ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇಡೀ ದೇಶ ಒಂದಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ದಿಲ್ಲಿಯ ಅಧಿಕಾರಶಾಹೀಯಿಂದ ಹಿಡಿದು ಗಲ್ಲಿಯ ಸಾಮಾನ್ಯ ನಾಗರಿಕನವರೆಗೂ ಎಲ್ಲರೂ ಈ ಹೋರಾಟದಲ್ಲಿ ಕೈಜೋಡಿಸಿದ್ದಾರೆ. ಇದಕ್ಕೆ ಪುಷ್ಠಿ ಎಂಬಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಪತ್ನಿ ದೆಹಲಿಯ ಆಶ್ರಯ ಮನೆಗಳಲ್ಲಿರುವ ಕಡುಬಡವರಿಗಾಗಿ ಮಾಸ್ಕ್‌ಗಳನ್ನು ಹೊಲಿದು ಮಾದರಿಯಾಗಿದ್ದಾರೆ. ಹೌದು, ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಾಥ್ ನೀಡಿರುವ ರಾಮನಾಥ್ ಕೋವಿಂದ್ ಅವರ ಪತ್ನಿ ಸವಿತಾ ಕೋವಿಂದ್, ರಾಷ್ಟ್ರಪತಿಗಳ ಅಧಿಕೃತ ಮನೆಯಲ್ಲೇ ಕುಳಿತು ಮಾಸ್ಕ್‌ಗಳನ್ನು ಹೊಲಿದಿದ್ದಾರೆ. ಈ ಕುರಿತು ಮಾತನಾಡಿರುವ ಸವಿತಾ ಕೋವಿಂದ್, ಕೊರೊನಾ ವಿರುದ್ಧದ ಹೋರಾಟದಲ್ಲಿ ಯಾರೂ ಬೇಕಾದರೂ ತಮ್ಮ ಕೈಲಾದ ಕೊಡುಗೆ ನೀಡಬಹುದಾಗಿದ್ದು, ಅದರಂತೆ ಮಾಸ್ಕ್‌ಗಳು ಸದ್ಯದ ತುರ್ತು ಅವಶ್ಯವಾಗಿದ್ದು, ನನ್ನ ಕೈಯಲ್ಲಿ ಸಾಧ್ಯವಾದಷ್ಟು ಮಾಸ್ಕ್‌ಗಳನ್ನು ತಯಾರಿಸಿದ್ದೇನೆ ಎಂದು ಹೇಳಿದ್ದಾರೆ. ಸವಿತಾ ಕೋವಿಂದ್ ಅವರ ಈ ಸೇವೆಗೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ದೇಶದ ಪ್ರಥಮ ಮಹಿಳೆಯ ಸಾಮಾಜಿಕ ಬದ್ಧತೆಯನ್ನು ಎಲ್ಲರೂ ಕೊಂಡಾಡಿದ್ದಾರೆ. ಸವಿತಾ ಕೋವಿಂದ್ ಹೊಲಿದಿರುವ ಮಾಸ್ಕ್‌ಗಳನ್ನು ದೆಹಲಿಯ ಸುತ್ತಮುತ್ತ ಇರುವ ಕಡುಬಡವರ ಮನೆಗಳಿಗೆ ರವಾನಿಸಲಾಗುವುದು ಎಂದು ರಾಷ್ಟ್ರಪತಿ ಭವನ ಸ್ಪಷ್ಟಪಡಿಸಿದೆ.
from India & World News in Kannada | VK Polls https://ift.tt/3byvcjt