಒಂದು ಲಕ್ಷ ಜನರಿಗೆ ನೀರಿನ ಸಂಪರ್ಕ ಒದಗಿಸಲಾಗುತ್ತಿದ್ದು, ಜಲಜೀವನ ಅಭಿಯಾನದಿಂದ ಇದು ಸಾಧ್ಯವಾಗಿದೆ, ಇದರಿಂದ ಅನೇಕ ತಾಯಂದಿರಿಗೆ ಸಹೋದರಿಯರಿಗೆ ನೀರಿನ ಚಿಂತೆ ದೂರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೋದಿ ಚಾಲನೆ ಕೊಟ್ಟ ಜಲಧಾರ ಹೆಸರಿನ ಈ ಯೋಜನೆಯಿಂದ 25 ನಗರಗಳು ಮತ್ತು 1700 ಗ್ರಾಮಗಳ ಜನತೆಯ ನೀರಿನ ಬವಣೆ ನೀಗಲಿದ್ದು, ಮುಂದಿನ 22 ವರ್ಷದ ತನಕ ನೀರಿನ ಅವಶ್ಯಕತೆಯನ್ನು ನೀಗಿಸುವ ನಿಟ್ಟಿನಲ್ಲಿ ದೂರದೃಷ್ಟಿಯಿಂದ ಈ ಯೋಜನೆಯನ್ನು ನಿರ್ಮಾಣ ಮಾಡಲಾಗಿದೆ.
from India & World News in Kannada | VK Polls https://ift.tt/2ZWKQ53