ವಿಶ್ವ ಪುಸ್ತಕ ದಿನ: ರಾಜಕಾರಣದ ನಡುವೆಯೂ ರಾಜಕಾರಣಿಗಳ ಪುಸ್ತಕ ಪ್ರೇಮ!

ಬೆಂಗಳೂರು: ಏಪ್ರಿಲ್ 23, . ಬಹುತೇಕ ಜನರು ಪುಸ್ತಕ ಓದಿನ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಜ್ಞಾನದ ದಾಹ ತಣಿಸಲು ಪುಸ್ತಕ ಓದಿದರೆ ಮತ್ತೆ ಕೆಲವರಿಗೆ ಪುಸ್ತಕ ಓದು ಒಂದು ಹವ್ಯಾಸ. ಕೆಲವರು ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯದ ಪುಸ್ತಕಗಳನ್ನು ಓದಿದರೆ ಮತ್ತೆ ಕೆಲವರು ಆಧ್ಯಾತ್ಮಿಕ, ಅಡುಗೆ, ಪ್ರವಾಸ ಕಥನಗಳನ್ನು ಓದಿ ರಿಲಾಕ್ಷ್ ಆಗುತ್ತಾರೆ. ಪುಸ್ತಕದ ಓದಿನಲ್ಲಿ ರಾಜಕಾರಣಿಗಳೂ ಹಿಂದೆ ಬಿದ್ದಿಲ್ಲ. ತಮ್ಮ ಬಿಡುವಿಲ್ಲದ ರಾಜಕಾರಣದ ಜೊತೆಗೆ ಪುಸ್ತಕ ಓದುವ ಹವ್ಯಾಸವನ್ನು ಒಂದಿಷ್ಟು ರಾಜಕಾರಣಿಗಳು ಬೆಳೆಸಿಕೊಂಡಿದ್ದಾರೆ. ವಿಶ್ವ ಪುಸ್ತಕ ದಿನದಂದು ತಮ್ಮ ಓದಿನ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮಾಜಿ ಸಿಎಂ ಸಿನಿಮಾ ಹಿನ್ನೆಲೆಯಿಂದ ಬಂದ ರಾಜಕಾರಣಿ. ಆದರೆ ಇವರಿಗೆ ಪುಸ್ತಕದ ಓದು ಕೂಡಾ ಇಷ್ಟವಂತೆ. ಈ ಕುರಿತಾದ ವಿಚಾರವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕುಮಾರಸ್ವಾಮಿ ಮನೆಯಲ್ಲಿ ಅವರದ್ದೇ ಆದ ಪುಟ್ಟ ಖಾಸಗಿ ಲೈಬ್ರರಿ ಇದೆ. ಅಲ್ಲಿ ನೂರಾರು ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳ ಸಂಗ್ರಹವಿದೆ. ಈ ಲಾಕ್‌ಡೌನ್ ಅವಧಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 'A Life of Truth in Politics' ಪುಸ್ತಕವನ್ನು ಎಚ್‌ಡಿಕೆ ಓದುತ್ತಿದ್ದಾರಂತೆ. ಪುಸ್ತಕ ಮೇಳಗಳಿಗೆ ಹೋಗಿ ನನಗಿಷ್ಟವಾದ ಪುಸ್ತಕಗಳನ್ನು ಖರೀದಿಸುವ ಅಭ್ಯಾಸವೂ ಕುಮಾರಸ್ವಾಮಿಯವರಿಗೆ ಇದೆಯಂತೆ .ಪುಸ್ತಕ ಓದಿದ ನಂತರ ಇಷ್ಟದ ಲೇಖಕರೊಂದಿಗೆ ಚರ್ಚಿಸುವ ಅಭ್ಯಾಸವೂ ಇದೆ ಎಂದು ಹೇಳಿಕೊಂಡಿದ್ದಾರೆ. ಬೋಳುವಾರು ಮಹಮದ್ ಅವರ 'ಸ್ವಾತಂತ್ರ್ಯದ ಓಟ' ಕಾದಂಬರಿ ಓದಿದ ನಂತರ ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ್ದೆ ಎಂದು ತಮ್ಮ ಪುಸ್ತಕ ಓದು ಹಾಗೂ ಲೇಖಕರ ಜೊತೆಗಿನ ಸಂಬಂಧವನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ಸಚಿವ ರಮೇಶ್ ಜಾರಕಿಹೊಳಿಗೂ ಪುಸ್ತಕ ಓದುವ ಹವ್ಯಾಸ ಇದೆಯಂತೆ. ಪುಸ್ತಕವನ್ನು ನೀವು ತಲೆ ತಗ್ಗಿಸಿ ಓದಿದರೆ ಅದು ಜೀವನದಲ್ಲಿ ನಿಮ್ಮನ್ನು ತಲೆಯತ್ತಿ ಓಡಾಡುವಂತೆ ಮಾಡುತ್ತದೆ ಎಂಬ ಹಿರಿಯರ ವಾಣಿಯಂತೆ ಮನುಷ್ಯನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪುಸ್ತಕಗಳನ್ನು ಓದೋಣ ಪುಸ್ತಕದ ಭಂಡಾರದಲ್ಲಿ ಎಲ್ಲರೂ ಜೊತೆಯಾಗೋಣ. ಇಂದು‌ ಕನಿಷ್ಟ ಒಂದು ಒಳ್ಳೆಯ ಪುಸ್ತಕ ಓದುವುದರ ಮೂಲಕ ವಿಶ್ವ ಪುಸ್ತಕ ದಿನ ಆಚರಿಸೋಣ ಎಂದು ಕರೆಕೊಟ್ಟಿದ್ದಾರೆ. ಅಲ್ಲದೆ ತನ್ನ ಮನೆಯಲ್ಲಿ ಇರುವ ಪುಸ್ತಕದ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಿಂದೆಲ್ಲಾ ರಾಜಕಾರಣಿಗಳಲ್ಲಿ ಪುಸ್ತಕ ಓದು ಹವ್ಯಾಸ ಹೆಚ್ಚಾಗಿತ್ತು. ಪುಸ್ತಕ ಓದುವ ಮೂಲಕ ರಾಜಕಾರಣಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಆದರೆ ಇಂದು ರಾಜಕಾರಣದಲ್ಲಿ ಪುಸ್ತಕ ಓದುವವರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಆದರೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್, ಸಚಿವ ಸುರೇಶ್ ಕುಮಾರ್ ಸೇರಿದಂತೆ ಬಿಡುವಿಲ್ಲದ ರಾಜಕಾರಣದ ನಡುವೆಯೂ ಪುಸ್ತಕ ಓದುವ ಅಭ್ಯಾಸವನ್ನು ಕೆಲವರು ಮೈಗೂಡಿಸಿಕೊಂಡಿದ್ದಾರೆ. ಇಂಥವರ ಸಂಖ್ಯೆ ಹೆಚ್ಚಾಗಲಿ.


from India & World News in Kannada | VK Polls https://ift.tt/2VM7M3s

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...