"ಹೇಳಿದ್ದು ರಾಮರಾಜ್ಯ ಕೊಟ್ಟಿದ್ದು ಗುಂಡಾರಾಜ್ಯ" ಪ್ರಧಾನಿ ಬಳಿಕ ಸಿಎಂ ಯೋಗಿ ಮೇಲೆ ರಾಹುಲ್‌ ಕಿಡಿ!

ನವದೆಹಲಿ: ಸದಾ ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿ ಮೇಲೆ ವಾಗ್ಧಾಳಿ ನಡೆಸುವ ಕಾಂಗ್ರೆಸ್‌ ನಾಯಕ ಇದೀಗ ತನ್ನ ವಾಗ್ಬಾಣದ ಗುರಿಯನ್ನ ಉತ್ತರ ಪ್ರದೇಶ ಸರಕಾರದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಡೆ ತಿರುಗಿಸಿದ್ದಾರೆ. ಪತ್ರಕರ್ತರೊಬ್ಬರ ಹತ್ಯೆಗೆ ಸಂಬಂಧಪಟ್ಟಂತೆ ಆದಿತ್ಯನಾಥ್‌ ಮೇಲೆ ವಾಗ್ದಾಳಿ ನಡೆಸಿದ ರಾಹುಲ್‌ ಗಾಂಧಿ "ಹೇಳಿದ್ದು ರಾಮರಾಜ್ಯ ಆದರೆ ಕೊಟ್ಟಿದ್ದು " ಎಂದು ವಾಗ್ದಾಳಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ ರಾಹುಲ್‌, ಪತ್ರಕರ್ತ ವಿಕ್ರಮ್‌ ಜೋಶಿ ತನ್ನ ಸೋದರನ ಮಗಳ ಮೇಲಿನ ದೌರ್ಜನ್ಯವನ್ನ ವಿರೋಧಿಸಿದಕ್ಕೆ ಕೊಲೆಯಾಗಿ ಹೋದರು. ವಿಕ್ರಮ್‌ ಅವರನ್ನ ಕಳೆದುಕೊಂಡು ತಬ್ಬಲಿಯಾಗಿರುವ ಅವರ ಕುಟುಂಬಕ್ಕೆ ನನ್ನ ಸಂತಾಪ. ರಾಮರಾಜ್ಯದ ಭರವಸೆ ಕೊಟ್ಟವರು ಈಗ ಗೂಂಡಾರಾಜ್ಯ ನಡೆಸುತ್ತಿದ್ದಾರೆ ಎಂದು ಪರೋಕ್ಷವಾಗಿ ಕಿಡಿಕಾರಿದ್ದಾರೆ. ಕಳೆದ ಸೋಮವಾರ ಗಾಜಿಯಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತ ವಿಕ್ರಮ್‌ ಜೋಷಿ ಮೇಲೆ ದುಷ್ಕರ್ಮಿಗಳ ಗುಂಪೊಂದು ಗುಂಡು ಹಾರಿಸಿತ್ತು. ಇದರಿಂದ ಗಂಭೀರ ಗಾಯಗೊಂಡ ಜೋಶಿಯನ್ನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾದೆ ಅವರು ಮೃತಪಟ್ಟಿದ್ದರು. ಇದು ಯುಪಿ ಸರಕಾರದ ವಿರುದ್ಧ ಆಕ್ರೊಶಕ್ಕೆ ಕಾರಣವಾಗಿದೆ. ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ 9 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.


from India & World News in Kannada | VK Polls https://ift.tt/32Jp4U8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...