ಸಂಭಾವ್ಯ ಕೊರೊನಾ ವೈರಸ್‌ ಲಸಿಕೆಯ ಪರೀಕ್ಷೆಗಿಳಿದ ಆಸ್ಟ್ರೇಲಿಯಾ ತಂಡ!

ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಏಜೆನ್ಸಿ 'ಕಾಮನ್‌ವೆಲ್ತ್‌ ಸೈಂಟಿಫಿಕ್‌ ಆ್ಯಂಡ್‌ ಇಂಡಸ್ಟ್ರಿಯಲ್‌ ರೀಸರ್ಚ್‌ ಆರ್ಗನೈಸೇಷನ್‌ (ಸಿಎಸ್‌ಐಆರ್‌ಒ) ಸಂಭಾವ್ಯ ಕೋವಿಡ್‌-19 ಲಸಿಕೆಯನ್ನು ಪರೀಕ್ಷೆ ಮಾಡಲು ಮುಂದಾಗಿದೆ. ಜೀಲಾಂಗ್‌ನಲ್ಲಿರುವ ಆಸ್ಟ್ರೇಲಿಯನ್‌ ಎನಿಮಲ್‌ ಹೆಲ್ತ್‌ ಲ್ಯಾಬೋರೇಟರಿ (ಎಎಎಚ್‌ಎಲ್‌)ನಲ್ಲಿ ಸೋಂಕು ಲಸಿಕೆ ಟೆಸ್ಟ್‌ ನಡೆಸುತ್ತಿದ್ದು, ಮೂರು ತಿಂಗಳಲ್ಲಿ ಫಲಿತಾಂಶ ನಿರೀಕ್ಷಿಸಲಾಗಿದೆ. ಲಸಿಕೆಗಳ ತಯಾರಿಕೆಯ ವೇಗವನ್ನು ಹೆಚ್ಚಿಸುವ ಜಾಗತಿಕ ಮಟ್ಟದ ಸಂಶೋಧಕರ ಗುಂಪಾದ ಕೊಯಿಲಿಷನ್‌ ಫಾರ್‌ ಎಪಿಡೆಮಿಕ್‌ ಪ್ರಿಪೇರ್ಡ್‌ನೆಸ್‌ ಇನ್ನೋವೇಷನ್ಸ್‌(ಸಿಇಪಿಐ) ಜೊತೆ ಕಳೆದ ವರ್ಷ ಸಿಎಸ್‌ಐಆರ್‌ಒ ಸೇರಿಕೊಂಡಿತ್ತು. ಜನವರಿಯಿಂದ ಸಿಎಸ್‌ಐಆರ್‌ಒ ಕೋವಿಡ್‌-19 ಸೋಂಕಿಗೆ ಕಾರಣವಾದ ಸಾರ್ಸ್‌ ಕೋವ್‌-2 (SARS CoV-2)ಗೆ ಲಸಿಕೆ ಕಂಡು ಹಿಡಿಯುವ ಕೆಲಸದಲ್ಲಿ ನಿರತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯೊಂದಿಗೆ ಸಿಇಪಿಐ ಲಸಿಕೆ ಸಂಶೋಧಿಸಲು ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಇನೋವಿಯೋ ಫಾರ್ಮಾಸ್ಯೂಟಿಕಲ್‌ ಇನ್ಸ್‌ಟಿಟ್ಯೂಷನ್‌ನ ಜೊತೆ ಸೇರಿ ಸಿಎಸ್‌ಐಆರ್‌ಒನಲ್ಲಿ ಮೊದಲ ಪ್ರೀ-ಕ್ಲೀನಿಕಲ್‌ ಟ್ರೈಯಲ್ಸ್‌ ಕೇಂದ್ರ ತೆರೆಯಿತು. ಚುಚ್ಚುಮದ್ದು ಅಥವಾ ನಾಸಲ್‌ ಸ್ಪ್ರೇ ಅಂದರೆ ಮೂಗಿನ ನಾಳದ ಮೂಲಕ ದೇಹದ ಒಳಗೆ ಹೋಗಿ ಸೋಂಕಿನ ವಿರುದ್ಧ ವೇಗವಾಗಿ ಮತ್ತು ಕರಾರುವಕ್‌ ಆಗಿ ಹೋರಾಡುವ ಲಸಿಕೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಸೋಂಕು ಪೀಡಿತ ಪ್ರಾಣಿಗಳ ಮೇಲೆ ಪ್ರಯೋಗ ನಡೆಸಲಾಗುತ್ತಿದ್ದು, ಈ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಯೇ ಇಲ್ಲವೋ ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ. ಕೋವಿಡ್‌-19 ವೈರಸ್‌ ಹಲವು ಪ್ರತ್ಯೇಕ ಗುಂಪಾಗಿ ಪರಿವರ್ತನೆಯಾಗುವುದನ್ನು ಸಿಎಸ್‌ಐಆರ್‌ಒನ ಸಂಶೋಧಕರು ಪತ್ತೆ ಮಾಡಿದ್ದಾರೆ. ಸಾರ್ಸ್‌ ಕೋವ್‌-2 ವೈರಸ್‌ಗೆ ಫೆರೆಟ್‌ಗಳು(ಮುಂಗುಸಿಯಂತಹ ಒಂದು ಪ್ರಾಣಿ) ಮೇಲೆ ಹೇಗೆ ಸ್ಪಂದಿಸುತ್ತವೆ ಎಂಬುದರ ಬಯಾಲಾಜಿಕಲ್‌ ಮಾಡೆಲ್‌ ಒಂದನ್ನು ಫೆಬ್ರವರಿಯಲ್ಲಿ ಸಿದ್ಧ ಪಡಿಸಿದ್ದೇವೆ. ಇದು ವಿಶ್ವದಲ್ಲೇ ಮೊದಲು ಇಂತಹ ಮಾಡೆಲ್‌ ಸಿದ್ಧ ಪಡಿಸಿದ್ದಾಗಿದೆ. ಪ್ರಾಣಿಗಳಲ್ಲಿ ಸೋಂಕಿನ ಬೆಳವಣಿಗೆಯನ್ನು ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ. ಲಸಿಕೆ ಕೆಲಸ ಮಾಡುತ್ತದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ಇದೊಂದು ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಸಿಎಸ್‌ಐಆರ್‌ಒ ತಿಳಿಸಿದೆ.


from India & World News in Kannada | VK Polls https://ift.tt/39AGiTd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...