ಚೀನಾದ ನಲ್ಲಿ ಮೊದಲು ಪತ್ತೆಯಾಗಿದ್ದ ವಿಶ್ವಾದ್ಯಂತ 1 ಲಕ್ಷದ 84 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ಭಾರತದಲ್ಲಿ 21,000ಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ. ಏಪ್ರಿಲ್ 23ರ ಕ್ಷಣಕ್ಷಣದ ಮಾಹಿತಿ ಇಲ್ಲಿದೆ:- -ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ 33 ಪ್ರಕರಣ ಬೆಳಕಿಗೆ ಬರುವ ಮೂಲಕ ರಾಜ್ಯದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 456ಕ್ಕೆ ಏರಿಕೆಯಾಗಿದೆ. 15 ಮಂದಿ ಇfಲಿ ಮೃತಪಟ್ಟಿದ್ದಾರೆ. -ರಾಜಸ್ತಾನದಲ್ಲಿ ಹೊಸದಾಗಿ ಇಂದು 47 ಪ್ರಕರಣ ಬೆಳಕಿಗೆ ಬಂದಿದ್ದು. ಸೋಂಕಿತರ ಸಂ ಖ್ಯೆ 1935ಕ್ಕೆ ಏರಿಕೆಯಾಗಿದೆ. 27 ಮಂದಿ ಸಾವನ್ನಪ್ಪಿದ್ದಾರೆ. -ಮಹಾರಾಷ್ಟ್ರದಲ್ಲಿ ಒಂದೇ ಕಡೆ ಸೋಂಕಿತ ಪ್ರಕರಣಗಳ ಸಂಖ್ಯೆ 5,649ಕ್ಕೆ ಏರಿಕೆಯಾಗಿದೆ. 269 ಮಂದಿ ಸಾವನ್ನಪ್ಪಿದ್ದಾರೆ. -ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆಯಾಗಿದೆ. 131 ಮಂದಿ ಗುಣಮುಖರಾಗಿದ್ದು 17ಮಂದಿ ಮೃತಪಟ್ಟಿದ್ದಾರೆ. ಸೋಂಕಿತ ಪ್ರಕರಣಗಳ ಪಟ್ಟಿಯಲ್ಲಿ ರಾಜ್ಯ 11 ನೇ ಸ್ಥಾನದಲ್ಲಿದೆ. -ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಸೋಂಕಿತರ ಸಂಖ್ಯೆ 21,370ಕ್ಕೆ ಏರಿಕೆಯಾಗಿದೆ. 4,370 ಮಂದಿ ಗುಣಮುಖರಾಗಿದ್ದು, 681 ಮಂದಿ ಸಾವನ್ನಪ್ಪಿದ್ದಾರೆ. -ಅಮೆರಿಕದಲ್ಲಿ ಅತೀ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದು. ಸೋಂಕಿತ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ 8ಲಕ್ಷದ 48 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದು, 47,300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಪಟ್ಟಿಯಲ್ಲಿ ಕೂಡ ಮೊದಲನೇ ಸ್ಠಾನದಲ್ಲಿದೆ. -ಸೋಂಕಿತ ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿ ಸ್ಪೇನ್ ಇದ್ದು 2 ಲಕ್ಷದ 08 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. 21,700ಕ್ಕೂ ಹೆಚ್ಚು ಮಂದಿ ಕೊರೊನಾಗೆ ಇಲ್ಲಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಚಾರ್ಟ್ ನಲ್ಲಿ ಮೂರನೇ ಸ್ಥಾನದಲ್ಲಿದೆ. -ಇಟಲಿ ಮೃತಪಟ್ಟವರ ಚಾರ್ಟ್ ನಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ 1 ಲಕ್ಷದ 87ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. 25,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿ ತಿಳಿಸಿದೆ. ಸೋಂಕಿತರ ಪಟ್ಟಿಯಲ್ಲಿ ಇಟಲಿ ಮೂರನೇ ಸ್ಥಾನದಲ್ಲಿದೆ.
-ವಿಶ್ವದಾದ್ಯಂತ 1 ಲಕ್ಷ84 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. 26 ಲಕ್ಷದ 37ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ಇದರಲ್ಲಿ7 ಲಕ್ಷದ 17ಸಾವಿರ ಮಂದಿ ಗುಣಮುಖರಾಗಿದ್ದಾರೆ.
from India & World News in Kannada | VK Polls https://ift.tt/2yxT5Jx