ದೇಶ ಲೂಟಿ ಮಾಡಿದವರ ಕಣ್ಣಿಗೆ ಸಬ್ಸಿಡಿ ಲಾಭವಾಗಿಯೇ ಕಾಣುತ್ತದೆ: ರಾಹುಲ್‌ಗೆ ಗೋಯಲ್ ಗುದ್ದು!

ನವದೆಹಲಿ: ಶ್ರಮಿಕ್ ರೈಲಿನ ಮೂಲಕ ರೈಲ್ವೆ ಇಲಾಖೆ ಲಾಭ ಮಾಡಿಕೊಳ್ಳಲು ಹವಣಿಸುತ್ತಿದೆ ಎಂಬ ಕಾಂಗ್ರೆಸ್ ನಾಯಕ ಆರೋಪಕ್ಕೆ, ಕೇಂದ್ರ ರೈಲ್ವೆ ಸಚಿವ ಸೂಕ್ತ ತಿರುಗೇಟು ನೀಡಿದ್ದಾರೆ. ದೇಶವನ್ನು ಲೂಟಿ ಮಾಡಿದವರಿಗೆ ಮಾತ್ರ ಸಬ್ಸಿಡಿಯೂ ಲಾಭವಾಗಿಯೇ ಕಾಣುತ್ತದೆ ಎಂದು ಪಿಯೂಷ್ ಗೋಯಲ್ ಹರಿಹಾಯ್ದಿದ್ದಾರೆ. ಇಲಾಖೆ ಕೊಟ್ಟ ಸಬ್ಸಿಡಿಯನ್ನು ಲಾಭ ಎನ್ನುತ್ತಿರುವ ರಾಹುಲ್ ಬಗ್ಗೆ ಏನನ್ನಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಶ್ರಮಿಕ್ ರೈಲುಗಳಿಗಾಗಿ ರಾಜ್ಯ ಸರ್ಕಾರಗಳಿಗಿಂತ ಪಡೆದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಕೇಂದ್ರ ರೈಲ್ವೆ ಇಲಾಖೆ ವ್ಯಯಿಸಿದೆ. ಆದರೆ ವಲಸೆ ಕಾರ್ಮಿಕರ ಟಿಕೆಟ ಹಣವನ್ನು ನಾವು ಭರಿಸುತ್ತೇವೆ ಎಂಬ ಸೋನಿಯಾ ಗಾಂಧಿ ಅವರ ಮಾತು ಏನಾಯ್ತು ಎಂದು ಜನ ಪ್ರಶ್ನಿಸುತ್ತಿದ್ದಾರೆ ಎಂದು ಗೋಯಲ್ ವ್ಯಂಗ್ಯವಾಡಿದ್ದಾರೆ. ಶ್ರಮಿಕ್ ವಿಶೇಷ ರೈಲುಗಳಿಗಾಗಿ ರೈಲ್ವೆ ಇಲಾಖೆ ಒಟ್ಟು 2,145 ಕೋಟಿ ರೂ. ವಿನಿಯೋಗಿಸಿದ್ದು, ಈ ಪೈಕಿ 429 ಕೋಟಿ ರೂ. ಮತ್ರ ಮರಳಿ ಬಂದಿದೆ. ಅದಾಗ್ಯೂ ಇಲಾಖೆ ಲಾಭ ಮಾಡಿಕೊಳ್ಳುತ್ತಿದೆ ಎಂದು ರಾಹುಲ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪಿಯೂಷ್ ಗೋಯಲ್ ಕಿಡಿಕಾರಿದರು. ನಿರಂತರವಾಗಿ ದೇಶವನ್ನು ಲೂಟಿ ಮಾಡಿದವರು ಮಾತ್ರ ಸಬ್ಸಿಡಿಯನ್ನು ಲಾಭ ಎಂದು ಕರೆಯಲು ಸಾಧ್ಯ ಎಂದು ಹರಿಹಾಯ್ದ ಗೋಯಲ್, ಸಂಕಷ್ಟದಲ್ಲಿ ನಮ್ಮ ವಲಸೆ ಕಾರ್ಮಿಕ ಸಹೋದರರು ಹಾಗೂ ಅವರ ಕುಟುಂಬವನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ತೃಪ್ತ ಇಲಾಖೆಗಿದೆ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/3hCMzlY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...