ದೇಶದಲ್ಲಿ ಒಂದೇ ದಿನ ದಾಖಲಾಯ್ತು 37,724 ಹೊಸ ಕೇಸ್‌, 12ಲಕ್ಷಕ್ಕೆ ತಲುಪಿದ ಸೋಂಕಿತರ ಸಂಖ್ಯೆ!

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪ್ರತಿನಿತ್ಯ ಸಂಖ್ಯೆ ಮೂವತ್ತು ಸಾವಿರದ ಗಡಿ ದಾಟುತ್ತಿದೆ. ಇದೀಗ ಮಂಗಳವಾರ ಹೊಸದಾಗಿ 37,724 ಕೊರೊನಾ ಕೇಸ್‌ ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 11,92,915ಕ್ಕೆ ತಲುಪಿದೆ. ಅಲ್ಲದೇ ಕಳೆದ 24 ಗಂಟೆಯಲ್ಲಿ ಕೊರೊನಾದಿಂದಾಗಿ ಒಟ್ಟು 648 ಮಂದಿ ಸಾವನಪ್ಪಿದ್ದು, ಈ ಮೂಲಕ ದೇಶದಲ್ಲಿ ಕೊರೊನಾಗೆ 28,732 ಬಲಿಯಾದಂತಾಗಿದೆ. ಇನ್ನು ಶುಭ ಸುದ್ದಿಯಂದರೆ ದೇಶದಲ್ಲಿ ಕೊರೊನಾ 12 ಲಕ್ಷ ಗಡಿ ಸಮೀಪಿಸಿದರು ಈ ಪೈಕಿ 7,53,050 ಮಂದಿ ಕೊರೊನಾ ರೋಗಿಗಳು ಗುಣಮುಖರಾಗಿದ್ದಾರೆ. ಅಲ್ಲದೇ ಸದ್ಯ ದೇಶದಲ್ಲಿ 4,11,133 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇನ್ನು ದೇಶದಲ್ಲಿ 7.53 ರಷ್ಟು ಗುಣಮುಖ ದರವಿದೆ. ಭಾರತದಲ್ಲಿ ಗುಣಮುಖರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರುತ್ತಿದೆ ಎಂದು ಇಲಾಖೆ ತಿಳಿಸಿದೆ. ಅಲ್ಲದೇ ಕೊರೊನಾ ಪರೀಕ್ಷೆ ನಡೆಸುವಲ್ಲಿ ಭಾರತ ದಾಪುಗಾಲಿಟ್ಟಿದ್ದು ಈವರೆಗೆ ದೇಶದಲ್ಲಿ ಒಟ್ಟು 1.47 ಕೋಟಿ ಜನರ ಸ್ಯಾಂಪಲ್‌ಗಳನ್ನ ಕಲೆಕ್ಟ್‌ ಮಾಡಿ ಪರೀಕ್ಷೆ ನಡೆಸಲಾಗಿತ್ತು ಎಂದು ಇದೆ ವೇಳೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ಜನಸಂಖ್ಯೆ ಜಾಸ್ತಿ ಇರುವ ಭಾರತದಲ್ಲಿ ದಿನ ನಿತ್ಯ ಕೊರೊನಾ ಸೋಂಕು ಹೆಚ್ಚುತ್ತಿದೆ. ಕೆವು ರಾಜ್ಯಗಳು ಲಾಕ್‌ಡೌನ್‌ ತಂದರು ನಿಯಂತ್ರಣಕ್ಕೆ ಬರುತ್ತಿಲ್ಲ. ಮತ್ತೊಂದು ಕಡೆ ಭಾರತ ಕೊರೊನಾ ಲಸಿಕೆ ಕಂಡು ಹಿಡಿಯುವ ವಿಚಾರದಲ್ಲಿ ಮುಂಚೂಣಿಯಲ್ಲಿದೆ.


from India & World News in Kannada | VK Polls https://ift.tt/2WJmdGZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...