ನನಗಿಂತ ದೇಶಭಕ್ತ ಇನ್ಯಾರಿದ್ದಾರೆ?: ಮಾಸ್ಕ್ ಧರಿಸಿರುವ ಫೋಟೋ ಟ್ವೀಟ್ ಮಾಡಿದ ಟ್ರಂಪ್!

ವಾಷಿಂಗ್ಟನ್: ಹಾಕಿಕೊಳ್ಳುವಂತೆ ಯಾರಿಗೂ ತಾವು ಒತ್ತಾಯ ಮಾಡುವುದಿಲ್ಲ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಅಧ್ಯಕ್ಷ , ಇದೀಗ ಖುದ್ದು ಫೇಸ್ ಮಾಸ್ಕ್ ಧರಿಸಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಫೇಸ್ ಮಾಸ್ಕ್ ಧರಿಸುವುದು ರಾಷ್ಟ್ರಪ್ರೇಮದ ಸಂಕೇತ ಎಂದು ಹಲವರು ಹೇಳುತ್ತಿದ್ದಾರೆ. ಸದ್ಯ ಅಮೆರಿಕದಲ್ಲಿ ನನಗಿಂತ ಮತ್ಯಾರೂ ಇಲ್ಲ ಎಂದು ಟ್ರಂಪ್ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ. ಕಣ್ಣಿಗೆ ಕಾಣದ ಚೀನಾ ವೈರಸ್‌ನ್ನು ಸೋಲಿಸಲು ಇಡೀ ಅಮೆರಿಕ ಒಂದಾಗಿದೆ. ಈ ಒಗ್ಗಟ್ಟಿನ ಪ್ರಯತ್ನದಲ್ಲಿ ನಮ್ಮ ಗೆಲುವು ಶತಸಿದ್ಧ ಎಂದು ಟ್ರಂಪ್ ಇದೇ ವೇಳೆ ಭರವಸೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸಾರ್ವಜನಿಕವಾಗಿ ಫೇಸ್ ಮಾಸ್ಕ್ ಧರಿಸಲು ನಿರಾಕರಿಸಿದ್ದ ಟ್ರಂಪ್, ಫೇಸ್ ಮಾಸ್ಕ್ ಧರಿಸುವಂತೆ ಯಾರನ್ನೂ ಕೇಳಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಅಮೆರಿಕದಲ್ಲಿ ಹಾವಳಿ ಅತಿಯಾಗಿರುವ ಈ ಸಂದರ್ಭದಲ್ಲಿ ಅಧ್ಯಕ್ಷರು ನಕಾರಾತ್ಮಕ ಮಾತುಗಳನ್ನಾಡಬಾರದು ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಫೇಸ್ ಮಾಸ್ಕ್ ಧರಿಸಿಕೊಂಡಿರುವ ತಮ್ಮ ಫೋಟೋವನ್ನು ಶೇರ್ ಮಾಡಿರುವ ಡೊನಾಲ್ಡ್ ಟ್ರಂಪ್, ನನಗಿಂತ ದೊಡ್ಡ ದೇಶಭಕ್ತ ಮತ್ಯಾರೂ ಇಲ್ಲ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/3hg6mHq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...